ಬಿಡುಗಡೆಗೆ ಸಜ್ಜಾದ ಹೊಸ ಟಾಟಾ ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟ್
ಜನಪ್ರಿಯ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ 2021ರ ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟೆಡ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಟಾಟಾ ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟೆಡ್ ಕಾರು 2021ರ ಆಗಸ್ಟ್ 4 ರಂದು ಬಿಡುಗಡೆಯಾಗಲಿದೆ.

ಟಾಟಾ ಕಂಪನಿಯು ಈ ಹೊಸ ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟ್ ಹೊಸ ಟೀಸರ್ ಬಿಡುಗಡೆಗೊಳಿಸಿದ್ದಾರೆ. ಟೀಸರ್ ನಲ್ಲಿ ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟೆಡ್ ಕಾರಿನಲ್ಲಿ ಬ್ಲ್ಯಾಕ್ ರೂಫ್ ಅನ್ನು ಹೊಂದಿದೆ. ಈ ಹೊಸ ಟಿಯಾಗೋ ಎನ್‌ಆರ್‌ಜಿ ಡ್ಯುಯಲ್ ಟೋನ್ ಬಣ್ಣ ಹೊಂದಿದೆ. ಟಿಯಾಗೋ ಎನ್‌ಆರ್‌ಜಿ ಎಂಟ್ರಿ ಲೆವೆಲ್ ಮಾದರಿಯನ್ನು 2018 ಮತ್ತು 2020ರ ನಡುವೆ ಬುಚ್, ಕ್ರಾಸ್‌ಒವರ್ ಮಾದರಿಯಾಗಿ ಮಾರಾಟ ಮಾಡಲಾಯಿತು.

2020ರ ಆರಂಭದಲ್ಲಿ ಟಿಯಾಗೋ ಫೇಸ್‌ಲಿಫ್ಟ್ ಮಾರಾಟಕ್ಕೆ ಬಂದಾಗ ಕಂಪನಿಯು ತನ್ನ ಎನ್‌ಆರ್‌ಜಿ ಮಾದರಿಯನ್ನು ಸಾಲಿನಿಂದ ಕಾರನ್ನು ಕೈಬಿಟ್ಟಿತು. ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟ್ ಕಾರು ಒರಟು ಲುಕ್ ಹಾಗೂ ಎಸ್‌ಯುವಿ ಸ್ಟೈಲಿಂಗ್ ಅಂಶಗಳನ್ನು ಹೊಂದಿದೆ.

ಈ ಹೊಸ ಟಿಯಾಗೊ ಎನ್‌ಆರ್‌ಜಿ ಬಾಡಿ ಕ್ಲಾಡಿಂಗ್, ಟೇಲ್‌ಗೇಟ್‌ನಲ್ಲಿ ಬ್ಲಾಕ್ ಪ್ಲಾಸ್ಟಿಕ್ ಅಂಶ ಹಾಗೂ ಎಸ್‌ಯುವಿಯಂತೆ ಕಾಣಲು ರಿ-ಡಿಸೈನ್ ಮಾಡಲಾದ ವ್ಹೀಲ್'ಗಳನ್ನು ಪಡೆಯುವ ಸಾಧ್ಯತೆಗಳಿವೆ. ಈ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರಲಿದೆ.

ಟಾಟಾ ಟಿಯಾಗೊದ ಸ್ಟ್ಯಾಂಡರ್ಡ್ ಮಾದರಿಯು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಈ ಹೊಸ ಮಾದರಿಯ ವಿನ್ಯಾಸವು ಸ್ಟಾಂಡರ್ಡ್ ಟಾಟಾ ಟಿಯಾಗೊ ಮಾದರಿಯನ್ನು ಹೋಲುತ್ತದೆ. ಆದರೆ ಟಿಯಾಗೊ ಎನ್‌ಆರ್‌ಜಿ ಆವೃತ್ತಿಯು ಎಸಿ ವೆಂಟ್ಸ್ ಹಾಗೂ ಗೇರ್ ಲಿವರ್ ಸುತ್ತ ಕಾಂಟ್ರಾಸ್ಟ್ ಆರೆಂಜ್ ಕಲರ್ ಫಿನಿಶಿಂಗ್ ಹೊಂದಿರಲಿದೆ.

ಹೊಸ ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟ್ ಕಾರು ಅಪ್ ಹೊಲೆಸ್ಟರಿ ಇರಲಿದ್ದು, ಫ್ಯಾಬ್ರಿಕ್ ಮೇಲೆ ಟ್ರೈ ಆರೋ ವಿನ್ಯಾಸ ಅಂಶಗಳನ್ನು ಬಳಸಬಹುದು. ಫೀಚರ್'ಗಳ ದೃಷ್ಟಿಯಿಂದಲೂ ಹೊಸ ಮಾದರಿಯು ಸ್ಟಾಂಡರ್ಡ್ ಮಾದರಿಯನ್ನು ಹೋಲುತ್ತದೆ ಎಂದು ಹೇಳಲಾಗಿದೆ.

ಇದರಲ್ಲಿ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸ್ಟೀಯರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್, ಹರ್ಮನ್ ಸೌಂಡ್ ಸಿಸ್ಟಂ, ರಿಮೋಟ್ ಲಾಕಿಂಗ್/ಅನ್ ಲಾಕಿಂಗ್ ಹೊಂದಿರುವ 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ.

ಇನ್ನು ಸುರಕ್ಷತಾ ಫೀಚರ್ಸ್ ಗಳ ಬಗ್ಗೆ ಹೇಳುವುದಾದರೆ ಈ ಕಾರು ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ಕ್ಯಾಮರಾ ಹೊಂದಿರುವ ರೇರ್ ಪಾರ್ಕಿಂಗ್ ಸೆನ್ಸಾರ್ ಗಳನ್ನು ಪಡೆಯುವ ಸಾಧ್ಯತೆಗಳಿವೆ.

ಟಾಟಾ ಮೋಟಾರ್ಸ್ ಕಂಪನಿಯು ಈ ಮಾದರಿಯ ಮೆಕಾನಿಕಲ್ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ. ಇದರಲ್ಲಿ 1.2 ಲೀಟರ್ ರೆವೊಟ್ರಾನ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ 86 ಬಿಹೆಚ್‌ಪಿ ಪವರ್ ಹಾಗೂ 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಬಹುದು.


Click it and Unblock the Notifications








