ಹೊಸ ರೂಪದಲ್ಲಿ ಅನಾವರಣಗೊಂಡ Toyota Avanza ಎಂಪಿವಿ

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಟೊಯೊಟಾ ತನ್ನ ಹೊಸ ಅವನ್ಜಾ ಎಂಪಿವಿಯನ್ನು ಅಧಿಕೃತವಾಗಿ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಮೂರನೇ ತಲೆಮಾರಿನ ಟೊಯೊಟಾ ಅವನ್ಜಾ(Toyota Avanza) ಎಂಪಿವಿಯ ಸ್ಪೋರ್ಟಿಯರ್ ಆವೃತ್ತಿಯನ್ನು ಸಹ ಪರಿಚಯಿಸಿದೆ.

ಹೊಸ ರೂಪದಲ್ಲಿ ಅನಾವರಣಗೊಂಡ Toyota Avanza ಎಂಪಿವಿ

ಅವನ್ಜಾ ಕಾರಿನ ಸ್ಪೋರ್ಟಿಯರ್ ಆವೃತ್ತಿಗೆ ವೆಲೋಜ್ ಎಂದು ಹೆಸರು ನೀಡಲಾಗಿದೆ. ಟೊಯೊಟಾ ತನ್ನ ಎರಡನೇ ತಲೆಮಾರಿನ ಅವನ್ಜಾ ಮಾದರಿಯನ್ನು ಬದಲಾಯಿಸುತ್ತದೆ, ಇದು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಮಾರಾಟದಲ್ಲಿದೆ. ಹೊಸ ಟೊಯೊಟಾ ಅವನ್ಜಾ ಕಾರಿನ ವಿನ್ಯಾಸ, ಒಳಾಂಗಣ ಮತ್ತು ಯಾಂತ್ರಿಕ ಅಂಶಗಳು ಗಮನಾರ್ಹ ಬದಲಾವಣೆಗಳೊಂದಿಗೆ ಬರುತ್ತದೆ. ಈ ಹೊಸ ಮಾದರಿಯನ್ನು ಡೈಹಟ್ಸು ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್ (DNGA) ಪ್ಲಾಟ್‌ಫಾರ್ಮ್‌ ಅನ್ನು ಆಧರಿಸಿದೆ. ಇದೇ ಪ್ಲಾಟ್‌ಫಾರ್ಮ್‌ ಟೊಯೊಟಾ ರೈಜ್, ಡೈಹತ್ಸು ರಾಕಿ ಮತ್ತು ಪೆರೊಡುವಾ ಆಟಿವಾ ಮಾದರಿಗಳಿಗೆ ಸಹ ಆಧಾರವಾಗಿದೆ.

ಹೊಸ ರೂಪದಲ್ಲಿ ಅನಾವರಣಗೊಂಡ Toyota Avanza ಎಂಪಿವಿ

ಟೊಯೊಟಾ ಅವನ್ಜಾ ಹಿಂದಿನ ಮಾದರಿಯು ಲ್ಯಾಡರ್ ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ. ಮೊನೊಕಾಕ್ ನಿರ್ಮಾಣದೊಂದಿಗೆ, ಹೊಸ ಅವನ್ಜಾ ಮುಂಭಾಗದಲ್ಲಿ ಮ್ಯಾಕ್‌ಫರ್ಸನ್ ಸ್ಟ್ರಟ್‌ಗಳನ್ನು ಮತ್ತು ಹಿಂಭಾಗದಲ್ಲಿ ಟಾರ್ಶನ್ ಬೀಮ್ ಅನ್ನು ಪಡೆಯುತ್ತದೆ.

ಹೊಸ ರೂಪದಲ್ಲಿ ಅನಾವರಣಗೊಂಡ Toyota Avanza ಎಂಪಿವಿ

ಹಿಂದಿನ ಅವನ್ಜಾ ಕಾರು ರೇರ್ ವ್ಹೀಲ್-ಡ್ರೈವ್ ಮಾದರಿಯಾಗಿದ್ದರೆ, ಹೊಸ ಅವನ್ಜಾ ಫ್ರಂಟ್-ವೀಲ್-ಡ್ರೈವ್ ಮಾದರಿಯಾಗಿ ಮಾರ್ಪಟ್ಟಿದೆ. ಈ ಅವನ್ಜಾ ಕಾರಿನಲ್ಲಿ 1.3-ಲೀಟರ್ ನ್ಯಾಚುರಲಿ-ಆಸ್ಪಿರೇಟೆಡ್ DOHC 4-ಸಿಲಿಂಡರ್ ಪೆಟ್ರೋಲ್ ಇಂಜಿನ್ ಜೊತೆಗೆ ಡ್ಯುಯಲ್ VVT-i ಅನ್ನು ಒಳಗೊಂಡಿದೆ.

ಹೊಸ ರೂಪದಲ್ಲಿ ಅನಾವರಣಗೊಂಡ Toyota Avanza ಎಂಪಿವಿ

ಈ ಎಂಜಿನ್ 6,000 ಆರ್‌ಪಿಎಂನಲ್ಲಿ 98 ಬಿಹೆಚ್‍ಪಿ ಪವರ್ ಮತ್ತು 4,200 ಆರ್‌ಪಿಎಂನಲ್ಲಿ 121 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದರೊಂದಿಗೆ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಸಹ ಪಡೆಯುತ್ತದೆ, ಈ ಎಂಜಿನ್ 6,000 ಆರ್‌ಪಿಎಂನಲ್ಲಿ 106 ಬಿಹೆಚ್‍ಪಿ ಪವರ್ ಮತ್ತು 4,200 ಆರ್‌ಪಿಎಂನಲ್ಲಿ 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಅನ್ನು ಒಳಗೊಂಡಿವೆ.

ಹೊಸ ರೂಪದಲ್ಲಿ ಅನಾವರಣಗೊಂಡ Toyota Avanza ಎಂಪಿವಿ

ಹೊಸ ಟೊಯೊಟಾ ಅವನ್ಜಾ ಮಾದರಿಯು 4,395 ಎಂಎಂ ಉದ್ದ, 1,730 ಎಂಎಂ ಅಗಲ ಮತ್ತು 1,665 ಎಂಎಂ ಎತ್ತರವನ್ನು ಹೊಂದಿದೆ. ಇನ್ನು 2,750 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ.ಇದು ಈಗ ಹಿಂದಿನ ಮಾದರಿಗಿಂತ 205 ಎಂಎಂ ಉದ್ದ ಮತ್ತು 70 ಎಂಎಂ ಅಗಲವಿದೆ, ಆದರೆ ಎತ್ತರವನ್ನು 30 ಎಂಎಂ ಕಡಿಮೆ ಮಾಡಲಾಗಿದೆ. ಇನ್ನು ವೀಲ್‌ಬೇಸ್ ಅನ್ನು 95 ಎಂಎಂ ಹೆಚ್ಚಿಸಲಾಗಿದೆ, ಅದು ಹೆಚ್ಚು ಕ್ಯಾಬಿನ್ ಜಾಗಕ್ಕೆ ಅನುವಾದಿಸುತ್ತದೆ.

ಹೊಸ ರೂಪದಲ್ಲಿ ಅನಾವರಣಗೊಂಡ Toyota Avanza ಎಂಪಿವಿ

ಹೊಸ ಟೊಯೊಟಾ ಅವನ್ಜಾ ಸಂಪೂರ್ಣವಾಗಿ ಹೊಸ ಸ್ಟೈಲಿಂಗ್‌ನೊಂದಿಗೆ ಬರುತ್ತದೆ. ಇದು ಸ್ಲಿಮ್, ಟ್ವಿನ್-ಸ್ಲ್ಯಾಟ್ ಗ್ರಿಲ್ ಮತ್ತು ಸ್ಲೀಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಹೊಸ ಮುಂಭಾಗದ ಫಾಸಿಕವನ್ನು ಹೊಂದಿದೆ, ಟ್ರೆಪೆಜಾಯ್ಡಲ್ ಆಕಾರದ ಲೋವರ್ ಇನ್‌ಟೇಕ್ ಮತ್ತು ಕೋನೀಯ ಫಾಗ್ ಲ್ಯಾಂಪ್ ಸುತ್ತುವರೆದಿದೆ.

ಹೊಸ ರೂಪದಲ್ಲಿ ಅನಾವರಣಗೊಂಡ Toyota Avanza ಎಂಪಿವಿ

ಈ ಎಂಪಿವಿಯಲ್ಲಿ ಉದ್ದಕ್ಕೂ ಚಲಿಸುವ ಮತ್ತು ಮುಂಭಾಗ ಮತ್ತು ಹಿಂಭಾಗದ ಲೈಟಿಂಗ್ ಕ್ಲಸ್ಟರ್ ಗಳೊಂದಿಗೆ ಲಿಂಕ್ ಮಾಡುವ ತೀಕ್ಷ್ಣವಾದ ಕ್ರೀಸ್ ಲೈನ್ ಇದೆ. ಈ ಮಾದರಿಯು ದಪ್ಪನಾದ ವ್ಹೀಲ್ ಕಮಾನುಗಳನ್ನು ಪಡೆಯುತ್ತದೆ ಅದು ಅದರ ಸ್ಪೋರ್ಟಿ ಪ್ರೊಫೈಲ್‌ಗೆ ಸೇರಿಸುತ್ತದೆ. ಇ ಎಂಪಿವಿಯಲ್ಲಿ ಟೇಲ್‌ಗೇಟ್‌ನಲ್ಲಿ ಟೊಯೊಟಾ ಲೋಗೋ ಮೂಲಕ ಚಲಿಸುವ ಎತ್ತರದ ಲೈನ್ ಗಳೊಂದಿಗೆ ಸಂಪರ್ಕಗೊಂಡಿರುವ ಸ್ಲಿಮ್ ಟೈಲ್-ಲೈಟ್‌ಗಳನ್ನು ಹೊಂದಿದೆ.

ಹೊಸ ರೂಪದಲ್ಲಿ ಅನಾವರಣಗೊಂಡ Toyota Avanza ಎಂಪಿವಿ

ಈ ಹೊಸ ಟೊಯೊಟಾ ಅವನ್ಜಾ ಎಂಪಿವಿ ಕಾರಿನಲ್ಲಿ ಸಮಕಾಲೀನ ವಿನ್ಯಾಸ ಮತ್ತು ಇತ್ತೀಚಿನ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಕಾರಿನ ಡ್ಯಾಶ್‌ಬೋರ್ಡ್ ಸರಳ ಮತ್ತು ಕ್ರಿಯಾತ್ಮಕವಾಗಿದೆ. ಎಸಿ ವೆಂಟ್‌ಗಳ ಮೇಲೆ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್ ಇರುತ್ತದೆ. ಆದರೆ ಎಸಿ ಯುನಿಟ್ ಡಿಜಿಟಲ್ ಕಂಟ್ರೋಲ್ ಗಳನ್ನು ಹೊಂದಿದೆ. ಇದು ಹೊಸದಾಗಿ ವಿನ್ಯಾಸಗೊಳಿಸಲಾದ ಸ್ಟೀರಿಂಗ್ ವ್ಹೀಲ್ ವಿನ್ಯಾಸವನ್ನು ಸಹ ಪಡೆಯುತ್ತದೆ.

ಹೊಸ ರೂಪದಲ್ಲಿ ಅನಾವರಣಗೊಂಡ Toyota Avanza ಎಂಪಿವಿ

ಇನ್ನು ಈ ಕಾರಿನಲ್ಲಿ 4.2-ಇಂಚಿನ ಪೂರ್ಣ ಡಿಸ್ ಪ್ಲೇಯನ್ನು ಹೊಂದಿರಲಿದೆ. ಈ ಟೊಯೊಟಾ ಅವನ್ಜಾ ಎಂಪಿವಿಯಲ್ಲಿ ಸುರಕ್ಷತೆಗಾಗಿ ಹಲವಾರು ಫೀಚರ್ಸ್ ಗಳನ್ನು ನೀಡಲಾಗಿದೆ. ಇದರಲ್ಲಿ ಸೇಫ್ಟಿ ಸೆನ್ಸ್ (TSS) ನೊಂದಿಗೆ ಬರುತ್ತದೆ, ಪ್ರಿ-ಕಾಲಿಷನ್ ಬ್ರೇಕಿಂಗ್, ಪೆಡಲ್ ಮಿಸ್ ಆಪರೇಷನ್ ಕಂಟ್ರೋಲ್, ಲೇನ್ ಡಿಸ್ಪಚರ್ ವಾರ್ನಿಂಗ್ ಮತ್ತು ಫ್ರಂಟ್ ಡಿಸ್ಪಚರ್ ಅಲರ್ಟ್ ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಸ ರೂಪದಲ್ಲಿ ಅನಾವರಣಗೊಂಡ Toyota Avanza ಎಂಪಿವಿ

ಇದರೊಂದಿಗೆ 6 ಏರ್‌ಬ್ಯಾಗ್‌ಗಳು, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್‌ಗಳು, VSC (ವಾಹನ ಸ್ಥಿರತೆ ನಿಯಂತ್ರಣ), HSA (ಹಿಲ್ ಸ್ಟಾರ್ಟ್-ಅಸಿಸ್ಟ್), EBD ಜೊತೆಗೆ ABS ಮತ್ತು ಬ್ರೇಕ್ ಅಸಿಸ್ಟ್ ಅನ್ನು ಪಡೆಯುತ್ತದೆ. ಹೊಸ ಟೊಯೊಟಾ ಅವನ್ಜಾ ಎಂಪಿವಿಯು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಬಹುದು.

ಹೊಸ ರೂಪದಲ್ಲಿ ಅನಾವರಣಗೊಂಡ Toyota Avanza ಎಂಪಿವಿ

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ಕಂಪನಿ 2021ರ ಅಕ್ಟೋಬರ್ ತಿಂಗಳಿನ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ವರದಿಗಳ ಪ್ರಕಾರ, ಕಳೆದ ತಿಂಗಳು ಟೊಯೊಟಾ ಕಂಪನಿಯು 12,440 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಟೊಯೊಟಾ ಕಂಪನಿಯು 12,373 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.1 ರಷ್ಟು ಹೆಚ್ಚಳವಾಗಿದೆ. ಇನ್ನು ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 9,284 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಹೊಸ ರೂಪದಲ್ಲಿ ಅನಾವರಣಗೊಂಡ Toyota Avanza ಎಂಪಿವಿ

ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.34 ರಷ್ಟು ಮಾಸಿಕ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ. ಮಾಸಿಕ ಕಾರು ಮಾರಾಟದಲ್ಲಿ ಟೊಯೊಟಾ ಕಂಪನಿಯು ಭರ್ಜರಿ ಯಶಸ್ವಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. 2021ರ ಕ್ಯಾಲೆಂಡರ್ ವರ್ಷದಲ್ಲಿ, ಟೊಯೊಟಾ ಒಟ್ಟು 1,06,993 ಯುನಿಟ್‌ಗಳನ್ನು (ಜನವರಿಯಿಂದ ಅಕ್ಟೋಬರ್ 2021 ರ ಅವಧಿ) ಮಾರಾಟ ಗಳಿಸುವಲ್ಲಿ ಯಶಸ್ವಿಯಾಗಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ 60,116 ಯುನಿಟ್‌ಗಗಳಿಗೆ ಹೋಲಿಸಿದರೆ ಟೊಯೊಟಾ ಕಂಪನಿಯು ಶೇಕಡಾ 78 ರಷ್ಟು. ಬೆಳವಣಿಗೆಯನ್ನು ಗಳಿಸಿದೆ. ಇನ್ನು ಈ ಹೊಸ ಟೊಯೊಟಾ ಅವನ್ಜಾ ಎಂಪಿವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಕಡಿಮೆಯಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Toyota officially revealed the all new avanza mpv details
Story first published: Thursday, November 11, 2021, 15:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X