ಆಕರ್ಷಕ ವಿನ್ಯಾಸದ ಸಣ್ಣ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಟೊಯೊಟಾ ತನ್ನ ಐಗೊ ಎಕ್ಸ್ ಪ್ರೊಲಾಗ್ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದೆ. ಈ ಸಣ್ಣ ಕಾನ್ಸೆಪ್ಟ್ ಕಾರು ಸ್ಪೋರ್ಟಿ ಮತ್ತು ಹೆಚ್ಚು ಅಗ್ರೇಸಿವ್ ಲುಕ್ ನೊಂದಿಗೆ ಆಕರ್ಷಕವಾಗಿ ಕಾಣುತ್ತದೆ.

ಆಕರ್ಷಕ ವಿನ್ಯಾಸದ ಸಣ್ಣ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಹೊಸ ಟೊಯೊಟಾ ಐಗೊ ಎಕ್ಸ್ ಪ್ರೊಲಾಗ್ ಕಾನ್ಸೆಪ್ಟ್ ಕಾರಿನ ವಿನ್ಯಾಸವು ನೋಡುಗರನ್ನು ತನ್ನತ ಸೆಳೆಯುವಂತಿದೆ. 2005ರಿಂದ ಯುರೋಪಿನಲ್ಲಿ ಐಗೊ ಹ್ಯಾಚ್‌ಬ್ಯಾಕ್ ಅನ್ನು ಮಾರಾಟ ಮಾಡುತ್ತಿದ್ದಾರೆ ಇದು ನೋಡಲು ಸಣ್ಣ ಕ್ರಾಸ್‌ಒವರ್ ಲುಕ್ ಅನ್ನು ಹೊಂದಿದೆ. ಯುರೋಪಿನ ಮಾರುಕಟ್ಟೆಗಳಲ್ಲಿ ಟೊಯೊಟಾದ ಐಗೊ ಹ್ಯಾಚ್‌ಬ್ಯಾಕ್ ಜನಪ್ರಿಯ ಮಾದರಿಯಾಗಿದೆ. ಇದು ಸ್ಥಿರವಾಗಿ ಉತ್ತಮವಾಗಿ ಮಾರಾಟವಾಗಿತ್ತಿರುವ ಮಾದರಿಯಾಗಿ‌ದೆ.

ಆಕರ್ಷಕ ವಿನ್ಯಾಸದ ಸಣ್ಣ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಇದು ಎಕ್ಸ್ ಪ್ರೊಲಾಗ್ ಕಾನ್ಸೆಪ್ಟ್ ಕಾರು ಮೂರನೇ ತಲೆಮಾರಿನ ಐಗೊ ಮಾದರಿಯಾಗಿರಬಹುದು. ಈ ಹೊಸ ಐಗೊ ಎಕ್ಸ್ ಪ್ರೊಲಾಗ್ ಕಾನ್ಸೆಪ್ಟ್ ಕಾರು ಸಿಟ್ರೊಯೆನ್ ಸಿ 1 ಮತ್ತು ಪಿಯುಗಿಯೊ 108 ಮಾದರಿಗಳೊಂದಿಗೆ ಹಲವಾರು ಹೋಲಿಕೆಗಳನ್ನು ಹೊಂದಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಆಕರ್ಷಕ ವಿನ್ಯಾಸದ ಸಣ್ಣ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಈ ಸಣ್ಣ ಕಾರು ಸಿಟಿಗಳಲ್ಲಿ ಇದನ್ನು ಡ್ರೈವ್ ಮಾಡಿ ಸುಲಭವಾಗಿ ತೆರಳಬಹುದು. ಪಾರ್ಕಿಂಗ್ ಮಾಡಲು ಹೆಚ್ಚಿನ ಸ್ಥಳ ಬೇಕಾಗಿಲ್ಲ. ಇನ್ನು ಸಿಟಿ ಟ್ರಾಫಿಕ್ ನಲ್ಲಿಯು ಇತರ ಕಾರುಗಳಿಗಿಂತ ಸುಲಭವಾಗಿ ಸಾಗಬಹುದು. ಒಟ್ಟಾರೆ ಈ ಸಣ್ಣ ಕಾರು ಸಿಟಿಗಳಿಗೆ ಹೆಚ್ಚು ಸೂಕ್ತವಾಗಿದೆ ಎಂದು ಹೇಳಬಹುದು.

ಆಕರ್ಷಕ ವಿನ್ಯಾಸದ ಸಣ್ಣ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಇನ್ನು ಈ ಕಾರು ಡ್ಯುಯಲ್ ಟೊನ್ ಬಣ್ಣವನ್ನು ಹೊಂದಿದೆ. ಕೆಳಕ್ಕೆ ಅಂಚುಗಳಲ್ಲಿ ಲಂಬವಾದ ಏರ್ ಇನ್ ಟೆಕ್ ಗಳೊಂದಿಗೆ ಕಪ್ಪು ರೇಡಿಯೇಟರ್ ಗ್ರಿಲ್ ಹೊಂದಿದೆ. ಇನ್ನು ಇದರಲ್ಲಿ ಬ್ಲ್ಯಾಕ್ ಕ್ಲಾಡಿಂಗ್ ಅನ್ನು ಹೊಂದಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಆಕರ್ಷಕ ವಿನ್ಯಾಸದ ಸಣ್ಣ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಇನ್ನು ಸ್ಪೋರ್ಟಿ ವ್ಹೀಲ್ ವಿನ್ಯಾಸವನ್ನು ಹೊಂದಿದೆ. ಕೆಂಪು ಬಣ್ಣದ ಬಾಡಿ ಕಪ್ಪು ಬಣ್ಣದ ರೂಫ್ ಅನ್ನು ಹೊಂದಿದೆ. ಇನ್ನು ಹಿಂಭಾಗದಲ್ಲಿ ಡ್ಯುಯಲ್-ಟೋನ್ ವೈಬ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದ ಸಣ್ಣ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಟೊಯೊಟಾ ಐಗೊ ಎಕ್ಸ್ ಪ್ರೊಲಾಗ್ ಕಾನ್ಸೆಪ್ಟ್ ಯು-ಆಕಾರದ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಸಿಂಗಲ್-ಪೀಸ್ ಪ್ಯಾನೆಲ್‌ನಲ್ಲಿ ಅಳವಡಿಸಲಾಗಿರುವ ಟೊಯೊಟಾ ಬ್ಯಾಡ್ಜ್‌ನೊಂದಿಗೆ ಸಂಪೂರ್ಣ ಟೈಲ್‌ಗೇಟ್ ಅನ್ನು ಒಳಗೊಂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಆಕರ್ಷಕ ವಿನ್ಯಾಸದ ಸಣ್ಣ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಇನ್ನು ಈ ಕಾರಿನ ರೂಫ್ ರೈಲ್, ಬೈಸಿಕಲ್ ಹೋಲ್ಡರ್ ಮೌಂಟಡ್ ನೊಂದಿಗೆ ಮುಂಭಾಗ ಮತ್ತು ಹಿಂಭಾಗದಲ್ಲಿ ಸ್ಕಿಡ್ ಪ್ಲೇಟ್ ಗಳನ್ನು ಹೊಂದಿದೆ. ಟೊಯೊಟಾ ಹೆಚ್ಚುವರಿ ಸಂಗ್ರಹಣೆಗಾಗಿ ರೂಫ್ ರ್ಯಾಕ್ ಅನ್ನು ಸಂಯೋಜಿಸಿದೆ. ಆದರೆ ಕಂಪನಿಯು ಕಾನ್ಸೆಪ್ಟ್ ಕಾರಿನ ಆಂತರಿಕ ಚಿತ್ರಗಳನ್ನು ಬಹಿರಂಗಪಡಿಸಲಿಲ್ಲ

ಆಕರ್ಷಕ ವಿನ್ಯಾಸದ ಸಣ್ಣ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಂಡಿಯಾ ಹಾಗೂ ಟೊಯೊಟಾ ಕಿರ್ಲೋಸ್ಕರ್ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಕೆಲವು ವರದಿಯ ಪ್ರಕಾರ ಈ ಜಂಟಿ ಸಹಭಾಗಿತ್ವದಲ್ಲಿ ಹೊಸ ಸಣ್ಣ ಕಾರನ್ನು ಸಹ ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಲಾಗುವುದು.

ಆಕರ್ಷಕ ವಿನ್ಯಾಸದ ಸಣ್ಣ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಈ ಸಣ್ಣ ಕಾರಿಗೆ 560 ಬಿ ಎಂಬ ಕೋಡ್ ವರ್ಡ್ ನೀಡಲಾಗಿದೆ. ಈ ಕಾರನ್ನು ಟೊಯೊಟಾದ ಕಂಪನಿಯಡಿಯಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ವರದಿಯಾಗಿದೆ. ಈ ಕಾರಿನ ಬಿಡುಗಡೆಯ ಬಗ್ಗೆ ಇತರ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.

ಆಕರ್ಷಕ ವಿನ್ಯಾಸದ ಸಣ್ಣ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಟೊಯೊಟಾದ ಈ ಹೊಸ ಸಣ್ಣ ಕಾರು 2021ರ ಅಂತ್ಯದ ವೇಳೆಗೆ ಅಥವಾ 2022ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಇದನ್ನು ಹೊರತುಪಡಿಸಿ ಈ ಹೊಸ ಕಾರಿನ ಬಗ್ಗೆ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಆಕರ್ಷಕ ವಿನ್ಯಾಸದ ಸಣ್ಣ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಟೊಯೊಟಾ ಐಗೊ ಎಕ್ಸ್ ಪ್ರೊಲಾಗ್ ಕಾನ್ಸೆಪ್ಟ್ ಕಾರು ಟಿಎನ್‌ಜಿಎ-ಬಿ ಪ್ಲಾಟ್‌ಫಾರ್ಮ್ ಆಧಾರಿಸಿದೆ. ಇನ್ನು ಈ ಮಾದರಿಯು ಯಾರೀಸ್ ಗಿಂತ ಕೆಳಗಿನ ಸ್ಥಾನದಲ್ಲಿರುತದೆ ಮತ್ತು ಸಣ್ಣ ಸಾಮರ್ಥ್ಯದ ಮೂರು-ಪಾಟ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ.

Most Read Articles

Kannada
Read more on ಟೊಯೊಟಾ toyota
English summary
Toyota Aygo X Prologue Concept Unveiled. Read In Kananda.
Story first published: Wednesday, March 17, 2021, 21:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X