ಟಾಟಾ ಆಲ್‌‌ಟ್ರೊಜ್ ಕಾರು ದರ ಪರಿಷ್ಕರಣೆ: ಎಕ್ಸ್ಇ ಡೀಸೆಲ್ ಬೆಲೆ ಕಡಿತ, ಉಳಿದ ರೂಪಾಂತರಗಳ ಬೆಲೆ ಏರಿಕೆ

ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಕಳೆದ ತಿಂಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ವರ್ಷದಿಂದ ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಕಾರುಗಳು ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ.

ಟಾಟಾ ಆಲ್‌‌ಟ್ರೊಜ್ ಕಾರು ದರ ಪರಿಷ್ಕರಣೆ: ಎಕ್ಸ್ಇ ಡೀಸೆಲ್ ಬೆಲೆ ಕಡಿತ, ಉಳಿದ ರೂಪಾಂತರಗಳ ಬೆಲೆ ಏರಿಕೆ

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಆಲ್‌‌ಟ್ರೊಜ್ ಕಾರಿನ ಬೆಲೆಯನ್ನು ಪರಿಷ್ಕರಿಸಿದೆ, ಅದರಂತೆ ಟಾಟಾ ಆಲ್‌‌ಟ್ರೊಜ್ ಪೆಟ್ರೋಲ್ ಮಾದರಿಗಳ ಬಗ್ಗೆ ಹೇಳುವುದಾದರೆ, ಇದರ ಎಕ್ಸ್ಇ ರೂಪಾಂತರದ ಬೆಲೆಯನ್ನು ರೂ,20 ಗಳವರೆಗೆ ಹೆಚ್ಚಿಸಿದ್ದು, ಇದೀಗ ಇದರ ಬೆಲೆಯು ರೂ.5,79,900 ಗಳಾಗಿದೆ. ಇನ್ನು ಎಕ್ಸ್ಎಂ ಮತ್ತು ಎಕ್ಸ್ಎಂ ಪ್ಲಸ್ ರೂಪಾಂತರಗಳ ಬೆಲೆಯು ರೂ.4 ಸಾವಿರಗಳವರೆಗೆ ಹೆಚ್ಚಿಸಲಾಗಿದೆ, ಇನ್ನು ಎಕ್ಸ್‌ಟಿ ರೂಪಾಂತರದ ಬೆಲೆಯನ್ನು ರೂ.9,500 ಗಳವರೆಗೆ ಹೆಚ್ಚಿಸಿದರೆ, ಉಳಿದಂತೆ ಎಕ್ಸ್‌ಝಡ್ ರೂಪಾಂತರದ ಬೆಲೆಯನ್ನು ರೂ.6,500, ಎಕ್ಸ್‌ಝಡ್ (ಒ) ರೂಪಾಂತರದ ಬೆಲೆಯನ್ನು ರೂ.3,500 ಹಾಗೂ ಎಕ್ಸ್‌ಝಡ್ ಪ್ಲಸ್ ರೂಪಾಂತರದ ಬೆಲೆಯನ್ನು ರೂ,3,500 ಗಳವರೆಗೆ ಹೆಚ್ಚಿಸಲಾಗಿದೆ.

ಟಾಟಾ ಆಲ್‌‌ಟ್ರೊಜ್ ಕಾರು ದರ ಪರಿಷ್ಕರಣೆ: ಎಕ್ಸ್ಇ ಡೀಸೆಲ್ ಬೆಲೆ ಕಡಿತ, ಉಳಿದ ರೂಪಾಂತರಗಳ ಬೆಲೆ ಏರಿಕೆ

ಆಲ್‌‌ಟ್ರೊಜ್ ಟರ್ಬೂ ಮಾದರಿಯ ಎಕ್ಸ್‌ಟಿ ರೂಪಾಂತರದ ಬೆಲೆಯನ್ನು ರೂ.8,500 ಗಳವರೆಗೆ ಹೆಚ್ಚಿಸಿದರೆ, ಎಕ್ಸ್‌ಝಡ್ ರೂಪಾಂತರದ ಬೆಲೆಯನ್ನು ರೂ,6,500 ಮತ್ತು ಎಕ್ಸ್‌ಝಡ್ ಪ್ಲಸ್ ರೂಪಾಂತರದ ಬೆಲೆಯನ್ನು ರೂ,.3,500 ಗಳವರಗೆ ಹೆಚ್ಚಿಸಿದೆ.

ಟಾಟಾ ಆಲ್‌‌ಟ್ರೊಜ್ ಕಾರು ದರ ಪರಿಷ್ಕರಣೆ: ಎಕ್ಸ್ಇ ಡೀಸೆಲ್ ಬೆಲೆ ಕಡಿತ, ಉಳಿದ ರೂಪಾಂತರಗಳ ಬೆಲೆ ಏರಿಕೆ

ಇನ್ನು ಆಲ್‌‌ಟ್ರೊಜ್ ಡೀಸೆಲ್ ಮಾದರಿಗಳ ಬಗ್ಗೆ ಹೇಳುವುದಾದರೆ, ಇದರ ಎಕ್ಸ್ಇ ರೂಪಾಂತರದ ಬೆಲೆಯನ್ನು ರೂ.23 ಗಳವರೆಗೆ ಬೆಲೆಯನ್ನು ಇಳಿಕೆ ಮಾಡಿದ್ದಾರೆ. ಉಳಿದ ಡೀಸೆಲ್ ರೂಪಾಂತರಗಳ ಬೆಲೆ ಏರಿಕೆ ಮಾಡಲಾಗಿದೆ. ಉಳಿದಂತೆ ಎಕ್ಸ್ಎಂ ರೂಪಾಂತರದ ಬೆಲೆಯನ್ನು ರೂ,4 ಸಾವಿರ, ಎಕ್ಸ್‌ಟಿ ರೂಪಾಂತರದ ರೂ,9,500, ಎಕ್ಸ್‌ಝಡ್ ರೂಪಾಂತರದ ರೂ.6,500, ಎಕ್ಸ್‌ಝಡ್ (ಒ) ರೂಪಾಂತರದ ರೂ.3,500 ಹಾಗೂ ಎಕ್ಸ್‌ಝಡ್ ಪ್ಲಸ್ ರೂಪಾಂತರದ ಬೆಲೆಯನ್ನು ರೂ,3,500 ಗಳವರೆಗೆ ಹೆಚ್ಚಿಸಲಾಗಿದೆ

ಟಾಟಾ ಆಲ್‌‌ಟ್ರೊಜ್ ಕಾರು ದರ ಪರಿಷ್ಕರಣೆ: ಎಕ್ಸ್ಇ ಡೀಸೆಲ್ ಬೆಲೆ ಕಡಿತ, ಉಳಿದ ರೂಪಾಂತರಗಳ ಬೆಲೆ ಏರಿಕೆ

ಟಾಟಾ ಆಲ್‌‌ಟ್ರೊಜ್ ಹೊಸ ‘ಐ-ಟರ್ಬೊ' ರೂಪಾಂತರವನ್ನು ಬಿಡುಗಡೆಗೊಳಿಸಿದ ಬಳಿಕ ಮಾರಾಟದಲ್ಲಿ ಮತ್ತಷ್ಟು ಬೂಸ್ಟ್ ಮಾಡಿದೆ. ವಿಶೇಷವೆಂದರೆ ಭಾರತದಲ್ಲಿ ವಾಹನ ಸುರಕ್ಷತೆಯ ಬಗ್ಗೆ ಹೆಚ್ಚುತ್ತಿರುವ ಅರಿವಿನೊಂದಿಗೆ ಟಾಟಾ ಕಾರುಗಳು ಖರೀದಿದಾರರಲ್ಲಿ ಬೇಡಿಕೆಯ ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿವೆ ಎಂದು ಹೇಳಬಹುದು.

ಟಾಟಾ ಆಲ್‌‌ಟ್ರೊಜ್ ಕಾರು ದರ ಪರಿಷ್ಕರಣೆ: ಎಕ್ಸ್ಇ ಡೀಸೆಲ್ ಬೆಲೆ ಕಡಿತ, ಉಳಿದ ರೂಪಾಂತರಗಳ ಬೆಲೆ ಏರಿಕೆ

ಟಾಟಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕಂಪನಿಯ ಮೊದಲ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿ ಆಲ್‌‌ಟ್ರೊಜ್ ಕಾರನ್ನು ಬಿಡುಗಡೆಗೊಳಿಸಿತು. ಟಾಟಾ ಆಲ್‌‌ಟ್ರೊಜ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಗಳಾದ ಮಾರುತಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

ಟಾಟಾ ಆಲ್‌‌ಟ್ರೊಜ್ ಕಾರು ದರ ಪರಿಷ್ಕರಣೆ: ಎಕ್ಸ್ಇ ಡೀಸೆಲ್ ಬೆಲೆ ಕಡಿತ, ಉಳಿದ ರೂಪಾಂತರಗಳ ಬೆಲೆ ಏರಿಕೆ

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಈ ಆಲ್‌‌ಟ್ರೊಜ್ ಅನ್ನು ಟೆಸ್ಟ್ ಮಾಡಲಾಗಿದೆ. ಇದರಲ್ಲಿ ಹ್ಯಾಚ್‌ಬ್ಯಾಕ್ ವಯಸ್ಕರ ವಿಭಾಗದಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಮಕ್ಕಳ ಸುರಕ್ಷತೆಗಾಗಿ 3-ಸ್ಟಾರ್ ರೇಟಿಂಗ್ ಗಳಿಸಿದೆ.

ಟಾಟಾ ಆಲ್‌‌ಟ್ರೊಜ್ ಕಾರು ದರ ಪರಿಷ್ಕರಣೆ: ಎಕ್ಸ್ಇ ಡೀಸೆಲ್ ಬೆಲೆ ಕಡಿತ, ಉಳಿದ ರೂಪಾಂತರಗಳ ಬೆಲೆ ಏರಿಕೆ

ಈ ಟಾಟಾ ಆಲ್‌‌ಟ್ರೊಜ್ ಕಾರು ಇಂಪ್ಯಾಕ್ಟ್ 2.0 ವಿನ್ಯಾಸ ಶೈಲಿಯನ್ನು ಹೊಂದಿದ್ದು, ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಕರ್ಷಕ ವಿನ್ಯಾಸದೊಂದಿಗೆ ಸಖತ್ ಬೋಲ್ಡ್ ಲುಕ್ ಅನ್ನು ಹೊಂದಿದೆ. ಇನ್ನು ಈ ಹ್ಯಾಚ್‌ಬ್ಯಾಕ್‌ನಲ್ಲಿ ಎಲ್‌ಇಡಿ ಡಿಆರ್‌ಎಲ್‌, ಎಲ್‌ಇಡಿ ಟೈಲ್‌ಲೈಟ್ ಮತ್ತು ಅಲಾಯ್ ವ್ಹೀಲ್‌ಗಳನ್ನು ಹೊಂದಿವೆ

ಟಾಟಾ ಆಲ್‌‌ಟ್ರೊಜ್ ಕಾರು ದರ ಪರಿಷ್ಕರಣೆ: ಎಕ್ಸ್ಇ ಡೀಸೆಲ್ ಬೆಲೆ ಕಡಿತ, ಉಳಿದ ರೂಪಾಂತರಗಳ ಬೆಲೆ ಏರಿಕೆ

ಈ ಕಾರಿನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ಮೌಂಟಡ್ ಕಂಟ್ರೋಲ್ ಗಳೊಂದಿಗೆ ಫ್ಲಾಟ್-ಬಾಟಮ್ ಸ್ಟರಿಂಗ್ ವ್ಹೀಲ್ ಹೊಂದಿದೆ.

ಟಾಟಾ ಆಲ್‌‌ಟ್ರೊಜ್ ಕಾರು ದರ ಪರಿಷ್ಕರಣೆ: ಎಕ್ಸ್ಇ ಡೀಸೆಲ್ ಬೆಲೆ ಕಡಿತ, ಉಳಿದ ರೂಪಾಂತರಗಳ ಬೆಲೆ ಏರಿಕೆ

ಇನ್ನು ನೆಕ್ಸಾನ್ ಇವಿ ಮೂಲಕ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದ ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್‌ನಲ್ಲಿ ಬಳಕೆ ಮಾಡುತ್ತಿರುವ ಜಿಪ್‌ಟ್ರಾನ್ ತಂತ್ರಜ್ಞಾನವನ್ನು ಟಿಗೋರ್ ಮಾದರಿಯಲ್ಲೂ ಪರಿಚಯಿಸುವ ಯೋಜನೆಯಲ್ಲಿದೆ. ಹೊಸ ತಂತ್ರಜ್ಞಾನ ಪ್ರೇರಿತ ಪವರ್‌ಟ್ರೈನ್ ಹೊಂದಿರುವ ಟಿಗೋರ್ ಇವಿ ಕೂಡಾ ಹೊಸ ಸಂಚಲನ ಮೂಡಿಸಲು ಸಜ್ಜಾಗುತ್ತಿದೆ. ಈ ನವೀಕೃತ ಮಾದರಿಯಲ್ಲಿ ನೆಕ್ಸಾನ್ ಕಾರಿನ ಬಳಕೆ ಮಾಡಲಾಗುತ್ತಿರುವ ಹೈ-ವೊಲ್ಟೆಜ್ ಆರ್ಕಿಟೆಕ್ಚರ್ ಪ್ರೇರಿತ ಜಿಪ್‌ಟ್ರಾನ್ ತಂತ್ರಜ್ಞಾನವನ್ನು ಪಡೆದುಕೊಳ್ಳಲಿದೆ.

ಟಾಟಾ ಆಲ್‌‌ಟ್ರೊಜ್ ಕಾರು ದರ ಪರಿಷ್ಕರಣೆ: ಎಕ್ಸ್ಇ ಡೀಸೆಲ್ ಬೆಲೆ ಕಡಿತ, ಉಳಿದ ರೂಪಾಂತರಗಳ ಬೆಲೆ ಏರಿಕೆ

ಟಾಟಾ ಆಲ್‌‌ಟ್ರೊಜ್ ಮೂರು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಮೊದಲನೆಯದು 1.2-ಲೀಟರ್ ಪೆಟ್ರೋಲ್ ಎಂಜಿನ್ ಆಗಿದ್ದು. ಇದು 86 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.ಎರಡನೆಯದು 1.5-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಆಗಿದ್ದು, ಈ ಎಂಜಿನ್ 90 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಟಾಟಾ ಆಲ್‌‌ಟ್ರೊಜ್ ಕಾರು ದರ ಪರಿಷ್ಕರಣೆ: ಎಕ್ಸ್ಇ ಡೀಸೆಲ್ ಬೆಲೆ ಕಡಿತ, ಉಳಿದ ರೂಪಾಂತರಗಳ ಬೆಲೆ ಏರಿಕೆ

ಇನ್ನು ಮೂರನೇಯ 1.2-ಲೀಟರ್ ಪವರ್ ಫುಲ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದ್ದು, ಇದು 110 ಬಿಹೆಚ್‍ಪಿ ಪವರ್ ಮತ್ತು 140 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಟಾಟಾ ಆಲ್‌‌ಟ್ರೊಜ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಬಲೆನೊ, ಹ್ಯುಂಡೈ ಐ20, ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Tata motors updated prices of altroz premium hatchback in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X