ಭಾರತದಲ್ಲಿ ಐಷಾರಾಮಿ ಹಯೆಸ್ ಎಂಪಿವಿ ಬಿಡುಗಡೆ ಮಾಡಲಿದೆ ಟೊಯೊಟಾ ಇಂಡಿಯಾ
ಜಪಾನ್ ಕಾರು ತಯಾರಕ ಕಂಪನಿ ಟೊಯೊಟಾ ಭಾರತದಲ್ಲಿ ತನ್ನ ಐಷಾರಾಮಿ ಸರಣಿ ಕಾರುಗಳ ಮಾರಾಟವನ್ನು ಹೆಚ್ಚಿಸುವತ್ತ ಬೃಹತ್ ಯೋಜನೆಗೆ ಚಾಲನೆ ನೀಡಿದ್ದು, ಯುರೋಪ್ ಮಾರುಕಟ್ಟೆಗಳಲ್ಲಿ ಜನಪ್ರಿಯವಾಗಿರುವ ವಿವಿಧ ಕಾರು ಮಾದರಿಗಳನ್ನು ದೇಶಿಯ ಮಾರುಕಟ್ಟೆಯಲ್ಲೂ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಪ್ರಸ್ತುತ ಕಾರು ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಎಸ್‌ಯುವಿ ಆವೃತ್ತಿಗಳಲ್ಲಿ ಹೈಬ್ರಿಡ್ ಪವರ್‌ಟ್ರೈನ್ ಮಾದರಿಗಳ ಮಾರಾಟವು ಹೆಚ್ಚುತ್ತಿದ್ದು, ಟೊಯೊಟಾ ಕಂಪನಿಯು ಕೂಡಾ ಜಾಗತಿಕ ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆ ಹೊಂದಿರುವ ರಾವ್4 ಎಸ್‌ಯುವಿ ಸೇರಿದಂತೆ ವಿವಿಧ ಕಾರು ಮಾದರಿಗಳನ್ನು ಭಾರತದಲ್ಲೂ ಬಿಡುಗಡೆಗಾಗಿ ಮಾರುಕಟ್ಟೆ ಅಧ್ಯಯನ ನಡೆಸಿದೆ. ಮಾರುಕಟ್ಟೆ ಅಧ್ಯಯನದಲ್ಲಿ ಹೈಬ್ರಿಡ್ ಕಾರು ಮಾದರಿಗಳಿಗೆ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದ್ದು, ಹೊಸ ಆಮದು ನೀತಿ ಅಡಿಯಲ್ಲಿ ಹೊಸ ವಾಹನಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.

ಹೊಸ ಕಾರುಗಳ ಬಿಡುಗಡೆಗಾಗಿ ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಸಹ ಕೈಗೊಂಡಿರುವ ಟೊಯೊಟಾ ಕಂಪನಿಯು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಆಮದು ನೀತಿ ಅಡಿಯಲ್ಲಿ ಹೊಸ ವಾಹನಗಳನ್ನು ಬಿಡುಗಡೆ ಮಾಡಲಿದೆ.

2019ರಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದ ಹೊಸ ಆಮದು ನೀತಿಯು ವಿದೇಶಿ ಕಾರು ಉತ್ಪಾದನಾ ಕಂಪನಿಗಳಿಗೆ ಸಾಕಷ್ಟು ಸಹಕಾರಿಯಾಗುತ್ತಿದ್ದು, ಹೊಸ ಆಮದು ನೀತಿ ಅಡಿಯಲ್ಲಿ ವಾರ್ಷಿಕವಾಗಿ 2,500 ಕಾರುಗಳನ್ನು ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ದೇಶಿಯ ಮಾರುಕಟ್ಟೆಗೆ ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಟೊಯೊಟಾ ಕೂಡಾ ಹೊಸ ಆಮದು ನೀತಿ ಅಡಿ ವಿದೇಶಿ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಕೆಲವು ಐಷಾರಾಮಿ ಕಾರುಗಳನ್ನು ಹೊಸ ಆಮದು ನೀತಿ ಅಡಿಯಲ್ಲಿ ಮಾರಾಟ ಮಾಡುತ್ತಿದ್ದು, ವೆಲ್‌ಫೈರ್ ಎಂಪಿವಿ ನಂತರ ಇದೀಗ ಹಯೆಸ್ ಎಂಪಿವಿ, ರಾವ್4 ಎಸ್‌ಯುವಿ ಸೇರಿದಂತೆ ವಿವಿಧ ಕಾರುಗಳನ್ನು ಬಿಡುಗಡೆಯ ಸಿದ್ದತೆಯಲ್ಲಿದೆ. ಹೊಸ ಕಾರು ಮಾದರಿಗಳನ್ನು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಿರುವ ಟೊಯೊಟಾ ಕಂಪನಿಯು ಸಿಬಿಯು ನೀತಿ ಅತಿ ಅಡಿ ಮಾರಾಟ ಮಾಡಲಿದೆ.

ಐಷಾರಾಮಿ ವೈಶಿಷ್ಟ್ಯತೆ ಹೊಂದಿರುವ ಹಯೆಸ್ ಎಂಪಿವಿ ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದ್ದು, ಕಾರ್ಪೊರೇಟ್ ಕಂಪನಿಗಳ ಕಂಪನಿಗಳ ಉದ್ಯೋಗಿಗಳ ಸಾರಿಗೆ ಸೌಲಭ್ಯಕ್ಕಾಗಿ ಉತ್ತಮ ಬೇಡಿಕೆ ಪಡೆದುಕೊಳ್ಳಲಿದೆ.

ಜೊತೆಗೆ ಹೋಟೆಲ್ ಹಾಗೂ ಪ್ರವಾಸೋದ್ಯಮ ವಿಭಾಗದಲ್ಲಿ ವಿಶೇಷ ಬೇಡಿಕೆ ಗಿಟ್ಟಿಸಿಕೊಳ್ಳುವ ತವಕದಲ್ಲಿರುವ ಹೊಸ ಹಯೆಸ್ ಎಂಪಿವಿ ಮಾದರಿಯು ಮುಂಬರುವ ಕೆಲವೇ ತಿಂಗಳಿನಲ್ಲಿ ಬಿಡುಗೆಡೆಯಾಗಲಿದ್ದು, ಬಿಡುಗಡೆಗೂ ಮುನ್ನ ಹರಿಯಾಣದಲ್ಲಿ ಹೊಸ ಎಂಪಿವಿ ಡೀಲರ್ಸ್ ಯಾರ್ಡ್ ಒಂದಲ್ಲಿ ಹೆಚ್ಆರ್ ನೋಂದಣಿಯೊಂದಿಗೆ ಕಾಣಿಸಿಕೊಂಡಿದೆ.

ಹಯೆಸ್ ವಾಹನವನ್ನು ಈ ಹಿಂದೆ ವಿದೇಶಿ ಮಾರುಕಟ್ಟೆಗಳಿಂದಲೇ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡುತ್ತಿದ್ದ ಟೊಯೊಟಾ ಕಂಪನಿಯು ಆಮದು ನೀತಿಯಲ್ಲಾದ ಬದಲಾವಣೆಗಳಿಂದಾಗಿ ಕೆಲ ವರ್ಷಗಳ ಹಿಂದಷ್ಟೇ ಮಾರಾಟವನ್ನು ಸ್ಥಗಿತಗೊಳಿಸಿತ್ತು.

ಹಲವು ಬೇಡಿಕೆಗಳ ನಂತರ ಆಮದು ನೀತಿ ಅಡಿ ಕೆಲವು ಹೊಸ ಬದಲಾವಣೆಗಳನ್ನು ಪರಿಚಯಿಸಿದ ಪರಿಣಾಮ ಟೊಯೊಟಾ ಕಂಪನಿಯು ಕಳೆದ ವರ್ಷ ವೆಲ್‌ಫೈರ್ ಎಂಪಿವಿ ಮಾದರಿಯನ್ನು ಮತ್ತು ಈ ವರ್ಷ ಹಯೆಸ್ ಮತ್ತು ರಾವ್ 4 ಕಾರುಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.
MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಈ ಹಿಂದೆ ಭಾರತದಲ್ಲಿ ಹಯೆಸ್ ಕಾರು ಮಾದರಿಯು ಗ್ರಾಹಕರ ಬೇಡಿಕೆ ಅನುಗುಣವಾಗಿ 9 ಸೀಟರ್, 11 ಸೀಟರ್ ಮತ್ತು 14 ಸೀಟರ್ ಮಾದರಿಯೊಂದಿಗೆ ರೂ. 30 ಲಕ್ಷ ಬೆಲೆ ಹೊಂದಿತ್ತು. ಇದೀಗ ಹೊಸ ಆಮದು ನೀತಿ ಅಡಿ ಮಾರಾಟಗೊಳ್ಳಲಿರುವ 6ನೇ ತಲೆಮಾರಿನ ಹಯೆಸ್ ಎಂಪಿವಿ ವಿವಿಧ ಹಂತದ ಸೀಟ್ ಕಾನ್ಫಿಗೆಷನ್‌ನೊಂದಿಗೆ ರೂ.40 ಲಕ್ಷದಿಂದ ರೂ. 45 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.

ಹಯೆಸ್ ಎಂಪಿವಿ ಮಾದರಿಯು ವ್ಯಾನ್ ಮಾದರಿಯಲ್ಲಿದ್ದರೂ ಐಷಾರಾಮಿ ಕಾರುಗಳಲ್ಲಿನ ಎಲ್ಲಾ ಫೀಚರ್ಸ್‌ಗಳನ್ನು ಹೊಂದಿದ್ದು, ಹಯೆಸ್ ಮಾದರಿಯು ಸದ್ಯ ಥೈಲ್ಯಾಂಡ್, ಮಲೇಷಿಯಾ ಮತ್ತು ಆಸ್ಟೇಲಿಯಾದಲ್ಲಿ ಹೆಚ್ಚಿನ ಮಾರಾಟ ಹೊಂದಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಇದೀಗ ಭಾರತದಲ್ಲಿ ಆಮದು ನೀತಿಯಲ್ಲಿ ಹೊಸ ಬದಲಾವಣೆಯ ಪರಿಣಾಮ ವಿವಿಧ ಕಾರು ಉತ್ಪಾದನಾ ಕಂಪನಿಗಳು ಭಾರತದಲ್ಲಿ ಹಲವಾರು ಹೊಸ ಮಾದರಿಯ ಐಷಾರಾಮಿ ಮಾದರಿಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದ್ದು, ಟೊಯೊಟಾ ಹಯೆಸ್ ಮಾದರಿಯು 2.8-ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ನೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿದೆ.


Click it and Unblock the Notifications