ಕ್ಯಾಮರಾ ಖರೀದಿಗಾಗಿ ಭಾರೀ ಮೊತ್ತದ ಒಪ್ಪಂದ ಮಾಡಿಕೊಂಡ ಟೆಸ್ಲಾ

ಟೆಸ್ಲಾ ಅಮೆರಿಕಾ ಮೂಲದ ಕಾರು ತಯಾರಕ ಕಂಪನಿಯಾಗಿದೆ. ಟೆಸ್ಲಾ ಕಂಪನಿಯು ಕೇವಲ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಉತ್ಪಾದಿಸುತ್ತದೆ. ತನ್ನ ಕಾರುಗಳಿಗೆ ಕ್ಯಾಮರಾಗಳನ್ನು ಖರೀದಿಸಲು ಟೆಸ್ಲಾ ಕಂಪನಿಯು 436 ಮಿಲಿಯನ್ ಡಾಲರ್ ಮೌಲ್ಯದ ಒಪ್ಪಂದ ಮಾಡಿಕೊಂಡಿದೆ.

ಕ್ಯಾಮರಾ ಖರೀದಿಗಾಗಿ ಭಾರೀ ಮೊತ್ತದ ಒಪ್ಪಂದ ಮಾಡಿಕೊಂಡ ಟೆಸ್ಲಾ

ಟೆಸ್ಲಾ ಕಂಪನಿಯು ದಕ್ಷಿಣ ಕೊರಿಯಾ ಮೂಲದ ಸ್ಯಾಮ್‌ಸಂಗ್‌ ಕಂಪನಿಯೊಂದಿಗೆ ಈ ಒಪ್ಪಂದ ಮಾಡಿಕೊಂಡಿದೆ. ಶೀಘ್ರದಲ್ಲೇ ಉತ್ಪಾದನೆಯಾಗಲಿರುವ ಹೊಸ ಎಲೆಕ್ಟ್ರಿಕ್ ಕಾರುಗಳ ಬಳಕೆಗಾಗಿ ಇಷ್ಟು ದೊಡ್ಡ ಸಂಖ್ಯೆಯ ಕ್ಯಾಮೆರಾಗಳನ್ನು ಖರೀದಿಸಲಾಗುತ್ತಿದೆ ಎಂದು ವರದಿಗಳಾಗಿವೆ.

ಕ್ಯಾಮರಾ ಖರೀದಿಗಾಗಿ ಭಾರೀ ಮೊತ್ತದ ಒಪ್ಪಂದ ಮಾಡಿಕೊಂಡ ಟೆಸ್ಲಾ

ಕಂಪನಿಯು ಸೈಬರ್ ಟ್ರಕ್ ಎಂಬ ಹೊಸ ಪಿಕ್ ಅಪ್ ಟ್ರಕ್ ವಾಹನವನ್ನು ವಿತರಿಸಲು ಸಜ್ಜಾಗುತ್ತಿದೆ. ಈ ವಾಹನದಲ್ಲಿ ಬಳಸಲು ಕ್ಯಾಮೆರಾ ಖರೀದಿಸಲಾಗಿದೆ ಎಂದು ಹೇಳಲಾಗಿದೆ.

ಕ್ಯಾಮರಾ ಖರೀದಿಗಾಗಿ ಭಾರೀ ಮೊತ್ತದ ಒಪ್ಪಂದ ಮಾಡಿಕೊಂಡ ಟೆಸ್ಲಾ

ಟೆಸ್ಲಾ ಕಂಪನಿಯು ಸೈಬರ್ ಟ್ರಕ್ ಅನ್ನು 2019ರ ನವೆಂಬರ್‌ನಲ್ಲಿ ಬಿಡುಗಡೆಗೊಳಿಸಿತ್ತು. ಬಿಡುಗಡೆಯಾದ ನಂತರ ಸೈಬರ್ ಟ್ರಕ್‌ಗಳಿಗಾಗಿ ವಿಶ್ವದ ಹಲವು ಭಾಗಗಳಲ್ಲಿ ಬುಕ್ಕಿಂಗ್ ನಡೆಯುತ್ತಿದೆ.

ಕ್ಯಾಮರಾ ಖರೀದಿಗಾಗಿ ಭಾರೀ ಮೊತ್ತದ ಒಪ್ಪಂದ ಮಾಡಿಕೊಂಡ ಟೆಸ್ಲಾ

ಶೀಘ್ರದಲ್ಲಿಯೇ ವಿತರಿಸಬೇಕಾಗಿರುವುದರಿಂದ ಕಂಪನಿಯು ಪಿಕ್ ಅಪ್ ಟ್ರಕ್ ವಾಹನದ ಉತ್ಪಾದನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಕ್ಯಾಮರಾ ಖರೀದಿಸಲು 436 ಮಿಲಿಯನ್ ಡಾಲರ್ ಮೌಲ್ಯದ ಒಪ್ಪಂದ ಮಾಡಿಕೊಂಡ ನಂತರ ಇದು ದೃಢ ಪಟ್ಟಿದೆ.

ಕ್ಯಾಮರಾ ಖರೀದಿಗಾಗಿ ಭಾರೀ ಮೊತ್ತದ ಒಪ್ಪಂದ ಮಾಡಿಕೊಂಡ ಟೆಸ್ಲಾ

ಟೆಸ್ಲಾ ಎಲೆಕ್ಟ್ರಿಕ್ ಕಾರುಗಳು ಆಟೋ ಪೈಲಟ್ ಮೋಡ್'ನಿಂದ ಚಲಿಸುತ್ತವೆ. ಈ ಕಾರಣಕ್ಕೆ ಟೆಸ್ಲಾ ಕಾರುಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಬೇಕಾಗುತ್ತದೆ.ಕಂಪನಿಯು 360 ಡಿಗ್ರಿ ವೀಕ್ಷಣೆ ಹೊಂದಿರುವ ಕ್ಯಾಮೆರಾಗಳನ್ನು ಖರೀದಿಸಲು ಸ್ಯಾಮ್‌ಸಂಗ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಕ್ಯಾಮರಾ ಖರೀದಿಗಾಗಿ ಭಾರೀ ಮೊತ್ತದ ಒಪ್ಪಂದ ಮಾಡಿಕೊಂಡ ಟೆಸ್ಲಾ

ಹೊಸ ಸೈಬರ್ ಟ್ರಕ್, ರೇರ್ ವೀವ್ ಮಿರರ್'ಗಳನ್ನು ಹೊಂದಿರುವುದಿಲ್ಲ. ಬದಲಿಗೆ ಕ್ಯಾಮೆರಾಗಳನ್ನು ಹೊಂದಿರಲಿದೆ. ಈ ಕ್ಯಾಮರಾ ಮೂಲಕ ಕಾರಿನ ಹಿಂದಿನಿಂದ ಬರುವ ವಾಹನಗಳನ್ನು ಕಾರಿನೊಳಗಿರುವ ಪರದೆಯ ಮೂಲಕ ವೀಕ್ಷಿಸಬಹುದು.

ಕ್ಯಾಮರಾ ಖರೀದಿಗಾಗಿ ಭಾರೀ ಮೊತ್ತದ ಒಪ್ಪಂದ ಮಾಡಿಕೊಂಡ ಟೆಸ್ಲಾ

ಸೈಬರ್ ಟ್ರಕ್ ವಾಹನಗಳಲ್ಲಿ ಅಳವಡಿಸಲಾಗುವ ಕ್ಯಾಮರಾಗಳ ಸಹಾಯದಿಂದ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕ್ ಮಾಡಲು ಅನುಕೂಲವಾಗಲಿದೆ. ಸೈಬರ್ ಟ್ರಕ್ ವಾಹನವು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ ಸುಮಾರು 980 ಕಿ.ಮೀಗಳವರೆಗೆ ಚಲಿಸುತ್ತದೆ.

ಕ್ಯಾಮರಾ ಖರೀದಿಗಾಗಿ ಭಾರೀ ಮೊತ್ತದ ಒಪ್ಪಂದ ಮಾಡಿಕೊಂಡ ಟೆಸ್ಲಾ

ಸೈಬರ್ ಟ್ರಕ್ ಎಲೆಕ್ಟ್ರಿಕ್ ವಾಹನವು ಹಲವು ವಿಶೇಷ ಫೀಚರ್'ಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ಸೈಬರ್ ಟ್ರಕ್ ಫಾಸ್ಟ್ ಚಾರ್ಜರ್ ಹಾಗೂಹೆವಿ ಲೋಡಿಂಗ್‌ನಂತಹ ಫೀಚರ್'ಗಳನ್ನು ಹೊಂದುವ ನಿರೀಕ್ಷೆಗಳಿವೆ.

ಕ್ಯಾಮರಾ ಖರೀದಿಗಾಗಿ ಭಾರೀ ಮೊತ್ತದ ಒಪ್ಪಂದ ಮಾಡಿಕೊಂಡ ಟೆಸ್ಲಾ

ಟೆಸ್ಲಾ ಕಂಪನಿಯು ಈ ವಾಹನವು 2021ರಲ್ಲಿ ಮಾರಾಟಕ್ಕೆ ಬರಲಿದೆ ಎಂದು ಘೋಷಿಸಿತ್ತು. ಆದರೆ ಕೋವಿಡ್ -19 ಸಾಂಕ್ರಾಮಿಕದ ಕಾರಣದಿಂದಾಗಿ ಈ ವಾಹನದ ಬಿಡುಗಡೆಯು ವಿಳಂಬವಾಗಿದೆ. ಹೊಸ ಮಾಹಿತಿಗಳ ಪ್ರಕಾರ ಈ ವಾಹನವು 2022ರಲ್ಲಿ ಬಿಡುಗಡೆಯಾಗಲಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
Read more on ಟೆಸ್ಲಾ tesla
English summary
Tesla makes deal with Samsung for camera purchase. Read in Kannada.
Story first published: Tuesday, July 13, 2021, 18:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X