ಹಳೆಯ ವಾಹನಗಳಿಗಾಗಿ ಸ್ಕ್ರಾಪಿಂಗ್ ಘಟಕ ತೆರೆಯಲು ಮುಂದಾದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಶುಕ್ರವಾರ ಗುಜರಾತ್ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಅನ್ವಯ ಟಾಟಾ ಮೋಟಾರ್ಸ್ ಅಹಮದಾಬಾದ್‌ನಲ್ಲಿ ನೋಂದಾಯಿತ ವಾಹನ ಸ್ಕ್ರಾಪಿಂಗ್ ಘಟಕವನ್ನು ಸ್ಥಾಪಿಸಲಿದೆ. ಪ್ಯಾಸೆಂಜರ್ ಹಾಗೂ ಕಮರ್ಷಿಯಲ್ ವಾಹನಗಳಿಗಾಗಿ ಈ ಸ್ಕ್ರ್ಯಾಪಿಂಗ್ ಘಟಕಗಳು ಕಾರ್ಯ ನಿರ್ವಹಿಸಲಿವೆ.

ಹಳೆಯ ವಾಹನಗಳಿಗಾಗಿ ಸ್ಕ್ರಾಪಿಂಗ್ ಘಟಕ ತೆರೆಯಲು ಮುಂದಾದ ಟಾಟಾ ಮೋಟಾರ್ಸ್

ಈ ಕೇಂದ್ರಗಳಲ್ಲಿ ವಾರ್ಷಿಕವಾಗಿ 36,000 ಹಳೆಯ ವಾಹನಗಳನ್ನು ಮರುಬಳಕೆ ಮಾಡಬಹುದು. ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿರುವ ಮಾಹಿತಿಗಳ ಪ್ರಕಾರ, ಕಂಪನಿಯು ಗುಜರಾತ್ ಸರ್ಕಾರದ ಬಂದರು ಹಾಗೂ ಸಾರಿಗೆ ಇಲಾಖೆಯೊಂದಿಗೆ ಒಂದು ಎಂಒಯುಗೆ ಸಹಿ ಹಾಕಿದೆ. ಗುಜರಾತ್ ಸರ್ಕಾರದ ನಿಯಮಗಳು ಹಾಗೂ ರಸ್ತೆ ಮತ್ತು ಸಾರಿಗೆ ಇಲಾಖೆಯು ಸೂಚಿಸಿದ ಕರಡು ನೀತಿಯ ಪ್ರಕಾರ ಇಲಾಖೆಯು ಸ್ಕ್ರ್ಯಾಪಿಂಗ್ ಕೇಂದ್ರಗಳಿಗೆ ಅಗತ್ಯವಾದ ಅನುಮೋದನೆಗಳನ್ನು ನೀಡುತ್ತದೆ.

ಹಳೆಯ ವಾಹನಗಳಿಗಾಗಿ ಸ್ಕ್ರಾಪಿಂಗ್ ಘಟಕ ತೆರೆಯಲು ಮುಂದಾದ ಟಾಟಾ ಮೋಟಾರ್ಸ್

ಈ ಬಗ್ಗೆ ಮಾತನಾಡಿದ ಟಾಟಾ ಮೋಟಾರ್ಸ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ವಾಣಿಜ್ಯ ವಾಹನ ವ್ಯಾಪಾರ ಘಟಕದ ಅಧ್ಯಕ್ಷರಾದ ಗಿರೀಶ್ ವಾಘ್, ಟಾಟಾ ಮೋಟಾರ್ಸ್ ಕಂಪನಿಗೆ ಇದು ನಿಜಕ್ಕೂ ಐತಿಹಾಸಿಕ ಹೆಜ್ಜೆ. ಏಕೆಂದರೆ ಕಂಪನಿಯು ವಾಹನ ಸ್ಕ್ರ್ಯಾಪಿಂಗ್ ವಲಯದಲ್ಲಿ ತನ್ನ ಭಾಗವಹಿಸುವಿಕೆಯನ್ನು ಘೋಷಿಸಿದೆ ಎಂದು ಹೇಳಿದರು.

ಹಳೆಯ ವಾಹನಗಳಿಗಾಗಿ ಸ್ಕ್ರಾಪಿಂಗ್ ಘಟಕ ತೆರೆಯಲು ಮುಂದಾದ ಟಾಟಾ ಮೋಟಾರ್ಸ್

ಸ್ಕ್ರ್ಯಾಪ್ಪೇಜ್ ನೀತಿಯು ರಸ್ತೆ ಹಾಗೂ ಸಾರಿಗೆ ಇಲಾಖೆಯ ಉತ್ತಮ ಯೋಜನೆಯಾಗಿದೆ. ಭಾರತದಲ್ಲಿ ಸುರಕ್ಷಿತವಾದ ಹಾಗೂ ಮಾಲಿನ್ಯ ರಹಿತವಾದ ವಾಹನಗಳನ್ನು ಉತ್ತೇಜಿಸಲು ಇದು ಸರಿಯಾದ ಹೆಜ್ಜೆಯಾಗಿದೆ ಎಂದು ಗಿರೀಶ್ ವಾಘ್ ಹೇಳಿದರು.

ಹಳೆಯ ವಾಹನಗಳಿಗಾಗಿ ಸ್ಕ್ರಾಪಿಂಗ್ ಘಟಕ ತೆರೆಯಲು ಮುಂದಾದ ಟಾಟಾ ಮೋಟಾರ್ಸ್

ಇದರ ಜೊತೆಗೆ ಆರ್ಥಿಕತೆಯ ಬೆಳವಣಿಗೆಗೆ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ. ಟಾಟಾ ಮೋಟಾರ್ಸ್ ಸುಸ್ಥಿರ ಭವಿಷ್ಯಕ್ಕಾಗಿ ಬದ್ಧವಾಗಿದೆ. ಗುಜರಾತ್ ಸರ್ಕಾರದ ಬೆಂಬಲದ ಮೂಲಕ ಈ ಯೋಜನೆಯನ್ನು ಬೆಂಬಲಿಸಲು ಎದುರು ನೋಡುತ್ತಿದೆ ಎಂದು ಅವರು ಹೇಳಿದರು.

ಹಳೆಯ ವಾಹನಗಳಿಗಾಗಿ ಸ್ಕ್ರಾಪಿಂಗ್ ಘಟಕ ತೆರೆಯಲು ಮುಂದಾದ ಟಾಟಾ ಮೋಟಾರ್ಸ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ವಾಹನ ಸ್ಕ್ರಾಪೇಜ್ ನೀತಿಯನ್ನು ಆರಂಭಿಸಿದರು. ಗುಜರಾತ್ ಹೂಡಿಕೆ ಶೃಂಗಸಭೆಯಲ್ಲಿ ಪ್ರಧಾನಿ ಮೋದಿರವರು ವೀಡಿಯೊ ಕಾನ್ಫರೆನ್ಸ್ ಮೂಲಕ ಈ ನೀತಿಗೆ ಚಾಲನೆ ನೀಡಿದರು.

ಹಳೆಯ ವಾಹನಗಳಿಗಾಗಿ ಸ್ಕ್ರಾಪಿಂಗ್ ಘಟಕ ತೆರೆಯಲು ಮುಂದಾದ ಟಾಟಾ ಮೋಟಾರ್ಸ್

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ರವರು ಸ್ಕ್ರಾಪೇಜ್ ನೀತಿ ಮೂರು ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು. ಈ ನೀತಿಯಲ್ಲಿ ವಾಹನಗಳ ರಿ ಯೂಸ್, ರಿ ಸೈಕಲ್ ಹಾಗೂ ರಿಕವರ್ ಅನ್ವಯ ಕಾರ್ಯ ನಿರ್ವಹಿಸಲಾಗುತ್ತದೆ ಎಂದು ಹೇಳಿದರು.

ಹಳೆಯ ವಾಹನಗಳಿಗಾಗಿ ಸ್ಕ್ರಾಪಿಂಗ್ ಘಟಕ ತೆರೆಯಲು ಮುಂದಾದ ಟಾಟಾ ಮೋಟಾರ್ಸ್

ಆಟೋಮೊಬೈಲ್ ಉದ್ಯಮವು ಈ ವಾಹನ ಸ್ಕ್ರಾಪೇಜ್ ನೀತಿಯಿಂದ ರೂ. 10 ಸಾವಿರ ಕೋಟಿಗಳಷ್ಟು ಹೂಡಿಕೆಯನ್ನು ಪಡೆಯುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಸ್ಕ್ರ್ಯಾಪ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಣ್ಣ ಉದ್ಯಮಿಗಳು ಕೂಡ ಈ ನೀತಿಯಿಂದ ದೊಡ್ಡ ಲಾಭವನ್ನು ಪಡೆಯಲಿದ್ದಾರೆ. ಹಾಗೆಯೇ ಆಟೋ ಉದ್ಯಮವು ಸಹ ದೊಡ್ಡ ಪ್ರಮಾಣದ ಲಾಭವನ್ನು ಪಡೆಯಲಿದೆ.

ಹಳೆಯ ವಾಹನಗಳಿಗಾಗಿ ಸ್ಕ್ರಾಪಿಂಗ್ ಘಟಕ ತೆರೆಯಲು ಮುಂದಾದ ಟಾಟಾ ಮೋಟಾರ್ಸ್

ವಾಹನಗಳು 40% ವರೆಗೆ ಅಗ್ಗವಾಗುತ್ತವೆ

ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿರವರ ಪ್ರಕಾರ, ಸ್ಕ್ರ್ಯಾಪಿಂಗ್ ಪಾಲಿಸಿಯು ಹೊಸ ವಾಹನಗಳ ಬೆಲೆಯನ್ನು 40% ವರೆಗೆ ಅಗ್ಗವಾಗಿಸುತ್ತದೆ. ಏಕೆಂದರೆ 99% ಲೋಹವನ್ನು ಹಳೆಯ ವಾಹನಗಳ ಸ್ಕ್ರ್ಯಾಪ್ ನಿಂದ ಮರು ಪಡೆಯಬಹುದು ಎಂದು ಹೇಳಿದರು.

ಹಳೆಯ ವಾಹನಗಳಿಗಾಗಿ ಸ್ಕ್ರಾಪಿಂಗ್ ಘಟಕ ತೆರೆಯಲು ಮುಂದಾದ ಟಾಟಾ ಮೋಟಾರ್ಸ್

ಇದರಿಂದ ಹೊಸ ವಾಹನಗಳ ಬೆಲೆ ಕಡಿಮೆ ಆಗುತ್ತದೆ. ಇದೇ ವೇಳೆ ಅಗ್ಗದ ಕಚ್ಚಾ ವಸ್ತುಗಳಾದ ತಾಮ್ರ, ಎಲೆಕ್ಟ್ರಿಕ್ ಸರಕುಗಳು ಹಾಗೂ ವಾಹನಗಳಿಗೆ ಲಿಥಿಯಂ ಕೂಡ ಈ ಸ್ಕ್ರ್ಯಾಪಿಂಗ್‌ ಮೂಲಕ ಲಭ್ಯವಿರುತ್ತವೆ. ಇದರಿಂದ ಅಂತಿಮ ಉತ್ಪನ್ನವು ಅಗ್ಗವಾಗುತ್ತದೆ.

ಹಳೆಯ ವಾಹನಗಳಿಗಾಗಿ ಸ್ಕ್ರಾಪಿಂಗ್ ಘಟಕ ತೆರೆಯಲು ಮುಂದಾದ ಟಾಟಾ ಮೋಟಾರ್ಸ್

ಈ ನೀತಿಯು ಎಲ್ಲರಿಗೂ ಪ್ರಯೋಜನಕಾರಿಯಾಗಿರಲಿದೆ ಎಂದು ತಿಳಿಸಿದ ನಿತಿನ್ ಗಡ್ಕರಿ ಎಲ್ಲಾ ವಾಹನ ಕಂಪನಿಗಳು, ಅದರ ಸಂಬಂಧಿತ ಉದ್ಯಮಿಗಳು, ವಾಹನ ಗ್ರಾಹಕರು ಹಾಗೂ ಪರಿಸರಕ್ಕೆ ವಾಹನ ರದ್ದತಿ ನೀತಿಯು ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದರು.

ಹಳೆಯ ವಾಹನಗಳಿಗಾಗಿ ಸ್ಕ್ರಾಪಿಂಗ್ ಘಟಕ ತೆರೆಯಲು ಮುಂದಾದ ಟಾಟಾ ಮೋಟಾರ್ಸ್

ವಾಹನ ಸ್ಕ್ರಾಪೇಜ್ ನೀತಿಯಿಂದಾಗಿ ಭಾರತದಲ್ಲಿ ತಯಾರಿಸಿದ ಹೊಸ ವಾಹನಗಳ ಬೆಲೆಯು 40% ವರೆಗೆ ಕಡಿಮೆಯಾಗುತ್ತದೆ, ಜೊತೆಗೆ ಇಂಧನ ಉಳಿತಾಯ ಹಾಗೂ ನಿರ್ವಹಣೆ ವೆಚ್ಚದಂತಹ ಅನೇಕ ಪ್ರಯೋಜನಗಳಾಗುತ್ತವೆ.

ಹಳೆಯ ವಾಹನಗಳಿಗಾಗಿ ಸ್ಕ್ರಾಪಿಂಗ್ ಘಟಕ ತೆರೆಯಲು ಮುಂದಾದ ಟಾಟಾ ಮೋಟಾರ್ಸ್

ಸ್ಕ್ರ್ಯಾಪಿಂಗ್ ಉದ್ಯಮವನ್ನು ಪ್ರೋತ್ಸಾಹಿಸಿದರೆ, ಉದ್ಯೋಗವೂ ಸೃಷ್ಟಿಯಾಗುತ್ತದೆ ಹಾಗೂ ಉದ್ಯೋಗಗಳು ಹೆಚ್ಚಾಗುತ್ತವೆ. ಇದರ ಜೊತೆಗೆ ಹೊಸ ವಾಹನಗಳ ಮಾರಾಟದಿಂದ, ಸರ್ಕಾರವು ಜಿಎಸ್‌ಟಿ ರೂಪದಲ್ಲಿ ರೂ. 30 ಸಾವಿರದಿಂದ 40 ಸಾವಿರ ಕೋಟಿಗಳ ವರೆಗೆ ಆದಾಯವನ್ನು ಪಡೆಯಲಿದೆ ಎಂದು ಹೇಳಲಾಗಿದೆ.

ಹಳೆಯ ವಾಹನಗಳಿಗಾಗಿ ಸ್ಕ್ರಾಪಿಂಗ್ ಘಟಕ ತೆರೆಯಲು ಮುಂದಾದ ಟಾಟಾ ಮೋಟಾರ್ಸ್

ಕೇಂದ್ರ ಸರ್ಕಾರವು ತನ್ನ ಮಹತ್ವಾಕಾಂಕ್ಷಿ ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯನ್ನು ಹಂತ-ಹಂತವಾಗಿ ಜಾರಿಗೆ ತರುತ್ತಿದ್ದು, ಸ್ವಯಂಪ್ರೇರಿತ ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯಡಿಯಲ್ಲಿ ವಾಹನ ಮಾಲೀಕರು ತಮ್ಮ ಹಳೆಯ ವಾಹನಗಳನ್ನು ಗುಜುರಿಗೆ ಹಾಕುವ ಮೂಲಕ ಹೊಸ ವಾಹನ ಖರೀದಿಗೆ ಹಲವು ವಿನಾಯ್ತಿಗಳನ್ನು ಪಡೆದುಕೊಳ್ಳುವ ಅವಕಾಶ ನೀಡಲಾಗಿದೆ.

ಹಳೆಯ ವಾಹನಗಳಿಗಾಗಿ ಸ್ಕ್ರಾಪಿಂಗ್ ಘಟಕ ತೆರೆಯಲು ಮುಂದಾದ ಟಾಟಾ ಮೋಟಾರ್ಸ್

ಹೊಸ ವಾಹನಗಳ ಸ್ಕ್ರ್ಯಾಪೇಜ್ ನೀತಿಯು ಅಕ್ಟೋಬರ್ 1, 2021ರಿಂದ ಅಧಿಕೃತ ಚಾಲನೆ ಪಡೆದುಕೊಳ್ಳಲಿದ್ದು, ಹೊಸ ನೀತಿಯ ಪ್ರಕಾರ, ಪ್ರತಿಯೊಂದು ಖಾಸಗಿ ಮತ್ತು ವಾಣಿಜ್ಯ ವಾಹನಗಳು ಕ್ರಮವಾಗಿ 15 ಮತ್ತು 10 ವರ್ಷಗಳ ಆರಂಭಿಕ ನೋಂದಣಿ ಅವಧಿಯ ನಂತರ ಫಿಟ್ನೆಸ್ ಪರೀಕ್ಷೆಗೆ ಒಳಗಾಗುತ್ತವೆ.

ಹಳೆಯ ವಾಹನಗಳಿಗಾಗಿ ಸ್ಕ್ರಾಪಿಂಗ್ ಘಟಕ ತೆರೆಯಲು ಮುಂದಾದ ಟಾಟಾ ಮೋಟಾರ್ಸ್

ಹಳೆಯ ವಾಹನಗಳು ರಸ್ತೆಗಳಲ್ಲಿ ಸಂಚಾರವನ್ನು ಮುಂದುವರಿಸಲು ಫಿಟ್ನೆಸ್ ಪರೀಕ್ಷೆಯನ್ನು ತೆರವುಗೊಳಿಸುವುದು ಕಡ್ಡಾಯವಾಗಿದ್ದು, ವಿಫಲವಾದರೆ ಅಂತಹ ವಾಹನವನ್ನು ಸ್ಕ್ರ್ಯಾಪ್ ಮಾಡಬೇಕಾಗುತ್ತದೆ.

Most Read Articles

Kannada
English summary
Tata motors to setup scrapping facility for old vehicles in ahmedabad details
Story first published: Saturday, August 14, 2021, 17:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X