ನೆಕ್ಸಾನ್ ಎಸ್‌ಯುವಿಯಿಂದ ಟಚ್‌ಸ್ಕ್ರೀನ್ ಫಿಸಿಕಲ್ ಬಟನ್'ಗಳನ್ನು ತೆಗೆದು ಹಾಕಿದ ಟಾಟಾ ಮೋಟಾರ್ಸ್

ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯವಾದ ಎಸ್‌ಯುವಿಗಳಲ್ಲಿ ಒಂದು. ಟಾಟಾ ಮೋಟಾರ್ಸ್ ಕಂಪನಿಯು ಈ ಎಸ್‌ಯುವಿಯನ್ನು ಈಗ ಹೊಸ ಅಪ್‌ಡೇಟ್‌ನೊಂದಿಗೆ ಪರಿಚಯಿಸಿದೆ.

ನೆಕ್ಸಾನ್ ಎಸ್‌ಯುವಿಯಿಂದ ಟಚ್‌ಸ್ಕ್ರೀನ್ ಫಿಸಿಕಲ್ ಬಟನ್'ಗಳನ್ನು ತೆಗೆದು ಹಾಕಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಈ ಎಸ್‌ಯುವಿಯ ಇನ್ಫೋಟೇನ್‌ಮೆಂಟ್ ಸಿಸ್ಟಂ ಕಂಟ್ರೋಲ್'ನ ಫಿಸಿಕಲ್ ಬಟನ್'ಗಳನ್ನು ತೆಗೆದುಹಾಕಿದೆ. ಈ ಅಪ್‌ಡೇಟ್‌ ಕೆಲವರಿಗೆ ಇಷ್ಟವಾದರೆ ಕೆಲವರಿಗೆ ಇಷ್ಟವಾಗದೇ ಇರಬಹುದು. ಈ ಫಿಸಿಕಲ್ ಬಟನ್'ಗಳನ್ನು ಸೆಂಟ್ರಲ್ ಏರ್ ವೆಂಟ್ ಕೆಳಗೆ ಇರಿಸಲಾಗಿತ್ತು.

ನೆಕ್ಸಾನ್ ಎಸ್‌ಯುವಿಯಿಂದ ಟಚ್‌ಸ್ಕ್ರೀನ್ ಫಿಸಿಕಲ್ ಬಟನ್'ಗಳನ್ನು ತೆಗೆದು ಹಾಕಿದ ಟಾಟಾ ಮೋಟಾರ್ಸ್

ಅವುಗಳನ್ನು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂನೊಂದಿಗೆ ಪರಿಚಯಿಸಲಾಗಿತ್ತು. ಇವುಗಳನ್ನು ನೆಕ್ಸಾನ್ ಎಕ್ಸ್‌ ಝಡ್ ಮಾದರಿ ಹಾಗೂ ಟಾಪ್ ಎಂಡ್ ಮಾದರಿಗಳಲ್ಲಿ ಅಳವಡಿಸಲಾಗಿತ್ತು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ನೆಕ್ಸಾನ್ ಎಸ್‌ಯುವಿಯಿಂದ ಟಚ್‌ಸ್ಕ್ರೀನ್ ಫಿಸಿಕಲ್ ಬಟನ್'ಗಳನ್ನು ತೆಗೆದು ಹಾಕಿದ ಟಾಟಾ ಮೋಟಾರ್ಸ್

ತೆಗೆದುಹಾಕಲಾದ ಫಿಸಿಕಲ್ ಬಟನ್'ಗಳಲ್ಲಿ ಹೋಂ, ಫೇವರೇಟ್, ಬ್ಯಾಕ್, ಸ್ಮಾರ್ಟ್‌ಫೋನ್, ನೆಕ್ಸ್ಟ್ / ಪ್ರಿವಿಯಸ್'ಗಳು ಸೇರಿದ್ದವು. ಇದರ ಜೊತೆಗೆ ಟಾಟಾ ಮೋಟಾರ್ಸ್ ವಾಲ್ಯೂಮ್ ಹಾಗೂ ಟ್ಯೂನರ್‌ಗಳಿಗಾಗಿ ನೀಡಲಾಗಿದ್ದ ರೋಟರಿ ಡಯಲ್‌ಗಳನ್ನು ಸಹ ತೆಗೆದುಹಾಕಿದೆ.

ನೆಕ್ಸಾನ್ ಎಸ್‌ಯುವಿಯಿಂದ ಟಚ್‌ಸ್ಕ್ರೀನ್ ಫಿಸಿಕಲ್ ಬಟನ್'ಗಳನ್ನು ತೆಗೆದು ಹಾಕಿದ ಟಾಟಾ ಮೋಟಾರ್ಸ್

ಈ ಎಲ್ಲ ವಸ್ತುಗಳ ಬದಲಿಗೆ ಟಾಟಾ ಮೋಟಾರ್ಸ್ ಕಂಪನಿಯು ಈಗ ಆ ಸ್ಥಳದಲ್ಲಿ ನೆಕ್ಸಾನ್ ಲೋಗೋವನ್ನು ಇರಿಸಿದೆ. ಗಮನಿಸಬೇಕಾದ ಸಂಗತಿಯೆಂದರೆ ಈ ಎಲ್ಲಾ ಫಿಸಿಕಲ್ ಬಟನ್'ಗಳ ಕಾರ್ಯಾಚರಣೆಯು ಟಚ್‌ಸ್ಕ್ರೀನ್‌ನಲ್ಲಿ ಸಂಯೋಜಿಸಲ್ಪಟ್ಟಿದ್ದು, ಸಂಪೂರ್ಣ ಡಿಜಿಟಲ್ ಅನುಭವವನ್ನು ನೀಡುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ನೆಕ್ಸಾನ್ ಎಸ್‌ಯುವಿಯಿಂದ ಟಚ್‌ಸ್ಕ್ರೀನ್ ಫಿಸಿಕಲ್ ಬಟನ್'ಗಳನ್ನು ತೆಗೆದು ಹಾಕಿದ ಟಾಟಾ ಮೋಟಾರ್ಸ್

ಫಿಸಿಕಲ್ ಬಟನ್'ಗಳನ್ನು ತೆಗೆದುಹಾಕಿದ ನಂತರ ಟಾಟಾ ನೆಕ್ಸಾನ್‌ನ ಸೆಂಟ್ರಲ್ ಕನ್ಸೋಲ್ ಉತ್ತಮವಾಗಿ ಕಾಣುತ್ತದೆ. ಆದರೆ ಫಿಸಿಕಲ್ ಬಟನ್'ಗಳನ್ನು ಬಳಸುತ್ತಿದ್ದವವರಿಗೆ ಅದರ ನೆನಪು ಬರಬಹುದು.

ನೆಕ್ಸಾನ್ ಎಸ್‌ಯುವಿಯಿಂದ ಟಚ್‌ಸ್ಕ್ರೀನ್ ಫಿಸಿಕಲ್ ಬಟನ್'ಗಳನ್ನು ತೆಗೆದು ಹಾಕಿದ ಟಾಟಾ ಮೋಟಾರ್ಸ್

ಇನ್ಫೋಟೈನ್ಮೆಂಟ್ ಸಿಸ್ಟಂ ಫಂಕ್ಷನ್'ಗಳನ್ನು ಆಕ್ಸೆಸ್ ಮಾಡಲು ವಾಯ್ಸ್ ಕಮ್ಯಾಂಡ್ ಬಳಸುವುದು ಇನ್ನೊಂದು ಆಯ್ಕೆಯಾಗಿದೆ. ಆದರೆ ವಾಯ್ಸ್ ಕಮ್ಯಾಂಡ್'ಗಳನ್ನು ನೀಡಲು ಡ್ಯಾಶ್‌ಬೋರ್ಡ್‌ನಲ್ಲಿರುವ ಬಟನ್ ಪ್ರೆಸ್ ಮಾಡುವುದಕ್ಕೆ ಹೆಚ್ಚು ಶ್ರಮ ಪಡೆಬೇಕಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ನೆಕ್ಸಾನ್ ಎಸ್‌ಯುವಿಯಿಂದ ಟಚ್‌ಸ್ಕ್ರೀನ್ ಫಿಸಿಕಲ್ ಬಟನ್'ಗಳನ್ನು ತೆಗೆದು ಹಾಕಿದ ಟಾಟಾ ಮೋಟಾರ್ಸ್

ತಮ್ಮ ಕಾರಿನ ಲುಕ್ ಸುಧಾರಿಸಲು ಬಯಸುವ ಗ್ರಾಹಕರಿಗೆ, ಫಿಸಿಕಲ್ ಬಟನ್'ಗಳನ್ನು ತೆಗೆದು ಹಾಕಿರುವುದು ಸರಿಯಾದ ಅಪ್‌ಡೇಟ್‌ ಆಗಿದೆ. ಆದರೆ ಪ್ರಾಯೋಗಿಕತೆಯನ್ನು ಇಷ್ಟಪಡುವವರಿಗೆ, ಫಿಸಿಕಲ್ ಬಟನ್ ಖಂಡಿತವಾಗಿಯೂ ಅಗತ್ಯವಾಗಿದೆ.

ನೆಕ್ಸಾನ್ ಎಸ್‌ಯುವಿಯಿಂದ ಟಚ್‌ಸ್ಕ್ರೀನ್ ಫಿಸಿಕಲ್ ಬಟನ್'ಗಳನ್ನು ತೆಗೆದು ಹಾಕಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಕಳೆದ ವರ್ಷವಷ್ಟೇ ನೆಕ್ಸಾನ್ ಎಸ್‌ಯು‌ವಿಯನ್ನು ಬಿಎಸ್ 6 ಎಂಜಿನ್'ನೊಂದಿಗೆ ಬಿಡುಗಡೆಗೊಳಿಸಿತ್ತು. ಈ ಎಸ್‌ಯುವಿಯನ್ನು ಕಂಪನಿಯ ಇತರ ಮಾದರಿಗಳೊಂದಿಗೆ ಅಪ್‌ಡೇಟ್‌ ಮಾಡಲಾಯಿತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ನೆಕ್ಸಾನ್ ಎಸ್‌ಯುವಿಯಿಂದ ಟಚ್‌ಸ್ಕ್ರೀನ್ ಫಿಸಿಕಲ್ ಬಟನ್'ಗಳನ್ನು ತೆಗೆದು ಹಾಕಿದ ಟಾಟಾ ಮೋಟಾರ್ಸ್

ಈ ಎಸ್‌ಯು‌ವಿಯ ವಿನ್ಯಾಸದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಅಪ್‌ಡೇಟ್‌ ನಂತರ ಆಕರ್ಷಕವಾಗಿ ಕಾಣುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯ ಗ್ರಾಹಕರು ಇಷ್ಟಪಟ್ಟಿದ್ದು, ಮಾರಾಟವೂ ಉತ್ತಮವಾಗಿದೆ.

ನೆಕ್ಸಾನ್ ಎಸ್‌ಯುವಿಯಿಂದ ಟಚ್‌ಸ್ಕ್ರೀನ್ ಫಿಸಿಕಲ್ ಬಟನ್'ಗಳನ್ನು ತೆಗೆದು ಹಾಕಿದ ಟಾಟಾ ಮೋಟಾರ್ಸ್

ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಎಸ್‌ಯು‌ವಿಯನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ. 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 118 ಬಿಹೆಚ್‌ಪಿ ಪವರ್ ಉತ್ಪಾದಿಸಿದರೆ, 1.5 ಲೀಟರ್ ಡೀಸೆಲ್ ಎಂಜಿನ್ 108 ಬಿಹೆಚ್‌ಪಿ ಪವರ್ ಹಾಗೂ 260 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಮೂಲ: ಟೀಂ ಬಿಹೆಚ್‌ಪಿ

Most Read Articles

Kannada
English summary
Tata Motors removes touchscreen physical button from Nexon SUV. Read in Kannada.
Story first published: Saturday, April 3, 2021, 12:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X