ಭಾರತದಲ್ಲಿ ಬಿಡುಗಡೆಯಾಗಲಿದೆ Maruti Ertiga ಎಂಪಿವಿಯ ರಿಬ್ಯಾಡ್ಜ್ ವರ್ಷನ್ Toyota ಕಾರು

ಜಪಾನ್ ಮೂಲದ ಜನಪ್ರಿಯ ವಾಹನ ಕಂಪನಿಯಾದ ಟೊಯೊಟಾ ಮಾರುತಿ ಸುಜುಕಿ ಎರ್ಟಿಗಾವನ್ನು ಆಧರಿಸಿದ ರೂಮಿಯನ್ ಎಂಪಿವಿಯನ್ನು ದಕ್ಷಿಣ ಆಫ್ರಿಕಾದ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತು. ಇದು 7-ಸೀಟರ್ ಮಾರುತಿ ಸುಜುಕಿ ಎರ್ಟಿಗಾದ ರಿಬ್ಯಾಡ್ಜ್ ಮಾದರಿಯಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ Maruti Ertiga ಎಂಪಿವಿಯ ರಿಬ್ಯಾಡ್ಜ್ ವರ್ಷನ್ Toyota ಕಾರು

ಇದೀಗ ಟೊಯೊಟಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ರೂಮಿಯನ್ ಹೆಸರಿಗಾಗಿ ಟ್ರೇಡ್‌ಮಾರ್ಕ್ ಅರ್ಜಿಯನ್ನು ಸಲ್ಲಿಸಿದೆ. ಇದರಿಂದ 7-ಸೀಟರ್ ಎಂಪಿವಿಯನ್ನು ಭಾರತದಲ್ಲಿ ಅದೇ ಹೆಸರಿನಲ್ಲಿ ಪರಿಚಯಿಸಲಾಗುವುದು ಎಂದು ತಿಳಿಯುತ್ತದೆ. ಆದರೆ ಟೊಯೊಟಾ ಕಂಪನಿಯು ಇದರ ಬಗ್ಗೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಎಂಪಿವಿಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆ ಇದೆ. ಅಲ್ಲದೇ ಕೈಗೆಟುಕು ದರದಲ್ಲಿ ಹೊಸ ಎಂಪಿವಿಯನ್ನು ಬಿಡುಗಡೆಗೊಳಿಸಿ ಮಾರಾಟವನ್ನು ಹೆಚ್ಚಿಸಿ ತಂತ್ರವನ್ನು ಹೊಂದಿರಬಹುದು.

ಭಾರತದಲ್ಲಿ ಬಿಡುಗಡೆಯಾಗಲಿದೆ Maruti Ertiga ಎಂಪಿವಿಯ ರಿಬ್ಯಾಡ್ಜ್ ವರ್ಷನ್ Toyota ಕಾರು

ಟೊಯೊಟಾ ರೂಮಿಯನ್(Toyota Rumion) ಎಂದು ಕರೆಯಲ್ಪಡುವ ಹೊಸ ಎಂಪಿವಿ ಭಾರತದಲ್ಲಿ ಮಾರಾಟದಲ್ಲಿರುವ ಮಾರುತಿ ಸುಜುಕಿ ಎರ್ಟಿಗಾವನ್ನು ಹೋಲುತ್ತದೆ. ಈ ಹೊಸ ಟೊಯೊಟಾ ರೂಮಿಯನ್ ಎಂಪಿವಿ ತನ್ನನ್ನು ಮಾರುತಿ ಎರ್ಟಿಗಾದಿಂದ ಪ್ರತ್ಯೇಕಿಸಲು ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ. ರೂಮಿಯನ್ ಗ್ಲೆನ್ಜಾ/ಸ್ಟಾರ್ಟ್ಲೆಟ್ ಮತ್ತು ಅರ್ಬನ್ ಕ್ರೂಸರ್ ಸೇರಿದಂತೆ ಇತರ ರೀ-ಬ್ಯಾಡ್ಜ್ಡ್ ಟೊಯೊಟಾ ಕಾರುಗಳನ್ನು ಕ್ರಮವಾಗಿ ಬಲೆನೊ ಮತ್ತು ಬ್ರೆಝಾವನ್ನು ಆಧರಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ Maruti Ertiga ಎಂಪಿವಿಯ ರಿಬ್ಯಾಡ್ಜ್ ವರ್ಷನ್ Toyota ಕಾರು

ಇದನ್ನು ಸೇರಿಸುತ್ತಾ, ಕಂಪನಿಯು ದಕ್ಷಿಣ ಆಫ್ರಿಕಾದ ಸಿಯಾಜ್ ಆಧಾರಿತ ಬೆಲ್ಟಾ ಸೆಡಾನ್ ಅನ್ನು ಪರಿಚಯಿಸಲು ಸಜ್ಜಾಗಿದೆ. ಟೊಯೊಟಾ ರೂಮಿಯನ್ ಮೂಲತಃ ಅಸ್ತಿತ್ವದಲ್ಲಿರುವ ಎರ್ಟಿಗಾದ ರೀ-ಬ್ಯಾಡ್ಜ್ ಆವೃತ್ತಿಯಾಗಿದೆ. ಇದನ್ನು 2018 ರಲ್ಲಿ ಪರಿಚಯಿಸಲಾಯಿತು. ಇಂಡಿಯಾ-ಸ್ಪೆಕ್ ಮಾದರಿಯು ಶೀಘ್ರದಲ್ಲೇ ಮಿಡ್-ಲೈಫ್ ಫೇಸ್ ಲಿಫ್ಟ್ ಅನ್ನು ಸ್ವೀಕರಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ Maruti Ertiga ಎಂಪಿವಿಯ ರಿಬ್ಯಾಡ್ಜ್ ವರ್ಷನ್ Toyota ಕಾರು

ಇದು 2022ರ ಆರಂಭದಲ್ಲಿ ನಮ್ಮ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇನ್ನು ಟೊಯೊಟಾ ರೂಮಿಯನ್ ಎಂಪಿವಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ. ಹೊಸ ರೂಮಿಯನ್ ಎಂಪಿವಿಯು ಟೊಯೋಟಾ ಬ್ಯಾಡ್ಜ್‌ನೊಂದಿಗೆ ವಿಭಿನ್ನ ಗ್ರಿಲ್ ಅನ್ನು ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ Maruti Ertiga ಎಂಪಿವಿಯ ರಿಬ್ಯಾಡ್ಜ್ ವರ್ಷನ್ Toyota ಕಾರು

ಕ್ಯಾಬಿನ್ ಒಳಗೆ, ಹೊಸ ರೂಮಿಯನ್ ಬ್ಲ್ಯಾಕ್ ಇಂಟಿರಿಯರ್ ಅನ್ನು ಮರದ ವುಡನ್ ನೊಂದಿಗೆ ಪಡೆಯುತ್ತದೆ. ಈ ಹೊಸ ಟೊಯೊಟಾ ರೂಮಿಯನ್ ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಸ್ವೀಕರಿಸುವುದಿಲ್ಲ. ಈ ಟೊಯೊಟಾ ರೂಮಿಯನ್ ಎಂಪಿವಿಯಲ್ಲಿ 1.5-ಲೀಟರ್ 4-ಸಿಲಿಂಡರ್ ನ್ಯಾಚುರಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ Maruti Ertiga ಎಂಪಿವಿಯ ರಿಬ್ಯಾಡ್ಜ್ ವರ್ಷನ್ Toyota ಕಾರು

ಇದು ಎರ್ಟಿಗಾ ಎಂಪಿವಿಯಲ್ಲಿ ಕೂಡ ಕಾಣಬಹುದು. ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಟಾರ್ಕ್ ಕರ್ನವಾಟರ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ,

ಭಾರತದಲ್ಲಿ ಬಿಡುಗಡೆಯಾಗಲಿದೆ Maruti Ertiga ಎಂಪಿವಿಯ ರಿಬ್ಯಾಡ್ಜ್ ವರ್ಷನ್ Toyota ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಎರ್ಟಿಗಾ ಎಂಪಿವಿಯನ್ನು ಅರೆನಾ ಡೀಲರುಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಂಪಿವಿಗಳ ಪಟ್ಟಿಯಲ್ಲಿ ಎರ್ಟಿಗಾ ನಂ.1 ಸ್ಥಾನದಲ್ಲಿದೆ. ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಎಂಪಿವಿಗಳ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ. ಇದರಿಂದ ಮಾರುತಿ ಸುಜುಕಿ ಎರ್ಟಿಗ ಎಂಪಿವಿಯಲ್ಲಿ ಹಲವು ನವೀಕರಣಗಳನ್ನು ನಡೆಸುತ್ತಾ ಬಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ Maruti Ertiga ಎಂಪಿವಿಯ ರಿಬ್ಯಾಡ್ಜ್ ವರ್ಷನ್ Toyota ಕಾರು

ಇದೀಗ ಮಾರುತಿ ಸುಜುಕಿ ಕಂಪನಿಯು ಎರ್ಟಿಗಾ ಎಂಪಿವಿಯಲ್ಲಿ ಗಮನಾರ್ಹವಾದ ನವೀಕರಣವನ್ನು ನಡೆಸಲು ಸಜ್ಜಾಗುತ್ತಿದೆ. ಭಾರತದಲ್ಲಿ ಮಾರುತಿ ಸುಜುಕಿಯ ಮುಖ್ಯ ಪ್ರತಿಸ್ಪರ್ಧಿ ಹ್ಯುಂಡೈ ಕಂಪನಿಯು ಕ್ರೆಟಾವನ್ನು ಆಧರಿಸಿ ಅಲ್ಕಾಜರ್ 7-ಸೀಟರ್ ಮಾದರಿಯನ್ನು ಬಿಡುಗಡೆಗೊಳಿಸುವುದರಿಂದ ಪೈಪೋಟಿ ಹೆಚ್ಚಾಗುತ್ತದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹಲವು 7-ಸೀಟರ್ ಮಾದರಿಗಳ ಆಯ್ಕೆಗಳಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ Maruti Ertiga ಎಂಪಿವಿಯ ರಿಬ್ಯಾಡ್ಜ್ ವರ್ಷನ್ Toyota ಕಾರು

ಇನ್ನು ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ, ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಮಾದರಿಯ ಬಗ್ಗೆ ಹೇಳುವುದಾದರೆ, ಇದರಲ್ಲಿ ಏಕೈಕ 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಮಾರಾಟವಾಗುತ್ತಿದೆ. ಈ ಮಾರುತಿ ಎರ್ಟಿಗಾ ಕಾರಿನಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, 15 ಇಂಚಿನ ವ್ಹೀಲ್ ಗಳು, ಆಂಡ್ರಾಯ್ಡ್ ಆಟೋ ಮತ್ತು ಕಾರ್‌ಪ್ಲೇಯೊಂದಿಗೆ 7 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದರೊಂದಿಗೆ ಪುಶ್-ಬಟನ್ ಸ್ಟಾರ್ಟ್-ಸ್ಟಾಪ್, ಹಿಂಭಾಗದ ಎಸಿಯೊಂದಿಗೆ ಆಟೋ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಕಪ್ ಹೋಲ್ಡರ್ಸ್ ಮತ್ತು ಸ್ಪೀಕರ್ ಆಡಿಯೊ ಸಿಸ್ಟಂ ಅನ್ನು ಕೂಡ ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ Maruti Ertiga ಎಂಪಿವಿಯ ರಿಬ್ಯಾಡ್ಜ್ ವರ್ಷನ್ Toyota ಕಾರು

ಇನ್ನು ಟೊಯೊಟಾ ಕಂಪನಿಯು ಯಾರಿಸ್ ಕಾರಿನ ಉತ್ಪಾದನೆಯನ್ನು ಈಗಾಗಲೇ ಸ್ಥಗಿತಗೊಳಿಸಿದೆ. ಇದರ ಸ್ಥಾನಕ್ಕೆ ಮಾರುತಿ ಸಿಯಾಜ್ ರಿಬ್ಯಾಡ್ಜ್ ಆವೃತ್ತಿಯಾದ ಬೆಲ್ಟಾ ಕಾರನ್ನು ಟೊಯೊಟಾ ಕಂಪನಿಯು ಪರಿಚಯಿಸಲಿದೆ. ಟೊಯೊಟಾ ಯಾರಿಸ್ ಕಾರು ಮಾರುತಿಯ ಸಿಯಾಜ್ ಮಾದರಿಯ ಅದೇ ವಿಭಾಗದಲ್ಲಿ ಮಾರಾಟವಾಗುತ್ತಿದೆ. ಜಪಾನ್ ಮೂಲದ ಎರಡು ದೈತ್ಯ ವಾಹನ ತಯಾರಕರ ನಡುವಿನ ಸಹಭಾಗಿತ್ವದಲ್ಲಿ ರಿಬ್ಯಾಡ್ಜ್ ಅಗಿ ಮಾರಾಟವಾಗುವ ಮೂರನೇ ಮಾದರಿ ಸಿಯಾಜ್ ಆಗಿರಬಹುದು.

ಭಾರತದಲ್ಲಿ ಬಿಡುಗಡೆಯಾಗಲಿದೆ Maruti Ertiga ಎಂಪಿವಿಯ ರಿಬ್ಯಾಡ್ಜ್ ವರ್ಷನ್ Toyota ಕಾರು

ಮಾರುತಿ ಸುಜುಕಿ ಸಿಯಾಜ್ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಸೆಡಾನ್ ಕಾರುಗಳಲ್ಲಿ ಒಂದಾಗಿದೆ.ಈ ಹಿಂದೆ ಮಾರುತಿ ಸುಜುಕಿ ಕಾರುಗಳ ರಿಬ್ಯಾಡ್ಜ್ ಮಾದರಿಗಳಾಗಿ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಎಂಬ ಮಾದರಿಗಳನ್ನು ಬಿಡುಗಡೆಗೊಳಿಸಿ ಉತ್ತಮ ಮಾರಾಟವನ್ನು ಪಡೆದಿದೆ. ಅಲ್ಲದೇ ಯಾರಿಸ್ ಮಾರಾಟದಲ್ಲಿ ದೊಡ್ಡ ಮಟ್ಟದ ಕುಸಿತ ಕಂಡಿದೆ. ಈ ಎಲ್ಲಾ ಕಾರಣದಿಂದ ಯಾರಿಸ್ ಸ್ಥಾನಕ್ಕೆ ಜನಪ್ರಿಯ ಸಿಯಾಜ್ ಸೆಡಾನ್ ರಿಬ್ಯಾಡ್ಜ್ ಮಾದರಿಯನ್ನು ತರಲು ನಿರ್ಧರಿಸಬಹುದು.

ಭಾರತದಲ್ಲಿ ಬಿಡುಗಡೆಯಾಗಲಿದೆ Maruti Ertiga ಎಂಪಿವಿಯ ರಿಬ್ಯಾಡ್ಜ್ ವರ್ಷನ್ Toyota ಕಾರು

ಇನ್ನು ಹೊಸ ಟೊಯೊಟಾ ರೂಮಿಯನ್ ಎಂಪಿವಿಯು ಮಿಸ್ಟಿಕ್ ಪರ್ಲ್ ವೈಟ್, ಅಜೂರ್ ಬ್ಲೂ, ಸೀಲ್ ಗ್ರೇ ಮೆಟಾಲಿಕ್, ಬ್ಲೇಜ್ ರೆಡ್ ಮತ್ತು ಶಾಡೋ ಬ್ಲ್ಯಾಕ್ ಪರ್ಲ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಟೊಯೊಟಾ ರೂಮಿಯನ್ ಎಂಪಿವಿಯು ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ, ಬಹುಶಃ ಮುಂದಿನ ವರ್ಷದ ಆರಂಭದಲ್ಲಿ. ಭಾರತ-ಸ್ಪೆಕ್ ಮಾದರಿಯು ನವೀಕರಿಸಿದ ಎರ್ಟಿಗಾವನ್ನು ಆಧರಿಸಿರಬಹುದು. ಈ ಹೊಸ ರಿಬ್ಯಾಡ್ಜ್ ಮಾದರಿಯು ಕೂಡ ಗ್ರಾಹಕರನ್ನು ಸೆಳೆಯಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಟೊಯೊಟಾ toyota
English summary
Toyota filed rumion trademark in india for rebadged ertiga details
Story first published: Tuesday, October 19, 2021, 14:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X