ಆಫ್ ರೋಡ್ ಟೆಸ್ಟಿಂಗ್ ನಡೆಸಿದ Tata ಹೊಸ Punch ಮೈಕ್ರೊ ಎಸ್‌ಯುವಿ

Tata Motors ಕಂಪನಿಯು ಶೀಘ್ರದಲ್ಲೇ ತನ್ನ ಹೊಚ್ಚ ಹೊಸ Punch ಮೈಕ್ರೊ ಎಸ್‌ಯುವಿ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಕಾರು ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುವ ತವಕದಲ್ಲಿದೆ.

ಆಫ್ ರೋಡ್ ಟೆಸ್ಟಿಂಗ್ ನಡೆಸಿದ Tata ಹೊಸ Punch ಮೈಕ್ರೊ ಎಸ್‌ಯುವಿ

HBX ಹೆಸರಿನಲ್ಲಿ ಮೊದಲ ಬಾರಿಗೆ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ Tata ಹೊಸ ಮೈಕ್ರೊ ಎಸ್‌ಯುವಿ ಮಾದರಿಯು ಇದೀಗ Punch ಹೆಸರಿನಲ್ಲಿ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಕಾರು ಸಣ್ಣ ಗಾತ್ರದ ಕಾರುಗಳಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಉತ್ತಮ ಚಾಲನಾ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದೆ.

ಆಫ್ ರೋಡ್ ಟೆಸ್ಟಿಂಗ್ ನಡೆಸಿದ Tata ಹೊಸ Punch ಮೈಕ್ರೊ ಎಸ್‌ಯುವಿ

ಆಕರ್ಷಕ ವಿನ್ಯಾಸ, ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ನಗರ ಪ್ರದೇಶದಲ್ಲಿನ ಸಂಚಾರಕ್ಕೆ ಸೂಕ್ತವಾಗಿದ್ದು, ಹೊಸ ಕಾರು ಆಫ್ ರೋಡ್‌ನಲ್ಲೂ ಸರಾಗ ಚಾಲನೆಗಾಗಿ ಸೆಗ್ಮೆಂಟ್ ಬೆಸ್ಟ್ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ಆಫ್ ರೋಡ್ ಟೆಸ್ಟಿಂಗ್ ನಡೆಸಿದ Tata ಹೊಸ Punch ಮೈಕ್ರೊ ಎಸ್‌ಯುವಿ

ಗ್ರೌಂಡ್ ಕಿಯೆರೆನ್ಸ್ ಟೆಸ್ಟಿಂಗ್‌ ನಡೆಸಲು ಆಫ್ ರೋಡ್ ಚಾಲನೆ ನಡೆಸಿದ Punch ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಉತ್ತಮ ಕಾರ್ಯಕ್ಷಮತೆ ಪ್ರದರ್ಶನ ಮಾಡಿದ್ದು, ಹೊಸ ಕಾರಿನ ಆಫ್ ರೋಡ್ ಚಾಲನೆಯು ಎಂಟ್ರಿ ಲೆವಲ್ ಕಾರು ಖರೀದಿದಾರರನ್ನು ಸೆಳೆಯುತ್ತಿದೆ.

ಆಫ್ ರೋಡ್ ಟೆಸ್ಟಿಂಗ್ ನಡೆಸಿದ Tata ಹೊಸ Punch ಮೈಕ್ರೊ ಎಸ್‌ಯುವಿ

Tata ಕಂಪನಿಯು ಹೊಸ ಕಾರನ್ನು ಮೊದಲ ಬಾರಿಗೆ H2X ನಂತರ HBX ಕೋಡ್‌ನೆಮ್ ಮೇಲೆ ಅನಾವರಣಗೊಳಿಸಿ Hornbill ಹೆಸರಿನಲ್ಲಿ ಬಿಡುಗಡೆ ಮಾಡಬಹುದು ಎಂದು ನೀರಿಕ್ಷಿಸಲಾಗಿತ್ತು. ಆದರೆ ಅಚ್ಚರಿ ಎಂಬಂತೆ ಹೊಸ ಕಾರಿನ ಬಿಡುಗಡೆಯ ಹೊತ್ತಿಗೆ Punch ಹೆಸರಿನಲ್ಲಿ ಅನಾವರಣಗೊಳಿಸಿದ್ದು, ಹೊಸ ಕಾರು ಮುಂಬರುವ ಕೆಲವೇ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಹೊಸ Punch ಕಾರು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಾದ Altroz ಕಾರು ಉತ್ಪಾದನೆಗಾಗಿ ಬಳಕೆ ಮಾಡಲಾಗಿರುವ ALFA-ARC ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ನಲ್ಲಿಯೇ ಉತ್ಪಾದನೆ ಮಾಡಲಾಗುತ್ತಿದ್ದು, Nexon ಮಾದರಿಯಲ್ಲೇ ಹೊರನೋಟ ಹೊಂದಿರುವ ಹೊಸ ಕಾರು ಗಾತ್ರದಲ್ಲಿ ಮಾತ್ರವೇ ತುಸು ಚಿಕ್ಕದಾಗಿರಲಿದೆ.

ಆಫ್ ರೋಡ್ ಟೆಸ್ಟಿಂಗ್ ನಡೆಸಿದ Tata ಹೊಸ Punch ಮೈಕ್ರೊ ಎಸ್‌ಯುವಿ

SUV ಕಾರುಗಳ ಸರಣಿಯಲ್ಲಿ Harrier ಮತ್ತು Safari ಮಾದರಿಗಳಿಂದಲೂ ಹಲವಾರು ವಿನ್ಯಾಸವನ್ನು ಎರವಲು ಪಡೆದುಕೊಂಡಿರುವ Punch ಕಾರು ಸಣ್ಣ ಗಾತ್ರದ ಕಾರುಗಳಲ್ಲೇ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಕಾನ್ಸೆಪ್ಟ್ ಮಾದರಿಯಲ್ಲಿನ ಬಹುತೇಕ ಸ್ಪೋರ್ಟಿ ವಿನ್ಯಾಸಗಳನ್ನು ಉತ್ಪಾದನಾ ಮಾದರಿಯಲ್ಲೂ ಉಳಿಸಿಕೊಳ್ಳಲಾಗಿದೆ.

ಆಫ್ ರೋಡ್ ಟೆಸ್ಟಿಂಗ್ ನಡೆಸಿದ Tata ಹೊಸ Punch ಮೈಕ್ರೊ ಎಸ್‌ಯುವಿ

ಹೊಸ ಕಾರಿನಲ್ಲಿ ವಿಭಜಿತವಾಗಿರುವ ಹೆಡ್‌ಲ್ಯಾಂಪ್ ಸೆಟ್ಅಪ್, ಹ್ಯುಮಿನಿಟಿ ಲೈನ್ ಗ್ರಿಲ್, ಬಂಪರ್‌ಗೆ ಹೊಂದಿಕೊಂಡಿರುವ ಬಾಡಿ ಕ್ಲಾಡಿಂಗ್, ವ್ಹೀಲ್ ಆರ್ಚ್, ಹೊರಭಾಗದಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ, 16-ಇಂಚಿನ ಅಲಾಯ್ ವ್ಹೀಲ್, ಕ್ರಿಸ್ ಲೈನ್ ಹೊಂದಿರುವ ಬ್ಯಾನೆಟ್, ರೂಫ್ ರೈಲ್ಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

ಆಫ್ ರೋಡ್ ಟೆಸ್ಟಿಂಗ್ ನಡೆಸಿದ Tata ಹೊಸ Punch ಮೈಕ್ರೊ ಎಸ್‌ಯುವಿ

Tata ಕಂಪನಿಯು ಸದ್ಯ Punch ಕಾರಿನ ಉತ್ಪಾದನಾ ಮಾದರಿಯ ಹೊರಭಾಗದ ಚಿತ್ರವನ್ನು ಮಾತ್ರ ಹಂಚಿಕೊಂಡಿದ್ದು, ಶೀಘ್ರದಲ್ಲೇ ಹೊಸ ಕಾರಿನ ಇಂಟಿರಿಯರ್ ಜೊತೆಗೆ ಎಂಜಿನ್ ಆಯ್ಕೆಯ ಮಾಹಿತಿಯನ್ನು ಸಹ ಹಂಚಿಕೊಳ್ಳಲಿದೆ.

ಆಫ್ ರೋಡ್ ಟೆಸ್ಟಿಂಗ್ ನಡೆಸಿದ Tata ಹೊಸ Punch ಮೈಕ್ರೊ ಎಸ್‌ಯುವಿ

ಹೊಸ ಕಾರಿನಲ್ಲಿ Tata ಕಂಪನಿಯು ಡ್ಯುಯಲ್ ಟೋನ್ ಇಂಟಿರಿಯರ್ ಜೊತೆಗೆ 7.0-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸ್ಕ್ವಾರಿಷ್ ಏರ್ ಕಾನ್ ವೆಂಟ್ಸ್, ತ್ರಿ ಸ್ಪೋಕ್ ಪ್ಲ್ಯಾಟ್ ಬಾಟಮ್ ಸ್ಟೀರಿಂಗ್ ವೀಲ್ಹ್, ಹ್ವಾಕ್ ಕಂಟ್ರೋಲ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಡಿಜಿಟಲ್ ಟಾಚೊ ಮೀಟರ್, ಅನಲಾಗ್ ಸ್ಪೀಡೋ ಮೀಟರ್ ಸೇರಿದಂತೆ ವಿವಿಧ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರಲಿದೆ.

ಆಫ್ ರೋಡ್ ಟೆಸ್ಟಿಂಗ್ ನಡೆಸಿದ Tata ಹೊಸ Punch ಮೈಕ್ರೊ ಎಸ್‌ಯುವಿ

Punch ಮೈಕ್ರೊ ಎಸ್‌ಯುವಿ ಕಾರಿನಲ್ಲಿ Tata ಕಂಪನಿಯು 1.2-ಲೀಟರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೊತೆಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಪರಿಚಯಿಸುವ ಸಾಧ್ಯತೆಗಳಿದ್ದು, ಹೊಸ ಕಾರಿನ ಎಂಜಿನ್ ಆಯ್ಕೆ ಕುರಿತಾಗಿ ಇದುವರೆಗೂ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ.

ಆಫ್ ರೋಡ್ ಟೆಸ್ಟಿಂಗ್ ನಡೆಸಿದ Tata ಹೊಸ Punch ಮೈಕ್ರೊ ಎಸ್‌ಯುವಿ

ಹೊಸ ಕಾರಿನ ಉತ್ಪಾದನಾ ಪ್ರಕ್ರಿಯೆಗೆ ಈಗಾಗಲೇ ಅಧಿಕೃತ ಚಾಲನೆ ನೀಡಿರುವ Tata ಕಂಪನಿಯು ಮುಂಬರುವ ಸೆಪ್ಟೆಂಬರ್ ಮಧ್ಯಂತರದಲ್ಲಿ ಹೊಸ ಕಾರಿನ ಉತ್ಪಾದನಾ ಆವೃತ್ತಿಯನ್ನುಅನಾವರಣಗೊಳಿಸಿ ಹೊಸ ಕಾರಿನ ಮಾಹಿತಿ ಹಂಚಿಕೊಳ್ಳುವ ಮೂಲಕ ಬುಕ್ಕಿಂಗ್ ಆರಂಭಿಸಲಿದೆ.

ಆಫ್ ರೋಡ್ ಟೆಸ್ಟಿಂಗ್ ನಡೆಸಿದ Tata ಹೊಸ Punch ಮೈಕ್ರೊ ಎಸ್‌ಯುವಿ

ಹೊಸ Punch ಕಾರು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್‌ಗಳನ್ನು ಪಡೆದುಕೊಳ್ಳುತ್ತಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 4.90 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.50 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.

ಆಫ್ ರೋಡ್ ಟೆಸ್ಟಿಂಗ್ ನಡೆಸಿದ Tata ಹೊಸ Punch ಮೈಕ್ರೊ ಎಸ್‌ಯುವಿ

ಸದ್ಯ ಮಾರುಕಟ್ಟೆಯಲ್ಲಿ ವಾಹನ ಸುರಕ್ಷತೆಯ ವಿಚಾರವಾಗಿ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿರುವ Tata ಕಂಪನಿಯು ಎಂಟ್ರಿ ಲೆವಲ್ ಮಾದರಿಯಲ್ಲೂ ಉತ್ತಮ ಸೇಫ್ಟಿ ರೇಟಿಂಗ್ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದ್ದು, ಹೊಸ ಕಾರು Maruti Suzuki Ignis, Hyundai Santro ಜೊತೆಗೆ Nissan Magnite ಮತ್ತು Renault Kiger ಕಾರುಗಳ ಎಂಟ್ರಿ ಲೆವಲ್ ವೆರಿಯೆಂಟ್ ಪೈಪೋಟಿ ನೀಡುವ ನೀರಿಕ್ಷೆಯಿದೆ.

Most Read Articles

Kannada
English summary
Tata new punch spied while doing off road testing details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X