ಜೂನ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ ವೆಲ್‌ಫೈರ್

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಟೊಯೊಟಾ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅತ್ಯಂತ ಪ್ರೀಮಿಯಂ ಕಾರು ವೆಲ್‌ಫೈರ್ ಆಗಿದೆ. ಐಷಾರಾಮಿ ಟೊಯೊಟಾ ವೆಲ್‌ಫೈರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ.

ಜೂನ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ ವೆಲ್‌ಫೈರ್

ಈ ಟೊಯೊಟಾ ವೆಲ್‌ಫೈರ್ ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಕಾರಿಗೆ ಪೈಪೋಟಿ ನೀಡುತ್ತದೆ. ಟೊಯೊಟಾ ಕಂಪನಿಯು ಈ ವರ್ಷದ ಜೂನ್ ತಿಂಗಳಿನಲ್ಲಿ ವೆಲ್‌ಫೈರ್‌ನ 63 ಯುನಿಟ್ ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಟೊಯೊಟಾ ಕಂಪನಿಯು 49 ಯುನಿಟ್ ಗಳನ್ನು ಮಾರಾಟಗೊಳಿಸಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.29 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಜೂನ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ ವೆಲ್‌ಫೈರ್

2021ರ ಮೇ ತಿಂಗಳಿನಲ್ಲಿ ಟಿಯೊಟಾ ಕಂಪನಿಯು ವೆಲ್‌ಫೈರ್ ಮಾದರಿಯ ಒಂದು ಯುನಿಟ್ ಅನ್ನು ಮಾತ್ರ ಮಾರಾಟ ಮಾಡಿದೆ. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.6200 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಜೂನ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ ವೆಲ್‌ಫೈರ್

2021ರ ಜೂನ್ ತಿಂಗಳಿನಲ್ಲಿ ಟೊಯೊಟಾ ಕಂಪನಿಯು ಯಾರೀಸ್ ಮಾದರಿಯ ಕೇವಲ 5 ಯುನಿಟ್ ಗಳನ್ನು ಮಾರಾಟ ಮಾಡಿದರೆ, ಕ್ಯಾಮ್ರಿಯ 38 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ಇನ್ನು ಟೊಯೊಟಾ ತನ್ನ ಜನಪ್ರಿಯ ಇನೋವಾ ಕ್ರಿಸ್ಟಾದ 2,973 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ.

ಜೂನ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ ವೆಲ್‌ಫೈರ್

ಇವುಗಳಿಗೆ ಹೋಲಿಸಿದರೆ ಟೊಯೊಟಾ ಕಳೆದ ತಿಂಗಳಿನಲ್ಲಿ ಐಷಾರಾಮಿ ವೆಲ್‌ಫೈರ್ ಮಾದರಿಯ 63 ಗಳನ್ನು ಮಾರಾಟಗೊಳಿಸಿವೆ. ಈ ಐಷಾರಾಮಿ ಕಾರಿನ ಬೆಲೆಯನ್ನು ಪರಿಗಣಿಸಿ ಮತ್ತು ಕೊರೋನಾ ಭೀತಿಯ ನಡುವೆ 63 ಯುನಿಟ್ ಗಳನ್ನು ಮಾರಾಟಗೊಳಿಸಿರುವುದು ಇದೊಂದು ಉತ್ತಮ ಸಂಖ್ಯೆಯಾಗಿದೆ.

ಜೂನ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ ವೆಲ್‌ಫೈರ್

ಟೊಯೊಟಾ ವೆಲ್‌ಫೈರ್‌ ಬಗ್ಗೆ ಹೇಳುವುದಾದರೆ, 2.5 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಜೋಡಿಸಲ್ಪಟ್ಟಿದೆ, ಇದು ಎಂಜಿನ್ ಒಟ್ಟಾಗಿ 198 ಬಿಹೆಚ್‍ಪಿ ಪವರ್ ಮತ್ತು 235 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಸಿವಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಜೂನ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ ವೆಲ್‌ಫೈರ್

ಈ ವೆಲ್‌ಫೈರ್‌ನ ಒಳಭಾಗದಲ್ಲಿ ಎರಡನೇ ಸಾಲಿನಲ್ಲಿ ಎರಡು ಬೆಲೆಬಾಳುವ ಎಲೆಕ್ಟ್ರಿಕ್ ಆಗಿ ಅಡೆಜೆಸ್ಟ್ ಮಾಡುವ ವಿಐಪಿ ಸೀಟುಗಳನು ಒಳಗೊಂಡಿವೆ. ಇನ್ನು ಇದರಲ್ಲಿ ಕೂಲಿಂಗ್ ಫಂಕ್ಷನ್ ಅನ್ನು ಕೂಡ ಒಳಗೊಂಡಿದೆ. ಜೊತೆಗೆ ಲೆಗ್ ರೆಸ್ಟ್ ಮತ್ತು ರೆಕ್ಲೈನಬಲ್ ಬ್ಯಾಕ್‌ರೆಸ್ಟ್ ಮತ್ತು ಮೆಮೊರಿ ಫಂಕ್ಷನ್ ಅನ್ನು ಒಳಗೊಂಡಿದೆ.

ಜೂನ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ ವೆಲ್‌ಫೈರ್

ಈ ಐಷಾರಾಮಿ ಎಂಪಿವಿಯಲ್ಲಿ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ನೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯೊಂದಿಗೆ 13 ಇಂಚಿನ ಹಿಂಭಾಗದ ಡಿಸ್ ಪ್ಲೇಯನ್ನು ರೂಫ್ ಮೇಲೆ ನೀಡಲಾಗಿದೆ.

ಜೂನ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ ವೆಲ್‌ಫೈರ್

ಇದರೊಂದಿಗೆ ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಂ, ಎರಡನೇ ಮತ್ತು ಮೂರನೇ ಸಾಲುಗಳಿಗೆ ಸನ್ ಬ್ಲೈಂಡ್ಸ್, 16-ಬಣ್ಣದ ಆಂಬಿಯೆಂಟ್ ಲೈಟಿಂಗ್, ಮೂರು ಹಂತಹ ಆಟೋ ಕ್ಲೈಮೇಟ್ ಕಂಟ್ರೋಲ್, ಆಟೋಮ್ಯಾಟಿಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳುನ್ನು ಒಳಗೊಂಡಿದೆ.

ಜೂನ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ ವೆಲ್‌ಫೈರ್

ಸುರಕ್ಷತೆಗಾಗಿ ಈ ಐಷಾರಾಮಿ ವೆಲ್‌ಫೈರ್‌ ಕಾರಿನಲ್ಲಿ 7 ಏರ್‌ಬ್ಯಾಗ್‌ಗಳು, ಪನೋರಮಿಕ್ ವ್ಯೂ ಮಾನಿಟರ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿವೆ. ಇದರ ಜೊತೆಗೆ ಎಬಿಎಸ್ ವಿಥ್ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ವೆಹಿಕಲ್ ಡೈನಾಮಿಕ್ ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಹೋಲ್ಡ್, ಎ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಹೀಗೆ ಇನ್ನಷ್ಟು ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ.

Article Published On: Monday, July 12, 2021, 10:07 [IST]
English summary
Over 60 Units Of Toyota Vellfire Sold In June 2021. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+