ಹೊಸ Punch ಕಾರಿನ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ Tata Motors

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ Tata ಬಹುನೀರಿಕ್ಷಿತ Punch ಕಾರು ಮಾದರಿಯು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗುತ್ತಿದ್ದು, ಕಂಪನಿಯು ಹೊಸ ಕಾರಿನ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ.

ಹೊಸ Punch ಕಾರಿನ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ Tata Motors

Punch ಹೊಸ ಮಾದರಿಯು ಎಂಟ್ರಿ ಲೆವಲ್ ಕಾರು ಮಾದರಿಯಲ್ಲೇ ಹಲವಾರು ಹೊಸ ಸುಧಾರಿತ ತಂತ್ರಜ್ಞಾನ ಪ್ರೇರಣೆ ಪಡೆದುಕೊಂಡಿದ್ದು, ದೀಪಾವಳಿ ಹೊತ್ತಿಗೆ ಬಿಡುಗಡೆಯಾಗಲಿರುವ ಹೊಸ ಕಾರಿನ ಚಿತ್ರಗಳನ್ನು ಹಂಚಿಕೊಳ್ಳುತ್ತಿರುವ Tata ಕಂಪನಿಯು ಎಂಟ್ರಿ ಲೆವಲ್ ಕಾರು ಮಾದರಿಗಳಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹೊಸ Punch ಕಾರಿನ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ Tata Motors

ಹೊಸ ಕಾರಿನ ಮೂಲಕ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಶೇ.10ರಷ್ಟು ಪಾಲು ಹೊಂದುವ ವಿಶ್ವಾಸದಲ್ಲಿರುವ Tata Motors ಕಂಪನಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

Punch ಮೈಕ್ರೊ ಕಾರು ಮಾದರಿಯು ಸಣ್ಣ ಗಾತ್ರದ ಕಾರುಗಳಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಉತ್ತಮ ಚಾಲನಾ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದ್ದು, ಆನ್ ರೋಡ್ ಮತ್ತು ಆಫ್ ರೋಡ್ ಎರಡು ಮಾದರಿಯ ಚಾಲನೆಗೂ ಹೊಸ ಕಾರು ಉತ್ತಮವಾಗಿದೆ.

ಹೊಸ Punch ಕಾರಿನ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ Tata Motors

ಹೊಸ ಕಾರು ಆಕರ್ಷಕ ವಿನ್ಯಾಸ, ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಸೆಗ್ಮೆಂಟ್ ಬೆಸ್ಟ್ ಫಿಚರ್ಸ್, ಅತ್ಯುತ್ತಮ ಗ್ರೌಂಡ್ ಕ್ಲಿಯೆರೆನ್ಸ್ ಸೇರಿದಂತೆ ಹಲವು ವಿಶೇಷತೆಗಳನ್ನು ಪಡೆದುಕೊಂಡಿದ್ದು, ಬೆಲೆಯಲ್ಲೂ ಕೂಡಾ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಬೆಸ್ಟ್ ಗ್ರೌಂಡ್ ಕ್ಲಿಯೆರೆನ್ಸ್ ಮೂಲಕ ಆಫ್-ರೋಡ್ ಚಾಲನೆಯಲ್ಲೂ ಗಮನಸೆಳೆದಿರುವ Punch ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಉತ್ತಮ ಕಾರ್ಯಕ್ಷಮತೆ ಹೊಂದಿದ್ದು, Altroz ಕಾರು ಉತ್ಪಾದನೆಗಾಗಿ ಬಳಕೆ ಮಾಡಲಾಗುತ್ತಿರುವ ALFA-ARC ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ನಲ್ಲಿಯೇ ಹೊಸ ಕಾರು ಉತ್ಪಾದನೆಗೊಳ್ಳಲಿದೆ.

ಹೊಸ Punch ಕಾರಿನ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ Tata Motors

Punch ದೂರದಿಂದ Nexon ಮಾದರಿಯಲ್ಲೇ ಹೊರನೋಟ ಹೊಂದಿದ್ದರೂ ಹೊಸ ಕಾರು ಗಾತ್ರವು Nexon ಮಾದರಿಗಿಂತ ತುಸು ಚಿಕ್ಕದಾಗಿರಲಿದ್ದು, ಪ್ರಮುಖ ಫೀಚರ್ಸ್‌ಗಳನ್ನು Tiago ಹ್ಯಾಚ್‌ಬ್ಯಾಕ್ ಮಾದರಿಯಿಂದ ಎರವಲು ಪಡೆದುಕೊಳ್ಳಲಾಗಿದೆ.

SUV ಕಾರುಗಳ ಸರಣಿಯಲ್ಲಿ Harrier ಮತ್ತು Safari ಮಾದರಿಗಳಿಂದಲೂ ಕೆಲವು ವಿನ್ಯಾಸಗಳ ಪ್ರೇರಣೆ ಹೊಂದಿರುವ Punch ಕಾರು ಸಣ್ಣ ಗಾತ್ರದ ಕಾರುಗಳಲ್ಲೇ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಕಾನ್ಸೆಪ್ಟ್ ಮಾದರಿಯಲ್ಲಿನ ಬಹುತೇಕ ಸ್ಪೋರ್ಟಿ ವಿನ್ಯಾಸಗಳನ್ನು ಉತ್ಪಾದನಾ ಮಾದರಿಯಲ್ಲೂ ಮುಂದುವರೆದಿವೆ.

ಹೊಸ Punch ಕಾರಿನ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ Tata Motors

Punch ಕಾರಿನಲ್ಲಿ ವಿಭಜಿತವಾಗಿರುವ ಹೆಡ್‌ಲ್ಯಾಂಪ್ ಸೆಟ್ಅಪ್, ಹ್ಯುಮಿನಿಟಿ ಲೈನ್ ಗ್ರಿಲ್, ಬಂಪರ್‌ಗೆ ಹೊಂದಿಕೊಂಡಿರುವ ಬಾಡಿ ಕ್ಲಾಡಿಂಗ್, ವ್ಹೀಲ್ ಆರ್ಚ್, ಹೊರಭಾಗದಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ, 16-ಇಂಚಿನ ಅಲಾಯ್ ವ್ಹೀಲ್, ಕ್ರಿಸ್ ಲೈನ್ ಹೊಂದಿರುವ ಬ್ಯಾನೆಟ್, ರೂಫ್ ರೈಲ್ಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

ಹೊಸ Punch ಕಾರಿನ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ Tata Motors

ಹಾಗೆಯೇ ಹೊಸ ಕಾರಿನಲ್ಲಿ Tata ಕಂಪನಿಯು ಡ್ಯುಯಲ್ ಟೋನ್ ಇಂಟಿರಿಯರ್ ಜೊತೆಗೆ 7.0-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸ್ಕ್ವಾರಿಷ್ ಏರ್ ಕಾನ್ ವೆಂಟ್ಸ್, ತ್ರಿ ಸ್ಪೋಕ್ ಪ್ಲ್ಯಾಟ್ ಬಾಟಮ್ ಸ್ಟೀರಿಂಗ್ ವೀಲ್ಹ್, ಹ್ವಾಕ್ ಕಂಟ್ರೋಲ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಡಿಜಿಟಲ್ ಟಾಚೊ ಮೀಟರ್, ಅನಲಾಗ್ ಸ್ಪೀಡೋ ಮೀಟರ್ ಸೇರಿದಂತೆ ವಿವಿಧ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರಲಿದೆ.

ಹೊಸ Punch ಕಾರಿನ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ Tata Motors

ಸದ್ಯ ಮಾರುಕಟ್ಟೆಯಲ್ಲಿ ವಾಹನ ಸುರಕ್ಷತೆಯ ವಿಚಾರವಾಗಿ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿರುವ Tata ಕಂಪನಿಯು ಎಂಟ್ರಿ ಲೆವಲ್ ಮಾದರಿಯಲ್ಲೂ ಉತ್ತಮ ಸೇಫ್ಟಿ ರೇಟಿಂಗ್ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದ್ದು, ಹೊಸ ಕಾರಿನಲ್ಲಿ ಎಬಿಎಸ್ ಜೊತೆ ಇಬಿಡಿ, ಡ್ಯಯಲ್ ಫ್ರಂಟ್ ಏರ್‌ಬ್ಯಾಗ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್, ಟೈರ್ ಪ್ರೆಷರ್ ಮಾನಿಟಿಂಗ್ ಸಿಸ್ಟಂ, ಹೈ ಸ್ಪೀಡ್ ಅಲರ್ಟ್ ಸೌಲಭ್ಯಗಳಿಲಿವೆ.

ಹೊಸ Punch ಕಾರಿನ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ Tata Motors

Tata ಕಂಪನಿಯು ಸದ್ಯ Punch ಕಾರಿನ ಉತ್ಪಾದನಾ ಮಾದರಿಯ ಹೊರಭಾಗದ ಚಿತ್ರವನ್ನು ಮಾತ್ರ ಹಂಚಿಕೊಂಡಿದ್ದು, ಶೀಘ್ರದಲ್ಲೇ ಹೊಸ ಕಾರಿನ ಇಂಟಿರಿಯರ್ ಜೊತೆಗೆ ಎಂಜಿನ್ ಆಯ್ಕೆಯ ಮಾಹಿತಿಯನ್ನು ಸಹ ಹಂಚಿಕೊಳ್ಳಲಿದೆ.

ಹೊಸ Punch ಕಾರಿನ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ Tata Motors

Punch ಮೈಕ್ರೊ ಎಸ್‌ಯುವಿ ಕಾರಿನಲ್ಲಿ Tata ಕಂಪನಿಯು 1.2-ಲೀಟರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೊತೆಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಪರಿಚಯಿಸುವ ಸಾಧ್ಯತೆಗಳಿದ್ದು, ಹೊಸ ಕಾರಿನ ಎಂಜಿನ್ ಆಯ್ಕೆ ಕುರಿತಾಗಿ ಇದುವರೆಗೂ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ.

ಹೊಸ Punch ಕಾರಿನ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ Tata Motors

ಹೊಸ ಕಾರಿನ ಉತ್ಪಾದನಾ ಪ್ರಕ್ರಿಯೆಗೆ ಈಗಾಗಲೇ ಅಧಿಕೃತ ಚಾಲನೆ ನೀಡಿರುವ Tata ಕಂಪನಿಯು ಮುಂಬರುವ ಸೆಪ್ಟೆಂಬರ್ ಮಧ್ಯಂತರದಲ್ಲಿ ಹೊಸ ಕಾರಿನ ಉತ್ಪಾದನಾ ಆವೃತ್ತಿಯನ್ನುಅನಾವರಣಗೊಳಿಸಿ ಹೊಸ ಕಾರಿನ ಮಾಹಿತಿ ಹಂಚಿಕೊಳ್ಳುವ ಮೂಲಕ ಬುಕ್ಕಿಂಗ್ ಆರಂಭಿಸಲಿದೆ.

ಹೊಸ Punch ಕಾರಿನ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ Tata Motors

Punch ಕಾರು Maruti Suzuki Ignis, Hyundai Santro ಜೊತೆಗೆ Nissan Magnite ಮತ್ತು Renault Kiger ಕಾರುಗಳ ಎಂಟ್ರಿ ಲೆವಲ್ ವೆರಿಯೆಂಟ್ ಪೈಪೋಟಿ ನೀಡುವ ನೀರಿಕ್ಷೆಯಿದ್ದು, ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್‌ಗಳನ್ನು ಪಡೆದುಕೊಳ್ಳಲಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 4.90 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.50 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿವೆ.

Most Read Articles

Kannada
English summary
Tata motors released new teaser video for punch micro suv
Story first published: Monday, August 30, 2021, 12:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X