ಫಾರ್ಚೂನರ್ ಎಸ್‍ಯುವಿಗಾಗಿ ಹೊಸ ಸ್ಟೈಲಿಂಗ್ ಪ್ಯಾಕೇಜ್ ಪರಿಚಯಿಸಿದ ಟೊಯೊಟಾ

ಜಪಾನ್ ಮೂಲದ ಟೊಯೊಟಾ ಕಂಪನಿಯು ಫಾರ್ಚೂನರ್ ಎಸ್‍ಯುವಿಗಾಗಿ ಥಾಯ್‌ಲ್ಯಾಂಡ್‌ ಮಾರುಕಟ್ಟೆಯಲ್ಲಿ 'ಪ್ರೈಡ್ ಪ್ಯಾಕೇಜ್ II' ಹೆಸರಿನ ಹೊಸ ಲಿಮಿಟೆಡ್ ಎಡಿಷನ್ ಸ್ಟೈಲಿಂಗ್ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಈ ಅಕ್ಸೆಸರೀಸ್ ಪ್ಯಾಕ್ ಈ ತಿಂಗಳ ಅಂತ್ಯದವರೆಗೂ ಖರೀದಿಗೆ ಲಭ್ಯವಿರುತ್ತದೆ.

ಫಾರ್ಚೂನರ್ ಎಸ್‍ಯುವಿಗಾಗಿ ಹೊಸ ಸ್ಟೈಲಿಂಗ್ ಪ್ಯಾಕೇಜ್ ಪರಿಚಯಿಸಿದ ಟೊಯೊಟಾ

ಸ್ಟ್ಯಾಂಡರ್ಡ್ ಮಾದರಿ ಫಾರ್ಚೂನರ್ ಲೆಜೆಂಡರ್ ವೆರಿಯೆಂಟ್ಗೆ ಮಾತ್ರ ಸ್ಟೈಲಿಂಗ್ ಪ್ಯಾಕೇಜ್ ನೀಡಲಾಗುತ್ತಿದೆ. ‘ಪ್ರೈಡ್ ಪ್ಯಾಕೇಜ್ II' ನಲ್ಲಿ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಿಗೆ ಬ್ಲ್ಯಾಕ್ಡ್ ಔಟ್ ಬ್ಯಾಷ್ ಪ್ಲೇಟ್‌ಗಳು, ಮುಂಭಾಗದ ಗ್ರಿಲ್‌ಗೆ ಬ್ಲ್ಯಾಕ್ ಸರೌಂಡ್ಸ್, ಒಆರ್‌ವಿಎಂಗಳಿಗೆ ಬ್ಲ್ಯಾಕ್ ಕ್ಯಾಪ್, ಬ್ಲ್ಯಾಕ್ ಸೈಡ್ ಸ್ಟೆಪ್ಸ್, ಬ್ಲ್ಯಾಕ್ ರೂಫ್, ಮತ್ತು ಬಾನೆಟ್‌ನಲ್ಲಿ ಫಾರ್ಚೂನರ್ ಬ್ಯಾಡ್ಜ್ ಅನ್ನು ಒಳಗೊಂಡಿದೆ.

ಫಾರ್ಚೂನರ್ ಎಸ್‍ಯುವಿಗಾಗಿ ಹೊಸ ಸ್ಟೈಲಿಂಗ್ ಪ್ಯಾಕೇಜ್ ಪರಿಚಯಿಸಿದ ಟೊಯೊಟಾ

ಈ ಪ್ಯಾಕೇಜ್‌ನ ಒಟ್ಟು ವೆಚ್ಚ ಭಾರತದ ಕರೆನ್ಸ್ ಪ್ರಕಾರ ಸರಿಸುಮಾರು 1.1 ಲಕ್ಷಗಳಾಗುತ್ತದೆ. ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ. ‘ಪ್ರೈಡ್ ಪ್ಯಾಕೇಜ್ II' ಕೇವಲ ಫಾರ್ಚೂನರ್ ಎಸ್‍ಯುವಿ ಲಿಮಿಟೆಡ್ ಎಡಿಷನ್ ಸ್ಟೈಲಿಂಗ್ ಪ್ಯಾಕೇಜ್ ಆಗಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಫಾರ್ಚೂನರ್ ಎಸ್‍ಯುವಿಗಾಗಿ ಹೊಸ ಸ್ಟೈಲಿಂಗ್ ಪ್ಯಾಕೇಜ್ ಪರಿಚಯಿಸಿದ ಟೊಯೊಟಾ

ಇನ್ನು ಫಾರ್ಚೂನರ್ ಎಸ್‍ಯುವಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಎಸ್‍ಯುವಿ 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ.

ಫಾರ್ಚೂನರ್ ಎಸ್‍ಯುವಿಗಾಗಿ ಹೊಸ ಸ್ಟೈಲಿಂಗ್ ಪ್ಯಾಕೇಜ್ ಪರಿಚಯಿಸಿದ ಟೊಯೊಟಾ

ಇದರಲ್ಲಿ 2.7-ಲೀಟರ್ ಪೆಟ್ರೋಲ್ ಎಂಜಿನ್ 166 ಬಿಹೆಚ್‍ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು ಐದು-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಫಾರ್ಚೂನರ್ ಎಸ್‍ಯುವಿಗಾಗಿ ಹೊಸ ಸ್ಟೈಲಿಂಗ್ ಪ್ಯಾಕೇಜ್ ಪರಿಚಯಿಸಿದ ಟೊಯೊಟಾ

ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾದಾಗ ಡೀಸೆಲ್ ಎಂಜಿನ್ 177 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಗೇರ್ ಬಾಕ್ಸ್ ಜೋಡಿಸಲಾದ ಯುನಿಟ್ 201 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಫಾರ್ಚೂನರ್ ಎಸ್‍ಯುವಿಗಾಗಿ ಹೊಸ ಸ್ಟೈಲಿಂಗ್ ಪ್ಯಾಕೇಜ್ ಪರಿಚಯಿಸಿದ ಟೊಯೊಟಾ

ಟೊಯೊಟಾ ಫಾರ್ಚೂನರ್ ಲೆಜೆಂಡರ್ ವೆರಿಯೆಂಟ್ ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿಯರ್ ವಿನ್ಯಾಸವನ್ನು ಹೊಂದಿದೆ. ಈ ಟೊಯೊಟಾ ಫಾರ್ಚೂನರ್ ಲೆಜೆಂಡರ್ ವೆರಿಯೆಂಟ್ ಮುಂಭಾಗ ಆಕರ್ಷಕವಾಗಿ ಗ್ರಿಲ್ ಅನ್ನು ಅಳವಡಿಸಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಫಾರ್ಚೂನರ್ ಎಸ್‍ಯುವಿಗಾಗಿ ಹೊಸ ಸ್ಟೈಲಿಂಗ್ ಪ್ಯಾಕೇಜ್ ಪರಿಚಯಿಸಿದ ಟೊಯೊಟಾ

ಇನ್ನು ಟೊಯೊಟಾ ಫಾರ್ಚೂನರ್ ಎಸ್‍ಯುವಿಯಯಲ್ಲಿಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗಳೊಂದಿಗಿನ ಹೊಸ 8.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಕನೆಕ್ಟಿವಿಟಿ ಕಾರು ತಂತ್ರಜ್ಞಾನವನ್ನು ಹೊಂದಿದೆ. ಇದರೊಂದಿಗೆ ವೆಂಟಿಲೇಟಡ್ ಮುಂಭಾಗದ ಸೀಟುಗಳು, ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 11-ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಂ, ಆಂಬಿಯೆಂಟ್ ಲೈಟಿಂಗ್ ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿದೆ.

ಫಾರ್ಚೂನರ್ ಎಸ್‍ಯುವಿಗಾಗಿ ಹೊಸ ಸ್ಟೈಲಿಂಗ್ ಪ್ಯಾಕೇಜ್ ಪರಿಚಯಿಸಿದ ಟೊಯೊಟಾ

ಫಾರ್ಚೂನರ್ ಲೆಜೆಂಡರ್ ಎಸ್‍ಯುವಿಯಲ್ಲಿ ಸಂಪೂರ್ಣವಾಗಿ ಹೊಸ ಎಲ್ಇಡಿ ಹೆಡ್ ಲ್ಯಾಂಪ್ ಗಳು, ಹೊಸ ಅಲಾಯ್ ವ್ಹೀಲ್ ಗಳು ಮತ್ತು ವಿಶೇಷ ಡ್ಯುಯಲ್-ಟೋನ್ ಬಣ್ಣಗಳನ್ನು ಹೊಂದಿವೆ. ಟೊಯೊಟಾ ಫಾರ್ಚೂನರ್ ಲೆಜೆಂಡರ್ ವೆರಿಯೆಂಟ್ ಒಳಭಾಗದಲ್ಲಿಯು ಕೆಲವು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ.

Most Read Articles

Kannada
Read more on ಟೊಯೊಟಾ toyota
English summary
2021 Toyota Fortuner Gets A Limited Edition Styling Package. Read In Kannada.
Story first published: Saturday, March 13, 2021, 17:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X