ಹೊಸ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ವಿಶೇಷತೆಗಳು

ಭಾರತೀಯ ಮಾರುಕಟ್ಟೆಯಲ್ಲಿ ಪರ್ಫಾಮೆನ್ಸ್ ಕಾರುಗಳ ಸಂಖ್ಯೆಯು ವಿರಳವಾಗಿದೆ. ಆದರೆ ಭಾರತದಲ್ಲಿ ಹಲವು ಜನಪ್ರಿಯ ಕಾರು ತಯಾರಕ ಕಂಪನಿಗಳು ಪರ್ಫಾಮೆನ್ಸ್ ಕಾರುಗಳನ್ನು ಬಿಡುಗಡೆಗೊಳಿಸಲಾಗಿತ್ತು. ಆದರೆ ಆ ಪರ್ಫಾಮೆನ್ಸ್ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಯಶಸ್ವಿಯನ್ನು ಗಳಿಸಿಲ್ಲ.

ಹೊಸ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ವಿಶೇಷತೆಗಳು

ಇದೀಗ ದೇಶದ ಎರಡನೇ ಅತಿ ದೊಡ್ಡ ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಹೊಸ ಐ20 ಎನ್ ಲೈನ್ ಪರ್ಫಾಮೆನ್ಸ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹ್ಯುಂಡೈ ಕಂಪನಿಯು ಎನ್ ಸರಣಿಯ ಪರ್ಫಾಮೆನ್ಸ್ ಕಾರುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿದೆ. ಭಾರತದಲ್ಲಿ ಹ್ಯುಂಡೈ ಕಂಪನಿಯು ತನ್ನ ಎನ್ ಸರಣಿಯ ಕಾರುಗಳನ್ನು ಬಿಡುಗಡೆಗೊಳಿಸಲಿದೆ. ಇದರಲ್ಲಿ ಐ20 ಎನ್ ಲೈನ್ ಕಾರನ್ನು ಭಾರತದಲ್ಲಿ ಮೊದಲಿಗೆ ಬಿಡುಗಡೆಗೊಳಿಸಬಹುದು. ಈ ಹೊಸ ಹ್ಯುಂಡೈ ಐ20 ಎನ್ ಲೈನ್ ಕಾರಿನ ವಿಶೇಷತೆಗಳು ಈ ಕೆಳಗಿವೆ.

ಹೊಸ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ವಿಶೇಷತೆಗಳು

ವಿನ್ಯಾಸ

ಹೊಸ ಹ್ಯುಂಡೈ ಐ20 ಎನ್ ಲೈನ್ ಕಾರು ಪರ್ಫಾಮೆನ್ಸ್ ಕಾರು ಆಗಿರುವುದರಿಂದ ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಪರ್ಫಾಮೆನ್ಸ್ ಕಾರು ಹೊಸ ಫ್ರಂಟ್ ಮತ್ತು ರೇರ್ ಬಂಪರ್, ಸೈಡ್ ಸ್ಕರ್ಟ್ ಗಳು ಮತ್ತು ವಿಭಿನ್ನ ವಿನ್ಯಾಸದ ಅಲಾಯ್ ವ್ಹಿಲ್ ಗಳನ್ನು ಹೊಂದಿದೆ.

ಹೊಸ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ವಿಶೇಷತೆಗಳು

ಇದರೊಂದಿಗೆ ಕ್ರೋಪ್ ಟ್ರಿಪ್ಡ್ ಡ್ಯುಯಲ್ ಎಕ್ಸಾಸ್ಟ್ ಅನ್ನು ಹೊಂದಿದೆ. ಸ್ಟ್ಯಾಂಡರ್ಡ್ ಐ20 ಮಾದರಿಗೆ ಹೋಲಿಸಿದರೆ ಐ20 ಎನ್ ಲೈನ್ ಕಾರು ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಒಟ್ಟಾರೆಯಾಗಿ ಈ ಐ20 ಎನ್ ಲೈನ್ ಮಾದರಿಯು ಕಾರು ಪ್ರಿಯರನ್ನು ಸೆಳೆಯುಂತಹ ಆಕರ್ಷಕ ಲುಕ್ ಅನ್ನು ಹೊಂದಿದೆ.

ಹೊಸ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ವಿಶೇಷತೆಗಳು

ಇಂಟಿರಿಯರ್

ಹೊಸ ಹ್ಯುಂಡೈ ಎನ್ ಲೈನ್ ಕಾರಿನ ಇಂಟಿರಿಯರ್ ಹೆಚ್ಚಾಗಿ ಸ್ಟ್ಯಾಂಡರ್ಡ್ ಮಾದರಿಗೆ ಹೋಲುತ್ತದೆ. ಈ ಕಾರಿನ ಒಳಭಾಗದಲ್ಲಿ ಹೊಸ ಸ್ಟೀಯರಿಂಗ್ ವ್ಹೀಲ್, ಮೆಟಲ್ ಪೆಡಲ್ ಗಳು, ಲೆದ್ರ್ ಗೇರ್ ನಾಬ್ ಸೇರಿದಂತೆ ಕೆಲವು ಬದಲಾವಣೆಗಳನ್ನು ಹೊಂದಿವೆ.ಕಾರಿನ ಒಳಭಾಗದ ಹಲವು ಕಡೆಗಳಲ್ಲಿ ಎನ್ ಬ್ಯಾಡ್ಜ್ ಅನ್ನು ಹೊಂದಿದೆ.

ಹೊಸ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ವಿಶೇಷತೆಗಳು

ಫೀಚರ್ಸ್

ಹೊಸ ಹ್ಯುಂಡೈ ಎನ್ ಲೈನ್ ಕಾರಿನಲ್ಲಿ ಹಲವಾರು ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿದೆ. ಈ ಕಾರಿನಲ್ಲಿ ಆಫಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿರುವ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ಅನ್ನು ಹೊಂದಿರುತ್ತದೆ. ಇದರೊಂದಿಗೆ ಫುಲ್ ಡಿಜಿಟಲ್ ಇನ್ಸ್ ಟ್ರೂಮಂಟ್ ಕ್ಲಸ್ಟರ್ ಅನ್ನು ಹೊಂದಿರಲಿದೆ.

ಹೊಸ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ವಿಶೇಷತೆಗಳು

ಎಂಜಿನ್

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹ್ಯುಂಡೈ ಐ20 ಎನ್ ಲೈನ್ ಕಾರಿನಲ್ಲಿ 1.6 ಎಲ್ 4 ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 204 ಬಿಹೆಚ್‍ಪಿ ಪವರ್ ಮತ್ತು 275 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ವಿಶೇಷತೆಗಳು

ಇನ್ನು ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಐ20 ಎನ್ ಲೈನ್ ಕಾರು 1.2 ಎನ್ ಪೆಟ್ರೋಲ್ ಎಂಜಿನ್ ಮತ್ತು 1.0 ಎಲ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ. ಇದು ಸ್ಟ್ಯಾಂಡರ್ಡ್ ಐ20 ಕಾರಿನಲ್ಲಿಯು ಸಹ ಲಭ್ಯವಿದೆ.

ಹೊಸ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ವಿಶೇಷತೆಗಳು

ಬಿಡುಗಡೆ ಮಾಹಿತಿ

ಹೊಸ ಹ್ಯುಂಡೈ ಐ20 ಎನ್ ಲೈನ್ ಕಾರು ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಈ ಹೊಸ ಹ್ಯುಂಡೈ ಐ20 ಎನ್ ಲೈನ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Hyundai i20 N Line – Top Things You Should Know In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X