Tata Punch ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಬಹುನಿರೀಕ್ಷಿತ ಪಂಚ್ ಮೈಕ್ರೊ ಎಸ್‌ಯುವಿಯನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಟಾಟಾ ಪಂಚ್ ಕಾರು ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಮೈಕ್ರೊ ಎಸ್‌ಯುವಿಗಳಲ್ಲಿ ಒಂದಾಗಿದೆ.

Tata Punch ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಟಾಟಾ ಪಂಚ್ ಮಾದರಿಯು ನೂತನ ಫೀಚರ್ಸ್, ಬಜೆಟ್ ಬೆಲೆ ಮತ್ತು ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಮೈಕ್ರೊ ಎಸ್‌ಯುವಿಯಾಗಿದೆ. ಈ ಮೈಕ್ರೊ ಎಸ್‌ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಬಿಡುಗಡೆಯಾದ ಮೊದಲ ತಿಂಗಳಿನಲ್ಲಿಯೇ ಸುಮಾರು 8 ಸಾವಿರಕ್ಕೂ ಹೆಚ್ಚು ಯುನಿಟ್ ವಿತರಣೆಗೊಂಡಿವೆ. ಈ ಟಾಟಾ ಪಂಚ್ ಕಾರಿನಲ್ಲಿ ಹಲವಾರು ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿದೆ. ಆದರೆ ಪ್ರಮುಖ ಕೆಲವು ಫೀಚರ್ಸ್‌ಗಳನ್ನು ಹೊಂದಿಲ್ಲ, ಈ ಫೀಚರ್ಸ್ ಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿವೆ..

Tata Punch ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಸನ್‌ರೂಫ್

ಎಸ್‍ಯುವಿ, ಸೆಡಾನ್ ಅಥವಾ ಹ್ಯಾಚ್‌ಬ್ಯಾಕ್ ಭಾರತದಲ್ಲಿ ಸನ್‌ರೂಫ್ ಇಲ್ಲದೆ ಅಪೂರ್ಣವಾಗಿದೆ. ಭಾರತೀಯ ಗ್ರಾಹಕರು ಸನ್‌ರೂಫ್ ಇರುವ ಕಾರುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಪಂಚ್‌ನ ಟಾಪ್-ಎಂಡ್ ಟ್ರಿಮ್ ಕೂಡ ಸನ್‌ರೂಫ್‌ನೊಂದಿಗೆ ಬರುವುದಿಲ್ಲ ಎಂಬುದು ದುಃಖದ ಸಂಗತಿ. ಟಾಟಾದ ನೆಕ್ಸಾನ್ ಮತ್ತು ಹ್ಯಾರಿಯರ್ ಕಾರುಗಳು ಸನ್‌ರೂಫ್ ಆಯ್ಕೆಯನ್ನು ಹೊಂದಿವೆ. ಒಂದು ಆಯ್ಕೆಯಾಗಿ ಸನ್‌ರೂಫ್ ಹೊಂದಿದ್ದರೆ ಪಂಚ್‌ನ ಆಕರ್ಷಣೆಯು ಇನ್ನಷ್ಟು ಹೆಚ್ಚಿತ್ತಿತ್ತು.

Tata Punch ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಎಲ್ಇಡಿ ಲೈಟ್ ಹೆಡ್‌ಲೈಟ್

ಟಾಟಾ ಪಂಚ್ ಮಾದರಿಯು ಪ್ರೊಜೆಕ್ಟರ್ ಲೈಟ್ ಸೆಟಪ್ ಮತ್ತು ಹೆಚ್ಚು ದುಬಾರಿ ಕಾರುಗಳ ಒಂದು ಭಾಗವಾದ ಕಾರ್ನರ್ ಲೈಟ್‌ಗಳೊಂದಿಗೆ ಬರುತ್ತದೆ. ಇನ್ನು ಸಾಂಪ್ರದಾಯಿಕ ಹ್ಯಾಲೊಜೆನ್ ಬಲ್ಬ್‌ಗಳಿಗೆ ಹೋಲಿಸಿದರೆ, ಎಲ್‌ಇಡಿಗಳು ಹೆಚ್ಚು ಕಾಲ ಬಾಳಿಕೆ ಬರುತ್ತವೆ, ಸಾಕಷ್ಟು ಕಡಿಮೆ ಪವರ್ ಅನ್ನು ಬಳಸುತ್ತವೆ ಮತ್ತು ಸಂಪೂರ್ಣ ಪ್ರಕಾಶಮಾನವಾಗಿರುತ್ತವೆ. ಆದರೆ ಇಲ್ಲಿ ಮುಖ್ಯವಾದ ವೆಚ್ಚವಾಗಿದೆ. ಪಂಚ್ ಎಲ್ಇಡಿ ಲೈಟ್ ಹೆಡ್‌ಲೈಟ್ ಅನ್ನು ಹೊಂದಿಲ್ಲ.

Tata Punch ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್)

ಎಸ್‍ಯುವಿಗಳು ಮೈಕ್ರೋ, ಕಾಂಪ್ಯಾಕ್ಟ್ ಅಥವಾ ಪೂರ್ಣ ಗಾತ್ರವಾಗಿರಬಹುದು, ಮೈಲ್ಡ್ ಆಫ್-ರೋಡಿಂಗ್ ಮತ್ತು ರಸ್ತೆಯ ಕೆಟ್ಟ ನಿಭಾಯಿಸುವಲ್ಲಿ ಎಲ್ಲವೂ ಅತ್ಯುತ್ತಮವಾಗಿದೆ.ಆದರೆ ಈ ವೇಳೆ ಪಂಕ್ಚರ್‌ಗೆ ಸ್ವಲ್ಪ ಹೆಚ್ಚು ಒಳಗಾಗುತ್ತಾರೆ. ಇಲ್ಲಿಯೇ TPMS ಸೂಕ್ತವಾಗಿ ಬರಬಹುದಿತ್ತು. ಟಾಟಾ ನೆಕ್ಸಾನ್ ಕಾರುಗಳಲ್ಲಿ ಈ ಅಸಿಸ್ಟ್ ಫೀಚರ್ಸ್ ಅನ್ನು ನೀಡುವ ಟಾಟಾದ ವಾಹನಗಳಲ್ಲಿ ಒಂದಾಗಿದೆ. ಆದರೂ ನೀವು ಅದನ್ನು ಆಯ್ಕೆಯಾಗಿ ಹೊಂದಬಹುದು ಆದರೆ ಅದು ಸ್ಟಾಕ್ ಆಗಿ ಬರುವುದಿಲ್ಲ.

Tata Punch ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ರಿಯರ್ ಎಸಿ

ಹಿಂಭಾಗದಲ್ಲಿ ಎಸಿ ವೆಂಟ್ ಗಳಿಗೆ ಹೆಚ್ಚಿನ ಅಗತ್ಯವಿರುವುದಿಲ್ಲ. ಆದರೆ ತಾಪಮಾನವನ್ನು ತ್ವರಿತವಾಗಿ ಮತ್ತು ಸ್ವಲ್ಪ ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಿಂಭಾಗದಲ್ಲಿ ಎಸಿ ಇದ್ದರೆ ಉತ್ತಮವಾಗಿರುತ್ತದೆ. ಆದರೆ ಟಾಟಾ ಪಂಚ್ ಈ ಫೀಚರ್ ಅನ್ನು ಹೊಂದಿಲ್ಲ.

Tata Punch ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಫ್ರಂಟ್ ಸೆಂಟರ್ ಆರ್ಮ್‌ರೆಸ್ಟ್

ಈ ಟಾಟಾ ಪಂಚ್ ಕಾರಿನ ಮುಂಭಾಗದಲ್ಲಿ ಸೆಂಟರ್ ಆರ್ಮ್‌ರೆಸ್ಟ್ ಅನ್ನು ಹೊಂದಿಲ್ಲ. ಲಾಂಗ್ ಡ್ರೈವ್ ಮಾಡುವಾಗ ಈ ಸೆಂಟರ್ ಆರ್ಮ್‌ರೆಸ್ಟ್ ಹೆಚ್ಚು ಉಪಯೋಗಕಾರಿಯಾಗಿದೆ. ಅಲ್ಲದೆ, ಜನರು ಆರ್ಮ್‌ರೆಸ್ಟ್ ಅನ್ನು ಪೂರ್ಣವಾಗಿ ಬಳಸುವ ಅಭ್ಯಾಸವನ್ನು ಸಹ ಬೆಳೆಸಿಕೊಂಡಿದ್ದಾರೆ. ದರೆ ದುಃಖಕರವೆಂದರೆ, ಟಾಟಾ ಪಂಚ್ ಮುಂಭಾಗದ ಮಧ್ಯದ ಆರ್ಮ್‌ರೆಸ್ಟ್‌ನೊಂದಿಗೆ ಬರುವುದಿಲ್ಲ.

Tata Punch ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಆಂಬಿಯೆಂಟ್ ಲೈಟಿಂಗ್

ಆಲ್ಟ್ರೋಜ್ ನಂತಹ ಟಾಟಾದ ಸಾಲಿನಲ್ಲಿ ಕೆಲವು ಸೇರಿದಂತೆ ಅನೇಕ ಕಾರುಗಳು ಆಂಬಿಯೆಂಟ್ ಲೈಟಿಂಗ್‌ನೊಂದಿಗೆ ಬರುತ್ತವೆ. ಪಂಚ್‌ಗೆ ಇಂಟಿರಿಯರ್ ಆಂಬಿಯೆಂಟ್ ಲೈಟಿಂಗ್ ಅನ್ನು ನೀಡಿಲ್ಲ. ಇನ್ನು ಆಂಬಿಯೆಂಟ್ ಲೈಟ್‌ಗಳ ಸೇರ್ಪಡೆ, ಆಯ್ಕೆಯ ಪ್ಯಾಕ್ ಆಗಿದ್ದರೂ ಸಹ ಸೇರ್ಪಡೆ ಮಾಡಬಹುದಿತ್ತು.

Tata Punch ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಎಂಜಿನ್ ಸ್ಟಾರ್ಟ್-ಸ್ಟಾಪ್ ಟೆಕ್

1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಮತ್ತು ಈ ವಾಹನದ ದಕ್ಷತೆಯು ವಿಶಿಷ್ಟವಾದ ನಗರ ಡ್ರೈವ್‌ಗಳಲ್ಲಿ ಮತ್ತಷ್ಟು ಇಳಿಯುತ್ತದೆ. ಈ ಕಾರಿನಲ್ಲಿ ಎಂಜಿನ್ ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನದ ಸೇರ್ಪಡೆಯನ್ನು ಮಾಡಲಾಗಿಲ್ಲ.

Tata Punch ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಫಂಕ್ಷನಲ್ ರೂಫ್ ರೈಲ್ಸ್

ಎಸ್‍ಯುವಿ ಎಂದಾಗ ನಮ್ಮ ತಲೆಗೆ ಬರುವುದು ಬೃಹತ್ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ದೊಡ್ಡ ಮಸ್ಕಲರ್ ವಾಹನ. ಇನ್ನು ವಸ್ತುಗಳನ್ನು ಇಡಲು ರೂಫ್ ರ್ಯಾಕ್. ಇನ್ನು ಟಾಟಾ ಪಂಚ್ ಕಾರು ರೂಫ್ ರೈಲ್ ನಂದಿಗೆ ಬರುತ್ತದೆ, ಆದರೆ ಅದು ಫಂಕ್ಷನಲ್ ಅಲ್ಲದ ಕಾರನ ಅಭಿಮಾನಿಗಳಿಗೆ ನಿರಾಸೆಯಾಗಿದೆ.

Tata Punch ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಇನ್ನು ಈ ಹೊಸ ಮಾದರಿಯು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಪ್ರಮುಖ ನಾಲ್ಕು ವೆರಿಯೆಂಟ್‌ಗಳೊಂದಿಗೆ ಲಭ್ಯವಿದೆ. ಹೊಸ ಕಾರು ಮೈಕ್ರೊ ಎಸ್‌ಯುವಿ ಮಾದರಿಗಳಿಗೆ ಮಾತ್ರವಲ್ಲದೆ ಹ್ಯಾಚ್‌ಬ್ಯಾಕ್ ಕಾರು ಮಾದರಿಗಳಿಗೂ ಭರ್ಜರಿ ಪೈಪೋಟಿ ನೀಡುತ್ತಿದೆ. ಪಂಚ್ ಕಾರು ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಲಭ್ಯವಿದೆ. ಈ ಕಾರಿನಲ್ಲಿ 1.2-ಲೀಟರ್ ರಿವೊಟ್ರಾನ್ ತ್ರಿ ಸಿಲಿಂಡರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

Tata Punch ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಈ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 83 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ. ಹೊಸ ಟಾಟಾ ಪಂಚ್ ಕಾರು 3840 ಎಂಎಂ ಉದ್ದ, 1800 ಎಂಎಂ ಅಗಲ ಮತ್ತು 1635 ಎಂಎಂ ಎತ್ತರದೊಂದಿಗೆ 2450 ಎಂಎಂ ವ್ಹೀಲ್ ಬೇಸ್ ಮತ್ತು 187 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಅನ್ನು ಹೊಂದಿದೆ.

Tata Punch ಕಾರು ಹೊಂದಿಲ್ಲದ ಪ್ರಮುಖ ಫೀಚರ್ಸ್‌ಗಳಿವು

ಈ ಟಾಟಾ ಪಂಚ್ ಮೈಕ್ರೊ ಎಸ್‌ಯುವಿ ಮಾದರಿಯಲ್ಲೂ ಸಹ ಗರಿಷ್ಠ ಮಟ್ಟದ ಸುರಕ್ಷಟಾ ರೇಟಿಂಗ್ಸ್ ಪಡೆದುಕೊಂಡಿದೆ. ಹೊಸ ಕಾರು ಮುಂಭಾಗದಲ್ಲಿ ಮಾತ್ರವಲ್ಲ ಹಿಂಭಾಗದಲ್ಲಿ ಮತ್ತು ಸೈಡ್ ಪ್ರೊಫೈಲ್‌‌ನಲ್ಲೂ ಅತ್ಯುತ್ತಮ ವಿನ್ಯಾಸವನ್ನು ಹೊಂದಿದೆ, ಈ ಕಾರು ಟೊರಾರ್ನಾಡೊ ಬ್ಲ್ಯೂ, ಟೊಪಿಕಲ್ ಮಿಸ್ಟ್, ಡೇ ಟೋನಾ ಗ್ರೆ, ಮಿಟಿಯೊರ್ ಬ್ರೊನ್ಜ್, ಆಟೊಮಿಕ್ ಆರೇಂಜ್, ಆರ್ಕಸ್ ವೈಟ್ ಮತ್ತು ಕ್ಯಾಲಿಪ್ಸೊ ರೆಡ್ ಸೇರಿ ಪ್ರಮುಖ ಏಳು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

Most Read Articles

Kannada
English summary
Tata punch micro suv misses some important features details
Story first published: Tuesday, November 16, 2021, 20:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X