ಹೊಸ ಬಣ್ಣದ ಆಯ್ಕೆಯನ್ನು ಪಡೆಯಲಿದೆ ಟಾಟಾ ಟಿಯಾಗೋ

ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಕಾರು ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಕಾರುಗಳು ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ.

ಹೊಸ ಬಣ್ಣದ ಆಯ್ಕೆಯನ್ನು ಪಡೆಯಲಿದೆ ಟಾಟಾ ಟಿಯಾಗೋ

ಟಾಟಾ ಹೊಸ ಮಾರುಕಟ್ಟೆ ತಂತ್ರವನ್ನು ಅನುಸರಿಸುತ್ತಿದ್ದಾರೆ. ವರದಿಗಳ ಪ್ರಕಾರ, ಟಾಟಾ ಟಿಯಾಗೋಎಕ್ಸ್‌ಇ ಇನ್ನು ಮುಂದೆ ಟೆಕ್ಟೋನಿಕ್ ಬ್ಲೂ ಮತ್ತು ವಿಕ್ಟರಿ ಯೆಲ್ಲೋ ಬಣ್ಣಗಳಲ್ಲಿ ಲಭ್ಯವಿರುವುದಿಲ್ಲ. ಟೊಯಾಗೋದಲ್ಲಿ ಹೊಸ ಯೆಲ್ಲೋ(ಹಳದಿ) ಬಣ್ಣದ ಆಯ್ಕೆಯನ್ನು ಪರಿಚಯಿಸುವ ಬಗ್ಗೆ ಟಾಟಾಗೆ ಯಾವುದೇ ಯೋಜನೆಗಳಿಲ್ಲವಾದರೂ, ಟಾಟಾ ಬ್ಲೂ ಬಣ್ಣವನ್ನು ಹಿಂತಿರುಗಿಸಲು ಯೋಜಿಸುತ್ತಿದೆ, ಆದರೆ ವಿಭಿನ್ನ ಅರಿಝೋನಾ ಬ್ಲೂ ಬಣ್ಣವಾಗಿರುತ್ತದೆ.

ಹೊಸ ಬಣ್ಣದ ಆಯ್ಕೆಯನ್ನು ಪಡೆಯಲಿದೆ ಟಾಟಾ ಟಿಯಾಗೋ

ಟೆಕ್ಟೋನಿಕ್ ಬ್ಲೂ ಮತ್ತು ವಿಕ್ಟರಿ ಯೆಲ್ಲೋ ಬಣ್ಣಗಳ ಆಯ್ಕೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಉಳಿದ ಟ್ರಿಮ್‌ಗಳಿಗಾಗಿ ಫೆಬ್ರವರಿ 21 ರ ಕೊನೆಯ ವಾರದಲ್ಲಿ ಟೆಕ್ಟೋನಿಕ್ ನೀಲಿ ಬಣ್ಣವನ್ನು ಬ್ಲೂನಿಂದ ಬದಲಾಯಿಸಲಾಗುವುದು, ಆದರೆ ವಿಕ್ಟರಿ ಯೆಲ್ಲೋ ಬಣ್ಣವನ್ನು ಮಾರ್ಚ್ 21ರ ಕೊನೆಯ ವಾರದಲ್ಲಿ ಸ್ಥಗಿತಗೊಳಿಸಬಹುದು.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ಬಣ್ಣದ ಆಯ್ಕೆಯನ್ನು ಪಡೆಯಲಿದೆ ಟಾಟಾ ಟಿಯಾಗೋ

ಟಾಟಾ ಮೋಟಾರ್ಸ್ ಕಂಪನಿಯ ತನ್ನ ಜನಪ್ರಿಯ ಟಿಯಾಗೋ ಕಾರಿನ ಉತ್ಪಾದನೆಯಲ್ಲಿ ಹೊಸ ಇತ್ತೀಚೆಗೆ ಮೈಲಿಗಲ್ಲು ಸಾಧಿಸಿದೆ. ಟಾಟಾ ಮೋಟಾರ್ಸ್ ತನ್ನ 3,00,000ನೇ ಟಿಯಾಗೋ ಕಾರನ್ನು ಉತ್ಪಾದಿಸಲಾಗಿದೆ.

ಹೊಸ ಬಣ್ಣದ ಆಯ್ಕೆಯನ್ನು ಪಡೆಯಲಿದೆ ಟಾಟಾ ಟಿಯಾಗೋ

ಬ್ರ್ಯಾಂಡ್‌ನ ಇಂಪ್ಯಾಕ್ಟ್ ವಿನ್ಯಾಸದಡಿಯಲ್ಲಿ ಉತ್ಪಾದಿಸಿದ ಮೊದಲ ಮಾದರಿ ಇದಾಗಿದೆ. ಟಿಯಾಗೋ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ 2016ರಲ್ಲಿ ಪ್ರಾರಂಭಿಸಲಾಗಿತ್ತು. ತಂತ್ರಜ್ಞಾನ ಮತ್ತು ಡ್ರೈವಿಂಗ್ ಡೈನಾಮಿಕ್ಸ್ ವಿಷಯದಲ್ಲಿ ಇದು ಬ್ರ್ಯಾಂಡ್‌ಗೆ ಅದ್ಭುತ ಮಾದರಿಯಾಗಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ಬಣ್ಣದ ಆಯ್ಕೆಯನ್ನು ಪಡೆಯಲಿದೆ ಟಾಟಾ ಟಿಯಾಗೋ

2018ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಎಂಬ ಖ್ಯಾತಿಯನ್ನು ಇದು ಹೊಂದಿದೆ. ಈ ವರ್ಷದ ಆರಂಭದಲ್ಲಿ ಟಾಟಾ ಕಂಪನಿಯು ಬಿಎಸ್ 6 ಆವೃತ್ತಿಯಲ್ಲಿ ಟಿಯಾಗೋ ಕಾರನ್ನು ಬಿಡುಗಡೆಗೊಳಿಸಿತು. ನಂತರದಲ್ಲಿ ಇದು ಬ್ರ್ಯಾಂಡ್‌ನ ಹೊಸ 'ಫಾರೆವರ್' ಮಾದರಿಗಳ ಭಾಗವಾಯಿತು.

ಹೊಸ ಬಣ್ಣದ ಆಯ್ಕೆಯನ್ನು ಪಡೆಯಲಿದೆ ಟಾಟಾ ಟಿಯಾಗೋ

ಟಾಟಾ ಟಿಯಾಗೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ 4-ಸ್ಟಾರ್ ಅಡಲ್ಟ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಟಿಯಾಗೋ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಏರ್‌ಬ್ಯಾಗ್‌ಗಳು, (ಎಬಿಎಸ್) ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ ವಿತ್ (ಸಿಎಸ್‌ಸಿ) ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು (ಇಬಿಡಿ), ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡೆಲಿವೆರಿ ಮತ್ತು ಪಾರ್ಕಿಕ್ ಅಸಿಸ್ಟ್ ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಬಣ್ಣದ ಆಯ್ಕೆಯನ್ನು ಪಡೆಯಲಿದೆ ಟಾಟಾ ಟಿಯಾಗೋ

ಟಾಟಾ ಟಿಯಾಗೋ 1.2-ಲೀಟರ್, ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 85 ಬಿಹೆಚ್‍ಪಿ ಪವರ್ ಮತ್ತು 113 ಎನಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಫೀಡ್ ಎಎಂಟಿ ಯುನಿಟ್ ಅನ್ನು ಜೋಡಿಸಲಾಗಿದೆ.

ಹೊಸ ಬಣ್ಣದ ಆಯ್ಕೆಯನ್ನು ಪಡೆಯಲಿದೆ ಟಾಟಾ ಟಿಯಾಗೋ

ಟಿಯಾಗೋ ಟಾಟಾ ಕಾರುಗಳಲ್ಲಿ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಟಾಟಾ ಟಿಯಾಗೋ ಕಾರು ಭಾರತೀಯ ಮಾರುಕಟ್ಟೆಯಲ್ಲಿ ದಟ್ಸನ್ ಗೋ, ಹ್ಯುಂಡೈ ಸ್ಯಾಂಟ್ರೊ, ಮಾರುತಿ ಸುಜುಕಿ ಸೆಲೆರಿಯೊ ಮತ್ತು ವ್ಯಾಗನ್ಆರ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Tata Tiago To Get New Arizona Blue Colour. Read In Kannada.
Story first published: Saturday, February 6, 2021, 20:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X