ಬಿಡುಗಡೆಯಾಗಲಿರುವ ಹೊಸ Toyota Aygo X ಕಾರಿನ ವಿಶೇಷತೆಗಳು

ಜಪಾನ್ ಮೂಲದ ಟೊಯೊಟಾ ಕಂಪನಿಯು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಐಗೋ ಕಾರನ್ನು ಅನಾವರಣಗೊಳಿಸಿತ್ತು. ಈ ಹೊಸ ಟೊಯೊಟಾ ಐಗೋ ಎಕ್ಸ್(Toyota Aygo X) ಸಬ್-4 ಮೀಟರ್ ವಿಭಾಗದ ಮೈಕ್ರೋ ಎಸ್‍ಯುವಿ ಮಾದರಿಯಾಗಿದೆ.

ಬಿಡುಗಡೆಯಾಗಲಿರುವ ಹೊಸ Toyota Aygo X ಕಾರಿನ ವಿಶೇಷತೆಗಳು

ಟೊಯೊಟಾ ಐಗೋ ಎಕ್ಸ್ ಎಸ್‍ಯುವಿ ಸ್ಟೈಲಿಂಗ್ ಅಂಶಗಳೊಂದಿಗೆ ಟಾಟಾ ಪಂಚ್ ಅನ್ನು ನೆನಪಿಸುತ್ತದೆ. ಈ ಹೊಸ ಮೈಕ್ರೋ ಎಸ್‍ಯುವಿಯು GA-B ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಟೊಯೋಟಾ ಯಾರಿಸ್ ಮತ್ತು ಟೊಯೋಟಾ ಯಾರಿಸ್ ಕ್ರಾಸ್ ಆಧಾರಿತ TNGA (ಟೊಯೋಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್) ಪ್ಲಾಟ್‌ಫಾರ್ಮ್‌ನಿಂದ ಪಡೆದಿದೆ, ಈ ಟೊಯೊಟಾ ಐಗೋ ಎಕ್ಸ್ ಮೈಕ್ರೋ ಎಸ್‍ಯುವಿಯು ವಿನ್ಯಾಸದಲ್ಲಿ ಮತ್ತು ಒಳಾಂಗಣದಲ್ಲಿ ಕೆಲವು ಬದಲಾವಣೆಗಳನ್ನು ಪಡೆಯುತ್ತದೆ. ಈ ಬಹುನಿರೀಕ್ಷಿತ ಟೊಯೊಟಾ ಐಗೋ ಎಕ್ಸ್ ಮೈಕ್ರೋ ಎಸ್‍ಯುವಿಯ ವಿಶೇಷತೆಗಳು ಇಲ್ಲಿವೆ.

ಬಿಡುಗಡೆಯಾಗಲಿರುವ ಹೊಸ Toyota Aygo X ಕಾರಿನ ವಿಶೇಷತೆಗಳು

ವಿನ್ಯಾಸ

ಟೊಯೊಟಾ ಐಗೋ ಎಕ್ಸ್ ಮೈಕ್ರೋ ಎಸ್‍ಯುವಿಯು ದಪ್ಪ ಮತ್ತು ಅಗ್ರೇಸಿವ್ ವಿನ್ಯಾಸ ಶೈಲಿಯನ್ನು ಪಡೆಯುತ್ತದೆ. ಇದು ದೇಹದಾದ್ಯಂತ, ವಿಶೇಷವಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ತೀಕ್ಷ್ಣವಾದ ಬಾಡಿ ಲೈನ್ ಮತ್ತು ಕ್ರೀಸ್ ಗಳನ್ನು ಪಡೆಯುತ್ತದೆ. ಎಲ್ಲಾ ಎಲ್ಇಡಿ ಲೈಟಿಂಗ್ ಸೆಟ್-ಅಪ್ ಅದನ್ನು ನಯವಾಗಿ ಮತ್ತು ಮಾರುಕಟ್ಟೆಯಾಗಿ ಕಾಣುವಂತೆ ಮಾಡುತ್ತದೆ.

ಬಿಡುಗಡೆಯಾಗಲಿರುವ ಹೊಸ Toyota Aygo X ಕಾರಿನ ವಿಶೇಷತೆಗಳು

ಈ ಹೊಸ ಐಗೋ ಎಕ್ಸ್ ಮೈಕ್ರೋ ಎಸ್‍ಯುವಿಯು ವಿನ್ಯಾಸವು ಟೊಯೊಟಾ ಯಾರಿಸ್ ಹ್ಯಾಚ್‌ಬ್ಯಾಕ್‌ನಿಂದ ಸ್ವಲ್ಪಮಟ್ಟಿಗೆ ಸ್ಫೂರ್ತಿ ಪಡೆದಿದೆ. ಕಾರಿನ ಸೈಡ್ ಪ್ರೊಫೈಲ್ ನಿಜವಾಗಿಯೂ ಆಕರ್ಷಕವಾಗಿದೆ. ದೇಹದಾದ್ಯಂತ ಬ್ಲ್ಯಾಕ್ ಹೊದಿಕೆಯು ಅದನ್ನು "ಮ್ಯಾಕೋ" ಎಂದು ಕಾಣುವಂತೆ ಮಾಡುತ್ತದೆ.

ಬಿಡುಗಡೆಯಾಗಲಿರುವ ಹೊಸ Toyota Aygo X ಕಾರಿನ ವಿಶೇಷತೆಗಳು

ಇಂಟಿರಿಯರ್

ಟೋಯೊಟಾ ಅದ್ದೂರಿ, ಸೊಗಸಾದ ಮತ್ತು ಆಧುನಿಕವಾಗಿ ಕಾಣುವ ಇಂಟಿರಿಯರ್ ಗಳಿಗೆ ಹೆಸರುವಾಸಿಯಾಗಿಲ್ಲ, ವಿಶೇಷವಾಗಿ ಕಡಿಮೆ ಬೆಲೆಯ ಕಾರುಗಳಲ್ಲಿ ಪ್ರತಿಯೊಂದು ಬಜೆಟ್ ಕಾರಿನಂತೆ ಇರುತ್ತದೆ. ಐಗೋ ಎಕ್ಸ್ ಮೈಕ್ರೋ ಎಸ್‍ಯುವಿ ಸಹ ಪ್ರಾಯೋಗಿಕ ಮತ್ತು ಮೂಲಭೂತ ಆಂತರಿಕ ವಿನ್ಯಾಸವನ್ನು ಪಡೆಯುತ್ತದೆ.

ಬಿಡುಗಡೆಯಾಗಲಿರುವ ಹೊಸ Toyota Aygo X ಕಾರಿನ ವಿಶೇಷತೆಗಳು

ಆದರೆಒಳಭಾಗದ ಮುಂಭಾಗವು ಇನ್ಫೋಟೈನ್‌ಮೆಂಟ್ ಸಿಸ್ಟಂ ಸುತ್ತಲೂ ಸುತ್ತಲೂ ಇರುವ ವಿನ್ಯಾಸ ಆಕರ್ಷಕವಾಗಿದೆ. ಎಸಿ ವೆಂಟ್‌ಗಳ ಸುತ್ತಲೂ ಮತ್ತು ಡೋರ್ ಪ್ಯಾನೆಲ್‌ಗಳ ಮೇಲೆ ದೇಹ-ಬಣ್ಣದ ವೆಂಟ್ಸ್ ಒಳಾಂಗಣವನ್ನು ಯುವ ಮತ್ತು ತಾಜಾವಾಗಿ ಕಾಣುವಂತೆ ಮಾಡುತ್ತದೆ.

ಬಿಡುಗಡೆಯಾಗಲಿರುವ ಹೊಸ Toyota Aygo X ಕಾರಿನ ವಿಶೇಷತೆಗಳು

ಇನ್ನು ಕೆಲವು ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ- 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ JBL ಸೌಂಡ್ ಸಿಸ್ಟಮ್. ಇದು ವೈರ್‌ಲೆಸ್ ಚಾರ್ಜಿಂಗ್, ವೈರ್‌ಲೆಸ್ ಆಂಡ್ರಾಯ್ಡ್-ಆಟೋ ಮತ್ತು ಆಪಲ್ ಕಾರ್-ಪ್ಲೇ ಅನ್ನು ಪಡೆಯುತ್ತದೆ. ಐಗೋ ಎಕ್ಸ್ ಸಾಕಷ್ಟು ದೊಡ್ಡ ಸನ್‌ರೂಫ್ ಅನ್ನು ಸಹ ಪಡೆಯುತ್ತದೆ.

ಬಿಡುಗಡೆಯಾಗಲಿರುವ ಹೊಸ Toyota Aygo X ಕಾರಿನ ವಿಶೇಷತೆಗಳು

ಎಂಜಿನ್

ಈ ಹೊಸ ಟೊಯೊಟಾ ಐಗೋ ಎಕ್ಸ್ ಮೈಕ್ರೋ ಎಸ್‍ಯುವಿಯಲ್ಲಿ ಒಂದು ಎಂಜಿನ್ ಆಯ್ಕೆಯೊಂದಿಗೆ ಲಭ್ಯವಿದೆ. ಇದು 1 ಲೀಟರ್ 3-ಸಿಲಿಂಡರ್ ಎಂಜಿನ್ ಆಗಿದೆ. ಈ ಎಂಜಿನ್ 72 ಬಿಹೆಚ್‍ಪಿ ಪವರ್ ಮತ್ತು 205 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವಾ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ, ಇನ್ನು ಖರೀದಿದಾರರು ಸಿವಿಟಿ ಆಯ್ಕೆಯನ್ನು ಸಹ ಪಡೆಯುತ್ತಾರೆ.

ಬಿಡುಗಡೆಯಾಗಲಿರುವ ಹೊಸ Toyota Aygo X ಕಾರಿನ ವಿಶೇಷತೆಗಳು

ಪವರ್ ಔಟ್‌ಪುಟ್ ಸಿಟಿ ಡ್ರೈವಿಂಗ್‌ಗೆ ಸಮರ್ಪಕವಾಗಿ ಕಾಣುತ್ತದೆ, ಆದರೆ ಟಾರ್ಕ್ ಈ ರೀತಿಯ ಕಾರುಗಳಲ್ಲಿ ನಾವು ನೋಡುವುದಕ್ಕಿಂತ ಹೆಚ್ಚಿನದಾಗಿದೆ. 205 ಎನ್ಎಂ ಟಾರ್ಕ್ ಭಾರೀ ಟ್ರಾಫಿಕ್‌ನಲ್ಲಿಯೂ ಸಹ ನೀವು ಎಲ್ಲಾ ಫನ್ ಅನ್ನು ಹೊಂದಿದ್ದೀರಿ ಎಂದು ಖಚಿತವಾಗಿ ಖಚಿತಪಡಿಸುತ್ತದೆ.

ಬಿಡುಗಡೆಯಾಗಲಿರುವ ಹೊಸ Toyota Aygo X ಕಾರಿನ ವಿಶೇಷತೆಗಳು

ಬೆಲೆ

ಟೊಯೊಟಾ ಐಗೋ ಎಕ್ಸ್ ಮೈಕ್ರೋ ಎಸ್‍ಯುವಿ ಬೆಲೆಗಳನ್ನು ಬಹಿರಂಗಪಡಿಸಿಲ್ಲ, ಅವರು ಕಾರು ಅಧಿಕೃತವಾಗಿ ಬಿಡುಗಡೆಯಾದಾಗ ಮುಂದಿನ ವರ್ಷದ ಆರಂಭದಲ್ಲಿ ಬಹಿರಂಗಪಡಿಸಬಹುದು. ಅಂದಾಜಿನ ಪ್ರಕಾರ, ಈ ಐಗೋ ಎಕ್ಸ್ ಮೈಕ್ರೋ ಎಸ್‍ಯುವಿಯ ಬೆಲೆಯು ರೂ.8-12 ಲಕ್ಷಗಳ ನಡುವೆ ಇರಬಹುದು.

ಬಿಡುಗಡೆಯಾಗಲಿರುವ ಹೊಸ Toyota Aygo X ಕಾರಿನ ವಿಶೇಷತೆಗಳು

ಆಯಾಮಗಳು

ಟೊಯೊಟಾ ಐಗೋ ಎಕ್ಸ್ ಮೈಕ್ರೋ ಎಸ್‍ಯುವಿಯು 3,700 ಎಂಎಂ ಉದ್ದ, 1,740 ಎಂಎಂ ಅಗಲ ಮತ್ತು 1,510 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಭಾರತದಲ್ಲಿ ಮಾರಾಟವಾಗುತ್ತಿರುವ ಟಾಟಾ ಪಂಚ್ ಮೈಕ್ರೋ ಎಸ್‍ಯುವಿಯು 3,827 ಎಂಎಂ ಉದ್ದ, 1,742 ಎಂಎಂ ಅಗಲ ಮತ್ತು 1,615 ಎಂಎಂ ಎತ್ತರವನ್ನು ಹೊಂದಿದೆ.

ಬಿಡುಗಡೆಯಾಗಲಿರುವ ಹೊಸ Toyota Aygo X ಕಾರಿನ ವಿಶೇಷತೆಗಳು

ಟೊಯೊಟಾ ಐಗೋ ಎಕ್ಸ್ ಮೈಕ್ರೋ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಆದರೆ ಕೆಲವು ವರದಿಗಳ ಪ್ರಕಾರ ಈ ಮೈಕ್ರೋ ಎಸ್‍ಯುವಿಯು ಭಾರತದಲ್ಲಿ ಬಿಡುಗಡೆಯಾಗುವ ಸಾದ್ಗ್ಯತೆಗಳಿದೆ. ಒಂದು ವೇಳೆ ಈ ಟೊಯೊಟಾ ಐಗೋ ಎಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ, ಮಾರುತಿ ಸುಜುಕಿ ಇಗ್ನಿಸ್, ಟಾಟಾ ಪಂಚ್ ಮತ್ತು ಮಹೀಂದ್ರಾ KUV100 ನಂತಹ ಇತರ ಮೈಕ್ರೋ-ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಬಿಡುಗಡೆಯಾಗಲಿರುವ ಹೊಸ Toyota Aygo X ಕಾರಿನ ವಿಶೇಷತೆಗಳು

ಇನ್ನು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) 2021ರ ಅಕ್ಟೋಬರ್ ತಿಂಗಳಿನ ಮಾರಾಟ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿತ್ತು. ವರದಿಗಳ ಪ್ರಕಾರ, ಕಳೆದ ತಿಂಗಳು ಟೊಯೊಟಾ ಕಂಪನಿಯು 12,440 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಟೊಯೊಟಾ ಕಂಪನಿಯು 12,373 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.1 ರಷ್ಟು ಹೆಚ್ಚಳವಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Top highlights of upcoming toyota aygo x micro suv details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X