ಇಂಡಸ್ ಇಂಡ್ ಬ್ಯಾಂಕ್ ಜೊತೆಗೂಡಿ ಹೊಸ ವಾಹನ ಸಾಲ ಪರಿಚಯಿಸಿದ ಟಾಟಾ ಮೋಟಾರ್ಸ್

ಹೊಸ ವಾಹನ ಮಾರಾಟವು ಕಳೆದ ಎರಡು ತಿಂಗಳ ನಂತರ ಮೊದಲ ಬಾರಿಗೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ದೇಶದ ಮುಂಚೂಣಿ ಕಾರು ತಯಾರಿಕಾ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಪ್ರಮುಖ ಕಾರುಗಳ ಖರೀದಿಯನ್ನು ಉತ್ತೇಜಿಸಲು ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿದೆ.

ಇಂಡಸ್ ಇಂಡ್ ಬ್ಯಾಂಕ್ ಜೊತೆಗೂಡಿ ಹೊಸ ವಾಹನ ಸಾಲ ಪರಿಚಯಿಸಿದ ಟಾಟಾ ಮೋಟಾರ್ಸ್

ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಸದ್ಯ ಮೂರನೇ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಳೆದ ತಿಂಗಳು ಕೋವಿಡ್ 2ನೇ ಅಲೆ ಪರಿಣಾಮ ತಗ್ಗಿರುವ ವಾಹನಗಳ ಮಾರಾಟವನ್ನು ಸುಧಾರಿಸಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಇಂಡಸ್ ಇಂಡ್ ಬ್ಯಾಂಕ್ ಜೊತೆಗೂಡಿ ಹೊಸ ವಾಹನ ಸಾಲ ಪರಿಚಯಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಈಗಾಗಗಲೇ ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಹಲವು ಸರಳ ಸಾಲಸೌಲಭ್ಯಗಳ ಆಯ್ಕೆ ನೀಡುತ್ತಿದ್ದು, ಇದೀಗ ಇಂಡಸ್ ಇಂಡ್ ಬ್ಯಾಂಕ್ ಜೊತೆಗೂಡಿ ಹೊಸ ಮಾದರಿಯ ಸಾಲಸೌಲಭ್ಯಗಳನ್ನು ಘೋಷಿಸಿದೆ.

ಇಂಡಸ್ ಇಂಡ್ ಬ್ಯಾಂಕ್ ಜೊತೆಗೂಡಿ ಹೊಸ ವಾಹನ ಸಾಲ ಪರಿಚಯಿಸಿದ ಟಾಟಾ ಮೋಟಾರ್ಸ್

ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿ ಹೊಸ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿರುವ ಗ್ರಾಹಕರನ್ನು ಸೆಳೆಯಲು ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಹಲವಾರು ಆಕರ್ಷಕ ಲೋನ್ ಆಫರ್‌ಗಳನ್ನು ನೀಡುತ್ತಿರುವ ಟಾಟಾ ಕಂಪನಿಯು ಇಂಡಸ್ ಇಂಡ್ ಮೂಲಕ ಸರಳ ಸಾಲ ಸೌಲಭ್ಯಗಳೊಂದಿಗೆ ಅತಿ ಕಡಿಮೆ ಇಎಂಐ ಆಯ್ಕೆಗಳನ್ನು ನೀಡುತ್ತಿದೆ.

ಇಂಡಸ್ ಇಂಡ್ ಬ್ಯಾಂಕ್ ಜೊತೆಗೂಡಿ ಹೊಸ ವಾಹನ ಸಾಲ ಪರಿಚಯಿಸಿದ ಟಾಟಾ ಮೋಟಾರ್ಸ್

ಹಲವಾರು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳ ಜೊತೆಗೂಡಿ ವಿವಿಧ ಲೋನ್ ಆಫರ್‌ಗಳನ್ನು ನೀಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಇಂಡಸ್ ಲ್ಯಾಂಡ್ ಬ್ಯಾಂಕ್ ಮೂಲಕ ಗರಿಷ್ಠ 7 ವರ್ಷಗಳ ಅವಧಿಗೆ ಶೇ. 90 ರಷ್ಟು ಎಕ್ಸ್‌ಶೋರೂಂ ದರದ ಮೇಲೆ ಲೋನ್ ಆಫರ್ ನೀಡುತ್ತಿದೆ.

ಇಂಡಸ್ ಇಂಡ್ ಬ್ಯಾಂಕ್ ಜೊತೆಗೂಡಿ ಹೊಸ ವಾಹನ ಸಾಲ ಪರಿಚಯಿಸಿದ ಟಾಟಾ ಮೋಟಾರ್ಸ್

ಜೊತೆಗೆ ಇಂಡಸ್ ಇಂಡ್ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಹೊಸ ವಾಹನ ಖರೀದಿಸಿದ ಮೊದಲ ಮೂರರಿಂದ ಆರು ತಿಂಗಳು ಕಾಲ ಅತಿ ಕಡಿಮೆ ಇಎಂಐ ವಿಧಿಸಲಿದ್ದು, ವಿನಾಯ್ತಿ ಪಡೆದ ಇಎಂಐ ಆಯ್ಕೆಯನ್ನು ತದನಂತರದ ಕಂತುಗಳಲ್ಲಿ ಸೇರ್ಪಡೆಗೊಳಿಸಲಾಗುತ್ತದೆ.

ಇಂಡಸ್ ಇಂಡ್ ಬ್ಯಾಂಕ್ ಜೊತೆಗೂಡಿ ಹೊಸ ವಾಹನ ಸಾಲ ಪರಿಚಯಿಸಿದ ಟಾಟಾ ಮೋಟಾರ್ಸ್

ಟಾಟಾ ಕಾರು ಖರೀದಿಸುವ ಗ್ರಾಹಕರು ಕ್ಲಿಕ್ ಟು ಡ್ರೈವ್ ಪ್ಲ್ಯಾಟ್‌ಫಾರ್ಮ್ ಮೂಲಕವು ಸಾಲ ಸೌಲಭ್ಯಕ್ಕೆ ಅರ್ಹತೆ ಪಡೆದುಕೊಳ್ಳಬಹುದಾಗಿದ್ದು, ಸಾಲ ಮರುಪಾವತಿ ಅವಧಿಯು ಸಾಲದ ಮೊತ್ತ ಮತ್ತು ವಿವಿಧ ವೆರಿಯೆಂಟ್‌ಗಳನ್ನು ಆಧರಿಸಿ ಬದಲಾಗಲಿದೆ.

ಇಂಡಸ್ ಇಂಡ್ ಬ್ಯಾಂಕ್ ಜೊತೆಗೂಡಿ ಹೊಸ ವಾಹನ ಸಾಲ ಪರಿಚಯಿಸಿದ ಟಾಟಾ ಮೋಟಾರ್ಸ್

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ವಾಹನಗಳ ಉತ್ಪಾದನೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಪ್ರಯಾಣಿಕ ವಾಹನಗಳ ಜೊತೆಗೆ ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲೂ ಹಲವಾರು ಹೊಸತನದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

ಇಂಡಸ್ ಇಂಡ್ ಬ್ಯಾಂಕ್ ಜೊತೆಗೂಡಿ ಹೊಸ ವಾಹನ ಸಾಲ ಪರಿಚಯಿಸಿದ ಟಾಟಾ ಮೋಟಾರ್ಸ್

ಕೋವಿಡ್ 2ನೇ ಅಲೆಯ ಪರಿಣಾಮ ಮೇ ಮತ್ತು ಜೂನ್ ಆರಂಭದಲ್ಲಿ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ನೆಲಕಚ್ಚಿದ ಪರಿಣಾಮ ಆಟೋ ಉದ್ಯಮವು ಸಹ ಹಿನ್ನಡೆ ಅನುಭವಿಸಿದ್ದು, ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನಗಳ ಮಾರಾಟದಲ್ಲಿ ತುಸು ಚೇತರಿಕೆ ಕಂಡುಬಂದಿದೆ.

ಇಂಡಸ್ ಇಂಡ್ ಬ್ಯಾಂಕ್ ಜೊತೆಗೂಡಿ ಹೊಸ ವಾಹನ ಸಾಲ ಪರಿಚಯಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಕೋವಿಡ್ ಪರಿಣಾಮ ಮೇ ತಿಂಗಳ ಅವಧಿಯಲ್ಲಿ ಹೊಸ ಕಾರುಗಳ ಮಾರಾಟದಲ್ಲಿ ಕುಸಿತ ಕಂಡಿದ್ದರೂ ಜೂನ್ ಅವಧಿಯ ಕಾರು ಮಾರಾಟದಲ್ಲಿ ತುಸು ಸುಧಾರಣೆ ಕಂಡಿದ್ದು, ಟಾಟಾ ಕಂಪನಿಯ ಜೂನ್ ತಿಂಗಳ ಕಾರು ಮಾರಾಟವು ಕಳೆದ ವರ್ಷದ ಜೂನ್ ಅವಧಿಯಲ್ಲಿನ ಕಾರು ಮಾರಾಟಕ್ಕಿಂತಲೂ ಶೇ. 113 ರಷ್ಟು ಬೆಳವಣಿಗೆ ಸಾಧಿಸಿದೆ.

Most Read Articles

Kannada
English summary
Tata Motors announces new car finance schemes in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X