ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯ ವಿಶೇಷತೆಗಳು
ಜಪಾನ್ ಮೂಲದ ಟೊಯೊಟಾ ಕಂಪನಿಯು ತನ್ನ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್(300 ಸೀರಿಸ್) ಎಸ್‍ಯುವಿಯನ್ನು ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸಿತ್ತು. ಲ್ಯಾಂಡ್ ಕ್ರೂಸರ್ ನಿಸ್ಸಂದೇಹವಾಗಿ ವಿಶ್ವದ ಅತ್ಯಂತ ಜನಪ್ರಿಯ ಮತ್ತು ಐಕಾನಿಕ್ ಎಸ್‍ಯುವಿಗಳಲ್ಲಿ ಒಂದಾಗಿದೆ.

ಟೊಯೊಟಾ ಕಂಪನಿಯು ಲ್ಯಾಂಡ್ ಕ್ರೂಸರ್ ಎಸ್‍ಯುವಿಯನ್ನು 1951 ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತು. ಇದು ವರೆಗೂ 170 ದೇಶಗಳಲ್ಲಿ ಲ್ಯಾಂಡ್ ಕ್ರೂಸರ್‌ನ 1.04 ಕೋಟಿ ಯೂನಿಟ್‌ಗಳನ್ನು ಮಾರಾಟ ಮಾಡಿದೆ. ನ್ಯೂ ಜನರೇಷನ್ ಮಾದರಿಯನ್ನು ಹಿಂದಿನದಕ್ಕಿಂತ ಹೆಚ್ಚು ಆಧುನಿಕ ಮತ್ತು ಪ್ರೀಮಿಯಂ ಮಾದರಿಯಾಗಿದೆ. ಲ್ಯಾಂಡ್ ಕ್ರೂಸರ್' ಬ್ರ್ಯಾಂಡ್ ಹೆಸರು ಇಂದಿಗೂ ಜನಪ್ರಿಯ ಬ್ರ್ಯಾಂಡ್ ಆಗಿದೆ. ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯ ವಿಶೇಷತೆಗಳು ಇಲ್ಲಿದೆ.

ಎಂಜಿನ್
2022ರ ಟೋಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದು 3.5 ಎಲ್ ವಿ6 ಟ್ವಿನ್-ಟರ್ಬೊ ಪೆಟ್ರೋಲ್ ಮತ್ತು 3.3 ಎಲ್ ವಿ6 ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಾಗಿವೆ.

ಇದರಲ್ಲಿ 3.5-ಲೀಟರ್ರ್ ವಿ6 ಟ್ವಿನ್-ಟರ್ಬೊ ಎಂಜಿನ್ ಅನ್ನು 409 ಬಿಹೆಚ್‍ಪಿ ಪವರ್ ಮತ್ತು 650 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು 3.3-ಲೀಟರ್ ಟ್ವಿನ್-ಟರ್ಬೊ ವಿ6 ಂಜಿನ್ 304 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ಗಳೊಂದಿಗೆ 10-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಈ ಗೇರ್ ಬಾಕ್ಸ್ ಇಂಧನ ಬಳಕೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಹಿಂದಿನದಕ್ಕಿಂತ ಶೇ.10 ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.

ಪ್ಲಾಟ್‌ಫಾರ್ಮ್
ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಹೊಸ ಟಿಎನ್‌ಜಿಎ (ಟೊಯೋಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್) ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಬ್ರಾಂಡ್‌ನ ಮೊದಲ ಬಾಡಿ-ಆನ್-ಫ್ರೇಮ್ ವಾಹನ ಇದಾಗಿದೆ,

ವಿನ್ಯಾಸ
2022ರ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಬ್ರ್ಯಾಂಡ್‌ನ ಹೊಸ ಪ್ರಮುಖ ಎಸ್ಯುವಿ ಹೆಚ್ಚು ಪ್ರಮುಖವಾದ ಗ್ರಿಲ್, ಹೊಸ ಲೈಟಿಂಗ್ ಸೆಟಪ್, ಪರಿಷ್ಕೃತ ಟೈಲ್‌ಗೇಟ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಟೈಲ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ.

ಫೀಚರ್ಸ್
ಈ ಹೊಸ ಎಸ್‍ಯುವಿಯ ಇಂಟಿರಿಯರ್ ನಲ್ಲಿ ದೊಡ್ಡ ಟ್ಯಾಬ್ಲೆಟ್ ಶೈಲಿಯ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಪಡೆಯುತ್ತದೆ. ಪ್ರಸ್ತುತ ಮಾದರಿಯಂತಲ್ಲದೆ 4 ಹೈ ಮತ್ತು 4 ಲೋ ಮೋಡ್‌ಗಳನ್ನು ಹೊಂದಿರುವ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ.

ಎಸ್‍ಯುವಿಯಲ್ಲಿ ಫಿಸಿಕಲ್ ಡಯಲ್‌ಗಳನ್ನು ಹೊಂದಿರುವ ಗೇಜ್ ಕ್ಲಸ್ಟರ್ ಮತ್ತು ಇನ್ಫೋ ಡಿಸ್ ಪ್ಲೇ, ಹೀಟಡ್ ಸೀಟುಗಳು, ಜೆಬಿಎಲ್ ಆಡಿಯೋ, ಟೊಯೊಟಾ ಸೇಫ್ಟಿ ಸೆನ್ಸ್ ಪ್ಯಾಕೇಜ್ ಮತ್ತು ಇತರ ಹಲವಾರು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.

ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ವಿಶ್ವದ ಮೊದಲ ಎಲೆಕ್ಟ್ರಾನಿಕ್ ಕೈನೆಟಿಕ್ ಡೈನಾಮಿಕ್ ಸಸ್ಪೆಂಕ್ಷನ್ ಸಿಸ್ಟಮ್ (ಇ-ಕೆಡಿಎಸ್ಎಸ್) ಅನ್ನು ಒಳಗೊಂಡಿದೆ. ಮಲ್ಟಿ-ಟೆರೈನ್ ಮಾನಿಟರ್ ಅನ್ನು ಒಳಗೊಂಡಿರುವ ಬ್ರ್ಯಾಂಡ್‌ನ ಮೊದಲ ಮಾದರಿಯಾಗಿದೆ,

ಬಿಡುಗಡೆ ಮಾಹಿತಿ
ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಉತ್ತಮ ಆಫ್-ರೋಡ್ ಎಸ್‍ಯುವಿಯಾಗಿದೆ. ಎಲ್ಲಾ ಕಡೆಗಳಲ್ಲಿಯು ಧೈರ್ಯವಾಗಿ ಈ ಕರೆದೊಯ್ಯಬಹುದು. ಮುಂಬರುವ ತಿಂಗಳುಗಳಲ್ಲಿ ಇದನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಬಹುದು. ಈ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿಯು ಬಿಡುಗಡೆಯಾಗುವ ಸಾಧ್ಯತೆಗಳಿದೆ.


Click it and Unblock the Notifications