ಬಹುನೀರಿಕ್ಷಿತ Punch ಮೈಕ್ರೊ ಎಸ್‌ಯುವಿ ಕಾರಿನ ಟಿವಿ ಜಾಹೀರಾತು ಬಿಡುಗಡೆ ಮಾಡಿದ Tata Motors

ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿರುವ ಟಾಟಾ ಪಂಚ್(Tata Punch) ಮೈಕ್ರೊ ಎಸ್‌ಯುವಿ ಶೀಘ್ರದಲ್ಲೇ ಖರೀದಿಗೆ ಲಭ್ಯವಿರಲಿದ್ದು, ಟಾಟಾ ಕಂಪನಿಯು ಹೊಸ ಕಾರು ಬಿಡುಗಡೆಗೂ ಮುನ್ನ ಪಂಚ್ ಕಾರಿನ ಕಾರ್ಯಕ್ಷಮತೆ ಮತ್ತು ಫೀಚರ್ಸ್ ಮಾಹಿತಿ ಕುರಿತಾದ ಟಿವಿ ಜಾಹೀರಾತು ಪ್ರಕಟಿಸಿದೆ.

Punch ಮೈಕ್ರೊ ಎಸ್‌ಯುವಿ ಕಾರಿನ ಟಿವಿ ಜಾಹೀರಾತು ಬಿಡುಗಡೆ

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಪಂಚ್ ಕಾರು ಖರೀದಿಗೆ ಈಗಾಗಲೇ ರೂ. 21 ಸಾವಿರ ಮುಂಗಡದೊಂದಿಗೆ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ದಸರಾ ಸಂಭ್ರಮದ ವೇಳೆಗೆ ಖರೀದಿಗೆ ಲಭ್ಯವಾಗಲಿರುವ ಹೊಸ ಕಾರು ಹಲವಾರು ವಿಶೇಷತೆಗಳನ್ನು ಅಭಿವೃದ್ದಿಗೊಂಡಿದೆ.

Punch ಮೈಕ್ರೊ ಎಸ್‌ಯುವಿ ಕಾರಿನ ಟಿವಿ ಜಾಹೀರಾತು ಬಿಡುಗಡೆ

ಅಲ್ಫಾ ಪ್ಲಾಟ್‌ಫಾರ್ಮ್ ಆಧರಿಸಿರುವ ಹೊಸ ಪಂಚ್ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿರಲಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಅತ್ಯುತ್ತಮ ವಿನ್ಯಾಸ, ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಬೆಲೆ ವಿಚಾರವಾಗಿ ಗ್ರಾಹಕರನ್ನು ಸೆಳೆಯಲಿದೆ.

Punch ಮೈಕ್ರೊ ಎಸ್‌ಯುವಿ ಕಾರಿನ ಟಿವಿ ಜಾಹೀರಾತು ಬಿಡುಗಡೆ

ಪಂಚ್ ಕಾರಿನಲ್ಲಿ ಪ್ಯೂರ್ ವೆರಿಯೆಂಟ್ ಆರಂಭಿಕ ಮಾದರಿಯಾಗಿ ಮಾರಾಟಗೊಳ್ಳಲಿದ್ದರೆ ಕ್ರಿಯೆಟಿವ್ ಮಾದರಿಯು ಟಾಪ್ ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಬೆಸ್ ವೆರಿಯೆಂಟ್‌ನಲ್ಲೂ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ನೀಡಲಿದೆ.

ಹೊಸ ಕಾರು ವಿವಿಧ 12 ಮಾದರಿಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8 ಲಕ್ಷ ಬೆಲೆ ಹೊಂದಿರಬಹುದೆಂದು ಅಂದಾಜಿಸಲಾಗಿದ್ದು, ಪ್ರತಿಸ್ಪರ್ಧಿ ಮಾದರಿಗಳಿಂತಲೂ ಪಂಚ್ ಕಾರಿನಲ್ಲಿ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದೆ.

Punch ಮೈಕ್ರೊ ಎಸ್‌ಯುವಿ ಕಾರಿನ ಟಿವಿ ಜಾಹೀರಾತು ಬಿಡುಗಡೆ

ಪಂಚ್ ಮೈಕ್ರೊ ಎಸ್‌ಯುವಿ ಕಾರಿನಲ್ಲಿ ಟಾಟಾ ಕಂಪನಿಯು ಟಿಯಾಗೋ ಮಾದರಿಯಲ್ಲಿರುವ 1.2-ಲೀಟರ್ ತ್ರಿ ಸಿಲಿಂಡರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಪರಿಚಯಿಸಿದ್ದು, 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 83 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

Punch ಮೈಕ್ರೊ ಎಸ್‌ಯುವಿ ಕಾರಿನ ಟಿವಿ ಜಾಹೀರಾತು ಬಿಡುಗಡೆ

ಹೊಸ ಕಾರನ್ನು ಟೊರಾರ್ನಾಡೊ ಬ್ಲ್ಯೂ, ಟೊಪಿಕಲ್ ಮಿಸ್ಟ್, ಡೇ ಟೋನಾ ಗ್ರೆ, ಮಿಟಿಯೊರ್ ಬ್ರೊನ್ಜ್, ಆಟೊಮಿಕ್ ಆರೇಂಜ್, ಆರ್ಕಸ್ ವೈಟ್ ಮತ್ತು ಕ್ಯಾಲಿಪ್ಸೊ ರೆಡ್ ಸೇರಿ ಪ್ರಮುಖ ಏಳು ಬಣ್ಣಗಳ ಆಯ್ಕೆಯಲ್ಲಿ ಪರಿಚಯಿಸಲಾಗುತ್ತಿದ್ದು, ಹೊಸ ಕಾರು ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹ್ಯುಂಡೈ ಐ10 ನಿಯೋಸ್ ಮಾದರಿಯಲ್ಲಿಯೇ ವ್ಹೀಲ್ ಬೆಸ್ ಹೊಂದಿದೆ.

Punch ಮೈಕ್ರೊ ಎಸ್‌ಯುವಿ ಕಾರಿನ ಟಿವಿ ಜಾಹೀರಾತು ಬಿಡುಗಡೆ

ಹೊಸ ಕಾರು 3840 ಎಂಎಂ ಉದ್ದ, 1800 ಎಂಎಂ ಅಗಲ ಮತ್ತು 1635 ಎಂಎಂ ಎತ್ತರದೊಂದಿಗೆ 2450 ಎಂಎಂ ವ್ಹೀಲ್ ಬೇಸ್, 187 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಹೊಸ ಕಾರಿನ ಟಾಪ್ ಎಂಡ್ ಮಾದರಿಗಳಲ್ಲಿ ಐರಾ ಕಾರ್ ಟೆಕ್ನಾಲಜಿ ನೀಡಲಾಗಿದೆ.

Punch ಮೈಕ್ರೊ ಎಸ್‌ಯುವಿ ಕಾರಿನ ಟಿವಿ ಜಾಹೀರಾತು ಬಿಡುಗಡೆ

ಪಂಚ್ ಕಾರಿನಲ್ಲಿ ವಿಭಜಿತವಾಗಿರುವ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಸೆಟ್ಅಪ್, ಹ್ಯುಮಿನಿಟಿ ಲೈನ್ ಗ್ರಿಲ್, ಬಂಪರ್‌ಗೆ ಹೊಂದಿಕೊಂಡಿರುವ ಬಾಡಿ ಕ್ಲಾಡಿಂಗ್, ವ್ಹೀಲ್ ಆರ್ಚ್, ಹೊರಭಾಗದಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ, ವೆರಿಯೆಂಟ್‌ಗಳಿಗೆ ಅನುಗುಣವಾಗಿ 15 ಮತ್ತು 16-ಇಂಚಿನ ಅಲಾಯ್ ವ್ಹೀಲ್, ಕ್ರಿಸ್ ಲೈನ್ ಹೊಂದಿರುವ ಬ್ಯಾನೆಟ್, ರೂಫ್ ರೈಲ್ಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

Punch ಮೈಕ್ರೊ ಎಸ್‌ಯುವಿ ಕಾರಿನ ಟಿವಿ ಜಾಹೀರಾತು ಬಿಡುಗಡೆ

ಹಾಗೆಯೇ ಹೊಸ ಕಾರಿನಲ್ಲಿ ಟಾಟಾ ಕಂಪನಿಯು ಡ್ಯುಯಲ್ ಟೋನ್ ಇಂಟಿರಿಯರ್ ಜೊತೆಗೆ 7.0-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ಸ್ಕ್ವಾರಿಷ್ ಏರ್ ಕಾನ್ ವೆಂಟ್ಸ್, ತ್ರಿ ಸ್ಪೋಕ್ ಪ್ಲ್ಯಾಟ್ ಬಾಟಮ್ ಸ್ಟೀರಿಂಗ್ ವೀಲ್ಹ್, ಹ್ವಾಕ್ ಕಂಟ್ರೋಲ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಡಿಜಿಟಲ್ ಟಾಚೊ ಮೀಟರ್, ಅನಲಾಗ್ ಸ್ಪೀಡೋ ಮೀಟರ್ ಸೇರಿದಂತೆ ವಿವಿಧ ತಾಂತ್ರಿಕ ಸೌಲಭ್ಯಗಳನ್ನು ಜೋಡಿಸಿದೆ.

Punch ಮೈಕ್ರೊ ಎಸ್‌ಯುವಿ ಕಾರಿನ ಟಿವಿ ಜಾಹೀರಾತು ಬಿಡುಗಡೆ

ಜೊತೆಗೆ ಟಾಟಾ ಕಂಪನಿಯು ಎಂಟ್ರಿ ಲೆವಲ್ ಮಾದರಿಯಲ್ಲೂ ಉತ್ತಮ ಸೇಫ್ಟಿ ಫೀಚರ್ಸ್‌ಗಳನ್ನು ನೀಡಿದ್ದು, ಹೊಸ ಕಾರಿನಲ್ಲಿ ಎಬಿಎಸ್ ಜೊತೆ ಇಬಿಡಿ, ಡ್ಯಯಲ್ ಫ್ರಂಟ್ ಏರ್‌ಬ್ಯಾಗ್, ಟ್ರಾಕ್ಷನ್ ಕಂಟ್ರೊಲ್, ಹಿಲ್ ಅಸಿಸ್ಟ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್, ಟೈರ್ ಪ್ರೆಷರ್ ಮಾನಿಟಿಂಗ್ ಸಿಸ್ಟಂ, ಹೈ ಸ್ಪೀಡ್ ಅಲರ್ಟ್ ಸೌಲಭ್ಯಗಳಿಲಿವೆ.

Punch ಮೈಕ್ರೊ ಎಸ್‌ಯುವಿ ಕಾರಿನ ಟಿವಿ ಜಾಹೀರಾತು ಬಿಡುಗಡೆ

ಹೊಸ ಕಾರಿನ ಟಾಪ್ ಎಂಡ್ ಮಾದರಿಗಳಲ್ಲಿರುವ ಐರಾ ಕಾರ್ ಟೆಕ್ನಾಲಜಿಯು ಹೊಸ ಕಾರಿನ ಮತ್ತೊಂದು ಪ್ರಮುಖ ಸೇಫ್ಟಿ ಫೀಚರ್ಸ್ ಆಗಿದ್ದು, ಒಂದೇ ಸೂರಿನಡಿ 27 ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಐರಾ(iRA) ಸಹಕಾರಿಯಾಗಿದೆ.

Punch ಮೈಕ್ರೊ ಎಸ್‌ಯುವಿ ಕಾರಿನ ಟಿವಿ ಜಾಹೀರಾತು ಬಿಡುಗಡೆ

ಸ್ಮಾರ್ಟ್‌ಫೋನ್ ಸಂಪರ್ಕಿತ ಐರಾ ಕಾರ್ ಕನೆಕ್ಟ್ ತಂತ್ರಜ್ಞಾನವನ್ನು ಕನೆಕ್ಟ್ ನೆಕ್ಸ್ಟ್ ಎಂಬ ಡೆಡಿಕೇಟೆಡ್ ಆ್ಯಪ್ ಮೂಲಕವೇ ಕಾರಿನ ಹಲವು ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಣ ಮಾಡಬಹುದಾಗಿದೆ.

Punch ಮೈಕ್ರೊ ಎಸ್‌ಯುವಿ ಕಾರಿನ ಟಿವಿ ಜಾಹೀರಾತು ಬಿಡುಗಡೆ

ಐರಾ ಟೆಕ್ನಾಲಜಿಯ ಮೂಲಕ ಕಾರಿನ ರಿಮೋಟ್ ಲಾಕ್/ಅನ್ ಲಾಕ್, ರಿಮೋಟ್ ಹಾರ್ನ್, ಡಿಸ್ಟೆನ್ಸ್ ಟು ಎಂಟಿ ಚೆಕ್, ಸೆಕ್ಯೂರಿಟಿ ಸ್ಟೆಟಸ್, ಲೈವ್ ವೆಹಿಕಲ್ ಡಯಾಗ್ನೋಸ್ಟಿಕ್ಸ್ ಸೇರಿದಂತೆ ಹಲವಾರು ಲೋಕೇಶನ್ ಬೆಸ್ಡ್ ಸರ್ವೀಸ್'ಗಳನ್ನು ನೀಡಲಿದ್ದು, ಆಲ್‌ಟ್ರೊಜ್ ಐ-ಟರ್ಬೊ ನಂತರ ಇದೀಗ ಪಂಚ್ ಮಾದರಿಯಲ್ಲಿ ಜೋಡಿಸಲಾಗುತ್ತಿದೆ.

Punch ಮೈಕ್ರೊ ಎಸ್‌ಯುವಿ ಕಾರಿನ ಟಿವಿ ಜಾಹೀರಾತು ಬಿಡುಗಡೆ

ಐರಾದಲ್ಲಿರುವ ವಾಯ್ಸ್ ಅಸಿಸ್ಟೆನ್ಸ್ ಸೌಲಭ್ಯದೊಂದಿಗೆ ಇಂಗ್ಲಿಷ್, ಹಿಂದಿ ಸೇರಿದಂತೆ 70ಕ್ಕೂ ಹೆಚ್ಚು ಭಾಷೆಗಳಲ್ಲಿನ ವಾಯ್ಸ್ ಕಮಾಂಡ್‌ಗಳನ್ನು ಅರ್ಥಮಾಡಿಕೊಳ್ಳಲಿದ್ದು, ಕಾರು ಪ್ರಯಾಣದ ವೇಳೆ ಯಾವುದೇ ಮ್ಯಾನುವಲ್ ಬಟನ್ ಬಳಕೆ ಮಾಡದೆ ನಿಮ್ಮ ಅಗತ್ಯ ಸೇವೆಗಳನ್ನು ಧ್ವನಿ ಗ್ರಹಿಕೆಯ ಮೂಲಕವೇ ಸೇವೆ ಪಡೆದುಕೊಳ್ಳಬಹುದಾಗಿದೆ.

Most Read Articles

Kannada
English summary
Tata motors releases new tvc of punch micro suv details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X