ಡೀಲರ್ಸ್ ಯಾರ್ಡ್ ತಲುಪಿದ ಹೊಸ ಫೀಚರ್ಸ್ ಒಳಗೊಂಡ ಟಿಯಾಗೋ ಲಿಮಿಟೆಡ್ ಎಡಿಷನ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಮಾದರಿಯಾದ ಟಿಯಾಗೋ ಕಾರಿನಲ್ಲಿ ಸೀಮಿತ ಅವಧಿಗಾಗಿ ಲಿಮಿಟೆಡ್ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ಸ್ಟ್ಯಾಂಡರ್ಡ್ ಎಕ್ಸ್‌ಟಿ ಆವೃತ್ತಿಯನ್ನು ಆಧರಿಸಿ ಮಾರುಕಟ್ಟೆ ಪ್ರವೇಶಿಸಿದೆ.

ಡೀಲರ್ಸ್ ಯಾರ್ಡ್ ತಲುಪಿದ ಹೊಸ ಫೀಚರ್ಸ್ ಒಳಗೊಂಡ ಟಿಯಾಗೋ ಲಿಮಿಟೆಡ್ ಎಡಿಷನ್

ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಖರೀದಿದಾರರನ್ನು ಸೆಳೆಯಲು ಲಿಮಿಟೆಡ್ ಎಡಿಷನ್ ಮೂಲಕ ಎಕ್ಸ್‌ಟಿ ಮಾದರಿಯಲ್ಲಿ ಕೆಲವು ಹೆಚ್ಚುವರಿ ಫೀಚರ್ಸ್ ಸೇರಿಸಲಾಗಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5.79 ಲಕ್ಷ ಬೆಲೆ ಹೊಂದಿದೆ. ಲಿಮಿಟೆಡ್ ಎಡಿಷನ್ ಮಾದರಿಯು ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಮಾದರಿಗಳ ನಡುವಿನ ಸ್ಥಾನ ಪಡೆದುಕೊಂಡಿದ್ದು, ಎಕ್ಸ್‌ಟಿ ಮಾದರಿಗಿಂತಲೂ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ.

ಡೀಲರ್ಸ್ ಯಾರ್ಡ್ ತಲುಪಿದ ಹೊಸ ಫೀಚರ್ಸ್ ಒಳಗೊಂಡ ಟಿಯಾಗೋ ಲಿಮಿಟೆಡ್ ಎಡಿಷನ್

ಲಿಮಿಟೆಡ್ ಎಡಿಷನ್‌ ಟಿಯಾಗೋ ಕಾರಿನಲ್ಲಿ ಟಾಟಾ ಕಂಪನಿಯು 14-ಇಂಚಿನ ಹೊಸ ವಿನ್ಯಾಸದ ಅಲಾಯ್ ವೀಲ್ಹ್, ವಾಯ್ಸ್ ಕಮಾಂಡ್ ಸರ್ಪೊಟ್ ಮಾಡುವ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆನ್ ಬೋರ್ಡ್ ನ್ಯಾವಿಷನ್ ಸೌಲಭ್ಯವನ್ನು ಪಡೆದುಕೊಂಡಿದೆ.

ಡೀಲರ್ಸ್ ಯಾರ್ಡ್ ತಲುಪಿದ ಹೊಸ ಫೀಚರ್ಸ್ ಒಳಗೊಂಡ ಟಿಯಾಗೋ ಲಿಮಿಟೆಡ್ ಎಡಿಷನ್

ಇದರ ಹೊರತಾಗಿ ಹೊಸ ಕಾರಿನಲ್ಲಿ ಫೀಚರ್ಸ್‌ಗಳು ಎಕ್ಸ್‌ಟಿ ಮಾದರಿಗಳಿಗೆ ಸಮನಾಗಿದ್ದು, ಹೆಚ್ಚುವರಿ ಫೀಚರ್ಸ್‌ಗಳಿಂದಾಗಿ ಲಿಮಿಟೆಡ್ ಎಡಿಷನ್ ಮಾದರಿಯು ಎಕ್ಸ್‌ಟಿ ಆವೃತ್ತಿಗಿಂತಲೂ ರೂ. 29 ಸಾವಿರ ದುಬಾರಿಯಾಗಿದ್ದರೆ ಎಕ್ಸ್‌ಜೆಡ್ ಆವೃತ್ತಿಗಿಂತಲೂ ರೂ. 16 ಸಾವಿರ ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿದೆ.

ಡೀಲರ್ಸ್ ಯಾರ್ಡ್ ತಲುಪಿದ ಹೊಸ ಫೀಚರ್ಸ್ ಒಳಗೊಂಡ ಟಿಯಾಗೋ ಲಿಮಿಟೆಡ್ ಎಡಿಷನ್

ಲಿಮಿಟೆಡ್ ಎಡಿಷನ್ ಕಾರಿನಲ್ಲಿ ಸ್ಟ್ಯಾಂಡರ್ಡ್ ಮಾದರಿಯೆಂತೆ 14-ಇಂಚಿನ ಅಲಾಯ್ ವೀಲ್ಹ್ ನೀಡಿದ್ದರೂ ಬ್ಲ್ಯಾಕ್ಔಟ್ ವಿನ್ಯಾಸ ಪಡೆದುಕೊಂಡಿದ್ದು, ಟಿಯಾಗೋ ಟಾಪ್ ಎಂಡ್ ಮಾದರಿಯಾದ ಎಕ್ಸ್‌ಜೆಡ್ ಪ್ಲಸ್‌ನಲ್ಲಿ ಮಾತ್ರ 15-ಇಂಚಿನ ಅಯಾಲ್ ವೀಲ್ಹ್ ಹೊಂದಿದೆ. ಇದರ ಹೊರತಾಗಿ ಲಿಮಿಟೆಡ್ ಎಡಿಷನ್ ಮಾದರಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ತಾಂತ್ರಿಕ ಅಂಶಗಳನ್ನೇ ಪಡೆದುಕೊಂಡಿದ್ದು, ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರನ್ನು ಸೆಳೆಯಲು ಹೊಸ ಆವೃತ್ತಿಯನ್ನು ಸೀಮಿತ ಅವಧಿಗಾಗಿ 2 ಸಾವಿರ ಯುನಿಟ್ ಮಾರಾಟ ಮಾಡಲು ನಿರ್ಧರಿಸಿದೆ.

ಡೀಲರ್ಸ್ ಯಾರ್ಡ್ ತಲುಪಿದ ಹೊಸ ಫೀಚರ್ಸ್ ಒಳಗೊಂಡ ಟಿಯಾಗೋ ಲಿಮಿಟೆಡ್ ಎಡಿಷನ್

ಈ ಹಿನ್ನಲೆಯಲ್ಲಿ ಲಿಮಿಟೆಡ್ ಎಡಿಷನ್ ಮಾದರಿಯು ಮುಂದಿನ ಕೆಲವೇ ದಿನಗಳವರೆಗೆ ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ನಿಗದಿತ ಸಂಖ್ಯೆಯ ಮಾರಾಟ ನಂತರದ ಸ್ಟ್ಯಾಂಡರ್ಡ್ ಮಾದರಿಗಳು ಮಾತ್ರ ಎಂದಿನಂತೆ ಖರೀದಿಗೆ ಲಭ್ಯವಿರುತ್ತವೆ.

ಡೀಲರ್ಸ್ ಯಾರ್ಡ್ ತಲುಪಿದ ಹೊಸ ಫೀಚರ್ಸ್ ಒಳಗೊಂಡ ಟಿಯಾಗೋ ಲಿಮಿಟೆಡ್ ಎಡಿಷನ್

ಟಿಯಾಗೋ ಲಿಮಿಟೆಡ್ ಎಡಿಷನ್‌ನಲ್ಲಿ ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಮಾದರಿಯಲ್ಲಿರುವಂತೆ ಆನ್‌ಬೋರ್ಡ್ ನ್ಯಾವಿಗೇಷನ್, 5-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ರಿಯರ್ ಪಾರ್ಸೆಲ್ ಟ್ರೆ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಫಾಲೋ ಮಿ ಹೋಂ ಹೆಡ್‌ಲೈಟ್ಸ್, 4-ಸ್ಪೀಕರ್ಸ್, ಕೀ ಲೆಸ್ ಎಂಟ್ರಿ, ಸ್ಪೀರಿಂಗ್ ಮೌಂಟೆಡ್ ಕಂಟ್ರೋಲ್ ಸೇರಿದಂತೆ ಹಲವು ಸೌಲಭ್ಯಗಳಿವೆ.

MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಇನ್ನು ಟಿಯಾಗೋ ಸ್ಟ್ಯಾಂಡರ್ಡ್ ಕಾರು ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.86 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.85 ಲಕ್ಷ ಬೆಲೆ ಹೊಂದಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಗ್ರಾಹಕರ ಬೇಡಿಕೆಯೆಂತೆ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳನ್ನು ಖರೀದಿ ಮಾಡಬಹುದಾಗಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಡೀಲರ್ಸ್ ಯಾರ್ಡ್ ತಲುಪಿದ ಹೊಸ ಫೀಚರ್ಸ್ ಒಳಗೊಂಡ ಟಿಯಾಗೋ ಲಿಮಿಟೆಡ್ ಎಡಿಷನ್

ಲಿಮಿಟೆಡ್ ಎಡಿಷನ್ ಟಿಯಾಗೋ ಆವೃತ್ತಿಯು ಮ್ಯಾನುವಲ್ ಮಾದರಿಯಾಗಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಹ್ಯುಂಡೈ ಸ್ಯಾಂಟ್ರೋ, ಮಾರುತಿ ಸುಜುಕಿ ಸೆಲೆರಿಯೊ ಮತ್ತು ವ್ಯಾಗನ್ಆರ್ ಜೊತೆಗೆ ದಟ್ಸನ್ ಗೊ ಕಾರುಗಳಿಗೆ ಇದು ಮತ್ತಷ್ಟು ಪೈಪೋಟಿ ನೀಡಲಿದೆ.

Article Published On: Monday, February 15, 2021, 17:44 [IST]
English summary
Tata Tiago Limited Edition Arrives At Dealerships. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+