ಅಗ್ರೆಸಿವ್ ಲುಕ್'ನೊಂದಿಗೆ ಮಾಡಿಫೈಗೊಂಡ ಟೊಯೊಟಾ ಫಾರ್ಚೂನರ್

ಟೊಯೊಟಾ ಕಂಪನಿಯ ಕಾರುಗಳು ವಿಶ್ವಾಸಾರ್ಹತೆ ಹಾಗೂ ಕಡಿಮೆ ನಿರ್ವಹಣಾ ವೆಚ್ಚಕ್ಕೆ ಹೆಸರುವಾಸಿಯಾಗಿವೆ. ಟೊಯೊಟಾ ಫಾರ್ಚೂನರ್ ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಎಸ್‌ಯುವಿಗಳಲ್ಲಿ ಒಂದಾಗಿದೆ.

ಅಗ್ರೆಸಿವ್ ಲುಕ್'ನೊಂದಿಗೆ ಮಾಡಿಫೈಗೊಂಡ ಟೊಯೊಟಾ ಫಾರ್ಚೂನರ್

ಈ ಎಸ್‌ಯುವಿಯು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತದೆ. ಟೊಯೊಟಾ ಫಾರ್ಚೂನರ್ ಹೊಂದಿರುವ ಹಲವಾರು ಜನರು ಈ ಎಸ್‌ಯುವಿಯನ್ನು ಮಾಡಿಫೈಗೊಳಿಸಿದ್ದಾರೆ. ಟೊಯೊಟಾ ಫಾರ್ಚೂನರ್ ಎಸ್‌ಯುವಿಯನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಅಗ್ರೆಸಿವ್ ಆಗಿ ಎಕ್ಸಿಕ್ಯೂಟಿವ್ ಮೊಡ್ಕಾರ್ ಟ್ರೆಂಡ್ಜ್ (ಇಎಂಟಿ) ಮಾಡಿಫೈ ಮಾಡಿದೆ.

ಅಗ್ರೆಸಿವ್ ಲುಕ್'ನೊಂದಿಗೆ ಮಾಡಿಫೈಗೊಂಡ ಟೊಯೊಟಾ ಫಾರ್ಚೂನರ್

ಎಕ್ಸಿಕ್ಯೂಟಿವ್ ಮೊಡ್ಕಾರ್ ಟ್ರೆಂಡ್ಜ್ ಹಳೆಯ ತಲೆಮಾರಿನ ಫಾರ್ಚೂನರ್ ಎಸ್‌ಯುವಿಯನ್ನು ಮಾಡಿಫೈ ಮಾಡಿದೆ. ಹಳೆಯ ತಲೆಮಾರಿನ ಟೊಯೊಟಾ ಫಾರ್ಚೂನರ್ ಎಸ್‌ಯುವಿಗಿಂತ ಹೊಸ ತಲೆಮಾರಿನ ಫಾರ್ಚೂನರ್ ಎಸ್‌ಯುವಿಯಲ್ಲಿ ಹೆಚ್ಚು ಫೀಚರ್ ನೀಡಲಾಗಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಅಗ್ರೆಸಿವ್ ಲುಕ್'ನೊಂದಿಗೆ ಮಾಡಿಫೈಗೊಂಡ ಟೊಯೊಟಾ ಫಾರ್ಚೂನರ್

ಹೊಸ ತಲೆಮಾರಿನ ಫಾರ್ಚೂನರ್ ಎಸ್‌ಯುವಿಯಲ್ಲಿ ಹೆಚ್ಚು ಸ್ಲೀಕ್ ಆದ ಹೆಡ್‌ಲ್ಯಾಂಪ್‌ ಹಾಗೂ ಟೇಲ್ ಲ್ಯಾಂಪ್‌ಗಳನ್ನು ನೀಡಲಾಗಿದೆ. ಆದರೆ ಹಳೆಯ ತಲೆಮಾರಿನ ಫಾರ್ಚೂನರ್ ಎಸ್‌ಯುವಿಯಲ್ಲಿ ಇವುಗಳನ್ನು ನೀಡಿರಲಿಲ್ಲ.

ಅಗ್ರೆಸಿವ್ ಲುಕ್'ನೊಂದಿಗೆ ಮಾಡಿಫೈಗೊಂಡ ಟೊಯೊಟಾ ಫಾರ್ಚೂನರ್

ಮಾಡಿಫೈಗೊಂಡಿರುವ ಈ ಫಾರ್ಚೂನರ್ ಎಸ್‌ಯುವಿಯ ಬಗ್ಗೆ ಹೇಳುವುದಾದರೆ, ಈ ಎಸ್‌ಯುವಿಯಲ್ಲಿ ಸಂಪೂರ್ಣವಾಗಿ ಹೊಸ ಫ್ರಂಟ್ ಬಂಪರ್, ಹೆಡ್‌ಲ್ಯಾಂಪ್,ಗ್ರಿಲ್ ಅಳವಡಿಸಲಾಗಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಅಗ್ರೆಸಿವ್ ಲುಕ್'ನೊಂದಿಗೆ ಮಾಡಿಫೈಗೊಂಡ ಟೊಯೊಟಾ ಫಾರ್ಚೂನರ್

ಈ ಎಸ್‌ಯುವಿಯಲ್ಲಿ ಮೊದಲಿಗಿಂತಲೂ ಹೆಚ್ಚು ಕ್ರೀಸ್‌ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಈ ಎಸ್‌ಯುವಿಯು ಅಗ್ರೆಸಿವ್ ಆಗಿ ಕಾಣುತ್ತದೆ. ಹ್ಯಾಲೊಜೆನ್ ಬದಲು ಎರಡು ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ನೀಡಲಾಗಿದೆ.

ಅಗ್ರೆಸಿವ್ ಲುಕ್'ನೊಂದಿಗೆ ಮಾಡಿಫೈಗೊಂಡ ಟೊಯೊಟಾ ಫಾರ್ಚೂನರ್

ಹೆಡ್‌ಲ್ಯಾಂಪ್‌ನ ಮೇಲೆ ಎಲ್‌ಇಡಿ ಡೇ-ಟೈಮ್ ರನ್ನಿಂಗ್ ಲ್ಯಾಂಪ್‌ಗಳನ್ನು ಸಹ ನೀಡಲಾಗಿದ್ದು, ಗ್ರಿಲ್ ಕಡೆಗೆ ಕೆಳಕ್ಕೆ ಟಿಲ್ಟ್ ಮಾಡಲಾಗಿದೆ. ಮಾಡಿಫೈಗೊಂಡಿರುವಈ ಎಸ್‌ಯುವಿಯು ಟೊಯೊಟಾ ಬ್ಯಾಡ್ಜಿಂಗ್ ಹೊಂದಿಲ್ಲ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಅಗ್ರೆಸಿವ್ ಲುಕ್'ನೊಂದಿಗೆ ಮಾಡಿಫೈಗೊಂಡ ಟೊಯೊಟಾ ಫಾರ್ಚೂನರ್

ಗ್ರಿಲ್ ಕಪ್ಪು ಬಣ್ಣದ ಫಿನಿಶಿಂಗ್ ಹಾಗೂ ಕೆಂಪು ಬಣ್ಣವನ್ನು ಹೊಂದಿದೆ. ಹುಡ್ ಹಲವಾರು ಕ್ರೀಸ್ ಲೈನ್‌ಗಳನ್ನು ಹಾಗೂ ದೊಡ್ಡ ಸ್ಕೂಪ್ ಅನ್ನು ಹೊಂದಿದೆ. ಈ ಎಸ್‌ಯುವಿಯ ಬಾನೆಟ್‌ನಲ್ಲಿ ರೇರ್ ವೀವ್ ಮಿರರ್ ಸಹ ಅಳವಡಿಸಲಾಗಿದೆ.

ಅಗ್ರೆಸಿವ್ ಲುಕ್'ನೊಂದಿಗೆ ಮಾಡಿಫೈಗೊಂಡ ಟೊಯೊಟಾ ಫಾರ್ಚೂನರ್

ಈ ಎಸ್‌ಯುವಿಯನ್ನು ಮತ್ತಷ್ಟು ಅಗಲಗೊಳಿಸಲು ಹಾಗೂ ಕೊಶೆಂಟ್ ಅಂಶವನ್ನು ಹೆಚ್ಚಿಸಲು ಕಾರಿನ ಸೈಡ್ ಪ್ರೊಫೈಲ್‌ನಲ್ಲಿ ದೊಡ್ಡ ಕಪ್ಪು ಪ್ಲಾಸ್ಟಿಕ್ ಕ್ಲಾಡಿಂಗ್'ಗಳನ್ನು ಅಳವಡಿಸಲಾಗಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಅಗ್ರೆಸಿವ್ ಲುಕ್'ನೊಂದಿಗೆ ಮಾಡಿಫೈಗೊಂಡ ಟೊಯೊಟಾ ಫಾರ್ಚೂನರ್

ಡೋರುಗಳ ಮೇಲೆ ಪ್ಲಾಸ್ಟಿಕ್ ಕವರಿಂಗ್ ಸಹ ನೀಡಲಾಗಿದೆ. ಹಿಂಭಾಗದಲ್ಲಿರುವ ರೇರ್ ಮಿರರ್'ಗಳು ಕ್ರೋಮ್ ಕ್ಯಾಪ್ ಹಾಗೂ ಟರ್ನ್ ಇಂಡಿಕೇಟರ್'ಗಳನ್ನು ಹೊಂದಿವೆ. ಈ ಎಸ್‌ಯುವಿಯು ದೊಡ್ಡ ಗಾತ್ರದ ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್'ಗಳನ್ನು ಹೊಂದಿದೆ.

ಅಗ್ರೆಸಿವ್ ಲುಕ್'ನೊಂದಿಗೆ ಮಾಡಿಫೈಗೊಂಡ ಟೊಯೊಟಾ ಫಾರ್ಚೂನರ್

ಹಿಂಭಾಗವನ್ನು ಮುಂಭಾಗದಷ್ಟು ಮಾಡಿಫೈ ಮಾಡಿಲ್ಲ. ಹಿಂಭಾಗದಲ್ಲಿ ಕಪ್ಪು ಬಣ್ಣದ ಟೇಲ್ ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ. ಹಿಂಭಾಗದಲ್ಲಿರುವ ಬ್ಲಾಕ್ ಸ್ತ್ರೈಪ್'ಗಳು ಎರಡೂ ಟೇಲ್ ಲ್ಯಾಂಪ್'ಗಳನ್ನು ಸೇರುತ್ತದೆ. ಟೇಲ್‌ಗೇಟ್‌ನ ಮಧ್ಯದಲ್ಲಿ ಟೊಯೊಟಾ ಬ್ಯಾಡ್ಜಿಂಗ್ ಅಳವಡಿಸಲಾಗಿದೆ.

ಚಿತ್ರ ಕೃಪೆ: ಎಕ್ಸಿಕ್ಯೂಟಿವ್ ಮೊಡ್ಕಾರ್ ಟ್ರೆಂಡ್ಜ್

More from DriveSpark

Article Published On: Monday, May 10, 2021, 19:22 [IST]
English summary
Toyota Fortuner modified with aggressive look. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+