ಭಾರತದಲ್ಲಿ ಸ್ಥಗಿತವಾಗಲಿದೆ ಜನಪ್ರಿಯ ಟೊಯೊಟಾ ಯಾರಿಸ್ ಕಾರು

ಜಪಾನ್ ಮೂಲದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು 2018ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಯಾರಿಸ್ ಕಾರನ್ನು ಬಿಡುಗಡೆಗೊಳಿಸಿತು. ಈ ಟೊಯೊಟಾ ಯಾರಿಸ್ ಕಾರು ಬಿಡುಗಡೆಯಾದ ಆರಂಭದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿತು.

ಭಾರತದಲ್ಲಿ ಸ್ಥಗಿತವಾಗಲಿದೆ ಜನಪ್ರಿಯ ಟೊಯೊಟಾ ಯಾರಿಸ್ ಕಾರು

ಟೊಯೊಟಾ ಯಾರಿಸ್ ಸೆಡಾನ್ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಗಳಾದ ಮಾರುತಿ ಸುಜುಕಿ ಸಿಯಾಜ್, ಹೋಂಡಾ ಸಿಟಿ ಮತ್ತು ಹ್ಯುಂಡೈ ವೆರ್ನಾ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಆರಂಭದಲ್ಲಿ ಯಾರಿಸ್ ಸೆಡಾನ್ ಉತ್ತಮವಾಗಿ ಮಾರಾಟ ಕಂಡಿದ್ದರು ನಂತರದಲ್ಲಿ ಪ್ರತಿಸ್ಪರ್ಧಿಗಳ ಪೈಪೋಟಿಯಿಂದ ಮರಾಟದಲ್ಲಿ ಕುಸಿತ ಕಂಡಿತು. ವರಿದಿಗಳ ಪ್ರಕಾರ, ಟೊಯೊಟಾ ಯಾರಿಸ್ ಮರಾಟದಲ್ಲಿ ಕುಸಿತ ಕಂಡಿರುವುದರಿಂದ ಸ್ಥಗಿತವಾಗಲಿದೆ.

ಭಾರತದಲ್ಲಿ ಸ್ಥಗಿತವಾಗಲಿದೆ ಜನಪ್ರಿಯ ಟೊಯೊಟಾ ಯಾರಿಸ್ ಕಾರು

ಆದರೆ ಟೊಯೊಟಾ ಕಂಪನಿಯು ಯಾರಿಸ್ ಕಾರನ್ನು ಸ್ಥಗಿತಗೊಳಿಸುವುದಾಗಿ ಅಧಿಕೃತವಾಗಿ ಖಚಿತಪಡಿಸಿಲ್ಲ. ಇನ್ನು ಟೊಯೊಟಾದ ಉತ್ಪನ್ನ ತಂತ್ರದ ಒಂದು ಭಾಗವಾಗಿ, ನಿರಂತರವಾಗಿ ಬದಲಾಗುತ್ತಿರುವ ಅಗತ್ಯತೆಗಳು, ಗ್ರಾಹಕರ ಆದ್ಯತೆಗಳು ಮತ್ತು ಪ್ರವೃತ್ತಿಗಳನ್ನು ಅರ್ಥಮಾಡಿಕೊಳ್ಳಲು ಮಾರುಕಟ್ಟೆಯನ್ನು ನಿರಂತರವಾಗಿ ಅಧ್ಯಯನ ಮಾಡುವುದು ಮತ್ತು ಮೌಲ್ಯಮಾಪನ ಮಾಡುವುತ್ತಿರುತ್ತೇವೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಭಾರತದಲ್ಲಿ ಸ್ಥಗಿತವಾಗಲಿದೆ ಜನಪ್ರಿಯ ಟೊಯೊಟಾ ಯಾರಿಸ್ ಕಾರು

ಇದರ ಹೊರತಾಗಿ, ನಮ್ಮ ಭವಿಷ್ಯದ ವ್ಯವಹಾರ/ಉತ್ಪನ್ನ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ತಂತ್ರಗಳನ್ನು ಹಂಚಿಕೊಳ್ಳಲು ನಮಗೆ ಸಾಧ್ಯವಾಗುವುದಿಲ್ಲ "ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ವಕ್ತಾರರು ಮಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಭಾರತದಲ್ಲಿ ಸ್ಥಗಿತವಾಗಲಿದೆ ಜನಪ್ರಿಯ ಟೊಯೊಟಾ ಯಾರಿಸ್ ಕಾರು

ಯಾರಿಸ್ ಅನ್ನು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಬಿಡದಿಯಲ್ಲಿಯಲ್ಲಿರುವ ಉತ್ಪಾದಿಸಲಾಗುತ್ತದೆ, ಮತ್ತು ಸ್ಥಾವರ ಸ್ಥಾಪಿತ ಸಾಮರ್ಥ್ಯವು ವರ್ಷಕ್ಕೆ 2.1 ಲಕ್ಷ ಯುನಿಟ್ ಆಗಿದೆ. ಆದರೆ ಶೀಘ್ರದಲ್ಲೇ ಯಾರಿಸ್ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಬಹುದು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಸ್ಥಗಿತವಾಗಲಿದೆ ಜನಪ್ರಿಯ ಟೊಯೊಟಾ ಯಾರಿಸ್ ಕಾರು

ಈ ಹಿಂದೆ ಟೊಯೊಟಾ ಕಂಪನಿಯು ಭಾರತದಲ್ಲಿ ಎಟಿಯೋಸ್, ಎಟಿಯೋಸ್ ಲಿವಾ, ಎಟಿಯೋಸ್ ಕ್ರಾಸ್ ಮತ್ತು ಕೊರೊಲ್ಲಾ ಆಲ್ಟಿಸ್ ಕಾರುಗಳನ್ನು ಸ್ಥಗಿತಗೊಳಿಸಿದೆ. ಇದೀಗ ಯಾರಿಸ್ ಕಾರನ್ನು ಕೂಡ ಟೊಯೊಟಾ ಸ್ಥಗಿತಗೊಳಿಸಲು ಚಿಂತಿಸುತ್ತಿದ್ದಾರೆ.

ಭಾರತದಲ್ಲಿ ಸ್ಥಗಿತವಾಗಲಿದೆ ಜನಪ್ರಿಯ ಟೊಯೊಟಾ ಯಾರಿಸ್ ಕಾರು

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಯಾರಿಸ್ ಕಾರಿನಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 108 ಬಿಹೆಚ್‍ಫಿ ಪವರ್ ಮತ್ತು 140 ಎನ್‌ಎಂ ಮ್ಯಾಕ್ಸ್ ಟಾರ್ಕ್ ಅನ್ನು ಪಡೆಯುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತದಲ್ಲಿ ಸ್ಥಗಿತವಾಗಲಿದೆ ಜನಪ್ರಿಯ ಟೊಯೊಟಾ ಯಾರಿಸ್ ಕಾರು

ಇನ್ನು ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಟೊಯೊಟಾ ಯಾರಿಸ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,9.16 ಲಕ್ಷಗಳಾಗಿದೆ.

ಭಾರತದಲ್ಲಿ ಸ್ಥಗಿತವಾಗಲಿದೆ ಜನಪ್ರಿಯ ಟೊಯೊಟಾ ಯಾರಿಸ್ ಕಾರು

ಯಾರಿಸ್ ಪ್ರಸ್ತುತ ಭಾರತದ ಅತ್ಯಂತ ಒಳ್ಳೆ ಟೊಯೊಟಾ ಸೆಡಾನ್ ಆಗಿದೆ. ಈ ಕಾರಿನ ಹೊರತಾಗಿ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಪ್ರಸ್ತುತ ಪೋರ್ಟ್ಫೋಲಿಯೊ ಗ್ಲಾಂಝಾ, ಅರ್ಬನ್ ಕ್ರೂಸರ್, ಇನೋವಾ ಕ್ರಿಸ್ಟಾ, ಫಾರ್ಚೂನರ್, ಕ್ಯಾಮ್ರಿ ಮತ್ತು ಪ್ರಮುಖ ವೆಲ್‌ಫೈರ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಸ್ಥಗಿತವಾಗಲಿದೆ ಜನಪ್ರಿಯ ಟೊಯೊಟಾ ಯಾರಿಸ್ ಕಾರು

ಹೊಸ ಹಣಕಾಸಿನ ವರ್ಷದಲ್ಲಿ ಹಲವು ಜನಪ್ರಿಯ ವಾಹನ ಉತ್ಪಾದಕರು ಬೆಲೆ ಹೆಚ್ಚಳವನ್ನು ಘೋಷಿಸಿದೆ. ಅದರಂತೆ ಜಪಾನ್ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾ ಟೊಯೊಟಾ ಕೂಡ ತನ್ನ ಇನೋವಾ ಕ್ರಿಸ್ಟಾ, ಫಾರ್ಚೂನರ್, ಲೆಜೆಂಡರ್ ಮತ್ತು ಕ್ಯಾಮ್ರಿ ಮಾದರಿಗಳ ಬೆಲೆಯನ್ನು ಇತ್ತೀಚೆಗೆ ಹೆಚ್ಚಿಸಿದೆ. ಉಳಿದಂತೆ ಗ್ಲಾಂಝಾ, ಅರ್ಬನ್ ಕ್ರೂಸರ್ ಮತ್ತು ಯಾರಿಸ್ ಸೆಡಾನ್ ಸೇರಿದಂತೆ ಇತರ ಕಾರುಗಳ ಬೆಲೆಗಳು ಒಂದೇ ಆಗಿರುತ್ತವೆ.

Most Read Articles

Kannada
Read more on ಟೊಯೊಟಾ toyota
English summary
Toyota Likely To Discontinue Yaris Sedan. Read In Kannada.
Story first published: Friday, April 9, 2021, 12:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X