ಜನವರಿ 1ರಿಂದ ಮತ್ತಷ್ಟು ದುಬಾರಿಯಾಗಲಿವೆ Toyota ಕಾರುಗಳ ಬೆಲೆ

ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟೊಯೊಟಾ(Toyota) ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಹೆಚ್ಚಿಸಲು ನಿರ್ಧರಿಸಿದೆ.

ಜನವರಿ 1ರಿಂದ ಮತ್ತಷ್ಟು ದುಬಾರಿಯಾಗಲಿವೆ Toyota ಕಾರುಗಳ ಬೆಲೆ

ಆಟೋ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ವಾಹನಗಳ ಬೆಲೆಯಲ್ಲಿ ನಿರಂತರವಾಗಿ ಪರಿಷ್ಕರಣೆ ಮಾಡುತ್ತಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ವಾಹನ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.

ಜನವರಿ 1ರಿಂದ ಮತ್ತಷ್ಟು ದುಬಾರಿಯಾಗಲಿವೆ Toyota ಕಾರುಗಳ ಬೆಲೆ

ಕಳೆದ ಕೆಲವು ತಿಂಗಳುಗಳಲ್ಲಿ ಹೊಸ ವಾಹನಗಳ ಬೆಲೆಯು ಸಾಕಷ್ಟು ಏರಿಕೆಯಾಗಿದ್ದು, ಇದೀಗ ಟೊಯೊಟಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಯ ಬೆಲೆಯಲ್ಲಿ ಹೆಚ್ಚಳ ಮಾಡುತ್ತಿದೆ.

ಜನವರಿ 1ರಿಂದ ಮತ್ತಷ್ಟು ದುಬಾರಿಯಾಗಲಿವೆ Toyota ಕಾರುಗಳ ಬೆಲೆ

ಟೊಯೊಟಾ ಕಂಪನಿಯು ಕಳೆದ ಅಗಸ್ಟ್‌ ಮತ್ತು ಅಕ್ಟೋಬರ್‌ನಲ್ಲಿ ಇನೋವಾ ಕ್ರಿಸ್ಟಾ ಬೆಲೆ ಹೆಚ್ಚಳ ಮಾಡಿತ್ತು. ಇದೀಗ ಇನೋವಾ ಕ್ರಿಸ್ಟಾ ಸೇರಿ ಎಲ್ಲಾ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ್ದು, ಮಾಹಿತಿಗಳ ಪ್ರಕಾರ ಟೊಯೊಟಾ ಕಂಪನಿಯು ಕಾರುಗಳ ಬೆಲೆಯನ್ನು ಶೇ.2 ರಷ್ಟು ಹೆಚ್ಚಳ ಮಾಡಬಹುದು ಎನ್ನಲಾಗಿದೆ.

ಜನವರಿ 1ರಿಂದ ಮತ್ತಷ್ಟು ದುಬಾರಿಯಾಗಲಿವೆ Toyota ಕಾರುಗಳ ಬೆಲೆ

ಹೊಸ ದರವು 2022ರ ಜನವರಿ 1ರಿಂದಲೇ ಅನ್ವಯವಾಗಲಿದ್ದು, ಹೆಚ್ಚಳವಾದ ಹೊಸ ದರ ಪಟ್ಟಿ ಶೀಘ್ರದಲ್ಲೇ ಪ್ರಕಟವಾಗಿದೆ. ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಶೇ.2 ರಷ್ಟು ಬೆಲೆ ಹೆಚ್ಚಳವಾದಲ್ಲಿ ಅರ್ಬನ್ ಕ್ರೂಸರ್ ಮತ್ತು ಗ್ಲಾಂಝಾ ಕಾರುಗಳು ಬೆಲೆ ರೂ. 5 ಸಾವಿರ ರೂ.20 ಸಾವಿರದಷ್ಟು, ಇನೋವಾ ಕ್ರಿಸ್ಟಾ ಬೆಲೆಯಲ್ಲಿ ರೂ. 35 ಸಾವಿರದಿಂದ ರೂ. 50 ಸಾವಿರದಷ್ಟು ದುಬಾರಿಯಾಗಲಿದ್ದರೆ ಹೈ ಎಂಡ್ ಮಾದರಿಯಾದ ವೆಲ್‌ಫೈರ್ ಮಾದರಿಯ ಬೆಲೆಯಲ್ಲಿ ರೂ.50 ಸಾವಿರ ರೂ. 1.50 ಲಕ್ಷದಷ್ಟು ಬೆಲೆ ಹೆಚ್ಚಳವಾಗುವ ನೀರಿಕ್ಷೆಯಿದೆ.

ಜನವರಿ 1ರಿಂದ ಮತ್ತಷ್ಟು ದುಬಾರಿಯಾಗಲಿವೆ Toyota ಕಾರುಗಳ ಬೆಲೆ

ಕೋವಿಡ್‌ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ಕೊರತೆಯು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಹೆಚ್ಚುತ್ತಿರುವ ವೆಚ್ಚಗಳ ನಿರ್ವಹಣೆಗಾಗಿ ಆಟೋ ಕಂಪನಿಗಳು ನಿರಂತರವಾಗಿ ಬೆಲೆ ಪರಿಷ್ಕರಣೆ ಮಾಡುತ್ತಿವೆ.

ಜನವರಿ 1ರಿಂದ ಮತ್ತಷ್ಟು ದುಬಾರಿಯಾಗಲಿವೆ Toyota ಕಾರುಗಳ ಬೆಲೆ

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ದರ ಹೆಚ್ಚಿಸುತ್ತಿದ್ದು, 2021ರಲ್ಲೇ ಟೊಯೊಟಾ ಕಂಪನಿಯು ಸೇರಿದಂತೆ ಪ್ರಮುಖ ಕಾರು ಕಂಪನಿಗಳು ಮೂರರಿಂದ ನಾಲ್ಕು ಬಾರಿ ದರ ಹೆಚ್ಚಿಸಿವೆ.

ಜನವರಿ 1ರಿಂದ ಮತ್ತಷ್ಟು ದುಬಾರಿಯಾಗಲಿವೆ Toyota ಕಾರುಗಳ ಬೆಲೆ

ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ.1 ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿರುವುದರಿಂದ ಕಳೆದ ಕೆಲ ತಿಂಗಳಿನಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿ ರೂ. 60 ಸಾವಿರದಿಂದ ರೂ.1.20 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ಜನವರಿ 1ರಿಂದ ಮತ್ತಷ್ಟು ದುಬಾರಿಯಾಗಲಿವೆ Toyota ಕಾರುಗಳ ಬೆಲೆ

ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ರೂ. 80 ಸಾವಿರದಿಂದ ರೂ. 1.50 ಲಕ್ಷದವರೆಗೆ ಬೆಲೆ ಹೆಚ್ಚಳವಾಗಿದ್ದು, ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮವೇ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ.

ಜನವರಿ 1ರಿಂದ ಮತ್ತಷ್ಟು ದುಬಾರಿಯಾಗಲಿವೆ Toyota ಕಾರುಗಳ ಬೆಲೆ

ಇನ್ನು ಕೋವಿಡ್ ಪರಿಣಾಮ ಸುರಕ್ಷಿತ ವಾಣಿಜ್ಯ ವ್ಯವಹಾರಗಳು ಹೊಸ ಸವಾಲಾಗಿ ಪರಿಣಮಿಸಿದ್ದು, ಕೋವಿಡ್ 2ನೇ ಅಲೆಯ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವಾಗಲೇ 3ನೇ ಅಲೆಯ ಭೀತಿಯಿಂದಾಗಿ ವಾಣಿಜ್ಯ ವ್ಯವಹಾರಗಳು ನೆಲಕಚ್ಚುವ ಸಾಧ್ಯತೆಗಳಿವೆ.

ಜನವರಿ 1ರಿಂದ ಮತ್ತಷ್ಟು ದುಬಾರಿಯಾಗಲಿವೆ Toyota ಕಾರುಗಳ ಬೆಲೆ

ವೈರಸ್ ಭೀತಿಯು ಆಟೋ ಉತ್ಪಾದನಾ ಕಂಪನಿಗಳಿಗೆ ತೀವ್ರ ಆರ್ಥಿಕ ಹಿನ್ನಡೆ ಉಂಟು ಮಾಡುವ ಸಾಧ್ಯತೆಗಳಿದ್ದು, ವಾಹನ ಉತ್ಪಾದನಾ ಕಂಪನಿಗಳು ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ವಾಹನಗಳ ಮಾರಾಟವನ್ನು ಸುಧಾರಿಸುವತ್ತ ಹೊಸ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತಿವೆ.

ಜನವರಿ 1ರಿಂದ ಮತ್ತಷ್ಟು ದುಬಾರಿಯಾಗಲಿವೆ Toyota ಕಾರುಗಳ ಬೆಲೆ

ದೇಶಾದ್ಯಂತ ಕೋವಿಡ್ ಸೋಂಕಿತರ ಪ್ರಮಾಣದಲ್ಲಿ ಏರಿಳಿತ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಟೊಯೊಟಾ ಕಂಪನಿಯು ಸಹ ಗ್ರಾಹಕರು ಮತ್ತು ಉದ್ಯೋಗಿಗಳ ಆರೋಗ್ಯ ದೃಷ್ಠಿಯಿಂದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಆದ್ಯತೆ ನೀಡುತ್ತಿದೆ.

ಜನವರಿ 1ರಿಂದ ಮತ್ತಷ್ಟು ದುಬಾರಿಯಾಗಲಿವೆ Toyota ಕಾರುಗಳ ಬೆಲೆ

ಕೋವಿಡ್ ಪರಿಣಾಮ ಗ್ರಾಹಕರನ್ನು ನೇರವಾಗಿ ಶೋರೂಂ ಭೇಟಿಯನ್ನು ತಪ್ಪಿಸಲು ಬಹುತೇಕ ವಾಹನ ಕಂಪನಿಗಳು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ತೆರೆದಿದ್ದು, ವಾಹನ ಕಂಪನಿಗಳ ಹೊಸ ಉಪಕ್ರಮಕ್ಕೆ ಗ್ರಾಹಕರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ.

ಜನವರಿ 1ರಿಂದ ಮತ್ತಷ್ಟು ದುಬಾರಿಯಾಗಲಿವೆ Toyota ಕಾರುಗಳ ಬೆಲೆ

ವರ್ಚುವಲ್ ಶೋರೂಂಗಳು ಗ್ರಾಹಕರಿಗೆ ನೇರವಾಗಿ ಶೋರೂಂ ಭೇಟಿಯಾದ ಅನುಭವವನ್ನೇ ನೀಡಲಿದ್ದು, ಹೊಸ ಮಾರಾಟ ಸೌಲಭ್ಯಕ್ಕೆ ಟೊಯೊಟಾ ಇಂಡಿಯಾ ಕಂಪನಿಯು ಕೂಡಾ ಇದೀಗ ಚಾಲನೆ ನೀಡಿದೆ.

ಜನವರಿ 1ರಿಂದ ಮತ್ತಷ್ಟು ದುಬಾರಿಯಾಗಲಿವೆ Toyota ಕಾರುಗಳ ಬೆಲೆ

ಹೊಸ ವಾಹನಗಳಿಗಾಗಿ ಟೊಯೊಟಾ ಕಂಪನಿಯು ಪ್ರತ್ಯೇಕ ವೆಬ್‌ತಾಣವನ್ನು ತೆರೆದಿದ್ದು, ಕಾರು ಖರೀದಿದಾರರು ತಮ್ಮ ಇಷ್ಟದ ವಾಹನಗಳ ಬಗೆಗೆ ತಿಳಿದುಕೊಳ್ಳಲು ಶೋರೂಂಗೆ ನೇರ ಭೇಟಿ ನೀಡದೆ ಮನೆಯಲ್ಲೇ ಕುಳಿತು ಶೋರೂಂ ಮಾದರಿಯಲ್ಲೇ ವರ್ಚುವಲ್ ಶೋರೂಂ ಅನ್ನು ವೀಕ್ಷಿಸಿಬಹುದಾಗಿದೆ.

Article Published On: Wednesday, December 15, 2021, 17:00 [IST]
English summary
Toyota cars price hike entire model lineup from 1st january 2022 details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+