ಭಾರತದಲ್ಲಿ ಹಿಲಕ್ಸ್ ಪಿಕ್ಅಪ್ ಬಿಡುಗಡೆಗಾಗಿ ಟ್ರೇಡ್‌ಮಾರ್ಕ್ ಸಲ್ಲಿಸಿದ ಟೊಯೊಟಾ
ಟೊಯೊಟಾ ಕಂಪನಿಯು ಭಾರತದಲ್ಲಿ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಈ ವರ್ಷಾಂತ್ಯಕ್ಕೆ ಒಟ್ಟು ನಾಲ್ಕು ಹೊಸ ಕಾರುಗಳು ರಸ್ತೆಗಿಳಿಸುವ ಸಿದ್ದತೆಯಲ್ಲಿದೆ.

ಕೇಂದ್ರ ಸರ್ಕಾರವು ಹೊಸದಾಗಿ ಜಾರಿಗೆ ತಂದಿರುವ ಹೊಸ ಆಮದು ನೀತಿಯು ವಿದೇಶಿ ಕಾರು ಉತ್ಪಾದನಾ ಕಂಪನಿಗಳಿಗೆ ಸಾಕಷ್ಟು ಸಹಕಾರಿಯಾಗುತ್ತಿದ್ದು, ಹೊಸ ಆಮದು ನೀತಿ ಅಡಿಯಲ್ಲಿ ವಿದೇಶಿ ಕಾರು ಕಂಪನಿಗಳು ವಾರ್ಷಿಕವಾಗಿ 2,500 ಯುನಿಟ್ ಕಾರುಗಳನ್ನು ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ದೇಶಿಯ ಮಾರುಕಟ್ಟೆಗೆ ಆಮದು ಮಾಡಿಕೊಳ್ಳಲು ಅವಕಾಶ ನೀಡಿರುವುದು ಟೊಯೊಟಾ ಕಂಪನಿಗೂ ವರದಾನವಾಗಿದೆ.

ಟೊಯೊಟಾ ಕಂಪನಿಯು ಹೊಸ ಆಮದು ನೀತಿ ಅಡಿ ವಿದೇಶಿ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಪ್ರಮುಖ ಎರಡು ಕಾರುಗಳನ್ನು ಹೊಸ ಆಮದು ನೀತಿ ಅಡಿಯಲ್ಲಿ ಮಾರಾಟ ಮಾಡುವ ಯೋಜನೆಯಲ್ಲಿದ್ದು, ಈಗಾಗಲೇ ಹೊಸ ಆಮದು ನೀತಿ ಅಡಿಯಲ್ಲಿ ವೆಲ್‌ಫೈರ್ ಐಷಾರಾಮಿ ಎಂಪಿವಿ ಮಾದರಿಯನ್ನು ಮಾರಾಟ ಮಾಡುತ್ತಿದೆ.

ಪ್ರಸಕ್ತ ವರ್ಷದ ಆಮದು ನೀತಿ ಅಡಿಯಲ್ಲಿ ಮತ್ತೆರಡು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿರುವ ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಜೊತೆಗಿನ ಸಹಭಾಗಿತ್ವ ಯೋಜನೆ ಅಡಿ ಎರಡು ರೀಬ್ಯಾಡ್ಜ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ.

ಟೊಯೊಟಾ ಬಿಡುಗಡೆ ಮಾಡಲಿರುವ ನಾಲ್ಕು ಕಾರುಗಳಲ್ಲಿ ಎರಡು ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾದ ಮಾದರಿಗಳಾದರೆ ಮಾರುತಿ ಸುಜುಕಿ ಜೊತೆಗಿನ ಸಹಭಾಗಿತ್ವದಲ್ಲಿ ಎರಡು ರೀಬ್ಯಾಡ್ಜ್ ಕಾರುಗಳು ಮಾರುಕಟ್ಟೆ ಪ್ರವೇಶಿಸಲಿವೆ. ಬಿಡುಗಡೆಯಾಗಲಿರುವ ಆಮದು ಮಾದರಿಗಳಲ್ಲಿ ರಾವ್4 ಎಸ್‌ಯುವಿ ಮತ್ತು ಹಿಲುಕ್ಸ್ ಪಿಕ್ಅಪ್ ಆವೃತ್ತಿ ಬಿಡುಗಡೆಯಾಗಲಿದ್ದು, ರೀಬ್ಯಾಡ್ಜ್ ಮಾದರಿಗಳಲ್ಲಿ ಮಾರುತಿ ಸುಜುಕಿಯ ಎರ್ಟಿಗಾ ಮತ್ತು ಸಿಯಾಜ್ ಕಾರುಗಳನ್ನೇ ಹೊಸ ಹೆಸರಿನೊಂದಿಗೆ ಬಿಡುಗಡೆ ಮಾಡುವ ಯೋಜನೆಯಿದೆ.

ಮಧ್ಯಮ ಗಾತ್ರದ ಪಿಕ್ಅಪ್ ಎಸ್‌ಯುವಿ ಮಾದರಿಯಲ್ಲೇ ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿರುವ ಹಿಲಕ್ಸ್ ವಾಹನ ಮಾದರಿಯು ವಿದೇಶಿ ಮಾರುಕಟ್ಟೆಯಲ್ಲಿ ವಿವಿಧ ಎಂಜಿನ್ ಮಾದರಿಯೊಂದಿಗೆ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಯು ಪ್ರಮುಖ ಎರಡು ಡೀಸೆಲ್ ಎಂಜಿನ್‌ನೊಂದಿಗೆ ರಸ್ತೆಗಿಳಿಯಲಿವೆ.

ಹಿಲಕ್ಸ್ ಪಿಕ್ಅಪ್ ಬಿಡುಗಡೆಗಾಗಿ ಕೇಂದ್ರ ಸಾರಿಗೆ ಇಲಾಖೆಯಲ್ಲಿ ಟ್ರೇಡ್‌ಮಾರ್ಕ್ ಕೂಡಾ ದಾಖಲಿಸಲಾಗಿದ್ದು, ಇಸುಝ ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾದರಿಗೆ ಪೈಪೋಟಿಯಾಗಿ ಪ್ರಮುಖ ಎರಡು ಮಾದರಿಗಳಲ್ಲಿ ಬಿಡುಗಡೆ ಮಾಡುತ್ತಿದೆ.

ಹೊಸ ಪಿಕ್ಅಪ್ ವಾಹನದಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 2.4-ಲೀಟರ್ ಡೀಸೆಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್ ಬಿಡುಗಡೆ ಮಾಡಲಿದ್ದು, ಕಡಿಮೆ ಎಂಜಿನ್ ವೇಗದಲ್ಲೂ ಅತಿಹೆಚ್ಚು ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ವಿವಿಧ ವೆರಿಯೆಂಟ್‌ಗಳೊಂದಿಗೆ ಮಾರಾಟವಾಗುತ್ತಿರುವ ಹಿಲುಕ್ಸ್ ಮಾದರಿಯು ಭಾರತದಲ್ಲಿ ವಿವಿಧ ಎಂಜಿನ್ ಆಯ್ಕೆಯೊಂದಿಗೆ ರೂ.20 ಲಕ್ಷದಿಂದ ರೂ. 25 ಲಕ್ಷ ಬೆಲೆ ಅಂತರದಲ್ಲಿನ ಕೆಲವೇ ವೆರಿಯೆಂಟ್‌ಗಳೊಂದಿಗೆ ಮಾತ್ರವೇ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿವೆ.

ಹಿಲಕ್ಸ್ ಪಿಕ್‌ಅಪ್ ವಾಹನವು ಉತ್ತಮವಾದ ಒಳಾಂಗಣದೊಂದಿಗೆ ಒಟ್ಟು 5,285-ಎಂಎಂ ಉದ್ದ ಹೊಂದಿದ್ದು, 3,085-ಎಂಎಂ ವೀಲ್ಹ್ ಬೆಸ್‌ನೊಂದಿಗೆ 4x4 ಆಲ್‌ವೀಲ್ಹ್ ಡ್ರೈವ್ ಟೆಕ್ನಾಲಜಿಯೊಂದಿಗೆ ಬಿಡುಗಡೆಯಾಗಲಿದೆ


Click it and Unblock the Notifications