ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಟೆಸ್ಲಾ ಸೈಬರ್ ಟ್ರಕ್ ಹೊಸ ದಾಖಲೆ

ಟೆಸ್ಲಾ ಬಹುನೀರಿಕ್ಷಿತ ಸೈಬರ್‌ಟ್ರಕ್ ಮಾದರಿಯು ಈ ವರ್ಷ ಕೊನೆಯಲ್ಲಿ ಬಿಡುಗಡೆಯ ಸಿದ್ದತೆಯಲ್ಲಿದ್ದು, ಹೊಸ ಪಿಕ್ ಅಪ್ ಟ್ರಕ್ ಖರೀದಿಗಾಗಿ ಬರೋಬ್ಬರಿ 10 ಲಕ್ಷ ಗ್ರಾಹಕರಿಂದ ಬುಕ್ಕಿಂಗ್ ಪಡೆದುಕೊಂಡಿದೆ.

ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಟೆಸ್ಲಾ ಸೈಬರ್ ಟ್ರಕ್ ಹೊಸ ದಾಖಲೆ

ಮಾಡೆಲ್ ವೈ ಮತ್ತು ರೋಡ್‌ಸ್ಟರ್ ಕಾರಿನ ನಡುವಿನ ಸ್ಥಾನ ಪಡೆದುಕೊಂಡಿರುವ ಸೈಬರ್‌ಟ್ರಕ್ ಪಿಕ್ಅಪ್ ವಾಹನವು ವಿಶೇಷ ವಿನ್ಯಾಸದೊಂದಿಗೆ ರಸ್ತೆಗಿಳಿಯು ಸಿದ್ದವಾಗಿದ್ದು, ಹೊರಭಾಗದ ವಿನ್ಯಾಸವು ತುಸು ವಿಚಿತ್ರ ಎನ್ನಿಸಿದರೂ ಸಹ ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳೊಂದಿಗೆ ಬಿಡುಗಡೆಗೊಳ್ಳಲಿರುವ ಹೊಸ ವಾಹನವು ಪಿಕ್ಅಪ್ ಟ್ರಕ್‌ಗಳಿಗೆ ಬಹುದೊಡ್ಡ ಮಾರುಕಟ್ಟೆಯಾಗಿರುವ ಅಮೆರಿಕಲ್ಲೇ ಭಾರೀ ಪ್ರಮಾಣದಲ್ಲಿ ಮಾರಾಟಗೊಳ್ಳುವ ನೀರಿಕ್ಷೆಯಲ್ಲಿದೆ.

ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಟೆಸ್ಲಾ ಸೈಬರ್ ಟ್ರಕ್ ಹೊಸ ದಾಖಲೆ

ಸಾಮಾನ್ಯ ರಸ್ತೆಗಳಲ್ಲಿ ಮಾತ್ರವಲ್ಲದೇ ಆಪ್ ರೋಡ್‌ಗಳಲ್ಲೂ ಬಲಶಾಲಿ ಡ್ರೈವ್ ಸಿಸ್ಟಂ ಸೌಲಭ್ಯವನ್ನು ಹೊಂದಿರುವ ಸೈಬರ್‌ಟ್ರಕ್ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಪಡೆದುಕೊಂಡಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದಾಗಿದೆ.

ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಟೆಸ್ಲಾ ಸೈಬರ್ ಟ್ರಕ್ ಹೊಸ ದಾಖಲೆ

ಆರಂಭಿಕ ಆವೃತ್ತಿಯು ಸಿಂಗಲ್ ಮೋಟಾರ್ ಪ್ರೇರಣೆಯೊಂದಿಗೆ ಪ್ರತಿ ಚಾರ್ಜ್‌ಗೆ 450ಕಿ.ಮೀ ಅಧಿಕ ಮೈಲೇಜ್ ಹಿಂದಿರುಗಿಸಲಿದ್ದು, ಕೇವಲ 6.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮೀ ವೇಗದ ಪಡೆದುಕೊಳ್ಳುವ ಮೂಲಕ ಗರಿಷ್ಠ 3,400 ಕೆ.ಜಿ ಎಳೆಯುವ ಸಾಮರ್ಥ್ಯವನ್ನು ಹೊಂದಿದೆ.

ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಟೆಸ್ಲಾ ಸೈಬರ್ ಟ್ರಕ್ ಹೊಸ ದಾಖಲೆ

ಮಧ್ಯಮ ಗಾತ್ರದ ಆವೃತ್ತಿಯು ಡ್ಯುಯಲ್ ಮೋಟಾರ್ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಕೇವಲ 4.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗವನ್ನು ಪಡೆಯುವ ಮೂಲಕ 4,500 ಕೆ.ಜಿ ಎಳೆಯುವ ಸಾಮರ್ಥ್ಯವನ್ನು ಹೊಂದಿದೆ.

ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಟೆಸ್ಲಾ ಸೈಬರ್ ಟ್ರಕ್ ಹೊಸ ದಾಖಲೆ

ಕೊನೆಯದಾಗಿ ಹೈ ಎಂಡ್ ಮಾದರಿಯು ತ್ರಿಬಲ್ ಮೋಟಾರ್ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್‌ಗೆ 800ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಕೇವಲ 3 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುತ್ತದೆ.

ಸದ್ಯ ಇದು ಅನಾವರಣಗೊಳಿಸಿರುವ ಪಿಕ್ಅಪ್ ಟ್ರಕ್ ಆವೃತ್ತಿಯಾಗಿದ್ದು, ಬಿಡುಗಡೆಯ ಹೊತ್ತಿಗೆ ಇನ್ನು ಕೆಲವು ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಆದರೂ ಶೇ.90 ರಷ್ಟು ಉತ್ಪಾದನಾ ಆವೃತ್ತಿಯಲ್ಲೂ ಇದೇ ವಿನ್ಯಾಸವನ್ನೇ ಪಡೆದುಕೊಳ್ಳಲಿದ್ದು, ಬೆಲೆ ಕೂಡಾ ಆಕರ್ಷಕವಾಗಿರಲಿವೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಟೆಸ್ಲಾ ಸೈಬರ್ ಟ್ರಕ್ ಹೊಸ ದಾಖಲೆ

ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಸೈಬರ್‌ಟ್ರಕ್ ನಿರ್ಮಾಣಕ್ಕೆ ಬಳಸಲಾಗಿರುವ ಸ್ಟೈನ್ ಲೆಸ್ ಸ್ಟೀಲ್ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡಲಿದ್ದು, ಸ್ಪೇಸ್‌ ಎಕ್ಸ್‌ ರಾಕೆಟ್‌ ಗಳಲ್ಲಿ ಬಳಸಲಾಗುವ ದಪ್ಪ ಸ್ಟೈನ್‌ ಲೆಸ್ ಸ್ಟೀಲ್ ಇದಾಗಿದೆಯೆಂತೆ.

ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಟೆಸ್ಲಾ ಸೈಬರ್ ಟ್ರಕ್ ಹೊಸ ದಾಖಲೆ

ಬಿಡುಗಡೆಯ ಅವಧಿ ಮತ್ತು ಬೆಲೆ (ಅಂದಾಜು)

2021ರ ಕೊನೆಯಲ್ಲಿ ಅಥವಾ 2022ರ ಆರಂಭದಲ್ಲಿ ಸೈಬರ್‌ಟ್ರಕ್ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದ್ದು, ಆರಂಭಿಕ ಆವೃತ್ತಿಯು ಭಾರತೀಯ ಬೆಲೆಯಲ್ಲಿ ರೂ.40 ಲಕ್ಷದಿಂದ ಹೈ ಎಂಡ್ ಮಾದರಿಯು ರೂ.60 ಲಕ್ಷ ಬೆಲೆ ಪಡೆದುಕೊಳ್ಳಬಹುದು ಎನ್ನಲಾಗಿದೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಟೆಸ್ಲಾ ಸೈಬರ್ ಟ್ರಕ್ ಹೊಸ ದಾಖಲೆ

ಇನ್ನು ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆ ಬರುತ್ತಿರುವ ಹಿನ್ನಲೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಇನ್ನು ಹಲವು ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಸಿದ್ದಪಡಿಸಿರುವ ಟೆಸ್ಲಾ ಕಂಪನಿಯು ಮುಂಬರುವ ಅಗಸ್ಟ್ ಹೊತ್ತಿಗೆ ಭಾರತದಲ್ಲೂ ತನ್ನ ಎಲೆಕ್ಟ್ರಿಕ್ ಕಾರು ಉತ್ಪನ್ನಗಳ ಮಾರಾಟವನ್ನು ಅಧಿಕೃತವಾಗಿ ಆರಂಭಿಸುವ ಯೋಜನೆಯಲ್ಲಿದ್ದು, ವ್ಯಯಕ್ತಿಯ ಬಳಕೆಯ ಮತ್ತು ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ವಾಹನಗಳನ್ನು ಟೆಸ್ಲಾ ಮಾರಾಟ ಮಾಡಲಿದೆ.

More from DriveSpark

Article Published On: Saturday, May 29, 2021, 21:03 [IST]
English summary
Tesla Cyber Truck Gets Over 1 Million Bookings Before Launch. Read in Kannada.
Read more on ಟೆಸ್ಲಾ tesla
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+