ಬೆಲೆ ಏರಿಕೆ ಪಡೆದುಕೊಂಡ ಟೊಯೊಟಾ ಗ್ಲಾಂಝಾ, ಅರ್ಬನ್ ಕ್ರೂಸರ್

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಟೊಯೊಟಾ ಇತ್ತೀಚೆಗೆ ತನ್ನ ಸರಣಿಯಲ್ಲಿರುವ ಹಲವಾರು ಮಾದರಿಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಇದೀಗ ಟೊಯೊಟಾ ಕಂಪನಿಯು ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆದ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಮಾದರಿಗಳ ಬೆಲೆಯನ್ನು ಹೆಚ್ಚಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಟೊಯೊಟಾ ಗ್ಲಾಂಝಾ, ಅರ್ಬನ್ ಕ್ರೂಸರ್

ಟೊಯೊಟಾ ಕಂಪನಿಯು ಇತ್ತೀಚೆಗೆ ಇನೋವಾ ಕ್ರಿಸ್ಟಾ, ಫಾರ್ಚೂನರ್, ಲೆಜೆಂಡರ್ ಮತ್ತು ಕ್ಯಾಮ್ರಿ ಮಾದರಿಗಳ ಬೆಲೆಯನ್ನು ಹೆಚ್ಚಿಸಲಾಗಿತ್ತು. ಇದೀಗ ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆದ ಗ್ಲಾಂಝಾ ಮಾದರಿಯ ಬೆಲೆಯನ್ನು ರೂ.34,000 ವರೆಗೆ ಹೆಚ್ಚಿಸಲಾಗಿದೆ. ಇನ್ನು ಅರ್ಬನ್ ಕ್ರೂಸರ್ ಮಾದರಿಯ ಬೆಲೆಯನ್ನು ರೂ.13,000 ವರೆಗೆ ಹೆಚ್ಚಿಸಲಾಗಿದೆ. ಟೊಯೊಟಾ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಎರಡು ರಿಬ್ಯಾಡ್ಜ್ ಮಾದರಿಗಳಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಟೊಯೊಟಾ ಗ್ಲಾಂಝಾ, ಅರ್ಬನ್ ಕ್ರೂಸರ್

ಇದರಲ್ಲಿ ಟೊಯೊಟಾ ಗ್ಲಾಂಝಾ, ಮಾರುತಿ ಸುಜುಕಿ ಕಂಪನಿಯ ಬಲೆನೊ ಕಾರಿನ ರಿಬ್ಯಾಡ್ಜ್ ಆವೃತ್ತಿಯಾಗಿದೆ. ಟೊಯೊಟಾ ಗ್ಲಾಂಝಾ, ಬಹುತೇಕ ಮಾರುತಿ ಸುಜುಕಿ ಬಲೆನೊ ರೀತಿ ಕಾಣುತ್ತದೆ. ಆದರೆ ಹೊಸ ಫ್ರಂಟ್ ಗ್ರಿಲ್ ಹಾಗೂ ಹೊಸ ಬ್ಯಾಡ್ಜ್‌ಗಳೊಂದಿಗೆ, ಸ್ವಲ್ಪ ಬದಲಾವಣೆಗಳನ್ನು ಮಾಡಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬೆಲೆ ಏರಿಕೆ ಪಡೆದುಕೊಂಡ ಟೊಯೊಟಾ ಗ್ಲಾಂಝಾ, ಅರ್ಬನ್ ಕ್ರೂಸರ್

ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಬಲೆನೊ ಕಾರು ಸಾಕಷ್ಟು ಜನಪ್ರಿಯತೆಯನ್ನು ಹೊಂದಿದೆ. ಬಿಎಸ್ 6 ನಿಯಮಗಳು ಜಾರಿಯಾದ ನಂತರ ಬಲೆನೊ ಹಾಗೂ ಗ್ಲಾಂಝಾ ಕಾರುಗಳನ್ನು ಪೆಟ್ರೋಲ್ ಎಂಜಿನ್ ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ.

ಬೆಲೆ ಏರಿಕೆ ಪಡೆದುಕೊಂಡ ಟೊಯೊಟಾ ಗ್ಲಾಂಝಾ, ಅರ್ಬನ್ ಕ್ರೂಸರ್

ಟೊಯೊಟಾ ಗ್ಲಾಂಝಾ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯ 1.2-ಲೀಟರಿನ ಕೆ 12 ಬಿ, ಬಿಎಸ್ 6 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 83 ಬಿಹೆಚ್‌ಪಿ ಪವರ್ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಬೆಲೆ ಏರಿಕೆ ಪಡೆದುಕೊಂಡ ಟೊಯೊಟಾ ಗ್ಲಾಂಝಾ, ಅರ್ಬನ್ ಕ್ರೂಸರ್

ಗ್ರಾಹಕರು ಎಸ್‌ಎಸ್‌ವಿಎಸ್ 1.2-ಲೀಟರ್ ಡ್ಯುಯಲ್ ಜೆಟ್ ಡ್ಯುಯಲ್-ವಿವಿಡಿಐ ಪೆಟ್ರೋಲ್ ಮಾದರಿಯನ್ನು ಸಹ ಖರೀದಿಸಬಹುದು. ಈ ಎಂಜಿನ್ 90 ಬಿಹೆಚ್‌ಪಿ ಪವರ್ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಮಾರುತಿ ಸುಜುಕಿ ಬಲೆನೊ ಹಾಗೂ ಟೊಯೊಟಾ ಗ್ಲಾಂಝಾ ಕಾರುಗಳು ಹೆಚ್ಚಿನ ಅಂಶಗಳಲ್ಲಿ ಸಾಮ್ಯತೆಯನ್ನು ಹೊಂದಿವೆ.

ಬೆಲೆ ಏರಿಕೆ ಪಡೆದುಕೊಂಡ ಟೊಯೊಟಾ ಗ್ಲಾಂಝಾ, ಅರ್ಬನ್ ಕ್ರೂಸರ್

ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯ ರಿಬ್ಯಾಡ್ಜ್ ಆವೃತ್ತಿಯಾಗಿದೆ. ಟೊಯೊಟಾ ಅರ್ಬನ್ ಕ್ರೂಸರ್ ಕಾಂಪ್ಯಾಕ್ಟ್ ಎಸ್‍ಯುವಿಯ ಮುಂಭಾಗದಲ್ಲಿ ಟ್ವಿನ್ ಸ್ಲ್ಯಾಟ್ ಗ್ರಿಲ್ ಅನ್ನು ಹೊಂದಿದೆ. ಮುಂಭಾಗದಲ್ಲಿ ಬಂಪರ್ ಕಟ್ಸ್ ಮತ್ತು ಕ್ರೀಸ್‌ಗಳನ್ನು ಆಕರ್ಷಕ ಲುಕ್ ಅನ್ನು ನೀಡಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಬೆಲೆ ಏರಿಕೆ ಪಡೆದುಕೊಂಡ ಟೊಯೊಟಾ ಗ್ಲಾಂಝಾ, ಅರ್ಬನ್ ಕ್ರೂಸರ್

ಇನ್ನು ಅರ್ಬನ್ ಕ್ರೂಸರ್ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಟ್ವೀಕ್‌ಗಳು ಬ್ರೆಝಾಗಿಂತ ಭಿನ್ನವಾಗಿ ಕಾಣಲು ಸಹಾಯ ಮಾಡುತ್ತದೆ. ಟೊಯೊಟಾ ಅರ್ಬನ್ ಕ್ರೂಸರ್ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಟೊಯೊಟಾ ಗ್ಲಾಂಝಾ, ಅರ್ಬನ್ ಕ್ರೂಸರ್

ಅರ್ಬನ್ ಕ್ರೂಸರ್ ಕಾಂಪ್ಯಾಕ್ಟ್-ಎಸ್‌ಯುವಿಯಲ್ಲಿ ವಿಟಾರಾ ಬ್ರೆಝಾದಲ್ಲಿ ನೀಡಿರುವ ಅದೇ 1.5-ಲೀಟರ್ ಕೆ-ಸೀರೀಸ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಟೊಯೊಟಾ ಗ್ಲಾಂಝಾ, ಅರ್ಬನ್ ಕ್ರೂಸರ್

ಇದು 104 ಬಿಹೆಚ್‍ಪಿ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 5-ಮ್ಯಾನುವಲ್ ಜೊತೆಗೆ ನಾಲ್ಕು-ಸ್ಪೀಡ್ ಟಾರ್ಕ್-ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೆನ್ನು ನೀಡಲಾಗಿದೆ.

More from DriveSpark

Article Published On: Friday, May 7, 2021, 21:37 [IST]
English summary
Toyota Glanza & Urban Cruiser Prices Hiked. Read In Kananda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+