ಭಾರತದಲ್ಲಿ ಬಿಡುಗಡೆಯಾಗಲಿರುವ Skoda Slavia ಕಾರಿನ ವಿಶೇಷತೆಗಳು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ತನ್ನ ಹೊಸ ಸ್ಲಾವಿಯಾ ಸೆಡಾನ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗಿದೆ. ಈ ಹೊಸ ಸ್ಕೋಡಾ ಸ್ಲಾವಿಯಾ(Skoda Slavia) ಸೆಡಾನ್ ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಲ್ಲಿ ಒಂದಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ Skoda Slavia ಕಾರಿನ ವಿಶೇಷತೆಗಳು

ಭಾರತದಲ್ಲಿ ಸ್ಕೋಡಾ ಸ್ಲಾವಿಯಾ ಜಾಗತಿಕ ಪ್ರಥಮ ಪ್ರದರ್ಶನವನ್ನು ಮಾಡಲು ಸಿದ್ಧವಾಗಿದೆ. ಫೋಕ್ಸ್‌ವ್ಯಾಗನ್ ಗ್ರೂಪ್‌ನ ಇಂಡಿಯಾ ಪ್ಲಾನ್ 2.0 ಅಡಿಯಲ್ಲಿ ಇದು ಬ್ರಾಂಡ್‌ನ ಎರಡನೇ ಮಾದರಿಯಾಗಿದೆ, ಇದು ಹೊಸ ಹೂಡಿಕೆ ಮತ್ತು ಉತ್ಪನ್ನಗಳ ಶ್ರೇಣಿಯನ್ನು ತರುತ್ತದೆ. ರ‍್ಯಾಪಿಡ್ ಸೆಡಾನ್ ಅನ್ನು ಬದಲಿಸಲು, ಹೊಸ ಸ್ಕೋಡಾ ಸ್ಲಾವಿಯಾ ಫೋಕ್ಸ್‌ವ್ಯಾಗನ್ ಹೆಚ್ಚು ಸ್ಥಳೀಯ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಕುಶಾಕ್ ಕಾಂಪ್ಯಾಕ್ಟ್ ಎಸ್‍ಯುವಿಗೆ ಇದೇ ಪ್ಲಾಟ್‌ಫಾರ್ಮ್ ಆಧಾರವಾಗಿದೆ. ಈ ಹೊಸ ಸ್ಕೋಡಾ ಸ್ಲಾವಿಯಾ ಕಾರಿನ ವಿಶೇಷತೆಗಳು ಇಲ್ಲಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ Skoda Slavia ಕಾರಿನ ವಿಶೇಷತೆಗಳು

ವಿನ್ಯಾಸ

ಹೊಸ ಸ್ಕೋಡಾ ಸ್ಲಾವಿಯಾ ಕಾರು ಜೆಕ್ ಬ್ರ್ಯಾಂಡ್‌ನ ಇತ್ತೀಚಿನ ವಿನ್ಯಾಸ ಶೈಲಿಯನ್ನು ಅನುಸರಿಸುತ್ತದೆ ಮತ್ತು ಇದನ್ನು MQB A0-IN ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುವುದು, ಈ ಪ್ಲಾಟ್‌ಫಾರ್ಮ್ ವಿವಿಧ ಬಾಡಿಯ ಶೈಲಿಗಳು ಮತ್ತು ಎಂಜಿನ್ ಆಯ್ಕೆಗಳನ್ನು ಸರಿಹೊಂದಿಸಲು ಸಾಕಷ್ಟು ಬಹುಮುಖವಾಗಿದೆ. ಇನ್ನು ಮುಂಬರುವ ಫೋಕ್ಸ್‌ವ್ಯಾಗನ್ ಮಿಡ್ ಸೈಜ್ ಸೆಡಾನ್, ವರ್ಚಸ್ ಎಂದು ಕರೆಯಲ್ಪಡುತ್ತದೆ, ಈ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರಲಿದೆ, ಸ್ಲಾವಿಯಾ ಈ ಹೊಸ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಮೊದಲ ಸೆಡಾನ್ ಆಗಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ Skoda Slavia ಕಾರಿನ ವಿಶೇಷತೆಗಳು

ಸ್ಕೋಡಾ ಸ್ಲಾವಿಯಾ ಸೆಡಾನ್ ನಾಚ್ ಬ್ಯಾಕ್ ತರಹದ ಸ್ಟೈಲಿಂಗ್ ಅನ್ನು ಹೊಂದಿರುತ್ತದೆ. ಇದು ಕ್ರೋಮ್ ಸರೌಂಡ್‌ನೊಂದಿಗೆ ಸಿಗ್ನೇಚರ್ ಬಟರ್‌ಫ್ಲೈ ಗ್ರಿಲ್, ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಚೂಪಾದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ವಿಭಿನ್ನ ಕ್ಯಾರೆಕ್ಟರ್ ಲೈನ್‌ಗಳು, ಸ್ಲೋಪಿಂಗ್ ರೂಫ್‌ಲೈನ್, ಎಲ್‌ಇಡಿ ಟೈಲ್-ಲೈಟ್ಸ್ ಮತ್ತು ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳನ್ನು ಕೂಡ ಪಡೆಯಲಿದೆ, ಈ ಸ್ಕೋಡಾ ಸ್ಲಾವಿಯಾ ಕಾರು ಫಾಕ್ಟರಿ ಫಿಟಡ್ ಎಲೆಕ್ಟ್ರಿಕ್ ಸನ್ ರೂಫ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಮತ್ತು ಆಟೋಮ್ಯಾಟಿಕ್ ವೈಪರ್ ಗಳು ಒಳಗೊಂಡಿರುತ್ತದೆ,

ಭಾರತದಲ್ಲಿ ಬಿಡುಗಡೆಯಾಗಲಿರುವ Skoda Slavia ಕಾರಿನ ವಿಶೇಷತೆಗಳು

ಇಂಟಿರಿಯರ್

ಹೊಸ ಸ್ಕೋಡಾ ಸ್ಲಾವಿಯಾ ಕಾರಿನ ಇಂಟಿರಿಯರ್ ಟೀಸರ್ ಅನ್ನು ಕಂಪನಿ ಬಿಡುಗಡೆಗೊಳಿಸಿದೆ. ಈ ಕಾರಿನ ಇಂಟಿರಿಯರ್ ನಲ್ಲಿ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿರುವ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ ಮತ್ತು ಎರಡು-ಸ್ಪೋಕ್ ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್‌ನ ಹಿಂದೆ ಇರಿಸಲಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ ಎಂದು ಖಚಿತಪಡಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ Skoda Slavia ಕಾರಿನ ವಿಶೇಷತೆಗಳು

ಇದು ವಿಶಿಷ್ಟವಾದ, ರೌಂಡ್ ಏರ್ ವೆಂಟ್‌ಗಳು, ವ್ಯತಿರಿಕ್ತ ಬಣ್ಣದಲ್ಲಿ ಸಮತಲ ಅಲಂಕಾರಿಕ ಟ್ರಿಮ್ ಸ್ಟ್ರಿಪ್ ಮತ್ತು ಬೈನಾಕಲ್‌ನಲ್ಲಿ ವರ್ಡ್‌ಮಾರ್ಕ್‌ಗಳನ್ನು ಸಹ ಪಡೆಯುತ್ತದೆ. ಈ ಸೆಡಾನ್ ವಿಶಾಲವಾದ ಒಳಭಾಗವನ್ನು ಮತ್ತು ಕ್ಲಾಸ್-ಲೀಡಿಂಗ್ ಬೂಟ್ ಸ್ಪೇಸ್ ಅನ್ನು ನೀಡುತ್ತದೆ ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ Skoda Slavia ಕಾರಿನ ವಿಶೇಷತೆಗಳು

ಆಯಾಮಗಳು

ಹೊಸ ಸ್ಕೋಡಾ ಸ್ಲಾವಿಯಾ ಸೆಡಾನ್ ಆಯಾಮಗಳ ಬಗ್ಗೆ ಹೇಳುವುದಾದರೆ, ಇದು 4,541 ಎಂಎಂ ಉದ್ದ, 1,752 ಅಗಲ ಮತ್ತು 1,487 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಸ್ಕೋಡಾ ಸ್ಲಾವಿಯಾ ಕಾರು 2,651 ಎಂಎಂ ವ್ಹೀಲ್‌ಬೇಸ್‌ ಅನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ Skoda Slavia ಕಾರಿನ ವಿಶೇಷತೆಗಳು

ಹೋಂಡಾ ಸಿಟಿ ಸೆಡಾನ್ ಹೊಸ ಸ್ಲಾವಿಯಾಗಿಂತಲೂ ಉದ್ದವಾಗಿದೆ ಮತ್ತು ಎತ್ತರವಾಗಿದೆ, ಆದರೆ ಸ್ಕೋಡಾ ಸ್ಲಾವಿಯಾ ಕಾರು ಇತರ ಪ್ರತಿಸ್ಪರ್ಧಿಗಳಾದ ಹ್ಯುಂಡೈ ವೆರ್ನಾ ಮತ್ತು ಮಾರುತಿ ಸುಜುಕಿ ಸಿಯಾಜ್ ಎರಡಕ್ಕಿಂತಲೂ ದೊಡ್ಡದಾಗಿದೆ. ಇನ್ನು ಸ್ಲಾವಿಯಾ ತನ್ನ ಎಲ್ಲಾ ಪ್ರತಿಸ್ಪರ್ಧಿಗಳಿಗಿಂತ ಅತಿ ಉದ್ದದ ವ್ಹೀಲ್‌ಬೇಸ್‌ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ Skoda Slavia ಕಾರಿನ ವಿಶೇಷತೆಗಳು

ಎಂಜಿನ್

ಹೊಸ ಸ್ಕೋಡಾ ಸ್ಲಾವಿಯಾ ಕಾರಿನ ಎಂಜಿನ್ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಈ ಹೊಸ ಸ್ಕೋಡಾ ಸ್ಲಾವಿಯಾ ಕಾರು ಎಂಜಿನ್ ಅನ್ನು ಸ್ಕೋಡಾ ಕುಶಾಕ್‌ನೊಂದಿಗೆ ಹಂಚಿಕೊಳ್ಳುತ್ತದೆ. ಇದರರ್ಥ, ಸ್ಲಾವಿಯಾ ಅದೇ 1.0-ಲೀಟರ್ TSI ಮೂರು-ಸಿಲಿಂಡರ್ ಎಂಜಿನ್ ಮತ್ತು 1.5-ಲೀಟರ್ ನಾಲ್ಕು-ಸಿಲಿಂಡರ್ TSI ಎಂಜಿನ್ ಜೊತೆಗೆ ಎರಡೂ ಟರ್ಬೋಚಾರ್ಜ್ಡ್ ಪೆಟ್ರೋಲ್ ಮೋಟಾರ್‌ಗಳಾಗಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ Skoda Slavia ಕಾರಿನ ವಿಶೇಷತೆಗಳು

ಇದರಲ್ಲಿ 1.0-ಲೀಟರ್ TSI ಮೂರು-ಸಿಲಿಂಡರ್ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕರ್ನವಾಟರ್ ಆಯ್ಕೆಯನ್ನು ನೀಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ Skoda Slavia ಕಾರಿನ ವಿಶೇಷತೆಗಳು

ಇನ್ನು ದೊಡ್ಡದಾದ 1.5-ಲೀಟರ್ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ DSG ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಅಲ್ಲದೆ, ಕುಶಾಕ್‌ನಲ್ಲಿರುವಂತೆ, 1.5-ಲೀಟರ್ ಎಂಜಿನ್ ಹೊಂದಿರುವ ಸ್ಲಾವಿಯಾ ಸಕ್ರಿಯ ಸಿಲಿಂಡರ್ ತಂತ್ರಜ್ಞಾನದೊಂದಿಗೆ ಬರುತ್ತದೆ (ACT) ಇದು ಎಂಜಿನ್ ವೇಗದಲ್ಲಿದ್ದಾಗ ಎರಡು ಸಿಲಿಂಡರ್‌ಗಳನ್ನು ಆಟೋಮ್ಯಾಟಿಕ್ ಆಗಿ ಸ್ಥಗಿತಗೊಳಿಸುತ್ತದೆ. ಹೀಗಾಗಿ ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ Skoda Slavia ಕಾರಿನ ವಿಶೇಷತೆಗಳು

ಬೆಲೆ

ಸ್ಕೋಡಾ ಸ್ಲಾವಿಯಾ ಕಾರಿನ ಬೆಲೆಗೆ ಸಂಬಂಧಿಸಿದಂತೆ ಯಾವುದೇ ವಿವರಗಳನ್ನು ಬಿಡುಗಡೆ ಮಾಡದಿದ್ದರೂ, ಸ್ಕೋಡಾ ಮುಂಬರುವ ಸ್ಕೋಡಾ ಸ್ಲಾವಿಯಾವನ್ನು ರ‍್ಯಾಪಿಡ್ ಗಿಂತ ಸ್ವಲ್ಪ ಬೆಲೆಯನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ Skoda Slavia ಕಾರಿನ ವಿಶೇಷತೆಗಳು

ಸ್ಕೋಡಾ ಸ್ಲಾವಿಯಾ 6 ಏರ್‌ಬ್ಯಾಗ್‌ಗಳನ್ನು ಸಹ ಪಡೆಯುತ್ತದೆ, ಇದು ಟಾಪ್-ಎಂಡ್ ರೂಪಾಂತರಗಳಿಗೆ ಸೀಮಿತವಾಗಿರಬಹುದು. ಗ್ಲೋಬಲ್ ಎನ್‌ಸಿಎಪಿ ಮಾನದಂಡಗಳಿಗಿಂತ ಹೆಚ್ಚು ಕಠಿಣ ಪರಿಸ್ಥಿತಿಗಳಲ್ಲಿ ಕಂಪನಿಯು ಸೆಡಾನ್ ಅನ್ನು ಅದರಕ್ರ್ಯಾಶ್‌ವರ್ಥಿನೆಸ್‌ಗಾಗಿ ಆಂತರಿಕವಾಗಿ ಪರೀಕ್ಷಿಸಿದೆ ಎಂದು ಕಂಪನಿಯು ಹೇಳಿದೆ. ಕಾರು ತಯಾರಕರು ಪಾದಚಾರಿ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾರನ್ನು ವಿನ್ಯಾಸಗೊಳಿಸಿದ್ದಾರೆ. ಹೊಸ ಸ್ಕೋಡಾ ಸ್ಲಾವಿಯಾ ಸುರಕ್ಷಿತ ಸೆಡಾನ್ ಗಳಲ್ಲಿ ಒಂದಾಗಿರಲಿದೆ.

Article Published On: Wednesday, November 10, 2021, 19:35 [IST]
English summary
Top things to know about the upcoming skoda slavia find here details
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+