ಟೊಯೊಟಾ ಬಹುನೀರಿಕ್ಷಿತ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಬಿಡುಗಡೆ ಮಾಹಿತಿ ಬಹಿರಂಗ

ಟೊಯೊಟಾ(Toyota) ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಯಾದ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಮಾದರಿಯನ್ನು ಭಾರತದಲ್ಲೂ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆ ಪ್ರವೇಶಿಸುವ ಸಿದ್ದತೆಯಲ್ಲಿದೆ.

ಟೊಯೊಟಾ ಬಹುನೀರಿಕ್ಷಿತ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಬಿಡುಗಡೆ ಮಾಹಿತಿ ಬಹಿರಂಗ

ದೇಶಿಯ ಮಾರುಕಟ್ಟೆಗಳಲ್ಲಿ ತನ್ನ ಸರಣಿ ಕಾರುಗಳ ಮಾರಾಟವನ್ನು ಹೆಚ್ಚಿಸುವ ಬೃಹತ್ ಯೋಜನೆಗೆ ಚಾಲನೆ ನೀಡಿರುವ ಟೊಯೊಟಾ ಕಂಪನಿಯು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಯಶಸ್ವಿಯಾಗಿರುವ ಪ್ರಮುಖ ಕಾರು ಮಾದರಿಗಳನ್ನು ಭಾರತದಲ್ಲೂ ಹಂತ-ಹಂತವಾಗಿ ಬಿಡುಗಡೆ ಮಾಡುತ್ತಿದ್ದು, ಹೊಸ ಯೋಜನೆಯ ಭಾಗವಾಗಿ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಮಾದರಿಯು ಕೂಡಾ 2022ರ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ.

ಟೊಯೊಟಾ ಬಹುನೀರಿಕ್ಷಿತ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಬಿಡುಗಡೆ ಮಾಹಿತಿ ಬಹಿರಂಗ

ಪ್ರಸ್ತುತ ಕಾರು ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಎಸ್‌ಯುವಿ ಆವೃತ್ತಿಗಳ ಕಾರುಗಳ ಮಾರಾಟವು ಹೆಚ್ಚುತ್ತಿದ್ದು, ಟೊಯೊಟಾ ಕಂಪನಿಯು ಸಹ ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಆಧರಿಸಿ ಜಾಗತಿಕ ಮಾರುಕಟ್ಟೆಗಳಲ್ಲಿನ ಪ್ರಮುಖ ಕಾರು ಮಾದರಿಗಳನ್ನು ಭಾರತದಲ್ಲೂ ಬಿಡುಗಡೆ ಮಾಡುತ್ತಿದೆ.

ಟೊಯೊಟಾ ಬಹುನೀರಿಕ್ಷಿತ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಬಿಡುಗಡೆ ಮಾಹಿತಿ ಬಹಿರಂಗ

ಟೊಯೊಟಾ ಹೊಸ ಕಾರುಗಳ ಪೈಕಿ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಕೂಡಾ ಒಂದಾಗಿದ್ದು, ಹೊಸ ಕಾರು ಬಿಡುಗಡೆಯಾಗಿ ಕಂಪನಿಯು ಅಂತಿಮ ಹಂತದ ಸಿದ್ದತೆ ನಡೆಸುತ್ತಿದೆ. ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಮಾದರಿಯ ಬಿಡುಗಡೆಗೂ ಮುನ್ನ ಟೊಯೊಟಾ ಕಂಪನಿಯು ಉತ್ಪಾದನಾ ಮಾದರಿಯ ಟಿವಿ ಜಾಹೀರಾತು ಚಿತ್ರೀಕರಣ ಆರಂಭಿಸಿದ್ದು, ಫೆಬ್ರವರಿಯಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ಇಸುಝು ಡಿ ಮ್ಯಾಕ್ಸ್ ಮಾದರಿಗೆ ಉತ್ತಮ ಪೈಪೋಟಿ ನೀಡಲಿದೆ.

ಟೊಯೊಟಾ ಬಹುನೀರಿಕ್ಷಿತ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಬಿಡುಗಡೆ ಮಾಹಿತಿ ಬಹಿರಂಗ

2022ರ ಅಂತ್ಯಕ್ಕೆ ಒಟ್ಟು ನಾಲ್ಕು ಹೊಸ ಕಾರುಗಳನ್ನು ರಸ್ತೆಗಿಳಿಸುವ ಸಿದ್ದತೆಯಲ್ಲಿರುವ ಟೊಯೊಟಾ ಕಂಪನಿಯು ಮೊದಲ ಮಾದರಿಯಾಗಿ ಹಿಲಕ್ಸ್ ನಂತರ ರಾವ್ 4 ಮತ್ತು ಮತ್ತೆರಡು ರೀಬ್ಯಾಡ್ಜ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ.

ಟೊಯೊಟಾ ಬಹುನೀರಿಕ್ಷಿತ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಬಿಡುಗಡೆ ಮಾಹಿತಿ ಬಹಿರಂಗ

ಜೊತೆಗೆ ಕೇಂದ್ರ ಸರ್ಕಾರವು ಹೊಸದಾಗಿ ಜಾರಿಗೆ ತಂದಿರುವ ಹೊಸ ಆಮದು ನೀತಿಯು ವಿದೇಶಿ ಕಾರು ಉತ್ಪಾದನಾ ಕಂಪನಿಗಳಿಗೆ ಸಾಕಷ್ಟು ಸಹಕಾರಿಯಾಗುತ್ತಿದ್ದು, ಹೊಸ ಆಮದು ನೀತಿ ಅಡಿಯಲ್ಲಿ ವಿದೇಶಿ ಕಾರು ಕಂಪನಿಗಳು ವಾರ್ಷಿಕವಾಗಿ 2,500 ಯುನಿಟ್ ಕಾರುಗಳನ್ನು ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ದೇಶಿಯ ಮಾರುಕಟ್ಟೆಗೆ ಆಮದು ಮಾಡಿಕೊಳ್ಳಲು ಅವಕಾಶ ನೀಡಿರುವುದು ಟೊಯೊಟಾ ಕಂಪನಿಗೂ ವರದಾನವಾಗಿದೆ.

ಟೊಯೊಟಾ ಬಹುನೀರಿಕ್ಷಿತ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಬಿಡುಗಡೆ ಮಾಹಿತಿ ಬಹಿರಂಗ

ಟೊಯೊಟಾ ಕಂಪನಿಯು ಹೊಸ ಆಮದು ನೀತಿ ಅಡಿ ವಿದೇಶಿ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಪ್ರಮುಖ ಕಾರುಗಳನ್ನು ಹೊಸ ಆಮದು ನೀತಿ ಅಡಿಯಲ್ಲಿ ಮಾರಾಟ ಮಾಡುವ ಯೋಜನೆಯಲ್ಲಿದ್ದು, ಈಗಾಗಲೇ ಹೊಸ ಆಮದು ನೀತಿ ಅಡಿಯಲ್ಲಿ ವೆಲ್‌ಫೈರ್ ಐಷಾರಾಮಿ ಎಂಪಿವಿ ಮಾದರಿಯನ್ನು ಮಾರಾಟ ಮಾಡುತ್ತಿದೆ.

ಟೊಯೊಟಾ ಬಹುನೀರಿಕ್ಷಿತ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಬಿಡುಗಡೆ ಮಾಹಿತಿ ಬಹಿರಂಗ

ಮಧ್ಯಮ ಗಾತ್ರದ ಪಿಕ್ಅಪ್ ಎಸ್‌ಯುವಿ ಮಾದರಿಯಲ್ಲೇ ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿರುವ ಹಿಲಕ್ಸ್ ಮಾದರಿಯು ವಿದೇಶಿ ಮಾರುಕಟ್ಟೆಯಲ್ಲಿ ವಿವಿಧ ಎಂಜಿನ್ ಮಾದರಿಯೊಂದಿಗೆ ಉತ್ತಮ ಬೇಡಿಕೆ ಹೊಂದಿದೆ.

ಟೊಯೊಟಾ ಬಹುನೀರಿಕ್ಷಿತ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಬಿಡುಗಡೆ ಮಾಹಿತಿ ಬಹಿರಂಗ

ಹಿಲಕ್ಸ್ ಕಾರು ಭಾರತೀಯ ಮಾರುಕಟ್ಟೆಗಳಲ್ಲಿನ ಪಿಕ್ಅಪ್ ಮಾದರಿಗಳಿಗೆ ಹೋಲಿಕೆ ಮಾಡಿದರೆ ತುಸು ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಮಾದರಿಯು ಬೆಲೆ ಕಡಿತಕ್ಕಾಗಿ ಕೆಲವು ಬದಲಾವಣೆಗಳೊಂದಿಗೆ ಪ್ರಮುಖ ಎರಡು ಡೀಸೆಲ್ ಎಂಜಿನ್‌ನೊಂದಿಗೆ ರಸ್ತೆಗಿಳಿಯಲಿದೆ.

ಟೊಯೊಟಾ ಬಹುನೀರಿಕ್ಷಿತ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಬಿಡುಗಡೆ ಮಾಹಿತಿ ಬಹಿರಂಗ

ಹಿಲಕ್ಸ್ ಪಿಕ್ಅಪ್ ಬಿಡುಗಡೆಗಾಗಿ ಟೊಯೊಟಾ ಕಂಪನಿಯು ಈಗಾಗಲೇ ಕೇಂದ್ರ ಸಾರಿಗೆ ಇಲಾಖೆಯಲ್ಲಿ ಟ್ರೇಡ್‌ಮಾರ್ಕ್ ಕೂಡಾ ದಾಖಲಿಸಲಾಗಿದ್ದು, ಇಸುಝ ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾದರಿಗೆ ಪೈಪೋಟಿಯಾಗಿ ಪ್ರಮುಖ ಎರಡು ಮಾದರಿಗಳಲ್ಲಿ ಬಿಡುಗಡೆಗೆ ಸಿದ್ದವಾಗಿದೆ.

ಟೊಯೊಟಾ ಬಹುನೀರಿಕ್ಷಿತ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಪಿಕ್ಅಪ್ ಮಾದರಿಯಲ್ಲಿ ಟೊಯೊಟಾ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 2.4-ಲೀಟರ್ ಡೀಸೆಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್‌ ಬಿಡುಗಡೆ ಮಾಡಬಹುದಾಗಿದ್ದು, ಕಡಿಮೆ ಎಂಜಿನ್ ವೇಗದಲ್ಲೂ ಅತಿಹೆಚ್ಚು ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಟೊಯೊಟಾ ಬಹುನೀರಿಕ್ಷಿತ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಬಿಡುಗಡೆ ಮಾಹಿತಿ ಬಹಿರಂಗ

ಜಾಗತಿಕ ಮಾರುಕಟ್ಟೆಯಲ್ಲಿ ವಿವಿಧ ವೆರಿಯೆಂಟ್‌ಗಳೊಂದಿಗೆ ಮಾರಾಟವಾಗುತ್ತಿರುವ ಹಿಲಕ್ಸ್ ಮಾದರಿಯು ಭಾರತದಲ್ಲಿ ಪ್ರಮುಖ ಎಂಜಿನ್ ಆಯ್ಕೆಯೊಂದಿಗೆ ರೂ. 25 ಲಕ್ಷದಿಂದ ರೂ. 30 ಲಕ್ಷ ಬೆಲೆ ಅಂತರದಲ್ಲಿ ಕೆಲವೇ ವೆರಿಯೆಂಟ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ಟೊಯೊಟಾ ಬಹುನೀರಿಕ್ಷಿತ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಬಿಡುಗಡೆ ಮಾಹಿತಿ ಬಹಿರಂಗ

ಹಿಲಕ್ಸ್ ಪಿಕ್‌ಅಪ್ ವಾಹನವು ಉತ್ತಮವಾದ ಒಳಾಂಗಣದೊಂದಿಗೆ ಒಟ್ಟು 5,285-ಎಂಎಂ ಉದ್ದ ಹೊಂದಿದ್ದು, 3,085-ಎಂಎಂ ವೀಲ್ಹ್ ಬೆಸ್‌ನೊಂದಿಗೆ 4x4 ಆಲ್‌ವೀಲ್ಹ್ ಡ್ರೈವ್ ಟೆಕ್ನಾಲಜಿಯೊಂದಿಗೆ ಬಿಡುಗಡೆಯಾಗಲಿದೆ.

ಟೊಯೊಟಾ ಬಹುನೀರಿಕ್ಷಿತ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಬಿಡುಗಡೆ ಮಾಹಿತಿ ಬಹಿರಂಗ

ಜೊತೆಗೆ ಹೊಸ ವಾಹನದಲ್ಲಿ ಹಲವಾರು ಸೇಫ್ಟಿ ಫೀಚರ್ಸ್‌ಗಳನ್ನು ಸಹ ನೀಡಲಾಗಿದ್ದು, ಆಫ್ ರೋಡ್ ಪ್ರಿಯರು ಹೊಸ ಕಾರು ಮಾದರಿಯನ್ನು ವಿವಿಧ ಬಗೆಯಲ್ಲಿ ಮಾಡಿಫೈ ಸೌಲಭ್ಯಗಳನ್ನು ಮಾರ್ಪಾಡುಗೊಳಿಸಲು ಸೂಕ್ತ ಕಾರು ಮಾದರಿಯಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Toyota planning to launch hilux in 2022 february details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X