Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಅವನ್ಜಾ ಎಂಪಿವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಟೊಯೊಟಾ
ಟೊಯೊಟಾ ಕಂಪನಿಯು ಮುಂದಿನ ಕೆಲವು ತಿಂಗಳುಗಳಲ್ಲಿ ಹೊಸ ಅವನ್ಜಾ ಎಂಪಿವಿಯನ್ನು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಎಂಪಿವಿ ಅನ್ನು ಡಿಎನ್‌ಜಿಎ ನ್ಯೂ ಜನರೇಷನ್ ಆರ್ಕಿಟೆಕ್ಚರ್ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.

ಇದು ಮೂಲತಃ ಟಿಎನ್‌ಜಿಎ ಪ್ಲಾಟ್‌ಫಾರ್ಮ್‌ನ ಕಡಿಮೆ-ವೆಚ್ಚದ ಆವೃತ್ತಿಯಾಗಿದೆ. ಟೊಯೊಟಾದ ಕಡಿಮೆ-ವೆಚ್ಚದ ಬ್ರ್ಯಾಂಡ್ ಡೈಹತ್ಸು ಇಂಡೋನೇಷ್ಯಾದ ಮಾರುಕಟ್ಟೆಗೆ ಹೊಸ 6-ಸೀಟರ್ ಎಂಪಿವಿಯನ್ನು ಅಭಿವೃದ್ದಿ ಪಡಿಸುತ್ತಿದೆ. ಇನ್ನು ಹೊಸ ಅವನ್ಜಾ ಎಂಪಿವಿ ಡಿಐಎನ್ ಮಲ್ಟಿಸಿಕ್ಸ್ ಕಾನ್ಸೆಫ್ಟ್ ಮಾದರಿಯನ್ನು ಆಧರಿಸಿರಬಹುದು ಎಂದು ವದಂತಿಗಳಿವೆ, ಇದನ್ನು ಜಿಐಎಎಸ್ 2017 ಮತ್ತು ಟೋಕಿಯೊ ಮೋಟಾರ್ ಶೋನಲ್ಲಿ ಅನಾವರಣಗೊಳಿಸಲಾಯಿತು.

ಡೈಹತ್ಸು ಈಗಾಗಲೇ ರಾಕಿ ಸಬ್ -4 ಮೀಟರ್ ಎಸ್‌ಯುವಿಯನ್ನು ಈ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಿದೆ. ಈ ಮಾದರಿಯನ್ನು ಮೊದಲು ಮಲ್ಟಿಸಿಕ್ಸ್ ಜೊತೆಗೆ ಡಿಎನ್ ಟ್ರೆಕ್ ಕಾನ್ಸೆಪ್ಟ್ ಮಾದರಿಯಾಗಿ ಪ್ರದರ್ಶಿಸಲಾಯಿತು.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಟೊಯೊಟಾ ಅದೇ ಡಿಎನ್‌ಜಿಎ ಪ್ಲಾಟ್‌ಫಾರ್ಮ್‌ನಲ್ಲಿ ರೈಜ್ ಸಬ್ -4 ಮೀಟರ್ ಎಸ್‍ಯುವಿಯನ್ನು ಪರಿಚಯಿಸಿತು. ಇದಕ್ಕೆ ಹೆಚ್ಚುವರಿಯಾಗಿ ಟೊಯೊಟಾ ಮತ್ತು ಸುಜುಕಿ ಜೆವಿ ಸಹ ಭಾರತದಲ್ಲಿ ಈ ಪ್ಲಾಟ್‌ಫಾರ್ಮ್‌ನಲ್ಲಿ ಮಿಡ್ ಎಸ್‍ಯುವಿ ಮತ್ತು ಹೊಸ ಎಂಪಿವಿಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಈ ಬೆಳವಣಿಗೆಯು ಭಾರತ-ಸ್ಪೆಕ್ ಎಂಪಿವಿ ಹೊಸ ಅವನ್ಜಾ ಎಂಪಿವಿಯಿಂದ ಸ್ಟೈಲಿಂಗ್ ಅಂಶಗಳನ್ನು ಮತ್ತು ಎಂಜಿನ್ ಸ್ಪೆಕ್ಸ್ ಅನ್ನು ಹಂಚಿಕೊಳ್ಳಬಹುದು ಎಂದು ಸೂಚಿಸುತ್ತದೆ. ಅಥವಾ ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಜೊತೆ ಸೇರೊ ಭಾರತೀಯ ಮಾರುಕಟ್ಟೆಯಲ್ಲಿಗೆ ಕೂಡ ಹೊಸ ಅವನ್ಜಾ ತರಬಹುದು.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಹೊಸ ಟೊಯೊಟಾ ಅವನ್ಜಾ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ, ಈ ಟೊಯೊಟಾ ಅವನ್ಜಾ ಎಂಪಿವಿಯು 1.0-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 1.2-ಲೀಟರ್ ಹೈಬ್ರಿಡ್ ಸಿಸ್ಟಂ ಆಯ್ಕೆಯನ್ನು ಹೊಂದಿರಬಹುದು.

ಟೊಯೊಟಾ ರೈಜ್ ಮತ್ತು ಡೈಹತ್ಸು ರಾಕಿ ಮಾದರಿಗಳಲ್ಲಿ ಇದೇ 1.0 ಎಲ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 98 ಬಿಹೆಚ್‌ಪಿ ಪವರ್ ಮತ್ತು 140 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇನ್ನು 1.2 ಎಲ್ ಹೈಬ್ರಿಡ್ ಎಂಜಿನ್ ಪ್ರಸ್ತುತ ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಿ-ಎಚ್‌ಆರ್ ಮಾದರಿಯಲ್ಲಿ ಅಳವಡಿಸಲಾಗಿದೆ. ಈ ಎಂಜಿನ್ 114 ಬಿಹೆಚ್‌ಪಿ ಪವರ್ ಮತ್ತು 185 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟೊಯೊಟಾ -ಸುಜುಕಿ ಪಾಲುದಾರಿಕೆಯ ಬಗ್ಗೆ ಮಾತನಾಡುತ್ತಾ, 2022ರ ವೇಳೆಗೆ ಹೊಸ ಮಧ್ಯಮ ಗಾತ್ರದ ಎಂಪಿವಿ ಮತ್ತು ಮಧ್ಯಮ ಗಾತ್ರದ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದಕ್ಕೆ ಹೆಚ್ಚುವರಿಯಾಗಿ ಟೊಯೋಟಾ ಎರ್ಟಿಗಾ ಮತ್ತು ಸಿಯಾಜ್‌ನ ರೀ-ಬ್ಯಾಡ್ಜ್ ಆವೃತ್ತಿಯನ್ನು ಸಹ ಪರಿಚಯಿಸುತ್ತದೆ