ರೋಡ್ ಟೆಸ್ಟಿಂಗ್‌ನಲ್ಲಿ ಬಿಡುಗಡೆ ಸನೀಹದಲ್ಲಿರುವ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು

ಟೆಸ್ಲಾ(Tesla) ಕಂಪನಿಯು ಭಾರತದಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಬೃಹತ್ ಯೋಜನೆ ರೂಪಿಸುತ್ತಿದ್ದು, 2022ರ ಆರಂಭದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಗಳು ಇವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುವ ವಿಶ್ವಾಸದಲ್ಲಿವೆ.

ರೋಡ್ ಟೆಸ್ಟಿಂಗ್‌ನಲ್ಲಿ ಬಿಡುಗಡೆ ಸನೀಹದಲ್ಲಿರುವ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು

ಭಾರತದಲ್ಲಿ ಟೆಸ್ಲಾ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮಾಡೆಲ್ 3(Model 3) ಮತ್ತು ಮಾಡೆಲ್ ವೈ(Model Y) ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಕಂಪನಿಯು ಹೊಸ ಕಾರುಗಳ ಬಿಡುಗಡೆಗಾಗಿ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಿದೆ.

ರೋಡ್ ಟೆಸ್ಟಿಂಗ್‌ನಲ್ಲಿ ಬಿಡುಗಡೆ ಸನೀಹದಲ್ಲಿರುವ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು

ಮಾಹಿತಿಗಳ ಪ್ರಕಾರ ಕಂಪನಿಯು ಎರಡು ಕಾರು ಮಾದರಿಗಳಿಂದ ತಲಾ ಎರಡು ವೆರಿಯೆಂಟ್ ಬಿಡುಗಡೆ ಮಾಡುವ ನೀರಿಕ್ಷೆಯಿದ್ದು, ಟೆಸ್ಲಾ ಹೊಸ ಕಾರು ಮಧ್ಯಮ ಕ್ರಮಾಂಕದಲ್ಲಿರುವ ಐಷಾರಾಮಿ ಕಾರುಗಳ ಬೆಲೆ ಸಮನಾಗಿ ಮಾರಾಟಗೊಳ್ಳಲಿವೆ.

ರೋಡ್ ಟೆಸ್ಟಿಂಗ್‌ನಲ್ಲಿ ಬಿಡುಗಡೆ ಸನೀಹದಲ್ಲಿರುವ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು

ಟೆಸ್ಲಾ ಕಂಪನಿಯು ಕೇಂದ್ರ ಸಾರಿಗೆ ಇಲಾಖೆಯಿಂದ ಪಡೆದುಕೊಂಡಿರುವ ಅನುಮತಿ ಪತ್ರದಲ್ಲಿ ಪ್ರಮುಖ ನಾಲ್ಕು ವೆರಿಯೆಂಟ್‌ಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಕಂಪನಿಯು ಹೊಸ ಕಾರುಗಳ ಬಿಡುಗಡೆಗೂ ಮುನ್ನ ಪ್ರಮುಖ ನಗರಗಳಲ್ಲಿ ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನಿರ್ಮಾಣ ಮಾಡುವ ಯೋಜನೆಯಲ್ಲಿದೆ.

ರೋಡ್ ಟೆಸ್ಟಿಂಗ್‌ನಲ್ಲಿ ಬಿಡುಗಡೆ ಸನೀಹದಲ್ಲಿರುವ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು

ಹೊಸ ಕಾರುಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆ ಜೊತೆಗೆ ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಾಗುತ್ತಿದ್ದು, ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಈಗಾಗಲೇ ಅಮೆರಿಕದಿಂದ ಆಮದು ಮಾಡಿಕೊಂಡಿರುವ ಕಂಪನಿಯು ಚಾರ್ಜಿಂಗ್ ಸೌಲಭ್ಯವನ್ನು ಅಳವಡಿಸಿಕೊಳ್ಳುತ್ತಿದೆ.

ರೋಡ್ ಟೆಸ್ಟಿಂಗ್‌ನಲ್ಲಿ ಬಿಡುಗಡೆ ಸನೀಹದಲ್ಲಿರುವ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು

ಹೊಸ ಇವಿ ಕಾರುಗಳ ಬಿಡುಗಡೆಯ ಕುರಿತಂತೆ ಇನ್ನು ಕೂಡಾ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಡದ ಟೆಸ್ಲಾ ಕಂಪನಿಯು ಪ್ರಮುಖ ನಾಲ್ಕು ರೂಪಾಂತರಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಅನುಮೋದನೆ ಪಡೆದಿರುವುದು ಮಾತ್ರ ಖಚಿತವಾಗಿದೆ.

ರೋಡ್ ಟೆಸ್ಟಿಂಗ್‌ನಲ್ಲಿ ಬಿಡುಗಡೆ ಸನೀಹದಲ್ಲಿರುವ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು

ಭಾರತದಲ್ಲಿ ಟೆಸ್ಲಾ ನಿರ್ಮಾಣದ ಎಂಟ್ರಿ ಲೆವಲ್ ಮಾದರಿಯಾದ ಮಾಡೆಲ್ 3 ಕಾರು ಮಾದರಿಯೇ ಮೊದಲ ಹಂತದಲ್ಲಿ ಬಿಡುಗಡೆಯಾಗಬಹುದಾಗಿದ್ದು, ಮಾಡೆಲ್ 3 ನಂತರ ಮಾಡೆಲ್ ವೈ, ಮಾಡೆಲ್ ಎಸ್ ಸರಣಿ ಎಲೆಕ್ಟ್ರಿಕ್ ಕಾರು ಮಾದರಿಗಳು ಭಾರತವನ್ನು ಪ್ರವೇಶಿಸುವ ಸಾಧ್ಯತೆಗಳಿವೆ.

ರೋಡ್ ಟೆಸ್ಟಿಂಗ್‌ನಲ್ಲಿ ಬಿಡುಗಡೆ ಸನೀಹದಲ್ಲಿರುವ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು

ಮಾಡೆಲ್ 3 ಕಾರು ಮಾದರಿಯು ಪ್ರತಿ ಚಾರ್ಜ್‌ಗೆ 500ಕಿ.ಮೀ ಗೂ ಹೆಚ್ಚು ಮೈಲೇಜ್ ಹೊಂದಿದ್ದು, ಬೆಲೆಯಲ್ಲೂ ಇದು ತುಸು ದುಬಾರಿಯಾಗಿರಲಿದೆ. ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 60 ಲಕ್ಷದಿಂದ ರೂ. 70 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿದೆ.

ರೋಡ್ ಟೆಸ್ಟಿಂಗ್‌ನಲ್ಲಿ ಬಿಡುಗಡೆ ಸನೀಹದಲ್ಲಿರುವ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು

ಆರಂಭಿಕವಾಗಿ ಸಿಬಿಯು ಆಮದು ನೀತಿಯಡಿಯಲ್ಲಿ ಹೊಸ ಎಲೆಕ್ಟ್ರಿಕ್ ಕಾರುಗಳನ್ನ ಮಾರಾಟ ಮಾಡಲಿರುವ ಟೆಸ್ಲಾ ಕಂಪನಿಯು 2023ರ ವೇಳೆಗೆ ಭಾರತದಲ್ಲೇ ಕಾರುಗಳನ್ನು ಅಸೆಂಬ್ಲಿ ಘಟಕ ಆರಂಭಿಸುವ ಸಿದ್ದತೆಯಲ್ಲಿದೆ.

ರೋಡ್ ಟೆಸ್ಟಿಂಗ್‌ನಲ್ಲಿ ಬಿಡುಗಡೆ ಸನೀಹದಲ್ಲಿರುವ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು

ಭಾರತದಲ್ಲಿ ಹೊಸ ವಾಹನಗಳ ಮಾರಾಟಕ್ಕಾಗಿ ಮುಂಬೈ, ಬೆಂಗಳೂರು ಮತ್ತು ದೆಹಲಿ ಆಯ್ದಕೊಂಡಿರುವ ಟೆಸ್ಲಾ ಕಂಪನಿಯು ಮುಂಬೈನಲ್ಲಿ ಕೇಂದ್ರ ಕಚೇರಿಯೊಂದಿಗೆ ಮಾರಾಟ ಮಳಿಗೆಯನ್ನು ನಮ್ಮ ಬೆಂಗಳೂರಿನಲ್ಲಿ ಆರ್‌ಡಿ ಕಚೇರಿ ಜೊತೆ ಮಾರಾಟ ಮಳಿಗೆಯನ್ನು ಮತ್ತು ದೆಹಲಿಯಲ್ಲಿ ಮಾರಾಟ ಮಳಿಗೆಯನ್ನು ತೆರೆಯುತ್ತಿದೆ.

ರೋಡ್ ಟೆಸ್ಟಿಂಗ್‌ನಲ್ಲಿ ಬಿಡುಗಡೆ ಸನೀಹದಲ್ಲಿರುವ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು

ಸದ್ಯಕ್ಕೆ ಸಿಬಿಯು ಮೂಲಕ ಮತ್ತು 2023ರಿಂದ ಸಿಕೆಡೆ ಆಮದು ನೀತಿ ಅಡಿಯಲ್ಲಿ ವಾಹನ ಮಾರಾಟ ಕೈಗೊಳ್ಳಲಿರುವ ಟೆಸ್ಲಾ ಕಂಪನಿಯು ಹೊಸ ಯೋಜನೆಯ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಭವಿಷ್ಯದ ವಾಹನಗಳ ಮೇಲೆ ಟೆಸ್ಲಾ ಕಂಪನಿಯು ಭಾರೀ ನೀರಿಕ್ಷೆಯಿಟ್ಟುಕೊಂಡಿದೆ.

ರೋಡ್ ಟೆಸ್ಟಿಂಗ್‌ನಲ್ಲಿ ಬಿಡುಗಡೆ ಸನೀಹದಲ್ಲಿರುವ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು

ಇದರ ನಡುವೆ ವಿದೇಶಿ ವಸ್ತುಗಳಿಗೆ ಜಗತ್ತಿನಲ್ಲೇ ಅತಿ ಹೆಚ್ಚು ಆಮದು ಸುಂಕ ವಿಧಿಸುವ ಭಾರತ ಸರ್ಕಾರವು ಭವಿಷ್ಯದ ವಾಹನಗಳಾದ ಎಲೆಕ್ಟ್ರಿಕ್ ಮಾದರಿಗಳಿಗೆ ಕೆಲವು ವಿನಾಯ್ತಿ ನೀಡುವಂತೆ ಟೆಸ್ಲಾ ಕಂಪನಿಯು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು.

ರೋಡ್ ಟೆಸ್ಟಿಂಗ್‌ನಲ್ಲಿ ಬಿಡುಗಡೆ ಸನೀಹದಲ್ಲಿರುವ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು

ಜಗತ್ತಿನಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಮಟ್ಟದ ಆದ್ಯತೆ ನೀಡುತ್ತಿರುವುದರಿಂದ ಭಾರತ ಸರ್ಕಾರವು ಕೂಡಾ ಇಂಧನ ಆಧರಿತ ವಾಹನಗಳನ್ನು ಹೊರತುಪಡಿಸಿ ಆಮದುಗೊಳ್ಳಿರುವ ಎಲೆಕ್ಟ್ರಿಕ್ ಮಾದರಿಗಳಿಗೆ ಆಮದು ಸುಂಕದಲ್ಲಿ ವಿನಾಯ್ತಿ ನೀಡಬಹುದೆಂಬ ನೀರಿಕ್ಷೆಯಲ್ಲಿತ್ತು.

ರೋಡ್ ಟೆಸ್ಟಿಂಗ್‌ನಲ್ಲಿ ಬಿಡುಗಡೆ ಸನೀಹದಲ್ಲಿರುವ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು

ಭಾರತದಲ್ಲಿ ವಿದೇಶ ವಸ್ತುಗಳಿಗೆ ವಿಧಿಸುವ ಆಮದು ಸುಂಕ ಕುರಿತು ಟ್ವಿಟ್ ಮಾಡಿದ್ದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕೂಡಾ ಭಾರತ ಸರ್ಕಾರದಿಂದ ಉತ್ತಮ ಪ್ರಕ್ರಿಯೆ ನೀರಿಕ್ಷೆಯಲ್ಲಿದ್ದೇವೆ ಎಂದಿದ್ದರು. ಆದರೆ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕೆ ಭಾರತದಲ್ಲೇ ನಿರ್ಮಾಣವಾಗುವ ಇವಿ ವಾಹನಗಳಿಗೆ ಫೇಮ್ 2 ಸಬ್ಸಡಿ ಯೋಜನೆಯಡಿ ಹಲವಾರು ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ಹೊಸ ಯೋಜನೆಗಳು ಜಾರಿಯಲ್ಲಿರುವಾದ ಆಮದು ಇವಿ ವಾಹನಗಳಿಗಾಗಿ ಪ್ರತ್ಯೇಕ ವಿನಾಯ್ತಿ ಪರಿಗಣಿಸಲು ಸಾಧ್ಯವಿಲ್ಲವೆಂದು ಕ್ರಿಶನ್ ಪಾಲ್ ಗುರ್ಜಾರ್ ಪ್ರಕ್ರಿಯೆಸಿದ್ದರು.

ರೋಡ್ ಟೆಸ್ಟಿಂಗ್‌ನಲ್ಲಿ ಬಿಡುಗಡೆ ಸನೀಹದಲ್ಲಿರುವ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು

ಕೇಂದ್ರ ಸರ್ಕಾರದ ಸ್ಪಷ್ಟನೆ ನಂತರ ಟೆಸ್ಲಾ ಕಂಪನಿಯು ಯಾವುದೇ ರೀತಿಯ ಪ್ರಕ್ರಿಯೆ ಹಂಚಿಕೊಂಡಿಲ್ಲವಾದರೂ ಕೇಂದ್ರ ತೆರಿಗೆ ನೀತಿಗಳುವ ಟೆಸ್ಲಾ ಭಾರತದ ಪ್ರವೇಶವನ್ನು ದುಬಾರಿಯಾಗಿಸಲಿದ್ದು, ಭಾರತದಲ್ಲೇ ನಿರ್ಮಾಣವಾಗುವ ಇವಿ ವಾಹನಗಳಿಗೆ ಕೇಂದ್ರ ಸರ್ಕಾರವು ಹೆಚ್ಚಿನ ನೆರವು ನೀಡಬೇಕೆಂಬುವುದು ಮತ್ತೆ ಕೆಲವು ಎಲೆಕ್ಟ್ರಿಕ್ ವಾಹನ ಕಂಪನಿಗಳ ಮನವಿಯಾಗಿದೆ.

More from DriveSpark

Article Published On: Tuesday, December 14, 2021, 10:51 [IST]
English summary
Tesla model 3 electric car spotted testing india more details
Read more on ಟೆಸ್ಲಾ tesla
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+