640 ಎಕರೆ ಪ್ರದೇಶದಲ್ಲಿರುವ ರೆನಾಲ್ಟ್ ನಿಸ್ಸಾನ್ ಚೆನ್ನೈ ಪ್ಲಾಂಟ್ ಉತ್ಪಾದನಾ ಘಟಕದ ಬಗೆಗಿನ ವಿವರಗಳಿವು

ಚೆನ್ನೈ ಪ್ಲಾಂಟ್, ಫ್ರಾನ್ಸ್‌ ಮೂಲದ ರೆನಾಲ್ಟ್ ಹಾಗೂ ಜಪಾನ್‌ ಮೂಲದ ನಿಸ್ಸಾನ್ ಕಂಪನಿಗಳ ನಡುವಿನ ಮೊದಲ ಜಂಟಿ ಉದ್ಯಮವಾಗಿದೆ. ಈ ಘಟಕವನ್ನು 2010ರಲ್ಲಿ ಆರಂಭಿಸಲಾಯಿತು. ರೂ.4,500 ಕೋಟಿ ಬಂಡವಾಳ ಹೂಡಿಕೆ ಮಾಡಿ ಈ ಬೃಹತ್ ಘಟಕವನ್ನು ಸ್ಥಾಪಿಸಲಾಯಿತು.

640 ಎಕರೆ ಪ್ರದೇಶದಲ್ಲಿರುವ ಚೆನ್ನೈ ಪ್ಲಾಂಟ್ ಉತ್ಪಾದನಾ ಘಟಕದ ಬಗೆಗಿನ ವಿವರಗಳಿವು

ಈ ಘಟಕವು ಚೆನ್ನೈ ಬಳಿ 640 ಎಕರೆ ಪ್ರದೇಶದಲ್ಲಿದೆ. ಈ ಘಟಕದಲ್ಲಿ ನಿರ್ವಹಣೆ ಹಾಗೂ ಉತ್ಪಾದನೆ ಸೇರಿದಂತೆ ವಿವಿಧ ಕಾರ್ಯಗಳಿಗಾಗಿ ಪ್ರತ್ಯಕ್ಷವಾಗಿ ಸಾವಿರಾರು ಜನರನ್ನು ನೇಮಿಸಿಕೊಂಡಿದ್ದರೆ, ಪರೋಕ್ಷವಾಗಿ ಹಲವಾರು ಸಾವಿರ ಜನರನ್ನು ನೇಮಿಸಿಕೊಳ್ಳಲಾಗಿದೆ.

640 ಎಕರೆ ಪ್ರದೇಶದಲ್ಲಿರುವ ಚೆನ್ನೈ ಪ್ಲಾಂಟ್ ಉತ್ಪಾದನಾ ಘಟಕದ ಬಗೆಗಿನ ವಿವರಗಳಿವು

ಚೆನ್ನೈ ಪ್ಲಾಂಟ್'ನಲ್ಲಿ ರೆನಾಲ್ಟ್ - ನಿಸ್ಸಾನ್ ಕಂಪನಿಗಳು ಪ್ರತಿ ವರ್ಷ 4 ಲಕ್ಷ ಕಾರುಗಳನ್ನು ಉತ್ಪಾದಿಸುತ್ತವೆ. ಇಲ್ಲಿ ಉತ್ಪಾದನೆಯಾಗುವ ಕಾರುಗಳಲ್ಲಿ ಭಾರತದಲ್ಲಿ ಮಾತ್ರವಲ್ಲದೆ 69 ದೇಶಗಳಿಗೆ ರಫ್ತು ಮಾಡಿ ಮಾರಾಟ ಮಾಡಲಾಗುತ್ತದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

640 ಎಕರೆ ಪ್ರದೇಶದಲ್ಲಿರುವ ಚೆನ್ನೈ ಪ್ಲಾಂಟ್ ಉತ್ಪಾದನಾ ಘಟಕದ ಬಗೆಗಿನ ವಿವರಗಳಿವು

ಈ ಘಟಕವು ಇದುವರೆಗೂ 21 ಲಕ್ಷ ಯೂನಿಟ್ ಕಾರುಗಳನ್ನು ಉತ್ಪಾದಿಸಿದೆ. ಈ ಘಟಕದಲ್ಲಿ ಮೊದಲಿಗೆ ರೆನಾಲ್ಟ್ ಕೊಲಿಯೊಸ್ ಎಸ್‌ಯುವಿ ಹಾಗೂ ಫ್ಲೂಯೆನ್ಸ್ ಸೆಡಾನ್ ಕಾರುಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡಲಾಯಿತು.

640 ಎಕರೆ ಪ್ರದೇಶದಲ್ಲಿರುವ ಚೆನ್ನೈ ಪ್ಲಾಂಟ್ ಉತ್ಪಾದನಾ ಘಟಕದ ಬಗೆಗಿನ ವಿವರಗಳಿವು

ನಂತರ ನಿಸ್ಸಾನ್‌ ಕಂಪನಿಯ ವಿ ಪ್ಲಾಟ್‌ಫಾರಂನಲ್ಲಿ ಮೈಕ್ರಾ, ಸನ್ನಿ, ಪಲ್ಸ್, ರೆನಾಲ್ಟ್ ಸ್ಕಲಾ ಕಾರುಗಳನ್ನು ಉತ್ಪಾದಿಸಲಾಯಿತು. ಎಂ 0 ಪ್ಲಾಟ್‌ಫಾರಂನಲ್ಲಿ ರೆನಾಲ್ಟ್ ಡಸ್ಟರ್, ನಿಸ್ಸಾನ್ ಟೆರಾನೊ, ನಿಸ್ಸಾನ್ ಕಿಕ್ಸ್, ರೆನಾಲ್ಟ್ ಕ್ಯಾಪ್ಚರ್, ರೆನಾಲ್ಟ್ ಲಾಡ್ಜ್ ಕಾರುಗಳನ್ನು ಉತ್ಪಾದಿಸಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

640 ಎಕರೆ ಪ್ರದೇಶದಲ್ಲಿರುವ ಚೆನ್ನೈ ಪ್ಲಾಂಟ್ ಉತ್ಪಾದನಾ ಘಟಕದ ಬಗೆಗಿನ ವಿವರಗಳಿವು

ಈ ಪೈಕಿ ಹಲವು ಕಾರು ಮಾದರಿಗಳನ್ನು ಭಾರತದಿಂದ ಹಿಂತೆಗೆದುಕೊಳ್ಳಲಾಗಿದೆ. ರೆನಾಲ್ಟ್ ಡಸ್ಟರ್, ನಿಸ್ಸಾನ್ ಕಿಕ್ಸ್ ಕಾರುಗಳು ಮಾತ್ರ ಮಾರಾಟವಾಗುತ್ತಿವೆ. ದಟ್ಸನ್ ಕಂಪನಿಯು ರೆಡಿಗೋ, ಗೋ ಹಾಗೂ ಗೋ ಪ್ಲಸ್ ಕಾರುಗಳನ್ನು ಉತ್ಪಾದಿಸುತ್ತದೆ.

640 ಎಕರೆ ಪ್ರದೇಶದಲ್ಲಿರುವ ಚೆನ್ನೈ ಪ್ಲಾಂಟ್ ಉತ್ಪಾದನಾ ಘಟಕದ ಬಗೆಗಿನ ವಿವರಗಳಿವು

ವರ್ಷಕ್ಕೆ 4 ಲಕ್ಷ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ಈ ಘಟಕವು ಎಂದಿಗೂ ಪೂರ್ಣ ಪ್ರಮಾಣದಲ್ಲಿ ಕಾರುಗಳನ್ನು ಉತ್ಪಾದಿಸಿಲ್ಲ ಎಂಬುದು ಗಮನಾರ್ಹ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

640 ಎಕರೆ ಪ್ರದೇಶದಲ್ಲಿರುವ ಚೆನ್ನೈ ಪ್ಲಾಂಟ್ ಉತ್ಪಾದನಾ ಘಟಕದ ಬಗೆಗಿನ ವಿವರಗಳಿವು

ಈಗ ರೆನಾಲ್ಟ್-ನಿಸ್ಸಾನ್ ಸಹಭಾಗಿತ್ವದಲ್ಲಿ ಸಿಎಂಎಫ್-ಎ ಪ್ಲಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಾಣವಾಗಿರುವ ಕ್ವಿಡ್, ಸಿಎಂಎಫ್-ಎ ಪ್ಲಸ್ ಪ್ಲಾಟ್‌ಫಾರಂ ಅಡಿಯಲ್ಲಿ ನಿರ್ಮಾಣವಾಗಿರುವ ಡಸ್ಟರ್ ಮಾದರಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

640 ಎಕರೆ ಪ್ರದೇಶದಲ್ಲಿರುವ ಚೆನ್ನೈ ಪ್ಲಾಂಟ್ ಉತ್ಪಾದನಾ ಘಟಕದ ಬಗೆಗಿನ ವಿವರಗಳಿವು

ಇದರ ಜೊತೆಗೆ ನಿಸ್ಸಾನ್ ಮ್ಯಾಗ್ನೈಟ್ ಹಾಗೂ ರೆನಾಲ್ಟ್ ಕಿಗರ್ ಮಾದರಿಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಕಾರ್ ಅನ್ನು ಮೂರು ಪಾಳಿಯಲ್ಲಿ ಉತ್ಪಾದಿಸಲಾಗುತ್ತಿದೆ. ಇದರಿಂದಾಗಿ ಈ ಘಟಕದಲ್ಲಿ ಸದ್ಯಕ್ಕೆ ಪೂರ್ಣ ಪ್ರಮಾಣದ ಉತ್ಪಾದನೆ ನಡೆಯುತ್ತಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

640 ಎಕರೆ ಪ್ರದೇಶದಲ್ಲಿರುವ ಚೆನ್ನೈ ಪ್ಲಾಂಟ್ ಉತ್ಪಾದನಾ ಘಟಕದ ಬಗೆಗಿನ ವಿವರಗಳಿವು

ನಿಸ್ಸಾನ್ ಮ್ಯಾಗ್ನೈಟ್ ಹಾಗೂ ರೆನಾಲ್ಟ್ ಕಿಗರ್ ಮಾದರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಆಗಿರುವ ಕಾರಣಕ್ಕೆ ಈ ಘಟಕದಲ್ಲಿ ತಾತ್ಕಾಲಿಕ ಸಿಬ್ಬಂದಿಯನ್ನು ನಿಯೋಜಿಸಿಕೊಂಡು ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.

640 ಎಕರೆ ಪ್ರದೇಶದಲ್ಲಿರುವ ಚೆನ್ನೈ ಪ್ಲಾಂಟ್ ಉತ್ಪಾದನಾ ಘಟಕದ ಬಗೆಗಿನ ವಿವರಗಳಿವು

ಮ್ಯಾಗ್ನೈಟ್ ಕಾರಿನ ಉತ್ಪಾದನೆಗೆ 1,000 ಹೊಸ ಜನರನ್ನು ನೇಮಿಸಿಕೊಳ್ಳಲು ನಿಸ್ಸಾನ್ ಕಂಪನಿಯು ನಿರ್ಧರಿಸಿದೆ. ಜೊತೆಗೆ ವಿತರಣೆಗಾಗಿ 500 ಜನರನ್ನು ನೇಮಿಸಿಕೊಳ್ಳಲು ಸಹ ನಿರ್ಧರಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

640 ಎಕರೆ ಪ್ರದೇಶದಲ್ಲಿರುವ ಚೆನ್ನೈ ಪ್ಲಾಂಟ್ ಉತ್ಪಾದನಾ ಘಟಕದ ಬಗೆಗಿನ ವಿವರಗಳಿವು

ಇದರಿಂದಾಗಿ ಮುಂಬರುವ ದಿನಗಳಲ್ಲಿ ನಿಸ್ಸಾನ್ ಕಂಪನಿಯ ವ್ಯವಹಾರವು ಸುಧಾರಿಸುವ ನಿರೀಕ್ಷೆಗಳಿವೆ. ಇದರ ಜೊತೆಗೆ ಚೆನ್ನೈ ಪ್ಲಾಂಟ್ ಸಹ ಲಾಭದ ಹಾದಿಗೆ ಮರಳುವ ನಿರೀಕ್ಷೆಗಳಿವೆ.

640 ಎಕರೆ ಪ್ರದೇಶದಲ್ಲಿರುವ ಚೆನ್ನೈ ಪ್ಲಾಂಟ್ ಉತ್ಪಾದನಾ ಘಟಕದ ಬಗೆಗಿನ ವಿವರಗಳಿವು

ಆಟೋಮೊಬೈಲ್ ಉದ್ಯಮದಿಂದ ಡೆಟ್ರಾಯಿಟ್ ಆಫ್ ಏಷ್ಯಾ ಎಂದು ಕರೆಯಲ್ಪಡುವ ಚೆನ್ನೈನಲ್ಲಿ ಹಲವಾರು ವಾಹನ ಉತ್ಪಾದನಾ ಘಟಕಗಳು ನೆಲೆಯೂರಿವೆ. ರೆನಾಲ್ಟ್-ನಿಸ್ಸಾನ್ ಕಂಪನಿಗಳ ಸಹಭಾಗಿತ್ವದಲ್ಲಿರುವ ಘಟಕವು ಫೋರ್ಡ್, ಹ್ಯುಂಡೈ ಹಾಗೂ ಬಿಎಂಡಬ್ಲ್ಯು ಸರಣಿಯಲ್ಲಿರುವ ಅತಿದೊಡ್ಡ ಘಟಕಗಳಲ್ಲಿ ಒಂದಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

640 ಎಕರೆ ಪ್ರದೇಶದಲ್ಲಿರುವ ಚೆನ್ನೈ ಪ್ಲಾಂಟ್ ಉತ್ಪಾದನಾ ಘಟಕದ ಬಗೆಗಿನ ವಿವರಗಳಿವು

ಚೆನ್ನೈನಲ್ಲಿರುವ ಬಹುತೇಕ ಎಲ್ಲಾ ಉತ್ಪಾದನಾ ಘಟಕಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ, ರೆನಾಲ್ಟ್-ನಿಸ್ಸಾನ್ ಘಟಕವು ಸಹ ಈ ಯಶಸ್ಸಿನ ಪಟ್ಟಿಗೆ ಸೇರುವ ಹಾದಿಯಲ್ಲಿದೆ.

Most Read Articles

Kannada
English summary
Things about Chennai Plant situated in 640 acres extent. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X