ಸೆಪ್ಟೆಂಬರ್ ತಿಂಗಳ ಮಾರಾಟ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದ Toyota

Toyota ಕಂಪನಿಯು ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ತಾನು ಮಾರಾಟ ಮಾಡಿದ ಕಾರುಗಳ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ. Innova Crysta ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ Toyota ಕಂಪನಿಯ ಕಾರ್ ಆಗಿದೆ. Toyota ಕಂಪನಿಯು ಕಳೆದ ತಿಂಗಳು 4,724 ಯುನಿಟ್ Innova Crysta ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ.

ಸೆಪ್ಟೆಂಬರ್ ತಿಂಗಳ ಮಾರಾಟ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದ Toyota

ಕಂಪನಿಯು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕಾರಿನ 4,087 ಯುನಿಟ್ ಗಳನ್ನು ಮಾರಾಟ ಮಾಡಿತ್ತು. ಈ ಕಾರಿನ ಮಾರಾಟ ಪ್ರಮಾಣವು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 16% ನಷ್ಟು ಏರಿಕೆಯಾಗಿದೆ. Toyota Innova Crysta ಭಾರತದಲ್ಲಿರುವ ಜನಪ್ರಿಯ ಎಂಪಿವಿಗಳಲ್ಲಿ ಒಂದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ Toyota Innova Crysta ಕಾರಿಗೆ ನೇರ ಸ್ಪರ್ಧಿಗಳಿಲ್ಲ.

ಸೆಪ್ಟೆಂಬರ್ ತಿಂಗಳ ಮಾರಾಟ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದ Toyota

ಆದರೂ Kia Carnival ಕಾರ್ ಅನ್ನು Toyota Innova Crysta ಕಾರಿಗೆ ಪರ್ಯಾಯವಾಗಿ ಪರಿಗಣಿಸಲಾಗುತ್ತದೆ. ಈ ಮಾರಾಟ ಪಟ್ಟಿಯಲ್ಲಿ Fortuner ಕಾರು ಎರಡನೇ ಸ್ಥಾನದಲ್ಲಿದೆ. Fortuner ದೇಶಿಯ ಮಾರುಕಟ್ಟೆಯಲ್ಲಿರುವ ಪೂರ್ಣ ಗಾತ್ರದ ಎಸ್‌ಯು‌ವಿಗಳಲ್ಲಿ ಒಂದಾಗಿದೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ, ಭಾರತದಲ್ಲಿ Fortuner ಕಾರಿನ 1,045 ಯುನಿಟ್ ಗಳು ಮಾರಾಟವಾಗಿದ್ದವು.

ಸೆಪ್ಟೆಂಬರ್ ತಿಂಗಳ ಮಾರಾಟ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದ Toyota

ಆದರೆ ಈ ವರ್ಷದ ಸೆಪ್ಟೆಂಬರ್‌ ತಿಂಗಳಿನಲ್ಲಿ ಈ ಸಂಖ್ಯೆ 1,869 ಗಳಿಗೆ ಏರಿಕೆಯಾಗಿ ಮಾರಾಟ ಪ್ರಮಾಣದಲ್ಲಿ 79% ನಷ್ಟು ಹೆಚ್ಚಳವಾಗಿದೆ. Toyota Fortuner ಕಾರು ದೇಶಿಯ ಮಾರುಕಟ್ಟೆಯಲ್ಲಿ MG Gloster ಹಾಗೂ Ford Endeavour ಕಾರುಗಳಿಗೆ ಪೈಪೋಟಿ ನೀಡುತ್ತದೆ. Ford ಕಂಪನಿಯು ಭಾರತದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದರಿಂದ ಇನ್ನು ಮುಂದೆ Endeavour ಕಾರು Toyota Fortuner ಕಾರಿಗೆ ಪ್ರತಿ ಸ್ಪರ್ಧಿಯಾಗುವುದಿಲ್ಲ.

ಸೆಪ್ಟೆಂಬರ್ ತಿಂಗಳ ಮಾರಾಟ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದ Toyota

Toyota Glanza ಕಾರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. Maruti Suzuki ಕಂಪನಿಯ Baleno ಕಾರ್ ಅನ್ನು Toyota ಕಂಪನಿಯು ತನ್ನ ಬ್ರಾಂಡ್ ಅಡಿಯಲ್ಲಿ ರಿ ಬ್ಯಾಡ್ಜ್ ಮಾಡಿ Glanza ಹೆಸರಿನಲ್ಲಿ ಮಾರಾಟ ಮಾಡುತ್ತದೆ. Toyota ಕಂಪನಿಯು ಈ ಕಾರ್ ಅನ್ನು Maruti Suzuki ಕಂಪನಿಯ ಸಹಭಾಗಿತ್ವದಲ್ಲಿ ರಿ ಬ್ಯಾಡ್ಜ್ ಮಾಡಿ ಮಾರಾಟ ಮಾಡುತ್ತದೆ.

ಸೆಪ್ಟೆಂಬರ್ ತಿಂಗಳ ಮಾರಾಟ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದ Toyota

ಕಳೆದ ತಿಂಗಳು Glanza ಕಾರಿನ 1,764 ಯುನಿಟ್ ಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗಿದೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಸಂಖ್ಯೆ 2,572 ಗಳಾಗಿತ್ತು. ಈ ಕಾರಿನ ಮಾರಾಟ ಪ್ರಮಾಣವು ಈ ಬಾರಿ 31% ನಷ್ಟು ಕುಸಿತ ದಾಖಲಿಸಿದೆ. Toyota Glanza ಕಾರು ದೇಶಿಯ ಮಾರುಕಟ್ಟೆಯಲ್ಲಿ Tata Altroz, Hyundai i 20, Volkswagen Polo ಹಾಗೂ Maruti Suzuki Baleno ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಸೆಪ್ಟೆಂಬರ್ ತಿಂಗಳ ಮಾರಾಟ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದ Toyota

Toyota Urban Cruiser ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ಕಾರು Maruti Suzuki Vitara Brezza ಕಾರಿನ ರಿ ಬ್ಯಾಡ್ಜ್ ಆವೃತ್ತಿಯಾಗಿದೆ. Toyota ಕಂಪನಿಯು Maruti Suzuki Vitara Brezza ಸಬ್ 4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು Urban Cruiser ಹೆಸರಿನಲ್ಲಿ ರಿ ಬ್ಯಾಡ್ಜ್ ಮಾಡಿ ಮಾರಾಟ ಮಾಡುತ್ತದೆ.

ಸೆಪ್ಟೆಂಬರ್ ತಿಂಗಳ ಮಾರಾಟ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದ Toyota

ಕಳೆದ ತಿಂಗಳು Toyota Urban Cruiser ಕಾರಿನ 816 ಯುನಿಟ್ ಗಳನ್ನು ಮಾರಾಟ ಮಾಡಲಾಗಿದೆ. Toyota Urban Cruiser ಕಾರ್ ಅನ್ನು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಕಾರಣಕ್ಕೆ ಕಳೆದ ವರ್ಷದ ಅಂಕಿ ಅಂಶಗಳನ್ನು ಪರಿಗಣಿಸುತ್ತಿಲ್ಲ. Toyota Camry ಕಾರು ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ಸೆಪ್ಟೆಂಬರ್ ತಿಂಗಳ ಮಾರಾಟ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದ Toyota

2020ರ ಸೆಪ್ಟೆಂಬರ್ ತಿಂಗಳಿನಲ್ಲಿ Toyota Camry ಕಾರಿನ ಕೇವಲ 21 ಯುನಿಟ್ ಗಳು ಮಾರಾಟವಾಗಿದ್ದವು. ಕಳೆದ ತಿಂಗಳು ಈ ಕಾರಿನ 59 ಯುನಿಟ್ ಗಳು ಮಾರಾಟವಾಗಿವೆ. ಈ ಮೂಲಕ Toyota Camry ಕಾರಿನ ಮಾರಾಟ ಪ್ರಮಾಣವು ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 181% ನಷ್ಟು ಹೆಚ್ಚಳವಾಗಿದೆ. Toyota Vellfire ಕಾರು ಈ ಪಟ್ಟಿಯಲ್ಲಿ ಆರನೇ ಹಾಗೂ ಕೊನೆಯ ಸ್ಥಾನದಲ್ಲಿದೆ.

ಸೆಪ್ಟೆಂಬರ್ ತಿಂಗಳ ಮಾರಾಟ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದ Toyota

2020ರ ಸೆಪ್ಟೆಂಬರ್ ತಿಂಗಳಿನಲ್ಲಿ Toyota Vellfire ಕಾರಿನ ಕೇವಲ 14 ಯುನಿಟ್ ಗಳು ಮಾರಾಟವಾಗಿದ್ದವು. ಕಳೆದ ತಿಂಗಳು ಈ ಕಾರಿನ 52 ಯುನಿಟ್ ಗಳು ಮಾರಾಟವಾಗಿ, ಮಾರಾಟ ಪ್ರಮಾಣವು 271% ನಷ್ಟು ಹೆಚ್ಚಳವಾಗಿದೆ. Toyota Vellfire ದುಬಾರಿ ಬೆಲೆಯ ಕಾರುಗಳಲ್ಲಿ ಒಂದಾಗಿದೆ. ಹಲವು ಸೆಲೆಬ್ರಿಟಿಗಳು ಈ ಕಾರ್ ಅನ್ನು ಖರೀದಿಸುತ್ತಿದ್ದಾರೆ. ಮಲಯಾಳಂ ಚಿತ್ರದ ಸೂಪರ್ ಸ್ಟಾರ್ ಮೋಹನ್ ಲಾಲ್ ಸಹ ಈ ಕಾರ್ ಅನ್ನು ಖರೀದಿಸಿದ್ದಾರೆ.

ಸೆಪ್ಟೆಂಬರ್ ತಿಂಗಳ ಮಾರಾಟ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದ Toyota

Toyota Vellfire ಕಾರು ಹಲವಾರು ಐಷಾರಾಮಿ ಫೀಚರ್ ಗಳನ್ನು ಹೊಂದಿದೆ. ಎಲೆಕ್ಟ್ರಾನಿಕ್ ಚಿಪ್‌ಗಳಿಲ್ಲದೆ ಪ್ರಮುಖ ಕಾರು ತಯಾರಕ ಕಂಪನಿಗಳು ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿವೆ. Toyota ಕಂಪನಿಯು ಸಹ ಸೆಮಿಕಂಡಕ್ಟರ್ ಗಳ ಕೊರತೆಯ ಹಿನ್ನೆಲೆಯಲ್ಲಿ ಭಾರತವೂ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿರುವ ತನ್ನ ಕಾರು ಉತ್ಪಾದನಾ ಘಟಕಗಳಲ್ಲಿ ಉತ್ಪಾದನಾ ಪ್ರಮಾಣವನ್ನು 15% ನಷ್ಟು ಕಡಿತಗೊಳಿಸಲು ನಿರ್ಧರಿಸಿದೆ.

Most Read Articles

Kannada
Read more on ಟೊಯೊಟಾ toyota
English summary
Toyota releases model wise sales report for september 2021 details
Story first published: Thursday, October 21, 2021, 19:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X