ಕುಸ್ತಿ ಪಟುಗಳಿಗೆ ಒಲಂಪಿಕ್ ಚಿನ್ನದ ಪದಕ ಗೆಲ್ಲಲು ಯೋಜನೆ ರೂಪಿಸಿದ Tata Motors

ಇತ್ತೀಚೆಗೆ 2020 ರ ಟೋಕಿಯೊ ಒಲಂಪಿಕ್ ಕ್ರೀಡಾಕೂಟ ಮುಕ್ತಾಯವಾಯಿತು. ಮುಂದಿನ ಒಲಂಪಿಕ್ಸ್ 2024 ರಲ್ಲಿ ಫಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆಯಲಿದೆ. ಇದರ ತಯಾರಿಗಾಗಿ Tata Motors ಕಂಪನಿಯು ಈಗಾಗಲೇ ಭಾರತೀಯ ಕುಸ್ತಿ ಪಟುಗಳಿಗೆ ಸಹಾಯ ಮಾಡಲು ಮುಂದಾಗಿದೆ.

ಕುಸ್ತಿ ಪಟುಗಳಿಗೆ ಒಲಂಪಿಕ್ಸ್ ಚಿನ್ನದ ಪದಕ ಗೆಲ್ಲಲು ಯೋಜನೆ ರೂಪಿಸಿದ Tata Motors

ಇದಕ್ಕಾಗಿ Tata Motors ಕಂಪನಿಯು ಭಾರತೀಯ ಕುಸ್ತಿ ಒಕ್ಕೂಟದ ಜೊತೆಗೆ ಕೈಜೋಡಿಸಿದೆ. 2024 ರ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲುವುದನ್ನು ಗುರಿಯಾಗಿಸಿ ಕೊಂಡಿರುವ ಈ ಯೋಜನೆಯನ್ನು ಕ್ವೆಸ್ಟ್ ಫಾರ್ ಗೋಲ್ಡ್ ಎಂದು ಕರೆಯಲಾಗುತ್ತದೆ. ನಿನ್ನೆ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ Tata Motors ಕಂಪನಿಯು ಈ ಯೋಜನೆಗೆ ಚಾಲನೆ ನೀಡಿದೆ.

ಕುಸ್ತಿ ಪಟುಗಳಿಗೆ ಒಲಂಪಿಕ್ಸ್ ಚಿನ್ನದ ಪದಕ ಗೆಲ್ಲಲು ಯೋಜನೆ ರೂಪಿಸಿದ Tata Motors

ಈ ಕಾರ್ಯಕ್ರಮದ ಅಡಿಯಲ್ಲಿ ಭಾರತೀಯ ಕುಸ್ತಿ ಪಟುಗಳಿಗೆ ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವು ನೀಡಲಾಗುವುದು. ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾರತ ಚಿನ್ನದ ಪದಕ ಗೆಲ್ಲುವಂತೆ ಮಾಡುವುದು ಈ ಯೋಜನೆಯ ಗುರಿಯಾಗಿದೆ. ನಿನ್ನೆ ಟೋಕಿಯೊ ಒಲಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಭಾರತೀಯ ಕುಸ್ತಿ ತಂಡವನ್ನು Tata Motors ಗೌರವಿಸಿತು.

ಕುಸ್ತಿ ಪಟುಗಳಿಗೆ ಒಲಂಪಿಕ್ಸ್ ಚಿನ್ನದ ಪದಕ ಗೆಲ್ಲಲು ಯೋಜನೆ ರೂಪಿಸಿದ Tata Motors

ಇದರ ಭಾಗವಾಗಿ ಭಾರತದ ಕುಸ್ತಿ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಯೋಧ ಪಿಕ್ ಅಪ್ ಟ್ರಕ್ ಅನ್ನು ನೀಡಲಾಯಿತು. ಟೋಕಿಯೊ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ರವಿಕುಮಾರ್ ದಹಿಯಾ ಹಾಗೂ ಕಂಚಿನ ಪದಕ ಗೆದ್ದ ಭಜರಂಗ್ ಪೂನಿಯಾ ಸೇರಿದಂತೆ ಎಲ್ಲಾ ಕ್ರೀಡಾ ಪಟುಗಳನ್ನು Tata Motors ಗೌರವಿಸಿತು.

ಕುಸ್ತಿ ಪಟುಗಳಿಗೆ ಒಲಂಪಿಕ್ಸ್ ಚಿನ್ನದ ಪದಕ ಗೆಲ್ಲಲು ಯೋಜನೆ ರೂಪಿಸಿದ Tata Motors

ಕೆಲವು ದಿನಗಳ ಹಿಂದಷ್ಟೇ Renault India ಕಂಪನಿಯು ರವಿಕುಮಾರ್ ದಹಿಯಾ ಹಾಗೂ ಭಜರಂಗ್ ಪೂನಿಯಾ ಅವರನ್ನು ಗೌರವಿಸಿತ್ತು. ಈ ಇಬ್ಬರೂ ಕುಸ್ತಿ ಪಟುಗಳಿಗೆ ಕಂಪನಿಯು Renault Kiger ಕಾರನ್ನು ಉಡುಗೊರೆಯಾಗಿ ನೀಡಿತ್ತು. Renault ಕಂಪನಿಯು ಟೋಕಿಯೊ ಒಲಂಪಿಕ್ಸ್‌ನಲ್ಲಿ ಪದಕ ಗೆದ್ದ ಪ್ರತಿಯೊಬ್ಬ ಭಾರತೀಯ ಕ್ರೀಡಾಪಟುವಿಗೂ Renault Kiger ಕಾರ್ ಅನ್ನು ಉಡುಗೊರೆಯಾಗಿ ನೀಡಿದೆ ಎಂಬುದು ಗಮನಾರ್ಹ.

ಕುಸ್ತಿ ಪಟುಗಳಿಗೆ ಒಲಂಪಿಕ್ಸ್ ಚಿನ್ನದ ಪದಕ ಗೆಲ್ಲಲು ಯೋಜನೆ ರೂಪಿಸಿದ Tata Motors

ಇನ್ನು Tata Motors ಯೋಜನೆಯ ಬಗ್ಗೆ ಹೇಳುವುದಾದರೆ, ಈ ಯೋಜನೆಯಡಿ, ಎಲ್ಲಾ ವಯಸ್ಸಿನ ಹಾಗೂ ಎಲ್ಲಾ ತೂಕ ವಿಭಾಗಗಳ ಭಾರತೀಯ ಕುಸ್ತಿ ಪಟುಗಳ ಪ್ರಗತಿಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದರಂತೆ ಭಾರತೀಯ ಕುಸ್ತಿ ಪಟುಗಳಿಗೆ ಅಗತ್ಯವಿರುವ ಮೂಲ ಸೌಕರ್ಯ ಸೌಲಭ್ಯಗಳನ್ನು ಒದಗಿಸಲಾಗುವುದು.

ಕುಸ್ತಿ ಪಟುಗಳಿಗೆ ಒಲಂಪಿಕ್ಸ್ ಚಿನ್ನದ ಪದಕ ಗೆಲ್ಲಲು ಯೋಜನೆ ರೂಪಿಸಿದ Tata Motors

ಇದರ ಜೊತೆಗೆ ಅವರಿಗೆ ಅವಕಾಶಗಳು ಹಾಗೂ ಭದ್ರತೆಯನ್ನು ಖಾತ್ರಿಪಡಿಸಲಾಗುವುದು. ಈ ಬಗ್ಗೆ ಮಾತನಾಡಿರುವ ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್, 2018 ರಿಂದ Tata Motors ಕಂಪನಿಯು ಭಾರತದಲ್ಲಿ ಕುಸ್ತಿ ಕ್ರೀಡೆ ಹೊಸ ಎತ್ತರವನ್ನು ತಲುಪಲು ಸಹಾಯ ಮಾಡುತ್ತಿದೆ ಎಂದು ಹೇಳಿದರು.

ಕುಸ್ತಿ ಪಟುಗಳಿಗೆ ಒಲಂಪಿಕ್ಸ್ ಚಿನ್ನದ ಪದಕ ಗೆಲ್ಲಲು ಯೋಜನೆ ರೂಪಿಸಿದ Tata Motors

ಇದರಿಂದ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾರತವು ಕುಸ್ತಿಯಲ್ಲಿ ಚಿನ್ನ ಗೆಲ್ಲುತ್ತದೆ ಎಂದು ನಿರೀಕ್ಷಿಸಬಹುದು. ಭಾರತವು ಇತ್ತೀಚೆಗೆ ಅಂತರ ರಾಷ್ಟ್ರೀಯ ಕುಸ್ತಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರುತ್ತಿದೆ. ಈ ಹಿನ್ನೆಲೆಯಲ್ಲಿ, Tata Motors ಕಂಪನಿಯ ಸಹಾಯವು ಭಾರತದಲ್ಲಿ ಕುಸ್ತಿ ಕ್ರೀಡೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಗಳಿವೆ.

ಕುಸ್ತಿ ಪಟುಗಳಿಗೆ ಒಲಂಪಿಕ್ಸ್ ಚಿನ್ನದ ಪದಕ ಗೆಲ್ಲಲು ಯೋಜನೆ ರೂಪಿಸಿದ Tata Motors

ಟೋಕಿಯೊ ಒಲಂಪಿಕ್ಸ್‌ನಲ್ಲಿ ಭಾಗವಹಿಸಿದ 24 ಭಾರತೀಯರಿಗೆ Tata Motors ಕಂಪನಿಯು Altroz ಕಾರನ್ನು ಉಡುಗೊರೆಯಾಗಿ ನೀಡಿದೆ. ಮರುದಿನ ಪ್ಯಾರಿಸ್‌ ಒಲಿಂಪಿಕ್ಸ್ ನಲ್ಲಿ ಚಿನ್ನಕ್ಕಾಗಿ ಹುಡುಕಾಟ ಆರಂಭವಾಗಿದೆ. Tata Motors ಕಂಪನಿಯು ಟೋಕಿಯೊ ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲುವುದರಿಂದ ವಂಚಿತರಾದವರಿಗೂ Altoz ಕಾರ್ ಅನ್ನು ಉಡುಗೊರೆಯಾಗಿ ನೀಡಿದೆ.

ಕುಸ್ತಿ ಪಟುಗಳಿಗೆ ಒಲಂಪಿಕ್ಸ್ ಚಿನ್ನದ ಪದಕ ಗೆಲ್ಲಲು ಯೋಜನೆ ರೂಪಿಸಿದ Tata Motors

Tata Motors ಕಂಪನಿಯು ಈ ಉಡುಗೊರೆಯನ್ನು ಕ್ರೀಡಾ ಪಟುಗಳ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಲು ಹಾಗೂ ಪ್ರೋತ್ಸಾಹ ನೀಡುವುದಕ್ಕಾಗಿ ನೀಡಿದೆ. ಪ್ರತಿಯೊಬ್ಬರೂ ಒಲಂಪಿಕ್ಸ್ ನಲ್ಲಿ ಪದಕ ಗೆದ್ದವರಿಗೆ ಉಡುಗೊರೆ ನೀಡುತ್ತಿರುವಾಗ Tata Motors ಕಂಪನಿಯು ಮಾತ್ರ ಕಂಚಿನ ಪದಕ ಗೆಲ್ಲುವುದಕ್ಕೆ ವಿಫಲರಾದವರನ್ನು ಗೌರವಿಸಿದೆ.

ಕುಸ್ತಿ ಪಟುಗಳಿಗೆ ಒಲಂಪಿಕ್ಸ್ ಚಿನ್ನದ ಪದಕ ಗೆಲ್ಲಲು ಯೋಜನೆ ರೂಪಿಸಿದ Tata Motors

Tata Motors ಕಂಪನಿಯ ಈ ನಡೆ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ. Tata Motors ಕ್ರೀಡಾ ಪಟುಗಳಿಗೆ ಉಡುಗೊರೆಯಾಗಿ ನೀಡಿದ Altroz ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಜಾಗತಿಕ ಎನ್‌ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ ಪೂರ್ಣ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ. Tata Motors ಕಂಪನಿಯ ಕಾರುಗಳು ಸುರಕ್ಷತೆಗಾಗಿ ಹೆಸರುವಾಸಿಯಾಗಿವೆ.

ಕುಸ್ತಿ ಪಟುಗಳಿಗೆ ಒಲಂಪಿಕ್ಸ್ ಚಿನ್ನದ ಪದಕ ಗೆಲ್ಲಲು ಯೋಜನೆ ರೂಪಿಸಿದ Tata Motors

Tata Motors ಕಂಪನಿಯು ಸದಾ ಕಾಲ ಭಾರತೀಯರ ಕಷ್ಟ ಕಾಲದಲ್ಲಿ ನೆರವು ನೀಡುತ್ತಲೇ ಇದೆ. ಕಳೆದ ವರ್ಷ ಕರೋನಾ ಸಂಕಷ್ಟದ ಸಂದರ್ಭದಲ್ಲಿ Tata Motors ಅಧ್ಯಕ್ಷರಾದ ರತನ್ ಟಾಟಾರವರು ಸಾವಿರಾರು ಕೋಟಿ ರೂಪಾಯಿಗಳಷ್ಟು ದೇಣಿಗೆ ನೀಡಿ ಭಾರತೀಯರ ನೆರವಿಗೆ ಧಾವಿಸಿದ್ದರು. ಇದರ ಜೊತೆಗೆ Tata Motors ಕಂಪನಿಯು ಮೆಡಿಕಲ್ ಆಕ್ಸಿಜನ್ ಸೇರಿದಂತೆ ವಿವಿಧ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಅಗತ್ಯವಿರುವವರಿಗೆ ನೀಡಿ ಮಾನವೀಯತೆ ಮೆರೆದಿದೆ.

Most Read Articles

Kannada
English summary
Tata motors to help indian wrestlers to win gold in paris olympics details
Story first published: Saturday, August 28, 2021, 10:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X