ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Toyota Fortuner Legender 4X4 ವೆರಿಯೆಂಟ್

ಈ ವರ್ಷದ ಆರಂಭದಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು ತನ್ನ ಫಾರ್ಚೂನರ್ ಎಸ್‍ಯುವಿಯನ್ನು ನವೀಕರಿಸಿ ಬಿಡುಗಡೆಗೊಳಿಸಿತು. ಈ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯೊಂದಿಗೆ ಇದರ ಟಾಪ್-ಎಂಡ್ ವೆರಿಯೆಂಟ್ ಆಗಿ ಲೆಜೆಂಡರ್ ವೆರಿಯೆಂಟ್ ಅನ್ನು ಬಿಡುಗಡೆಗೊಳಿಸಿದ್ದರು.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Toyota Fortuner Legender 4X4 ವೆರಿಯೆಂಟ್

ಈ ಟೊಯೊಟಾ ಫಾರ್ಚುನರ್ ಲೆಜೆಂಡರ್ ಸ್ಪೋರ್ಟಿಯರ್ ಡಿಸೈನ್ ಅಂಶಗಳು ಮತ್ತು ಪರ್ಲ್ ವೈಟ್ ಪೇಂಟ್ ಸ್ಕೀಮ್ ಬ್ಲ್ಯಾಕ್ ರೂಫ್ ಅನ್ನು ಹೊಂದಿದೆ. 2021ರ ಟೊಯೊಟಾ ಫಾರ್ಚುನರ್ ಅನ್ನು 2.7ಎಲ್ ಪೆಟ್ರೋಲ್ ಮತ್ತು 2.8ಎಲ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಇದರಲ್ಲಿ 2.7ಎಲ್ ಪೆಟ್ರೋಲ್ ಎಂಜಿನ್ 166 ಬಿಹೆಚ್‍ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 2.8ಎಲ್ ಡೀಸೆಲ್ ಎಂಜಿನ್ 204 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕಾರ್ನವಾಟರ್ ಅನ್ನು ಜೋಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Toyota Fortuner Legender 4X4 ವೆರಿಯೆಂಟ್

ಫಾರ್ಚುನರ್ ಪೆಟ್ರೋಲ್ ಕೇವಲ 2WD (ಟೂ-ವೀಲ್-ಡ್ರೈವ್) ನೊಂದಿಗೆ ಲಭ್ಯವಿದ್ದರೂ, ಡೀಸೆಲ್ ಮಾದರಿಯನ್ನು 4WD (ಫೋರ್-ವೀಲ್-ಡ್ರೈವ್) ಸಿಸ್ಟಂನೊಂದಿಗೆ ಲಭ್ಯವಿದೆ, ಪ್ರಸ್ತುತ, ಲೆಜೆಂಡರ್ ರೂಪಾಂತರವು 2WD ಡ್ರೈವ್‌ಟ್ರೇನ್ ಸಿಸ್ಟಂ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Toyota Fortuner Legender 4X4 ವೆರಿಯೆಂಟ್

ಕೆಲವು ವರದಿಗಳ ಪ್ರಕಾರ, ವಾಹನ ತಯಾರಕರು ಶೀಘ್ರದಲ್ಲೇ ಹೊಸ 4WD ರೂಪಾಂತರದೊಂದಿಗೆ ಫಾರ್ಚುನರ್ ಲೆಜೆಂಡರ್ ರೂಪಾಂತರವನ್ನು ಬಿಡುಗಡೆಗೊಳಿಸಲಿದೆ, ಆದರೆ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ಸಿಸ್ಟಂನೊಂದಿಗೆ ಮುಂದಿನ ತಿಂಗಳು ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Toyota Fortuner Legender 4X4 ವೆರಿಯೆಂಟ್

ಈ ಹೊಸ ಮಾದರಿಯು ತುಸು ದುಬಾರಿಯಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಇ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿಯು ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿಯರ್ ವಿನ್ಯಾಸವನ್ನು ಹೊಂದಿದೆ. ಲೆಜೆಂಡರ್ ಲೆಜೆಂಡರ್ ಸಹ ಮರುವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಪಡೆಯುತ್ತದೆ. ಡಿಆರ್‌ಎಲ್‌ಗಳು ಹೊಂದಿದೆ. ಇದನ್ನು ಟೊಯೊಟಾ ವಾಟರ್ ಫಾಲ್ ಡಿಆರ್‌ಎಲ್‌ಗಳು' ಎಂದು ಕರೆಯುತ್ತಾರೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Toyota Fortuner Legender 4X4 ವೆರಿಯೆಂಟ್

ಇನ್ನು ಹೆಡ್‌ಲ್ಯಾಂಪ್‌ಗಳ ಕೆಳಗೆ ಫಾಗ್ ಲ್ಯಾಂಪ್ ಗಳಿವೆ. ಇನ್ನು ಡೈನಾಮಿಕ್ ಟರ್ನ್ ಸಿಗ್ನಲ್ ಇಂಡೀಕೆಟರ್ ಗಳಿವೆ. ಫಾರ್ಚೂನರ್ ಲೆಜೆಂಡರ್ ಸುತ್ತಲೂ ಎಲ್ಇಡಿ ಲೈಟಿಂಗ್ ಹೊಂದಿದೆ. ಇನ್ನು ಇದರ ಸೈಡ್ ಪ್ರೊಫೈಲ್‌ ಬಗ್ಗೆ ಹೇಳುವುದಾದರೆ, ಇದರಲ್ಲಿ 18 ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ಇದು ಎಲ್ಲಾರ ಗಮನಸೆಳೆಯುವಂತಿದೆ. ಅಲ್ಲದೇ ಎಸ್‍ಯುವಿಯ ಸ್ಪೋರ್ಟಿ ಲುಕ್ ಅನ್ನು ಹೆಚ್ಚಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Toyota Fortuner Legender 4X4 ವೆರಿಯೆಂಟ್

ಇದು ಫ್ಲೋರ್‌ಬೋರ್ಡ್‌ ಅನ್ನು ಸಹ ಪಡೆಯುತ್ತದೆ, ಇನ್ನು ಡೋರಿನ ಹ್ಯಾಂಡಲ್‌ಗಳಲ್ಲಿ ಕೆಲವು ಕ್ರೋಮ್ ಇದೆ ಮತ್ತು ಉದ್ದಕ್ಕೂ ಸ್ಟ್ರಿಪ್ ಅನ್ನು ಸಹ ಕ್ರೋಮ್‌ನಿಂದಮಾಡಲಾಗಿದೆ. ಈ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿಯ ರೂಫ್ ಮ್ಯಾಟ್ ಬ್ಲ್ಯಾಕ್‌ನಿಂದ ಕೂಡಿದ್ದು, ಇದು ಒಟ್ಟಾರೆ ಬಿಳಿ ಬಣ್ಣದೊಂದಿಗೆ ಉತ್ತಮ ವ್ಯತಿರಿಕ್ತತೆಯನ್ನು ನೀಡುತ್ತದೆ. ಇನ್ನು ಈ ಎಸ್‍ಯುವಿಯ ಸ್ಪೋರ್ಟಿ ಲುಕ್‌ಗೆ ಪೂರಕವಾಗಿ ರೂಫ್ ರೈಲ್ ಮತ್ತು ಶಾರ್ಕ್-ಫಿನ್ ಆಂಟೆನಾವನ್ನು ಸಹ ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Toyota Fortuner Legender 4X4 ವೆರಿಯೆಂಟ್

ಇನ್ನು ಈ ಎಸ್‍ಯುವಿಯ ಹಿಂಭಾಗದಲ್ಲಿ ನಯವಾದ-ಕಾಣುವ ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದೆ. ಅದನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದು ಬ್ಲ್ಯಾಕ್ ಸ್ಟ್ರಿಪ್ ಸಹ ಪಡೆಯುತ್ತದೆ, ಅದು ಎರಡೂ ಟೈಲ್ ಲೈಟ್‌ಗಳನ್ನು ಅದರ ಉದ್ದಕ್ಕೂ 'ಫೋರ್ಟೂನರ್' ಬ್ರ್ಯಾಂಡಿಂಗ್‌ನೊಂದಿಗೆ ಸಂಪರ್ಕಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Toyota Fortuner Legender 4X4 ವೆರಿಯೆಂಟ್

ಟೊಯೊಟಾ ಫಾರ್ಚೂನರ್ ಲೆಜೆಂಡರ್ ವೆರಿಯೆಂಟ್ ಒಳಭಾಗದಲ್ಲಿಯು ಕೆಲವು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ. ಫಾರ್ಚೂನರ್ ಲೆಜೆಂಡರ್ ಇಂಟಿರಿಯರ್ ಅಥವಾ ಒಳಭಾಗದಲ್ಲಿ ಡ್ಯುಯಲ್-ಟೋನ್ (ಬ್ಲ್ಯಾಕ್ ಮತ್ತು ಮರೂನ್) ಅಂಶಗಳನ್ನು ಹೊಂದಿದೆ, ಇದು ಒಳಾಂಗಣವನ್ನು ಸ್ಪೋರ್ಟಿ ಆಗಿ ಕಾಣುವಂತೆ ಮಾಡುತ್ತದೆ. ಡ್ಯಾಶ್‌ಬೋರ್ಡ್ ಮತ್ತು ಡೋರಿನ ಪ್ಯಾನೆಲ್ ಗಳಲ್ಲಿ ಸಾಕಷ್ಟು ಸಾಫ್ಟ್-ಟಚ್ ಸಾಮಗ್ರಿಗಳಿವೆ. ಎಸ್‌ಯುವಿ ಸುತ್ತಲೂ ವೈಟ್ ಅಬೈಂಡ್ ಲೈಟ್ ಅನ್ನು ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Toyota Fortuner Legender 4X4 ವೆರಿಯೆಂಟ್

ಇನ್ನು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯನ್ನು ಒಳಗೊಂಡಿರುವ 8 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದು ಉತ್ತಮ ರೆಸ್ಪಾನ್ಸ್ ನಿಂದ ಕೂಡಿದೆ. ಇದರ ಕೆಳಗೆ ಟೆಪ್ರೇಚರ್ ಮತ್ತು ಪ್ಯಾನ್ ಸ್ಪೀಡ್ ವೇಗವನ್ನು ಪ್ರದರ್ಶಿಸಲು ಎಲ್ಇಡಿ ಡಿಸ್ ಪ್ಲೇಯೊಂದಿಗೆ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಅನ್ನು ನೀಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Toyota Fortuner Legender 4X4 ವೆರಿಯೆಂಟ್

ಇನ್ನು ಗೇರ್ ಲಿವರ್‌ನ ಮುಂದೆ ಕಪ್ ಹೋಲ್ಡರ್ಸ್ ಮತ್ತು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್ ಅನ್ನು ಸಹ ಹೊಂದಿದೆ .ಇದು ನಿಜವಾಗಿಯೂ ಉತ್ತಮ ಫೀಚರ್ ಆಗಿದೆ. ಇದು ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್ ಮತ್ತು ಎಂಯುಎಕ್ಸ್ ಕೇಬಲ್ ಕನೆಕ್ಟರ್ ಅನ್ನು ಸಹ ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Toyota Fortuner Legender 4X4 ವೆರಿಯೆಂಟ್

ಇದರ ಸ್ಟೀರಿಂಗ್ ವ್ಹೀಲ್ ಲೆದರ್ ನಿಂದ ಸುತ್ತುವರಿದಿದ್ದು, ಇದು ಉತ್ತಮ ಗ್ರೀಪ್ ನಿಂದ ಕೂಡಿದೆ. ಇನ್ನು ಕಾಲ್ ರಿಸ್ವೀವ್ ಮಾಡಲು ಮತ್ತು ಕಟ್ ಮಾಡಲು ಮೌಂಟಡ್ ಕಂಟ್ರೋಲ್ ಗಳನ್ನು ನೀಡಿದೆ. ಈ ಸ್ಟೀಯರಿಂಗ್ ವ್ಹೀಲ್ ಟೆಲ್ಟ್ ಮತ್ತು ರಿಚ್ ಎಂಬ ಎರಡು ವಿಧದದಲ್ಲಿ ಅಡೆಜೆಸ್ಟ್ ಮಾಡಬಹುದಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Toyota Fortuner Legender 4X4 ವೆರಿಯೆಂಟ್

ಫಾರ್ಚೂನರ್ ಲೆಜೆಂಡರ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸ್ಟ್ಯಾಂಡರ್ಡ್ ಫಾರ್ಚೂನರ್ ನಲ್ಲಿ ಕಂಡುಬರುವಂತೆಯೇ ಇರುತ್ತದೆ. ಇದು ಸ್ಪೀಡೋಮೀಟರ್ ಮತ್ತು ಟ್ಯಾಕೋಮೀಟರ್‌ಗಾಗಿ ಎರಡು ಅನಲಾಗ್ ಡಯಲ್‌ಗಳನ್ನು ಒಳಗೊಂಡಿದೆ. ಇದು ಡಯಲ್‌ಗಳ ನಡುವೆ ಟಿಎಫ್‌ಟಿ ಎಂಐಡಿ ಡಿಸ್ ಪ್ಲೇಯನ್ನು ಸಹ ಪಡೆಯುತ್ತದೆ, ಅದು ವಾಹನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಓದಲು ಸಹಾಯ ಮಾಡುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Toyota Fortuner Legender 4X4 ವೆರಿಯೆಂಟ್

ಫಾರ್ಚೂನರ್ ಲೆಜೆಂಡರ್ ವೆರಿಯೆಂಟ್ ನಲ್ಲಿ ಸುರಕ್ಷತೆಗಾಗಿ 7 ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಬ್ರೇಕ್ ಅಸಿಸ್ಟ್, ಸ್ಟೆಬಿಲಿಟಿ ಕಂಟ್ರೋಲ್, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆರೋಹಣಗಳು, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್ (ಆಟೋ ಎಮರ್ಜೆನ್ಸಿ ಅನ್‌ಲಾಕ್‌ನೊಂದಿಗೆ), ಮತ್ತು ತುರ್ತು ಬ್ರೇಕ್ ಸಿಗ್ನಲ್‌ನಂತಹ ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Most Read Articles

Kannada
Read more on ಟೊಯೊಟಾ toyota
English summary
Toyota planning to launch fortuner legender 4x4 soon in india details
Story first published: Tuesday, September 28, 2021, 14:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X