ಇದೇ ತಿಂಗಳು 18ರಂದು ಬಿಡುಗಡೆಯಾಗಲಿದೆ ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಿತ ಟಿಗೋರ್ ಇವಿ

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರುಗಳ ಉತ್ಪಾದನೆ ಹಲವಾರು ಹೊಸ ಬದಲಾವಣೆಗಳೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಕಂಪನಿಯು ಶೀಘ್ರದಲ್ಲೇ ಟಿಗೋರ್ ಎಲೆಕ್ಟ್ರಿಕ್ ಕಾರಿನ ಉನ್ನತೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿದೆ ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಿತ ಟಿಗೋರ್ ಇವಿ

ಟಿಗೋರ್ ಎಲೆಕ್ಟ್ರಿಕ್ ಕಾರು ಮಾದರಿಯು ಈಗಾಗಲೇ ದೇಶಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಮಾರಾಟಗೊಂಡಿದ್ದು, ಕಾರಿನಲ್ಲಿ ಹೊಸ ಬದಲಾವಣೆಗಾಗಿ ಹೈ ವೋಲ್ಟೆಜ್ ಒಳಗೊಂಡ ಜಿಪ್‌ಟ್ರಾನ್ ಪವರ್‌ಟ್ರೈನ್ ತಂತ್ರಜ್ಞಾನ ಜೋಡಿಸಲು ನಿರ್ಧರಿಸಲಾಗಿದೆ. ಹೊಸ ತಂತ್ರಜ್ಞಾನವು ಟಿಗೋರ್ ಇವಿ ಕಾರಿನ ಪರ್ಫಾಮೆನ್ಸ್ ಸುಧಾರಿಸುವುದಲ್ಲದೆ ಉತ್ತಮ ಬಾಳಿಕೆ ಖಾತ್ರಿಪಡಿಸಲಿದ್ದು, ಹೊಸ ಆವೃತ್ತಿಯು ಇದೇ 18ರಂದು ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿದೆ ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಿತ ಟಿಗೋರ್ ಇವಿ

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರು ಬಿಡುಗಡೆಗೂ ಮುನ್ನ ಈಗಾಗಲೇ ಟೀಸರ್ ವಿಡಿಯೋ ಸಹ ಬಿಡುಗಡೆ ಮಾಡಿದ್ದು, ಹೊಸ ಕಾರು ನೆಕ್ಸಾನ್ ಇವಿ ಮಾದರಿಯಲ್ಲೇ ಅತ್ಯುತ್ತಮ ಪರ್ಫಾಮೆನ್ಸ್ ಜೊತೆ ಬ್ಯಾಟರಿ ಕ್ಷಮತೆಯಲ್ಲೂ ಗಮನೆಸೆಳೆಯುತ್ತಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿದೆ ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಿತ ಟಿಗೋರ್ ಇವಿ

ಹೊಸ ತಂತ್ರಜ್ಞಾನ ಪ್ರೇರಿತ ಪವರ್‌ಟ್ರೈನ್ ಹೊಂದಿರುವ ಟಿಗೋರ್ ಇವಿ ಕಾರು ನೆಕ್ಸಾನ್ ಇವಿ ಮಾದರಿಯಲ್ಲೇ ಕಂಪ್ಯಾಕ್ಟ್ ಸೆಡಾನ್ ಪ್ರಿಯರನ್ನು ಸೆಳೆಯಲಿದ್ದು, ಸದ್ಯಕ್ಕೆ ಟಿಗೋರ್ ಇವಿ ಕಾರಿನಲ್ಲಿ ಲೋ-ವೊಲ್ಟೆಜ್ ಆರ್ಕಿಟೆಕ್ಚರ್ ಹೊಂದಿರುವ ಎಲೆಕ್ಟ್ರಾ ಪವರ್‌ಟ್ರೈನ್ ಬಳಕೆ ಮಾಡುತ್ತಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿದೆ ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಿತ ಟಿಗೋರ್ ಇವಿ

ನವೀಕೃತ ಟಿಗೋರ್ ಇವಿ ಮಾದರಿಯಲ್ಲಿ ನೆಕ್ಸಾನ್ ಇವಿ ಕಾರಿನಲ್ಲಿ ಬಳಕೆ ಮಾಡಲಾಗುತ್ತಿರುವ ಹೈ-ವೊಲ್ಟೆಜ್ ಆರ್ಕಿಟೆಕ್ಚರ್ ಪ್ರೇರಿತ ಜಿಪ್‌ಟ್ರಾನ್ ತಂತ್ರಜ್ಞಾನವನ್ನು ಜೋಡಣೆ ಮಾಡಲಾಗಿದ್ದು, ಜಿಪ್‌ಟ್ರಾನ್ ಪವರ್‌ಟ್ರೈನ್ ತಂತ್ರಜ್ಞಾನವನ್ನು ಹಲವು ಸುಧಾರಿತ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಳಿಸಲಾಗಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿದೆ ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಿತ ಟಿಗೋರ್ ಇವಿ

ಜಿಪ್‌ಟ್ರಾನ್ ತಂತ್ರಜ್ಞಾನವು ಹೈ ವೊಲ್ಟೆಜ್ ಸಿಸ್ಟಂ, ದೀರ್ಘಕಾಲಿಕ ಬ್ಯಾಟರಿ ಸಾಮಾರ್ಥ್ಯ, ಅತಿಕಡಿಮೆ ಅವಧಿಯಲ್ಲಿ ಹೆಚ್ಚು ಚಾರ್ಜಿಂಗ್ ಸಿಸ್ಟಂ ಮತ್ತು ಸೂಪಿರಿಯರ್ ಪರ್ಫಾಮೆನ್ಸ್ ವೈಶಿಷ್ಟ್ಯತೆಗಳಿಂದ ಕೂಡಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿದೆ ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಿತ ಟಿಗೋರ್ ಇವಿ

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಇವಿ ಡ್ರೈವ್ ತಂತ್ರಜ್ಞಾನದ ಸಾಧಕ-ಬಾಧಕಗಳ ಕುರಿತಾಗಿ ಪರೀಕ್ಷಿಸಲು ಸುಮಾರು 10 ಲಕ್ಷ ಕಿ.ಮಿ ವಿಶ್ವಪರ್ಯಟನೆ ಪೂರ್ಣಗೊಳಿಸಿದ ನಂತರವೇ ನೆಕ್ಸಾನ್ ಮಾದರಿಯಲ್ಲಿ ಅಳವಡಿಸಿದ್ದು, ನೆಕ್ಸಾನ್ ಇವಿ ನಂತರ ಇದೀಗ ಟಿಗೋರ್ ಇವಿ ವಿವಿಧ ಮಾದರಿಗಳಲ್ಲಿ ಅಳವಡಿಸಲಾಗುತ್ತಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿದೆ ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಿತ ಟಿಗೋರ್ ಇವಿ

ಜಿಪ್‌ಟ್ರಾನ್ ತಂತ್ರಜ್ಞಾನವು ಟಾಟಾ ಮೋಟಾರ್ಸ್ ಕಂಪನಿಯನ್ನು ಜಾಗತಿಕ ಮಟ್ಟದಲ್ಲಿ ಗಮನಸೆಳೆಯುವಂತೆ ಮಾಡಿದ್ದು, ಎಲೆಕ್ಟ್ರಿಕ್ ಕಾರುಗಳ ಕಾರ್ಯಕ್ಷಮತೆ, ಬ್ಯಾಟರಿ ದಕ್ಷತೆ ಮತ್ತು ಗ್ರಾಹಕರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿಗೊಳಿಸುತ್ತಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿದೆ ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಿತ ಟಿಗೋರ್ ಇವಿ

ಜೊತೆಗೆ ಜಿಪ್‌ಟ್ರಾನ್ ತಂತ್ರಜ್ಞಾನವು ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ ಅಳವಡಿಕೆ ಹಿನ್ನಲೆಯಲ್ಲಿ ಕಾರು ಚಾಲನೆ ವೇಳೆ ನೀರ್ದಿಷ್ಟ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜಿಂಗ್ ಪ್ರಕ್ರಿಯೆಯು ಮರಳಿ ಪಡೆಯಬಹುದಾಗಿದ್ದು, ಇದೇ ಕಾರಣಕ್ಕೆ ಹೊಸ ತಂತ್ರಜ್ಞಾನವು ಬ್ಯಾಟರಿ ದೀರ್ಘಕಾಲದ ಬಾಳಿಕೆಗೆ ಸಹಕರಿಸಲಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿದೆ ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಿತ ಟಿಗೋರ್ ಇವಿ

ಹೀಗಾಗಿ ಹೊಸ ಜಿಪ್‌ಟ್ರಾನ್ ತಂತ್ರಜ್ಞಾನವನ್ನು ನೆಕ್ಸಾನ್ ಇವಿ ನಂತರ ಟಿಗೋರ್ ಇವಿಯಲ್ಲೂ ಅಳವಡಿಸಲಾಗುತ್ತಿದ್ದು, ಹೊಸ ಕಾರು ನೆಕ್ಸಾನ್ ಇವಿ ಮಾದರಿಯಲ್ಲೇ ಟಿಗೋರ್ ಇವಿ ಕೂಡಾ ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಮೈಲೇಜ್‌ನಲ್ಲೂ ಗಮನಸೆಳೆಯಲಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿದೆ ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಿತ ಟಿಗೋರ್ ಇವಿ

ಉನ್ನತೀಕರಿಸಿದ ಟಿಗೋರ್ ಇವಿಯಲ್ಲಿ ಜಿಪ್‌ಟ್ರಾನ್ ತಂತ್ರಜ್ಞಾನದೊಂದಿಗೆ ಫಾಸ್ಟ್ ಚಾರ್ಜಿಂಗ್ ಕೂಡಾ ನೀಡಲಾಗುತ್ತಿದ್ದು, ಹೊಸ ಕಾರು ಪ್ರತಿ ಚಾರ್ಜ್‌ಗೆ ಕನಿಷ್ಠ 250 ಕಿ.ಮೀ ನೀಡುವ ಬ್ಯಾಟರಿ ಪ್ಯಾಕ್ ಪಡೆದುಕೊಂಡಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿದೆ ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಿತ ಟಿಗೋರ್ ಇವಿ

ಹೊಸ ಟಿಗೋರ್ ಇವಿಯಲ್ಲಿರುವ ಬ್ಯಾಟರಿ ಪ್ಯಾಕ್ ಪೂರ್ಣ ಪ್ರಮಾಣದ ಚಾರ್ಜ್ ಮಾಡಲು ಹೋಂ ಚಾರ್ಜರ್ ಮೂಲಕ 7ರಿಂದ 8 ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಳ್ಳಲಿದ್ದರೆ ಫಾಸ್ಟ್ ಚಾರ್ಜರ್ ಮೂಲಕ ಒಂದು ಗಂಟೆಯ ಅವಧಿಯಲ್ಲಿ ಶೇ.80 ಚಾರ್ಜಿಂಗ್ ಮಾಡಬಹುದಾಗಿದೆ.

ಹಾಗೆಯೇ ಹೊಸ ಟಿಗೋರ್ ಇವಿ ಮಾದರಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ನವೀಕೃತ ವಿನ್ಯಾಸವನ್ನು ನೀಡಲಾಗುತ್ತಿದ್ದು, ಹೊರ ಭಾಗದಲ್ಲಿ ಮಾತ್ರವಲ್ಲ ಒಳಭಾಗದ ವಿನ್ಯಾಸದಲ್ಲೂ ಹೊಸ ಕಾರು ಗ್ರಾಹಕರನ್ನು ಸೆಳೆಯಲಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿದೆ ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಿತ ಟಿಗೋರ್ ಇವಿ

ಸುರಕ್ಷತೆಗೂ ಹೊಸ ಕಾರಿನಲ್ಲಿ ಸಾಕಷ್ಟು ಗಮನಹರಿಸಲಾಗಿದ್ದು, ಪ್ರೀಮಿಯಂ ಫೀಚರ್ಸ್‌ಗಳಾದ ಟ್ವಿನ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಟೋನ್ ಸೀಟುಗಳ ಜೊತೆಗೆ ಕ್ಲೈಮೆಟ್ ಕಂಟ್ರೋಲ್, ರಿಮೋಟ್ ಲಾಕಿಂಗ್, ಡ್ಯುಯಲ್ ಏರ್‌ಬ್ಯಾಗ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಬಿಎಸ್ ಜೊತೆ ಇಬಿಡಿ ಸೌಲಭ್ಯ ಹೊಂದಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿದೆ ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಿತ ಟಿಗೋರ್ ಇವಿ

ಸದ್ಯ ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ನೆಕ್ಸಾನ್ ಇವಿ ಕಾರು ಪ್ರತಿ ಚಾರ್ಜ್‌ಗೆ 312 ಕಿ.ಮೀ ಮೈಲೇಜ್ ಪ್ರೇರಿತ 30.2kWh ಲೀಥಿಯಂ ಅಯಾನ್ ಬ್ಯಾಟರಿಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.14 ಲಕ್ಷದಿಂದ ರೂ. 16.65 ಲಕ್ಷ ಬೆಲೆ ಹೊಂದಿದ್ದು, ಹೊಸದಾಗಿ ಬಿಡುಗಡೆಯಾಗುತ್ತಿರುವ ಟಿಗೋರ್ ಇವಿ ಕೂಡಾ ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಗ್ರಾಹಕರ ಸೆಳೆಯುವ ನೀರಿಕ್ಷೆಯಲ್ಲಿದೆ.

ಹೊಸ ಟಿಗೋರ್ ಇವಿ ಕಾರು ಜಿಪ್‌ಟ್ರಾನ್ ತಂತ್ರಜ್ಞಾನದ ನಂತರ ತುಸು ದುಬಾರಿಯಾಗಿರಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.10 ಲಕ್ಷದಿಂದ ರೂ. 12 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದೆ.

Most Read Articles

Kannada
English summary
Tata new tigor electric with ziptron technology to launch on 18th on this month
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X