Just In
- 1 hr ago
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- 3 hrs ago
35 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉಚಿತ ಲಸಿಕೆ ನೀಡಲು ಮುಂದಾದ ಟಿವಿಎಸ್ ಕಂಪನಿ
- 5 hrs ago
ವಾರದ ಪ್ರಮುಖ ಸುದ್ದಿ: ಏರ್ಬ್ಯಾಗ್ ಕಡ್ಡಾಯ, ಬಿಡುಗಡೆಗೆ ಸಜ್ಜಾದ ಸಿಟ್ರನ್, ಟೊಯೊಟಾ ನೌಕರರ ಮುಷ್ಕರ ಅಂತ್ಯ!
- 15 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
Don't Miss!
- Movies
ದೀದಿ ಸಾಮ್ರಾಜ್ಯದಲ್ಲಿ ಕಮಲದ ಕೈ ಹಿಡಿದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ
- Finance
ದಕ್ಷಿಣ ಭಾರತದ ಅತಿದೊಡ್ಡ ಆಭರಣ ರೀಟೈಲರ್ ಮೇಲೆ ಐಟಿ ದಾಳಿ
- News
ಚಿನ್ನ ಕಳ್ಳ ಸಾಗಾಣಿಕೆ ಅನುಮಾನ; 48 ಲಕ್ಷ ವಾಚ್ ಒಡೆದ ಅಧಿಕಾರಿಗಳು!
- Sports
ಐಪಿಎಲ್ 2021: ಅಧಿಕೃತ ವೇಳಾಪಟ್ಟಿ ಬಿಡುಗಡೆ, ಮೊದಲ ಪಂದ್ಯದಲ್ಲಿ ಆರ್ಸಿಬಿಗೆ ಮುಂಬೈ ಎದುರಾಳಿ
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟಾಟಾ ಸಫಾರಿ ಸ್ಟಾರ್ಮ್ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡಿರುವುದರ ಹಿಂದಿನ ಕಾರಣವಿದು..!
ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಸಫಾರಿ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಮೂಲಕ ಭಾರತೀಯ ಮಾರುಕಟ್ಟೆಯ ಎಸ್‍ಯುವಿ ವಿಭಾಗದಲ್ಲಿ ಹೊಸ ಸಂಚಲವನ್ನು ಮೂಡಿಸಲು ಸಜ್ಜಾಗಿದೆ.

ಹೊಸ ಟಾಟಾ ಸಫಾರಿ ಇದೇ ತಿಂಗಳ 22ರಂದು ಬಿಡುಗಡೆಯಾಗಲಿದೆ. ಆದರೆ ಪ್ರಮುಖವಾಗಿ ಐಕಾನಿಕ್ ಸಫಾರಿ ಎಸ್‍ಯುವಿಯ ಇತಿಹಾಸದ ಬಗ್ಗೆ ಹೇಳುವುದಾದರೆ, ಟಾಟಾ ಮೋಟಾರ್ಸ್ ಕಂಪನಿಯು ಸಫಾರಿ ಎಂಬ ಹೆಸರಿನಲ್ಲಿ 1998ರಲ್ಲಿ ಮೊದಲ ಬಾರಿಗೆ ರಗಡ್ ಲುಕ್ ನಲ್ಲಿ ಎಸ್‍ಯುವಿಯನ್ನು ಬಿಡುಗಡೆಗೊಳಿಸಿದ್ದರು. ಈ ಸಫಾರಿ ಎಸ್‍ಯುವಿಯು ಅಂದಿನ ಕಾಲದಲ್ಲಿ ಎಸ್‍ಯುವಿ ವಿಭಾಗದ ನಾಯಕನಾಗಿ ಪ್ರಾಬಲ್ಯವನ್ನು ಸಾಧಿಸಿತ್ತು. ಆದರೆ ನಂತರದ ವರ್ಷಗಳಲ್ಲಿ ಹಲವು ಜನಪ್ರಿಯ ಎಸ್‍ಯುವಿಗಳು ಭಾರತಕ್ಕೆ ಲಗ್ಗೆ ಇಟ್ಟಿತ್ತು.

ಇತರ ಜನಪ್ರಿಯ ಎಸ್‍ಯುವಿಗಳ ಪೈಪೋಟಿ ನಡುವೆ ಸಫಾರಿ ಮಾರಟದಲ್ಲಿ ಕುಸಿತವನ್ನು ಕಂಡಿತ್ತು. ಇದು 2019ರ ಕೊನೆಯವರೆಗೂ ಉತ್ಪಾದನೆಯಲ್ಲಿತ್ತು. ನಂತರ ಬಿಎಸ್- 6 ಮಾಲಿನ್ಯ ನಿಯಮ ಜಾರಿಯಾಗುವುದರಿಂದ ಇದರ ಮುನ್ನವೇ ಸಫಾರಿ ಎಸ್‍ಯುವಿಯನ್ನು ಸ್ಥಗಿತಗೊಳಿಸಿದ್ದರು.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಕುತೂಹಲಕಾರಿಯಾಗಿ, ಟಾಟಾ ಸಫಾರಿ ಸ್ಟಾರ್ಮ್ ಇತ್ತೀಚೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ಸ್ಪಾಟ್ ಟೆಸ್ಟ್ ನಡೆಸುವಾಗ ಕಾಣಿಸಿಕೊಂಡಿದೆ. ಟಾಟಾ ಮೋಟಾರ್ಸ್ ಹಿಂದಿನ ತಲೆಮಾರಿನ ಸಫಾರಿ ಸ್ಟಾರ್ಮ್ ಅನ್ನು ಸ್ಥಗಿತಗೊಳಿಸಲಾಗಿದೆ.

ಆದರೆ ಟಾಟಾ ಸಫಾರಿ ಸ್ಟಾರ್ಮ್ ಎಸ್‍ಯುವಿಯು ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಉತ್ತರ ಪ್ರದೇಶದ ಲಖನೌದಲ್ಲಿನ ಟೆಲ್ಕೊ (ಟಾಟಾ ಎಂಜಿನಿಯರಿಂಗ್ ಮತ್ತು ಲೋಕೋಮೋಟಿವ್ ಕಂಪನಿ) ಘಟಕದ ಸಮೀಪ ಈ ಎಸ್‍ಯುವಿ ಸ್ಪಾಟ್ ಟೆಸ್ಟ್ ನಡೆಸಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಟಾಟಾದ ಟೆಲ್ಕೊ ಸ್ಥಾವರವು ವಿವಿಧ ಟಾಟಾ ಕಾರುಗಳಿಗೆ ಪವರ್‌ಟ್ರೇನ್‌ಗಳು ಮತ್ತು ಡ್ರೈವ್‌ಟ್ರೇನ್‌ಗಳ ಯುನಿಟ್ ಗಳನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಉತ್ಪಾದಿಸುತ್ತದೆ. ವರದಿಗಳ ಪ್ರಕಾರ, ರಕ್ಷಣಾ ಪಡೆಯ ಬೇಡಿಕೆಯ ಮೇರೆಗೆ ಆರ್ಮಿ-ಸ್ಪೆಕ್ ಜಿಎಸ್ 800 ಸಫಾರಿ ಸ್ಟಾರ್ಮ್ ಅನ್ನು ಅಭಿವೃದ್ದಿ ಪಡಿಸಲಾಗುತ್ತಿದೆ.

ಟಾಟಾ ಮೋಟಾರ್ಸ್ ಆರ್ಮಿ-ಸ್ಪೆಕ್ ಜಿಎಸ್800ನ ನವೀಕರಿಸಿದ ಆವೃತ್ತಿಯನ್ನು ಪರೀಕ್ಷಿಸುತ್ತಿದೆ, ಈ ಮೊದಲು, ಟಾಟಾ ಹೆಕ್ಸಾದ ಮೂಲಮಾದರಿಯೊಂದನ್ನು ಕಾರು ತಯಾರಕರ ಪುಣೆ ಘಟಕದ ಸಮೀಪ ಗುರುತಿಸಲಾಗಿತ್ತು ಮತ್ತು ಅದು ಸಾಕಷ್ಟು ವದಂತಿಗಳಿಗೆ ಕಾರಣಗಳಾಗಿತ್ತು. ಟಾಟಾ ಮೋಟಾರ್ಸ್ ಇದನ್ನು ಕೆಲವು ಆಂತರಿಕ ಆರ್&ಡಿ ಉದ್ದೇಶಗಳಿಗಾಗಿ ಬಳಸುತ್ತಿದೆ ಎಂದು ನಂತರ ತಿಳಿಸಿದರು.
MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಇನ್ನು ಮೂಲ ಸಫಾರಿ 4x4 ಮಾದರಿಯಾಗಿತ್ತು, ಅದರೆ ಹೊಸ ಸಫಾರಿ ಫ್ರಂಟ್-ವೀಲ್ ಡ್ರೈವ್ ಎಸ್‍ಯುವಿಯಾಗಿದೆ. ಆದರೆ ಹೊಸ ಸಫಾರಿ ಎಸ್‍ಯುವಿಯು ಲ್ಯಾಂಡ್ ರೋವರ್ ಡಿಸ್ಕವರಿ-ಡಿರೈವ್ಡ್ ಡಿ8 ಪ್ಲಾಟ್‌ಫಾರ್ಮ್ ನಿಂದ ಅಭಿವೃದಿ ಪಡಿಸಲಾಗಿದೆ.

ಇದರಿಂದ ಇದರಲ್ಲಿಯು 4x4 ಸಿಸ್ಟಂ ಅಳವಡಿಸಲು ಸಾಧ್ಯವಿದೆ. ಅದರೆ ಅದು ಸಧ್ಯಕ್ಕೆ ಇಲ್ಲ, ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾದರೆ ಹೊಸ ಸಫಾರಿ 4x4 ನೀಡುವುದಾಗಿ ಟಾಟಾ ಮೋಟಾರ್ಸ್ ಹೇಳಿದೆ. ಹೊಸ ಸಫಾರಿ ಹ್ಯಾರಿಯರ್ ಎಸ್‍ಯುವಿಯಲ್ಲಿರುವ ಅದೇ ಎಂಜಿನ್ ಅನ್ನು ಹೊಂದಿದೆ. ಅಲ್ಲದೇ ಬಹುತೇಕೆ ಹ್ಯಾರಿಯರ್ ಎಸ್‍ಯುವಿಗೆ ಹೋಲುತ್ತದೆ. ಅದರೆ ಪ್ರಮುಖ ವ್ಯತ್ಯಾಸವೆಂದರೆ ಸಫಾರಿ 7-ಸೀಟರ್ ಆಗಿದೆ.