ಟಾಟಾ ಆಲ್‌ಟ್ರೊಜ್ ಐ-ಟರ್ಬೊ ಹ್ಯಾಚ್‌ಬ್ಯಾಕ್ ಕಾರಿನ ವಿಡಿಯೋ ರಿವ್ಯೂ
ಪ್ರಸ್ತುತ ಮಾರುಕಟ್ಟೆಯಲ್ಲಿ ಟರ್ಬೊ ಪೆಟ್ರೋಲ್ ಎಂಜಿನ್ ಪ್ರೇರಿತ ಹೊಸ ಕಾರು ಮಾದರಿಗಳು ಸಾಕಷ್ಟು ಜನಪ್ರಿಯವಾಗುತ್ತಿವೆ. ಸಾಮಾನ್ಯವಾಗಿ ಟರ್ಬೊ-ಪೆಟ್ರೋಲ್ ಎಂಜಿನ್‌ಗಳನ್ನು ಸ್ಟ್ಯಾಂಡರ್ಡ್ ಮಾದರಿಗಳಲ್ಲಿ ಪರ್ಫಾಮೆನ್ಸ್ ಮಾದರಿಯಾಗಿ ಬಿಡುಗಡೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಮುಂದಾಗಿರುವ ಟಾಟಾ ಮೋಟಾರ್ಸ್ ಕಂಪನಿಯು ಸಹ ಆಲ್‌ಟ್ರೊಜ್ ಕಾರಿನಲ್ಲಿ ಮೊದಲ ಬಾರಿಗೆ ಟರ್ಬೊ-ಪೆಟ್ರೋಲ್ ಎಂಜಿನ್ ಪರಿಚಯಿಸುತ್ತಿದೆ.
ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ ತನ್ನ ಆಲ್‌ಟ್ರೊಜ್ ಐ-ಟರ್ಬೊ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಆಲ್ಟ್ರೊಜ್ ಐ-ಟರ್ಬೊ ಮಾದರಿಯಲ್ಲಿ ಹೊಸ ಫೀಚರ್ಸ್, ಎಕ್ವಿಪ್‌ಮೆಂಟ್ ಹಾಗೂ ಹೆಚ್ಚು ಶಕ್ತಿಶಾಲಿಯಾದ ಹೊಸ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಹೊಸ ಆಲ್ಟ್ರೊಜ್ ಐ-ಟರ್ಬೊ ಮಾದರಿಯು ಸ್ಟಾಂಡರ್ಡ್ ಮಾದರಿಯೆಂತೆ ಸ್ಟೈಲಿಂಗ್ ಹಾಗೂ ವಿನ್ಯಾಸವನ್ನು ಹೊಂದಿದ್ದರೂ ಬೂಟ್‌ನಲ್ಲಿರುವ ಹೊಸ ಐ-ಟರ್ಬೊ ಬ್ಯಾಡ್ಜಿಂಗ್ ಹಾಗೂ ಹೊಸ ಹಾರ್ಬರ್ ಬ್ಲೂ ಬಣ್ಣಗಳ ಮೂಲಕ ಗ್ರಾಹಕರನ್ನು ಆಕರ್ಷಿಸಲಿದೆ.

ಆಲ್ಟ್ರೊಜ್ ಐ-ಟರ್ಬೊ ಆವೃತ್ತಿಯನ್ನು ಇದೇ ತಿಂಗಳಾಂತ್ಯಕ್ಕೆ ಬಿಡುಗಡೆ ಮಾಡಲು ಸಜ್ಜಾಗಿರುವ ಟಾಟಾ ಕಂಪನಿಯು ಬಿಡುಗಡೆಗೂ ಮುನ್ನ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಟೆಸ್ಟ್ ಡ್ರೈವ್‌ಗಾಗಿ ಮಾಧ್ಯಮ ಸಂಸ್ಥೆಗಳನ್ನು ಆಹ್ವಾನಿಸಿತ್ತು. ಡ್ರೈವ್‌ಸ್ಪಾರ್ಕ್ ತಂಡಕ್ಕೂ ವಿಶೇಷ ಡ್ರೈವ್ ಕಲ್ಪಿಸಿದ್ದ ಕಂಪನಿಯು ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಮತ್ತೊಂದು ಹಂತದ ಬೆಳವಣಿಗೆ ಸಾಧಿಸುವ ನೀರಿಕ್ಷೆಯಲ್ಲಿದ್ದು, ಹೊಸ ಕಾರನ್ನು ಆ್ಯನಿವರ್ಸರಿ ಮಾದರಿಯಾಗಿ ರಸ್ತೆಗಿಳಿಸುತ್ತಿದೆ.

ಆಲ್ಟ್ರೊಜ್ ಐ-ಟರ್ಬೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಕಾರಿನಲ್ಲಿರುವಂತಹ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನೇ ಐ-ಟರ್ಬೊದಲ್ಲಿ ಅಳವಡಿಸಲಾಗಿದೆ. ಆದರೆ ಹೊಸ ಕಾರಿನ ಪರ್ಫಾಮೆನ್ಸ್ ಉದ್ದೇಶಕ್ಕಾಗಿ ಡಿ ಟ್ಯೂನ್ ಮಾಡಲಾಗಿರುವ 1.2-ಲೀಟರ್ ಎಂಜಿನ್ ಮಾದರಿಯು 5500ಆರ್‌ಪಿಎಂನಲ್ಲಿ ಗರಿಷ್ಠ 108 ಬಿಹೆಚ್‌ಪಿ ಪವರ್ ಹಾಗೂ 5500ಆರ್‌ಪಿಎಂನಲ್ಲಿ ಗರಿಷ್ಠ 140 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.


Click it and Unblock the Notifications