2021ರ ಫೆಬ್ರವರಿಯಲ್ಲಿ ಶೇ.103ರಷ್ಟು ಏರಿಕೆ ಕಂಡ ಟಾಟಾ ನೆಕ್ಸಾನ್ ಕಾರು ಮಾರಾಟ

ಟಾಟಾ ಮೋಟಾರ್ಸ್ ಕಂಪನಿಯು 2021ರ ಫೆಬ್ರವರಿ ಅವಧಿಯಲ್ಲಿನ ಕಾರು ಮಾರಾಟ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಕಳೆದ ವರ್ಷದ ಫೆಬ್ರವರಿ ಅವಧಿಯಲ್ಲಿನ ಕಾರು ಮಾರಾಟಕ್ಕಿಂತಲೂ ಸಾಕಷ್ಟು ಬೆಳವಣಿಗೆ ಕಂಡಿದೆ.

ಶೇ.103ರಷ್ಟು ಏರಿಕೆ ಕಂಡ ಟಾಟಾ ನೆಕ್ಸಾನ್ ಕಾರು ಮಾರಾಟ

2020ರ ಫೆಬ್ರವರಿ ಅವಧಿಯಲ್ಲಿ 12,430 ಯನಿಟ್ ಕಾರುಗಳನ್ನು ಮಾರಾಟ ಮಾಡಿದ್ದ ಟಾಟಾ ಕಂಪನಿಯು 2021ರ ಫೆಬ್ರವರಿ ಅವಧಿಯಲ್ಲಿ ಒಟ್ಟು 27,225 ಯುನಿಟ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ವಾರ್ಷಿಕವಾಗಿ ಶೇ.119 ರಷ್ಟು ಹೆಚ್ಚು ಬೇಡಿಕೆ ಪಡೆದುಕೊಂಡಿದೆ. ಕಾರುಗಳ ಮಾರಾಟದಲ್ಲಿನ ವಾರ್ಷಿಕ ಬೆಳವಣಿಗೆಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಕಳೆದ 9 ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, ಹೊಸ ಕಾರುಗಳು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿವೆ.

ಶೇ.103ರಷ್ಟು ಏರಿಕೆ ಕಂಡ ಟಾಟಾ ನೆಕ್ಸಾನ್ ಕಾರು ಮಾರಾಟ

ಟಾಟಾ ಕಂಪನಿಯು ಹೊಸ ಕಾರುಗಳನ್ನು OMEGA ಕಾರು ಉತ್ಪಾದನಾ ತಂತ್ರಜ್ಞಾನದಡಿಯಲ್ಲಿ ಕಾರು ಅಭಿವೃದ್ದಿ ಮಾಡುತ್ತಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿನ ನೆಕ್ಸಾನ್ ಕಾರು ಮಾದರಿಯು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದೆ.

ಶೇ.103ರಷ್ಟು ಏರಿಕೆ ಕಂಡ ಟಾಟಾ ನೆಕ್ಸಾನ್ ಕಾರು ಮಾರಾಟ

ಟಾಟಾ ಮೋಟಾರ್ಸ್ ಕಂಪನಿಯು ಫೆಬ್ರವರಿ ಅವಧಿಯಲ್ಲಿ 7,929 ಯುನಿಟ್ ನೆಕ್ಸಾನ್ ಕಾರು ಮಾರಾಟದೊಂದಿಗೆ ಶೇ. 143.2 ರಷ್ಟು ಬೆಳವಣಿಗೆ ಕಂಡಿದ್ದು, ಕಳೆದ ವರ್ಷದ ಫೆಬ್ರವರಿಯಲ್ಲಿ ಇದೇ ಆವೃತ್ತಿಯು ಕೇವಲ 3,894 ಯನಿಟ್ ಮಾತ್ರ ಮಾರಾಟಗೊಂಡಿತ್ತು.

ಶೇ.103ರಷ್ಟು ಏರಿಕೆ ಕಂಡ ಟಾಟಾ ನೆಕ್ಸಾನ್ ಕಾರು ಮಾರಾಟ

ಕಾರು ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ಮತ್ತು ಹ್ಯುಂಡೈ ನಂತರ ಮೂರನೇ ಸ್ಥಾನಕ್ಕೇರಿರುವ ಟಾಟಾ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಬೆಳವಣಿಗೆ ಸಾಧಿಸುವ ತವಕದಲ್ಲಿದ್ದು, ನೆಕ್ಸಾನ್ ಕಾರು ಮಾದರಿಯು ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸಾಕಷ್ಟು ಮುಂಚೂಣಿ ಸಾಧಿಸುತ್ತಿದೆ. 2020ರ ಆರಂಭದಲ್ಲಿ ಪ್ರತಿ ತಿಂಗಳಿಗೆ 2500ರಿಂದ 3 ಸಾವಿರ ಯುನಿಟ್ ಮಾತ್ರ ಮಾರಾಟವಾಗಿದ್ದ ನೆಕ್ಸಾನ್ ಕಾರು ಮಾದರಿಯು ಇದೀಗ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ.

ಶೇ.103ರಷ್ಟು ಏರಿಕೆ ಕಂಡ ಟಾಟಾ ನೆಕ್ಸಾನ್ ಕಾರು ಮಾರಾಟ

ಹೊಸ ಕಾರು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್‌ ಪಡೆದ ನಂತರ ಕಾರು ಮಾರಾಟವು ನಿರಂತವಾಗಿ ಏರಿಕೆಯಾಗುತ್ತಿದ್ದು, ಸ್ವದೇಶಿ ಕಂಪನಿಗಳ ನಿರ್ಮಿತ ವಾಹನ ಬಳಕೆಗೆ ಗ್ರಾಹಕರ ಒಲವು ತೋರುತ್ತಿರುವುದು ಕೂಡಾ ಟಾಟಾ ಕಾರುಗಳ ಮಾರಾಟ ಬೆಳವಣಿಗೆ ಮತ್ತೊಂದು ಕಾರಣವಾಗಿದೆ.

ಶೇ.103ರಷ್ಟು ಏರಿಕೆ ಕಂಡ ಟಾಟಾ ನೆಕ್ಸಾನ್ ಕಾರು ಮಾರಾಟ

ಗ್ರಾಹಕರ ವಿಶ್ವಾಸದಂತೆ ಹೊಸ ಕಾರುಗಳಲ್ಲಿ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಮುಂಬರುವ ದಿನಗಳಲ್ಲಿ ಹೊಸ ಕಾರುಗಳೊಂದಿಗೆ ಇನ್ನಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಶೇ.103ರಷ್ಟು ಏರಿಕೆ ಕಂಡ ಟಾಟಾ ನೆಕ್ಸಾನ್ ಕಾರು ಮಾರಾಟ

ಇನ್ನು ಬಿಎಸ್-6 ಎಮಿಷನ್ ನಂತರ ಹಲವಾರು ಬದಲಾವಣೆಗಳೊಂದಿಗೆ ಮಾರಾಟವಾಗುತ್ತಿರುವ ನೆಕ್ಸಾನ್ ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.09 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.79 ಲಕ್ಷ ಬೆಲೆ ಹೊಂದಿದೆ.

ಶೇ.103ರಷ್ಟು ಏರಿಕೆ ಕಂಡ ಟಾಟಾ ನೆಕ್ಸಾನ್ ಕಾರು ಮಾರಾಟ

ವಿವಿಧ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಬರೋಬ್ಬರಿ 36 ವೆರಿಯೆಂಟ್ಸ್ ಹೊಂದಿರುವ ನೆಕ್ಸಾನ್ ಕಾರು ಮಾದರಿಯು ಬಿಎಸ್-6 ಪ್ರೇರಣೆಯ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ಬಹುತೇಕ ವೆರಿಯೆಂಟ್‌ಗಳಲ್ಲಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯ ಸೌಲಭ್ಯವನ್ನು ನೀಡಲಾಗಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಶೇ.103ರಷ್ಟು ಏರಿಕೆ ಕಂಡ ಟಾಟಾ ನೆಕ್ಸಾನ್ ಕಾರು ಮಾರಾಟ

1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮಾದರಿಯು 118-ಬಿಹೆಚ್‍ಪಿ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದ್ದಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 108-ಬಿಹೆಚ್‍ಪಿ ಮತ್ತು 260-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

More from DriveSpark

Article Published On: Monday, March 8, 2021, 15:29 [IST]
English summary
Tata Nexon Clocks 103 Percent Sales Growth In 2021 February. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+