ಹೊಸ ಟಾಟಾ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ವಾಕ್‌ರೌಂಡ್ ವಿಡಿಯೋ ಬಹಿರಂಗ

ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಟಿಯಾಗೋ ಹ್ಯಾಚ್‌ಬ್ಯಾಕ್ ಮಾದರಿಗಾಗಿ ಎಕ್ಸ್‌ಟಿಒ ಎಂಬ ಹೊಸ ವೆರಿಯೆಂಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಸದ್ದಿಲ್ಲದೆ ಪರಿಚಯಿಸಿದೆ. ಈ ಹೊಸ ಟಾಟಾ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.5.47 ಲಕ್ಷಗಳಾಗಿದೆ.

ಹೊಸ ಟಾಟಾ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ವಾಕ್‌ರೌಂಡ್ ವಿಡಿಯೋ ಬಹಿರಂಗ

ಟಾಟಾ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ಎಂಟ್ರಿ ಲೆವೆಲ್ ಎಕ್ಸ್‌ಇ ಮತ್ತು ಎಕ್ಸ್‌ಟಿ ವೆರಿಯೆಂಟ್ ಗಳ ನಡುವೆ ಇರುತ್ತದೆ. ಇನ್ನು ಈ ಹೊಸ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ನಲ್ಲಿ 1.2 ಎಲ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಮಾತ್ರ ಜೋಡಿಸಲಾಗಿದೆ. ಈ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ಮಾದರಿಯ ವಾಕ್ ರೌಂಡ್ ವಿಡಿಯೋವನ್ನು ಆಟೋಟ್ರೆಂಡ್ ಟಿವಿಯು ಯುಟ್ಯೂಬ್ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

ಹೊಸ ಟಾಟಾ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ವಾಕ್‌ರೌಂಡ್ ವಿಡಿಯೋ ಬಹಿರಂಗ

2021ರ ಟಾಟಾ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ಸ್ಪೀಕರ್‌ಗಳ ಆಡಿಯೋ ಸಿಸ್ಟಂ ಮತ್ತು ಸ್ಟೀಯರಿಂಗ್ ಮೌಂಟೆಡ್ ಫೋನ್ ಮತ್ತು ಆಡಿಯೋ ಕಂಟ್ರೋಲ್ ಗಳನ್ನು ಹೊಂದಿವೆ. ಆದರೆ ಇದರಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ಹರ್ಮನ್ ಮ್ಯೂಸಿಕ್ ಸಿಸ್ಟಂ, ಸ್ಪೀಡ್ ಡಿಪೆಂಡೆಂಟ್ ವಾಲ್ಯೂಮ್ ಕಂಟ್ರೋಲ್ ಮತ್ತು ಯುಎಸ್‌ಬಿ ಜೊತೆಗೆ ಎಎಂ/ಎಫ್‌ಎಂನಂತಹ ಕೆಲವು ಪ್ರಮುಖ ಫೀಚರ್ಸ್ ಗಳನ್ನು ಕಳೆದುಕೊಳ್ಳುತ್ತದೆ.

ಹೊಸ ಟಾಟಾ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ವಾಕ್‌ರೌಂಡ್ ವಿಡಿಯೋ ಬಹಿರಂಗ

ಈ ಹೊಸ ಎಕ್ಸ್‌ಟಿಒ ವೆರಿಯೆಂಟ್ ಬಾಡಿ-ಕಲರ್ ಬಂಪರ್, 14-ಇಂಚಿನ ಸ್ಟೀಲ್ ರಿಮ್ಸ್, ಡ್ಯುಯಲ್ ಟೋನ್ ಇಂಟೀರಿಯರ್ ಥೀಮ್, 2.5 ಇಂಚಿನ ಎಂಐಡಿ, ಟ್ಯಾಕೋಮೀಟರ್, ಟಿಲ್ಟ್ ಮತ್ತು ಪವರ್ ಸ್ಟೀರಿಂಗ್, ಮಲ್ಟಿ ಡ್ರೈವ್ ಮೋಡ್‌ಗಳು ಸೇರಿದಂತೆ ಎಂಟ್ರಿ-ಲೆವೆಲ್ ಎಕ್ಸ್‌ಇ ರೂಪಾಂತರದಲ್ಲಿ ನೀಡಲಾಗುವ ಎಲ್ಲಾ ಫೂಚರ್ಸ್ ಗಳನ್ನು ನೀಡಿದ್ದಾರೆ.

ಹೊಸ ಟಾಟಾ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ವಾಕ್‌ರೌಂಡ್ ವಿಡಿಯೋ ಬಹಿರಂಗ

ಇದರೊಂದಿಗೆ ಇಂಟಿಗ್ರೇಟೆಡ್ ರಿಯರ್ ಹೆಡ್ ರೆಸ್ಟ್, ಎಬಿಎಸ್ ಜೊತೆ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸರ್ಸ್, ಸ್ಪೀಡ್ ಅಲರ್ಟ್, ಡ್ಯುಯಲ್ ಏರ್‌ಬ್ಯಾಗ್ ಮತ್ತು ಹೆಚ್ಚಿನ ಸುರಕ್ಷತಾ ಫೀಚರ್ಸ್ ಗಳನ್ನು ಕೂಡ ಒಳಗೊಂಡಿವೆ.

ಹೊಸ ಟಾಟಾ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ವಾಕ್‌ರೌಂಡ್ ವಿಡಿಯೋ ಬಹಿರಂಗ

2021ರ ಟಾಟಾ ಟಿಯಾಗೋ ಮಾದರಿಯು 6 ಮ್ಯಾನುಯಲ್ ವೆರಿಯೆಂಟ್ ಗಳು ಮತ್ತು 4 ಆಟೋಮ್ಯಾಟಿಕ್ ವೆರಿಯೆಂಟ್ ಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಟಾಟಾ ಟಿಯಾಗೋ ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದಾದ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ.

ಹೊಸ ಟಾಟಾ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ವಾಕ್‌ರೌಂಡ್ ವಿಡಿಯೋ ಬಹಿರಂಗ

ಟಾಟಾ ಟಿಯಾಗೋವನ್ನು ಮೊದಲ ಬಾರಿಗೆ 2016 ರಲ್ಲಿ ಪರಿಚಯಿಸಲಾಯಿತು ಮತ್ತು ಇದು ಬ್ರ್ಯಾಂಡ್‌ಗಾಗಿ ಹೊಸ ವಿನ್ಯಾಸ ಭಾಷೆಯನ್ನು ಪರಿಚಯಿಸಿತು, ಇದನ್ನು ಟೀಗೊರ್ ಮತ್ತು ನೆಕ್ಸಾನ್‌ನಂತಹ ಇತರ ಮಾದರಿಗಳು ಅನುಸರಿಸುತ್ತವೆ.

ಟಾಟಾ ಟಿಯಾಗೋ ಕಾರಿನಲ್ಲಿ 1.2-ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 85 ಬಿಹೆಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಟಾಟಾ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ವಾಕ್‌ರೌಂಡ್ ವಿಡಿಯೋ ಬಹಿರಂಗ

2021ರ ಟಾಟಾ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ಪರಿಚಯಿಸಲು ಮತ್ತೊಂದು ಕಾರಣವೆಂದರೆ, ಎಕ್ಸ್‌ಟಿ ರೂಪಾಂತರವು ಸಾಲಿನಲ್ಲಿ ಹೆಚ್ಚು ಬೇಡಿಕೆಯಿರುವ ರೂಪಾಂತರವಾಗಿದೆ. ಆದರೆ ಇದರ ಪೂರೈಕೆ ಕೊರತೆ ಇರುವುದರಿಂದ, ಟಿಯಾಗೋಗೆ ಬುಕ್ಕಿಂಗ್ ಅವದಿ ಹೆಚ್ಚುತ್ತಿದೆ ಮತ್ತು ಬುಕ್ಕಿಂಗ್ ನಷ್ಟವನ್ನು ತಪ್ಪಿಸಲು ಟಾಟಾ ಈ ಹೊಸ ವೆರಿಯೆಂಟ್ ಅನ್ನು ಪರಿಚಯಿಸಿದೆ.

ಹೊಸ ಟಾಟಾ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ವಾಕ್‌ರೌಂಡ್ ವಿಡಿಯೋ ಬಹಿರಂಗ

ಗ್ರಾಹಕರು ಎಕ್ಸ್‌ಟಿಒ ರೂಪಾಂತರವನ್ನು ಕೂಡ ಆರಿಸಿಕೊಳ್ಳಬಹುದು ಮತ್ತು ನಂತರ ಆಫ್ಟರ್ ಮಾರ್ಕೆಂಟ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಅಳವಡಿಸಬಹುದಾಗಿದೆ. ಇನ್ನು ಟಾಟಾ ಕಂಪನಿಯು ಈ ವರ್ಷದ ಕೊನೆಯಲ್ಲಿ ಪ್ರೊಡಕ್ಷನ್-ಸ್ಪೆಕ್ ಹೆಚ್‌ಬಿಎಕ್ಸ್ ಮೈಕ್ರೊ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.

Image Courtesy: AutoTrend TV

Most Read Articles

Kannada
English summary
New Tata Tiago XTO in A Walkaround Video., Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X