Toyota Fortuner Legender 4X4 ವೆರಿಯೆಂಟ್ ಹೊಸ ಟಿವಿಸಿ ಬಿಡುಗಡೆ

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟೊಯೊಟಾ ತನ್ನ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಟೊಯೊಟಾ ಫಾರ್ಚುನರ್ ಭಾರತೀಯ ಮಾರುಕಟ್ಟೆಯಲ್ಲಿ ಬಹುದೀರ್ಘ ಕಾಲದಿಂದ ಜನಪ್ರಿಯ ಎಸ್‍ಯುವಿಯಾಗಿದೆ.

Toyota Fortuner Legender 4X4 ವೆರಿಯೆಂಟ್ ಹೊಸ ಟಿವಿಸಿ ಬಿಡುಗಡೆ

ಈ ಜನಪ್ರಿಯ ಟೊಯೊಟಾ ಫಾರ್ಚುನರ್ ಎಸ್‍ಯುವಿ ಟಾಪ್ ವೆರಿಯೆಂಟ್ ಲೆಜೆಂಡರ್ ಆಗಿದೆ. ಇನ್ನು ಇತ್ತೀಚೆಗೆ ಬಿಡುಗಡೆಗೊಂಡ ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.42.33 ಲಕ್ಷಗಳಾಗಿದೆ. ಇನ್ನು ಟೊಯೊಟಾ ಇಂಡಿಯಾ ಕಂಪನಿಯು ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಮಾದರಿಗಾಗಿ ಆಕರ್ಷಕ ಟಿವಿಸಿಯನ್ನು ಬಿಡುಗಡೆಗೊಳಿಸಿದೆ. ಟೊಯೊಟಾ ಕಂಪನಿಯು ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಈ ಟಿವಿಸಿ ವೀಡಿಯೊವನ್ನು ಅಪ್ಲೋಡ್ ಮಾಡಲಾಗಿದೆ.

Toyota Fortuner Legender 4X4 ವೆರಿಯೆಂಟ್ ಹೊಸ ಟಿವಿಸಿ ಬಿಡುಗಡೆ

ಈ ಹೊಸ ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಮಾದರಿಯನ್ನು ಖರೀದಿಸಲು ಬಯಸುವ ಗ್ರಾಹಕರು ಆನ್‌ಲೈನ್‌ನಲ್ಲಿ ಅಥವಾ ಹತ್ತಿರದ ಅಧಿಕೃತ ಟೊಯೊಟಾ ಡೀಲರ್‌ಶಿಪ್‌ಗೆ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದು. 2021ರ ಆರಂಭದಲ್ಲಿ ಬಿಡುಗಡೆಗೊಂಡ ಟೊಯೊಟಾ ಫಾರ್ಚುನರ್ ಲೆಜೆಂಡರ್ 4X2 ವೆರಿಯಂಟ್ 2,700ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪನಿಯು ಬಹಿರಂಗಪಡಿಸಿದೆ.

Toyota Fortuner Legender 4X4 ವೆರಿಯೆಂಟ್ ಹೊಸ ಟಿವಿಸಿ ಬಿಡುಗಡೆ

ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಡ್ಯುಯಲ್ ಟೋನ್ ಪರ್ಲ್ ವೈಟ್ ಜೊತೆಗೆ ಬ್ಲಾಕ್ ರೂಫ್ ಕಲರ್ ಸ್ಕೀಮ್ ನಲ್ಲಿ ನೀಡಲಾಗುತ್ತಿದೆ. ಈ ಹೊಸ ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ನಲ್ಲಿ 2.8 ಲೀಟರ್ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 204 ಬಿಹೆಚ್‍ಪಿ ಪವರ್ ಮತ್ತು 500 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಆರು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.

Toyota Fortuner Legender 4X4 ವೆರಿಯೆಂಟ್ ಹೊಸ ಟಿವಿಸಿ ಬಿಡುಗಡೆ

ಹೊಸ ಟೊಯೊಟಾ ಫಾರ್ಚುನರ್ ಲೆಜೆಂಡರ್ 4X2 ಮಾದರಿಗೆ ಹೋಲಿಸಿದರೆ 4X4 ವೆರಿಯೆಂಟ್ ಯಾವುದೇ ವಿಶೇಷ ಬಾಹ್ಯ ಬಿಟ್‌ಗಳನ್ನು ಪಡೆಯುವುದಿಲ್ಲ. ಈ ಹೊಸ ಲೆಜೆಂಡರ್ ಎಸ್‍ಯುವಿಯು ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿಯರ್ ವಿನ್ಯಾಸವನ್ನು ಹೊಂದಿದೆ. ಲೆಜೆಂಡರ್ ಮರುವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಪಡೆಯುತ್ತದೆ. ಡಿಆರ್‌ಎಲ್‌ಗಳು ಹೊಂದಿದೆ. ಇದನ್ನು ಟೊಯೊಟಾ ವಾಟರ್ ಫಾಲ್ ಡಿಆರ್‌ಎಲ್‌ಗಳು' ಎಂದು ಕರೆಯಲಾಗಿದೆ.

Toyota Fortuner Legender 4X4 ವೆರಿಯೆಂಟ್ ಹೊಸ ಟಿವಿಸಿ ಬಿಡುಗಡೆ

ಇದರ ಹೆಡ್‌ಲ್ಯಾಂಪ್‌ಗಳ ಕೆಳಗೆ ಫಾಗ್ ಲ್ಯಾಂಪ್ ಗಳಿವೆ. ಇನ್ನು ಡೈನಾಮಿಕ್ ಟರ್ನ್ ಸಿಗ್ನಲ್ ಇಂಡೀಕೆಟರ್ ಗಳಿವೆ. ಫಾರ್ಚೂನರ್ ಲೆಜೆಂಡರ್ ಸುತ್ತಲೂ ಎಲ್ಇಡಿ ಲೈಟಿಂಗ್ ಹೊಂದಿದೆ. ಇನ್ನು ಇದರ ಸೈಡ್ ಪ್ರೊಫೈಲ್‌ ಬಗ್ಗೆ ಹೇಳುವುದಾದರೆ, ಇದರಲ್ಲಿ 18 ಇಂಚಿನ ಮೆಷಿನ್-ಕಟ್ ಅಲಾಯ್ ವ್ಹೀಲ್‌ಗಳನ್ನು ಅಳವಡಿಸಲಾಗಿದೆ. ಇದು ಎಲ್ಲಾರ ಗಮನಸೆಳೆಯುವಂತಿದೆ. ಅಲ್ಲದೇ ಇದು ಎಸ್‍ಯುವಿಯ ಸ್ಪೋರ್ಟಿ ಲುಕ್ ಅನ್ನು ಹೆಚ್ಚಿಸುತ್ತದೆ.

Toyota Fortuner Legender 4X4 ವೆರಿಯೆಂಟ್ ಹೊಸ ಟಿವಿಸಿ ಬಿಡುಗಡೆ

ಇದು ಫ್ಲೋರ್‌ಬೋರ್ಡ್‌ ಅನ್ನು ಸಹ ಪಡೆಯುತ್ತದೆ, ಇನ್ನು ಡೋರಿನ ಹ್ಯಾಂಡಲ್‌ಗಳಲ್ಲಿ ಕೆಲವು ಕ್ರೋಮ್ ಇದೆ ಮತ್ತು ಉದ್ದಕ್ಕೂ ಸ್ಟ್ರಿಪ್ ಅನ್ನು ಸಹ ಕ್ರೋಮ್‌ನಿಂದಮಾಡಲಾಗಿದೆ. ಈ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿಯ ರೂಫ್ ಮ್ಯಾಟ್ ಬ್ಲ್ಯಾಕ್‌ನಿಂದ ಕೂಡಿದ್ದು, ಇದು ಒಟ್ಟಾರೆ ಬಿಳಿ ಬಣ್ಣದೊಂದಿಗೆ ಉತ್ತಮ ವ್ಯತಿರಿಕ್ತತೆಯನ್ನು ನೀಡುತ್ತದೆ. ಇನ್ನು ಈ ಎಸ್‍ಯುವಿಯ ಸ್ಪೋರ್ಟಿ ಲುಕ್‌ಗೆ ಪೂರಕವಾಗಿ ರೂಫ್ ರೈಲ್ ಮತ್ತು ಶಾರ್ಕ್-ಫಿನ್ ಆಂಟೆನಾವನ್ನು ಸಹ ಹೊಂದಿದೆ.

ಇನ್ನು ಈ ಲೆಜೆಂಡರ್ ವೆರಿಯೆಂಟ್ ಮಾದರಿಯ ಹಿಂಭಾಗದಲ್ಲಿ ನಯವಾದ-ಕಾಣುವ ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದೆ. ಅದನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದು ಬ್ಲ್ಯಾಕ್ ಸ್ಟ್ರಿಪ್ ಸಹ ಪಡೆಯುತ್ತದೆ, ಅದು ಎರಡೂ ಟೈಲ್ ಲೈಟ್‌ಗಳನ್ನು ಅದರ ಉದ್ದಕ್ಕೂ 'ಫೋರ್ಟೂನರ್' ಬ್ರ್ಯಾಂಡಿಂಗ್‌ನೊಂದಿಗೆ ಸಂಪರ್ಕಿಸುತ್ತದೆ.

Toyota Fortuner Legender 4X4 ವೆರಿಯೆಂಟ್ ಹೊಸ ಟಿವಿಸಿ ಬಿಡುಗಡೆ

ಹೊಸ ಟೊಯೊಟಾ ಫಾರ್ಚೂನರ್ ಲೆಜೆಂಡರ್ ವೆರಿಯೆಂಟ್ ಒಳಭಾಗದಲ್ಲಿಯು ಕೆಲವು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ. ಫಾರ್ಚೂನರ್ ಲೆಜೆಂಡರ್ ಇಂಟಿರಿಯರ್ ಅಥವಾ ಒಳಭಾಗದಲ್ಲಿ ಡ್ಯುಯಲ್-ಟೋನ್ (ಬ್ಲ್ಯಾಕ್ ಮತ್ತು ಮರೂನ್) ಅಂಶಗಳನ್ನು ಹೊಂದಿದೆ, ಇದು ಒಳಾಂಗಣವನ್ನು ಸ್ಪೋರ್ಟಿ ಆಗಿ ಕಾಣುವಂತೆ ಮಾಡಿದೆ, ಇದರ ಡ್ಯಾಶ್‌ಬೋರ್ಡ್ ಮತ್ತು ಡೋರಿನ ಪ್ಯಾನೆಲ್ ಗಳಲ್ಲಿ ಸಾಕಷ್ಟು ಸಾಫ್ಟ್-ಟಚ್ ಸಾಮಗ್ರಿಗಳಿವೆ. ಎಸ್‌ಯುವಿ ಸುತ್ತಲೂ ವೈಟ್ ಅಬೈಂಡ್ ಲೈಟ್ ಅನ್ನು ಹೊಂದಿದೆ.

Toyota Fortuner Legender 4X4 ವೆರಿಯೆಂಟ್ ಹೊಸ ಟಿವಿಸಿ ಬಿಡುಗಡೆ

ಇದರೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯನ್ನು ಒಳಗೊಂಡಿರುವ ದೊಡ್ಡ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದು ಉತ್ತಮ ರೆಸ್ಪಾನ್ಸ್ ನಿಂದ ಕೂಡಿದೆ. ಇದರ ಕೆಳಗೆ ಟೆಪ್ರೇಚರ್ ಮತ್ತು ಪ್ಯಾನ್ ಸ್ಪೀಡ್ ವೇಗವನ್ನು ಪ್ರದರ್ಶಿಸಲು ಎಲ್ಇಡಿ ಡಿಸ್ ಪ್ಲೇಯೊಂದಿಗೆ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಅನ್ನು ನೀಡಲಾಗಿದೆ.

Toyota Fortuner Legender 4X4 ವೆರಿಯೆಂಟ್ ಹೊಸ ಟಿವಿಸಿ ಬಿಡುಗಡೆ

ಇನ್ನು ಗೇರ್ ಲಿವರ್‌ನ ಮುಂದೆ ಕಪ್ ಹೋಲ್ಡರ್ಸ್ ಮತ್ತು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್ ಅನ್ನು ಒಳಗೊಂಡಿದೆ. ಇದು ನಿಜವಾಗಿಯೂ ಉತ್ತಮ ಫೀಚರ್ ಆಗಿದೆ. ಇದು ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್ ಮತ್ತು ಎಂಯುಎಕ್ಸ್ ಕೇಬಲ್ ಕನೆಕ್ಟರ್ ಅನ್ನು ಸಹ ಹೊಂದಿದೆ.

Toyota Fortuner Legender 4X4 ವೆರಿಯೆಂಟ್ ಹೊಸ ಟಿವಿಸಿ ಬಿಡುಗಡೆ

ಫಾರ್ಚೂನರ್ ಲೆಜೆಂಡರ್ ಮಾದರಿಯಲ್ಲಿರುವ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸ್ಟ್ಯಾಂಡರ್ಡ್ ಫಾರ್ಚೂನರ್ ನಲ್ಲಿ ಕಂಡುಬರುವಂತೆಯೇ ಇರುತ್ತದೆ. ಇದು ಸ್ಪೀಡೋಮೀಟರ್ ಮತ್ತು ಟ್ಯಾಕೋಮೀಟರ್‌ಗಾಗಿ ಎರಡು ಅನಲಾಗ್ ಡಯಲ್‌ಗಳನ್ನು ಒಳಗೊಂಡಿದೆ. ಇದು ಡಯಲ್‌ಗಳ ನಡುವೆ ಟಿಎಫ್‌ಟಿ ಎಂಐಡಿ ಡಿಸ್ ಪ್ಲೇಯನ್ನು ಸಹ ಪಡೆಯುತ್ತದೆ, ಅದು ವಾಹನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪ್ರದರ್ಶಿಸುತ್ತದೆ,

Toyota Fortuner Legender 4X4 ವೆರಿಯೆಂಟ್ ಹೊಸ ಟಿವಿಸಿ ಬಿಡುಗಡೆ

ಈ ಹೊಸ ಟೊಯೊಟಾ ಫಾರ್ಚೂನರ್ ಲೆಜೆಂಡರ್ ವೆರಿಯೆಂಟ್ ನಲ್ಲಿ ಸುರಕ್ಷತೆಗಾಗಿ 7 ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಬ್ರೇಕ್ ಅಸಿಸ್ಟ್, 360 ಡಿಗ್ರಿ ಕ್ಯಾಮೆರಾ, ಸ್ಟೆಬಿಲಿಟಿ ಕಂಟ್ರೋಲ್, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಮೌಂಟಡ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್ (ಆಟೋ ಎಮರ್ಜೆನ್ಸಿ ಅನ್‌ಲಾಕ್‌) ಮತ್ತು ಎಮರ್ಜನ್ಸಿ ಬ್ರೇಕ್ ಸಿಗ್ನಲ್‌ನಂತಹ ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಹೊಸ ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಮಾರಾಟದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡಬಹುದು.

Article Published On: Monday, November 15, 2021, 19:37 [IST]
English summary
Toyota fortuner legender 4x4 new tvc released engine features details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+