ಮೂರು ದಿನಗಳ ಕಾಲ ಮುಚ್ಚಲಿದೆ Tata Motors ಉತ್ಪಾದನಾ ಘಟಕ

ಟಾಟಾ ಮೋಟಾರ್ಸ್ (Tata Motors) ಕಂಪನಿಯು ತನ್ನ ಜಮ್ಶೆಡ್‌ಪುರ ಉತ್ಪಾದನಾ ಘಟಕವನ್ನು ಮೂರು ದಿನಗಳವರೆಗೆ ಮುಚ್ಚಲಿದೆ. ಕಂಪನಿಯು ಡಿಸೆಂಬರ್ 13 ರಿಂದ ಡಿಸೆಂಬರ್ 15 ರವರೆಗೆ ಈ ಉತ್ಪಾದನಾ ಘಟಕವನ್ನು ಮುಚ್ಚಲಿದೆ. ಯಾವ ಕಾರಣಕ್ಕೆ ಉತ್ಪಾದನಾ ಘಟಕವನ್ನು ಮುಚ್ಚಲಾಗುತ್ತಿದೆ ಎಂಬ ಮಾಹಿತಿ ಬಹಿರಂಗವಾಗದೇ ಇದ್ದರೂ ಭಾರೀ ವಾಣಿಜ್ಯ ವಾಹನಗಳಿಗೆ ಬೇಡಿಕೆಯ ಕೊರತೆಯಿಂದಾಗಿ ಮುಚ್ಚಲಾಗುತ್ತಿದೆ ಎಂದು ಹೇಳಲಾಗಿದೆ.

ಮೂರು ದಿನಗಳ ಕಾಲ ಮುಚ್ಚಲಿದೆ Tata Motors ಉತ್ಪಾದನಾ ಘಟಕ

ಇದಕ್ಕೂ ಮುನ್ನ ನವೆಂಬರ್ 29ರಂದು ಸಹ ಈ ಉತ್ಪಾದನಾ ಘಟಕವನ್ನು ಮುಚ್ಚಲಾಗಿತ್ತು. ಟಾಟಾ ಮೋಟಾರ್ಸ್‌ನ ಜಮ್‌ಶೆಡ್‌ಪುರ ಘಟಕದ ಮುಖ್ಯ ಅಧಿಕಾರಿ ವಿಶಾಲ್ ಬಾದ್‌ಶಾ ರವರು, ಘಟಕದಲ್ಲಿ ಉತ್ಪಾದನೆಯನ್ನು ಮೂರು ದಿನಗಳವರೆಗೆ ಮುಚ್ಚಲಾಗುವುದು. ಕಂಪನಿಯು ಈ ಅವಧಿಯಲ್ಲಿ ದಿನ ನಿತ್ಯದ ನಿರ್ವಹಣೆಯನ್ನು ಮಾಡುತ್ತದೆ. ಇದರಿಂದಾಗಿ ಕೆಲವು ಉದ್ಯೋಗಿಗಳನ್ನು ಕೆಲಸಕ್ಕೆ ಕರೆಯಬಹುದು ಎಂದು ಉದ್ಯೋಗಿಗಳಿಗೆ ತಿಳಿಸಿದ್ದಾರೆ.

ಮೂರು ದಿನಗಳ ಕಾಲ ಮುಚ್ಚಲಿದೆ Tata Motors ಉತ್ಪಾದನಾ ಘಟಕ

ಇದರಿಂದ ಉತ್ಪಾದನಾ ಘಟಕದಲ್ಲಿ ಭಾರೀ ಗಾತ್ರದ ವಾಣಿಜ್ಯ ವಾಹನ ಟ್ರಕ್‌, ಟ್ರೇಲರ್‌ಗಳು, ಟಿಪ್ಪರ್‌ಗಳಂತಹ ವಾಹನಗಳ ಉತ್ಪಾದನೆ ನಿಲ್ಲಲಿದೆ. ಒಕ್ಕೂಟದ ಮೂಲಗಳ ಪ್ರಕಾರ, ಸಾಮಾನ್ಯವಾಗಿ ಪ್ರತಿ ವರ್ಷ ಈ ಸಮಯದಲ್ಲಿ ಭಾರೀ ವಾಣಿಜ್ಯ ವಾಹನಗಳಿಗೆ ಬೇಡಿಕೆ ಕಡಿಮೆ ಇರುತ್ತದೆ, ಈ ಕಾರಣದಿಂದಾಗಿ ಉತ್ಪಾದನೆಯನ್ನು ನಿಲ್ಲಿಸಲಾಗುತ್ತಿದೆ. ಕಂಪನಿಯು ಡಿಸೆಂಬರ್ ತಿಂಗಳಲ್ಲಿ ಸುಮಾರು 5500 ಯೂನಿಟ್ ಭಾರೀ ವಾಹನಗಳನ್ನು ಉತ್ಪಾದಿಸಲಿದೆ.

ಮೂರು ದಿನಗಳ ಕಾಲ ಮುಚ್ಚಲಿದೆ Tata Motors ಉತ್ಪಾದನಾ ಘಟಕ

ಟಾಟಾ ಮೋಟಾರ್ಸ್‌ಗಾಗಿ ಉಪಕರಣಗಳನ್ನು ತಯಾರಿಸುವ ಸುಮಾರು 700 ಕಂಪನಿಗಳು ಸಹ ಈ ಸ್ಥಗಿತದ ಸುದ್ದಿಯಿಂದ ಪ್ರಭಾವಿತವಾಗಲಿವೆ. ಇನ್ನು ಟಾಟಾ ಮೋಟಾರ್ಸ್ ತನ್ನ ಎಲ್ಲಾ ವಾಣಿಜ್ಯ ವಾಹನಗಳ ಬೆಲೆಯನ್ನು 2022ರ ಜನವರಿ 1 ರಿಂದ ಹೆಚ್ಚಿಸಲಿದೆ. ಕಂಪನಿಯು ಜನವರಿ 1 ರಿಂದ ತನ್ನ ವಾಣಿಜ್ಯ ವಾಹನಗಳ ಬೆಲೆಯಲ್ಲಿ 2.5% ನಷ್ಟು ಹೆಚ್ಚಳವಾಗುವುದು ಎಂದು ಘೋಷಿಸಿದೆ.

ಮೂರು ದಿನಗಳ ಕಾಲ ಮುಚ್ಚಲಿದೆ Tata Motors ಉತ್ಪಾದನಾ ಘಟಕ

ವಾಹನ ತಯಾರಿಕೆಯಲ್ಲಿ ಬಳಸುವ ಸ್ಟೀಲ್, ಅಲ್ಯೂಮಿನಿಯಂ ಹಾಗೂ ಇತರ ಲೋಹಗಳ ಬೆಲೆಯಲ್ಲಿ ಹೆಚ್ಚಳವಾಗಿರುವುದರಿಂದ ಕಂಪನಿಯು ವಾಣಿಜ್ಯ ವಾಹನಗಳ ಬೆಲೆ ಹೆಚ್ಚಿಸಲು ನಿರ್ಧರಿಸಿದೆ. ಇನ್ಪುಟ್ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವುದರಿಂದ ಈ ಹೊರೆಯನ್ನು ಕಡಿಮೆ ಮಾಡಲು ಬೆಲೆಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಟಾಟಾ ಮೋಟಾರ್ಸ್ ಕಂಪನಿ ಹೇಳಿದೆ.

ಮೂರು ದಿನಗಳ ಕಾಲ ಮುಚ್ಚಲಿದೆ Tata Motors ಉತ್ಪಾದನಾ ಘಟಕ

ದೇಶದಲ್ಲಿ ಕಚ್ಚಾ ವಸ್ತುಗಳ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಇದರಿಂದ ಕಂಪನಿಗಳು ಸಹ ಬೆಲೆಯನ್ನು ಹೆಚ್ಚಿಸಬೇಕಾಗಿದೆ. ದೇಶದ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು ಎರಡರಿಂದ ಮೂರು ಪಟ್ಟು ಹೆಚ್ಚಿಸಿವೆ. ನವೆಂಬರ್‌ನಲ್ಲಿ ಟಾಟಾ ಮೋಟಾರ್ಸ್‌ನ ಒಟ್ಟು ವಾಹನ ಮಾರಾಟವು 58,073 ಯುನಿಟ್‌ಗಳಾಷ್ಟಗಿದೆ. ಇವುಗಳಲ್ಲಿ ವಾಣಿಜ್ಯ ವಾಹನಗಳೂ ಸೇರಿವೆ.

ಮೂರು ದಿನಗಳ ಕಾಲ ಮುಚ್ಚಲಿದೆ Tata Motors ಉತ್ಪಾದನಾ ಘಟಕ

ಕಳೆದ ವರ್ಷದ ನವೆಂಬರ್‌ಗೆ ಹೋಲಿಸಿದರೆ ಈ ವರ್ಷದ ನವೆಂಬರ್‌ನಲ್ಲಿನ ಮಾರಾಟವು 20% ನಷ್ಟು ಹೆಚ್ಚಾಗಿದೆ. ಆದರೆ ಈ ವರ್ಷದ ಅಕ್ಟೋಬರ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ನವೆಂಬರ್ ತಿಂಗಳ ಮಾರಾಟವು ಕುಸಿದಿದೆ. ಅಕ್ಟೋಬರ್ ತಿಂಗಳಿನಲ್ಲಿ 67,829 ಯುನಿಟ್‌ ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಕಂಪನಿಯು ಕಳೆದ ತಿಂಗಳು ವಾಣಿಜ್ಯ ವಾಹನ ವಿಭಾಗದ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದ್ದು, ಈ ವಿಭಾಗದ ನಾಯಕನಾಗಿ ಹೊರಹೊಮ್ಮಿದೆ.

ಮೂರು ದಿನಗಳ ಕಾಲ ಮುಚ್ಚಲಿದೆ Tata Motors ಉತ್ಪಾದನಾ ಘಟಕ

ಟಾಟಾ ಮೋಟಾರ್ಸ್ ನಿನ್ನೆ 60 ಎಲೆಕ್ಟ್ರಿಕ್ ಬಸ್‌ಗಳನ್ನು ಅಹಮದಾಬಾದ್ ಜನಮಾರ್ಗ್ ಲಿಮಿಟೆಡ್‌ಗೆ (ಎಜೆಎಲ್) ತಲುಪಿಸಿದೆ. ನಿನ್ನೆ ಸಬರಮತಿ ರಿವರ್ ಫ್ರಂಟ್ ಈವೆಂಟ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ರವರು ಎಲೆಕ್ಟ್ರಿಕ್ ಬಸ್‌ಗಳಿಗೆ ಧ್ವಜಾರೋಹಣ ಮಾಡಿದರು. ಟಾಟಾ ಅಲ್ಟ್ರಾ ಅರ್ಬನ್ 9/9 AC ಬಸ್‌ಗಳು ಅಹಮದಾಬಾದ್‌ನ ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (BRTS) ಕಾರಿಡಾರ್‌ನಲ್ಲಿ ಸಂಚರಿಸಲಿವೆ.

ಮೂರು ದಿನಗಳ ಕಾಲ ಮುಚ್ಚಲಿದೆ Tata Motors ಉತ್ಪಾದನಾ ಘಟಕ

ಈ ಬಸ್‌ಗಳಿಗೆ ಚಾರ್ಜಿಂಗ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಇದು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿದೆ. ಎರಡು ವರ್ಷಗಳ ಹಿಂದೆ, ಟಾಟಾ ಮೋಟಾರ್ಸ್ ಎಜೆಎಲ್ ಗೆ 300 ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸುವ ಪ್ರಸ್ತಾಪವನ್ನು ಪಡೆದಿತ್ತು. ಟಾಟಾ ಅಲ್ಟ್ರಾ ಅರ್ಬನ್ 9/9 ಬಸ್‌ಗಳು ಸಂಪೂರ್ಣವಾಗಿ ಬ್ಯಾಟರಿ ಶಕ್ತಿಯನ್ನು ಆಧರಿಸಿವೆ. ಈ ಬಸ್‌ಗಳು ಗರಿಷ್ಠ 345 ಬಿ‌ಹೆಚ್‌ಪಿ ಪವರ್ ಹಾಗೂ 3000 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ.

ಮೂರು ದಿನಗಳ ಕಾಲ ಮುಚ್ಚಲಿದೆ Tata Motors ಉತ್ಪಾದನಾ ಘಟಕ

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ನವೆಂಬರ್ ತಿಂಗಳಿನಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ಕಾರುಗಳೊಂದಿಗೆ ಹೆಚ್ಚು ಬೇಡಿಕೆ ದಾಖಲಿಸಿದೆ. ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ನೆಕ್ಸಾನ್ ಇವಿ, ಟಿಗೋರ್ ಇವಿ ಹಾಗೂ ಎಕ್ಸ್‌ಪ್ರೆಸ್ ಟಿ ಇವಿ ಕಾರು ಮಾದರಿಗಳ ಮಾರಾಟದೊಂದಿಗೆ ಹೊಸ ದಾಖಲೆಗಳಿಗೆ ಕಾರಣವಾಗಿದೆ.

ಮೂರು ದಿನಗಳ ಕಾಲ ಮುಚ್ಚಲಿದೆ Tata Motors ಉತ್ಪಾದನಾ ಘಟಕ

ನವೆಂಬರ್ ಅವಧಿಯಲ್ಲಿ ಕಂಪನಿಯು ಹೆಚ್ಚು ಬೇಡಿಕೆ ಪಡೆದುಕೊಂಡಿದೆ. ಕಳೆದ ತಿಂಗಳ ಒಟ್ಟಾರೆ ಕಾರು ಮಾರಾಟದಲ್ಲಿ 38% ನಷ್ಟು ಬೆಳವಣಿಗೆ ಸಾಧಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ 324% ನಷ್ಟು ಬೆಳವಣಿಗೆ ಸಾಧಿಸಿದೆ. ನವೆಂಬರ್ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಮೊದಲ ಬಾರಿಗೆ 1,751 ಯುನಿಟ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದೆ.

ಮೂರು ದಿನಗಳ ಕಾಲ ಮುಚ್ಚಲಿದೆ Tata Motors ಉತ್ಪಾದನಾ ಘಟಕ

ಈ ಪ್ರಮಾಣವು ಕಳೆದ ವರ್ಷದ ನವೆಂಬರ್ ತಿಂಗಳ ಎಲೆಕ್ಟ್ರಿಕ್ ಕಾರು ಮಾರಾಟಕ್ಕಿಂತ 324% ನಷ್ಟು ಹೆಚ್ಚು. ಇಂಧನ ಬೆಲೆಗಳು ದಿನೇ ದಿನೇ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಎಲೆಕ್ಟ್ರಿಕ್ ವಾಹನ ಖರೀದಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಗಳಿವೆ.

Most Read Articles

Kannada
English summary
Tata motors to close jamshedpur plant for three days details
Story first published: Sunday, December 12, 2021, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X