ನಮ್ಮ ಬೆಂಗಳೂರಿನಲ್ಲಿ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್‌ಗಳಿಗೆ ಚಾಲನೆ ನೀಡಿದ ಟೊಯೊಟಾ

ಟೊಯೊಟಾ ಕಿರ್ಲೊಸ್ಕರ್ ಮೋಟಾರ್ಸ್ ಕಂಪನಿಯು ದೇಶಾದ್ಯಂತ ಪ್ರತಿ ನಗರದಲ್ಲೂ ಮಲ್ಟಿ ಬ್ರಾಂಡ್ ಸರ್ವಿಸ್ ಸೆಂಟರ್‌ಗಳ ತೆರೆಯುವ ಹೊಸ ಯೋಜನೆಗೆ ಚಾಲನೆ ನೀಡಿದ್ದು, ಹೊಸ ಯೋಜನೆಗೆ ಟಿ-ಸರ್ವ್ ಎಂದು ಹೆಸರಿಸಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಟೊಯೊಟಾ

ಟಿ-ಸರ್ವ್ ಮಲ್ಟಿ ಬ್ರಾಂಡ್ ವರ್ಕ್‌ಶಾಪ್ ಮೂಲಕ ಗ್ರಾಹಕರಿಗೆ ಗುಣಮಟ್ಟದ ಸೇವೆಗಳನ್ನು ನೀಡುವ ಉದ್ದೇಶ ಹೊಂದಿರುವ ಟೊಯೊಟಾ ಕಂಪನಿಯು ತನ್ನ ಗ್ರಾಹಕರಿಗೆ ಕಾರ್ ಸರ್ವಿಸ್ ಸೇವೆಯನ್ನು ಮತ್ತಷ್ಟು ಸರಳಗೊಳಿಸುತ್ತಿರುವುದಲ್ಲದೆ ವಿವಿಧ ಕಾರ್ ಮಾಲೀಕರಿಗೂ ನಿಗದಿತ ಅವಧಿಯಲ್ಲಿ ವಿವಿಧ ಸ್ಥಳಗಳಿಗೆ ಅನುಗುಣವಾಗಿ ವಿವಿಧ ಕಾರ್ ಸರ್ವಿಸ್ ಸೇವೆಗಳನ್ನು ಒದಗಿಸುವ ಗುರಿಹೊಂದಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಟೊಯೊಟಾ

ಟೊಯೊಟಾ ಕಂಪನಿಯು ಮೊದಲ ಟಿ-ಸರ್ವ್ ಮಲ್ಟಿ ಬ್ರಾಂಡ್ ವರ್ಕ್‌ಶಾಪ್ ಅನ್ನು ಬೆಂಗಳೂರಿನ ಪ್ರಮುಖ ಕಡೆಗಳಲ್ಲಿ ಮೊದಲ ಹಂತವಾಗಿ ಚಾಲನೆ ನೀಡಲಾಗಿದ್ದು, ಸ್ಥಳೀಯವಾಗಿ ಕಾರುಗಳ ಬಿಡಿಭಾಗಗಳ ಸೇವೆಗಳಲ್ಲಿ ಗ್ರಾಹಕರ ವಿಶ್ವಾಸ ಗಳಿಸಿಕೊಂಡಿರುವ ಸರ್ವಿಸ್ ಸೆಂಟರ್‌ಗಳನ್ನೇ ಟೊಯೊಟಾ ಕಂಪನಿಯು ತನ್ನ ಹೊಸ ಯೋಜನೆಯಲ್ಲಿ ಸಹಭಾಗೀತ್ವ ಕಂಪನಿಯಾಗಿ ಸೇರ್ಪಡೆಗೊಳಿಸಿಕೊಳ್ಳುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಟೊಯೊಟಾ

ಟೊಯೊಟಾ ಕಂಪನಿಯ ಟಿ-ಸರ್ವ್‌ನೊಂದಿ ಜಾಲದೊಂದಿಗೆ ಸೆರ್ಪಡೆಯಾದ ನಂತರ ಸ್ಥಳೀಯವಾಗಿ ಗ್ರಾಹಕರ ವಿಶ್ವಾಸ ಗಳಿಸಿಕೊಂಡಿರುವ ಕಾರ್ ಸರ್ವಿಸ್ ಸೆಂಟರ್‌ಗಳಲ್ಲಿ ಸುಧಾರಿತ ತಂತ್ರಜ್ಞಾನಗಳ ಅಳಡಿಕೆ ಮತ್ತು ನುರಿತ ಉದ್ಯೋಗಿಗಳನ್ನು ಕಂಪನಿಯೇ ಒದಗಿಸುತ್ತದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಟೊಯೊಟಾ

ಈ ಮೂಲಕ ಹೊಸದಾಗಿ ಸರ್ವಿಸ್ ಸೆಂಟರ್‌ಗಳನ್ನು ನಿರ್ಮಾಣ ಮಾಡುವ ಬದಲು ಈಗಾಗಲೇ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಗ್ರಾಹಕರಿಂದ ಉತ್ತಮ ಅಭಿಪ್ರಾಯ ಹೊಂದಿರುವ ಸರ್ವಿಸ್ ಸೆಂಟರ್‌ಗಳನ್ನೇ ಹೊಸ ಯೋಜನೆಯಲ್ಲಿ ಸೇರ್ಪಡೆಗೊಳಿಸಿ ಟಿ-ಸರ್ವ್ ಸೆಂಟರ್‌ಗಳನ್ನು ತೆರೆಯಲು ನಿರ್ಧರಿಸಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರವೇ ಆರಂಭವಾಗಿ ಟಿ-ಸರ್ವ್ ಸರ್ವಿಸ್ ನಿಲ್ದಾಣಗಳು ಮುಂದಿನ ಕೆಲವೇ ತಿಂಗಳಿನಲ್ಲಿ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಹೊಸ ಯೋಜನೆಯು ವಿಸ್ತರಣೆಗೊಳ್ಳಲಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಟೊಯೊಟಾ

ಹೊಸ ಯೋಜನೆಯ ಮೂಲಕ ಸ್ಥಳೀಯವಾಗಿ ಗುರುತಿಸಿಕೊಂಡಿರುವ ಕಾರ್ ಸರ್ವಿಸ್ ನಿಲ್ದಾಣಗಳನ್ನು ಉನ್ನತೀಕರಿಸಲು ಮತ್ತು ಒಂದೇ ಸೂರಿನಡಿ ವಿವಿಧ ಬ್ರಾಂಡ್ ಗ್ರಾಹಕರಿಗೆ ಗುಣಮಟ್ಟದ ಸೇವೆಗಳನ್ನು ನೀಡುವ ಮೂಲಕ ಭಾರೀ ಪ್ರಮಾಣದ ಆದಾಯವನ್ನು ನೀರಿಕ್ಷಿಸಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಟೊಯೊಟಾ

ಇನ್ನು ಕಾರು ಮಾರಾಟದಲ್ಲಿ ಗಣನೀಯವಾಗಿ ಬೆಳವಣಿಗೆ ಕಾಣುತ್ತಿರುವ ಟೊಯೊಟಾ ಕಂಪನಿಯು ವಾಹನಗಳ ಮಾರಾಟದ ನಂತರ ಗ್ರಾಹಕ ಸೇವೆಗಳನ್ನು ಸಮರ್ಥವಾಗಿ ಪೂರೈಸುತ್ತಿದ್ದು, ಇತ್ತೀಚೆಗೆ ಭಾರತದಲ್ಲಿ ತನ್ನ 401ನೇ ಅಧಿಕೃತ ಸರ್ವಿಸ್ ಸೆಂಟರ್‌ಗೆ ಚಾಲನೆ ನೀಡಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ನಮ್ಮ ಬೆಂಗಳೂರಿನಲ್ಲಿ ಮೊದಲ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಟೊಯೊಟಾ

ಹೊಸ ವಾಹನಗಳ ಮಾರಾಟದ ಗ್ರಾಹಕರ ಸೇವೆಗಳು ಪ್ರಮುಖ ವಿಚಾರವಾಗಿದ್ದು, ಟೊಯೊಟಾ ಕಂಪನಿಯು ದೇಶಾದ್ಯಂತ ತನ್ನ ಗ್ರಾಹಕರಿಗೆ ಅತಿ ಕಡಿಮೆ ಅವಧಿಯಲ್ಲಿ ಸೇವೆಗಳನ್ನು ಪೂರೈಸಲು ಪ್ರಮುಖ ನಗರಗಳಲ್ಲಿ ಸರ್ವಿಸ್ ಸೆಂಟರ್‌ಗಳ ಸಂಖ್ಯೆಯನ್ನು ವಿಸ್ತರಿಸುತ್ತಿದೆ. ಇತ್ತೀಚೆಗೆ ಬಳ್ಳಾರಿಯಲ್ಲಿ ಬಿಜೆಎಸ್ ಟೊಯೊಟಾ ಡೀಲರ್ಸ್ ಅಡಿಯಲ್ಲಿ 401ನೇ ಸರ್ವಿಸ್ ಸೆಂಟರ್‌ಗೆ ಚಾಲನೆ ನೀಡಲಾಗಿದ್ದು, ಹೊಸ ವಾಹನಗಳ ಮಾರಾಟಕ್ಕೆ ಅನುಗುಣವಾಗಿ ಗ್ರಾಹಕರ ಸೇವಾ ವಿಭಾಗವನ್ನು ಸಹ ಬಲಿಷ್ಠಗೊಳಿಸಲಾಗುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಟೊಯೊಟಾ

ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಜೊತೆಗೂಡಿ ವಿವಿಧ ಜನಪ್ರಿಯ ಕಾರುಗಳನ್ನು ರೀಬ್ಯಾಡ್ಜ್ ಆವೃತ್ತಿಯಾಗಿ ಬಿಡುಗಡೆ ಮಾಡುತ್ತಿರುವುದು ಸಹ ಹೊಸ ಕಾರುಗಳ ಸಂಖ್ಯೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಗ್ರಾಹಕರ ಸೇವೆಗಳಿಗೆ ಪೂರಕವಾಗಿ ಸರ್ವಿಸ್ ಸೆಂಟರ್‌ಗಳ ತೆರೆಯುವುದು ಗ್ರಾಹಕರಿಗೆ ಸಾಕಷ್ಟು ಅನುಕೂಲಕರವಾಗಿದೆ.

MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ನಮ್ಮ ಬೆಂಗಳೂರಿನಲ್ಲಿ ಮೊದಲ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಟೊಯೊಟಾ

ಇದಲ್ಲದೇ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು ಗ್ರಾಹಕ ಸೇವೆಗಳನ್ನು ಸಮರ್ಥವಾಗಿ ಪೂರೈಸಲು ಹೊಸದಾಗಿ ಪ್ರೊ ಸರ್ವಿಸ್ ಸೆಂಟರ್‌ಗಳಿಗೂ ಚಾಲನೆ ನೀಡಿದ್ದು, ಹೊಸ ಸರ್ವಿಸ್ ಸೆಂಟರ್‌ಗಳು ಎರಡನೇ ಮತ್ತು ಮೂರನೇ ದರ್ಜೆಯ ನಗರಗಳಲ್ಲೂ ಕಾರ್ಯನಿರ್ವಹಿಸುತ್ತಿವೆ.

Most Read Articles

Kannada
Read more on ಟೊಯೊಟಾ toyota
English summary
Toyota T-Serv Multi-Brand Workshop Introduced In Bangalore. Read in Kannada.
Story first published: Thursday, February 18, 2021, 20:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X