ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಗಲಿದೆ ಹೊಸ Toyota Avanza ಎಂಪಿವಿ

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಟೊಯೊಟಾ ತನ್ನ ಹೊಸ ಅವನ್ಜಾ ಎಂಪಿವಿಯನ್ನು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಅನಾವರಣಗೊಳಿಸುವುದಾಗಿ ಘೋಷಿಸಿದೆ. ಈ ಹೊಸ ಟೊಯೊಟಾ ಅವನ್ಜಾ(Toyota Avanza) ಎಂಪಿವಿಯು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಇದೇ ತಿಂಗಳ 10 ರಂದು ಅನಾವರಣವಾಗಲಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಗಲಿದೆ ಹೊಸ Toyota Avanza ಎಂಪಿವಿ

ಹೊಸ ಟೊಯೊಟಾ ಅವನ್ಜಾ ಎಂಪಿವಿಯನ್ನು 2021ರ GIIAS (ಗೈಕಿಂಡೋ ಇಂಡೋನೇಷ್ಯಾ ಇಂಟರ್ನ್ಯಾಷನಲ್ ಆಟೋ ಶೋ) ಪ್ರಾರಂಭವಾಗುವ ಒಂದು ದಿನ ಮೊದಲು ಅನಾವರಣಗೊಳಿಸಲಾಗುವುದು. ಟೊಯೊಟಾ ಇಂಡೋನೇಷ್ಯಾ ಯೂಟ್ಯೂಬ್‌ನಲ್ಲಿ ಡಿಜಿಟಲ್‌ನಲ್ಲಿ ಬಿಡುಗಡೆಯನ್ನು ಕೈಗೊಳ್ಳಲಾಗುವುದು. ಕೆಲವು ದಿನಗಳ ಹಿಂದೆ ಇಂಡೋನೇಷ್ಯಾದ ಡೀಲರ್‌ಶಿಪ್‌ನಲ್ಲಿ ಎಲ್ಲಾ ಹೊಸ ಟೊಯೊಟಾ ಅವನ್ಜಾ ಕಾಣಿಸಿಕೊಂಡಿದೆ. ಹೊಸ ಮಾದರಿಯು ಸಂಪೂರ್ಣವಾಗಿ ಮರು-ವಿನ್ಯಾಸಗೊಳಿಸಲಾದ ಬಾಹ್ಯ ಮತ್ತು ಒಳಭಾಗದೊಂದಿಗೆ ಬರಲಿದೆ ಎಂದು ಚಿತ್ರಗಳು ಬಹಿರಂಗಪಡಿಸುತ್ತವೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಗಲಿದೆ ಹೊಸ Toyota Avanza ಎಂಪಿವಿ

ಇದು ಎಂಪಿವಿಗೆ ಬದಲಿಗೆ ಕ್ರಾಸ್ಒವರ್/ಎಸ್‍ಯುವಿಯಂತೆ ಕಾಣುತ್ತದೆ, ಏಕೆಂದರೆ ಹೆಚ್ಚಿನ ವಿನ್ಯಾಸ ಅಂಶಗಳು ಎಸ್‍ಯುವಿ-ಭಾವನೆಯನ್ನು ಹೊಂದಿವೆ. ಈ ಹೊಸ ಎಂಪಿವಿ ಅನ್ನು ಡಿಎನ್‌ಜಿಎ ನ್ಯೂ ಜನರೇಷನ್ ಆರ್ಕಿಟೆಕ್ಚರ್ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಗಲಿದೆ ಹೊಸ Toyota Avanza ಎಂಪಿವಿ

ಇದು ಮೂಲತಃ ಟಿಎನ್‌ಜಿಎ ಪ್ಲಾಟ್‌ಫಾರ್ಮ್‌ನ ಕಡಿಮೆ-ವೆಚ್ಚದ ಆವೃತ್ತಿಯಾಗಿದೆ. ಟೊಯೊಟಾದ ಕಡಿಮೆ-ವೆಚ್ಚದ ಬ್ರ್ಯಾಂಡ್ ಡೈಹತ್ಸು ಇಂಡೋನೇಷ್ಯಾದ ಮಾರುಕಟ್ಟೆಗೆ ಹೊಸ 6-ಸೀಟರ್ ಎಂಪಿವಿಯನ್ನು ಅಭಿವೃದ್ದಿ ಪಡಿಸುತ್ತಿದೆ. ಇನ್ನು ಹೊಸ ಅವನ್ಜಾ ಎಂಪಿವಿ ಡಿಐಎನ್ ಮಲ್ಟಿಸಿಕ್ಸ್ ಕಾನ್ಸೆಫ್ಟ್ ಮಾದರಿಯನ್ನು ಆಧರಿಸಿರಬಹುದು ಎಂದು ವದಂತಿಗಳಿವೆ, ಇದನ್ನು ಜಿಐಎಎಸ್ 2017 ಮತ್ತು ಟೋಕಿಯೊ ಮೋಟಾರ್ ಶೋನಲ್ಲಿ ಅನಾವರಣಗೊಳಿಸಲಾಯಿತು.

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಗಲಿದೆ ಹೊಸ Toyota Avanza ಎಂಪಿವಿ

ಡೈಹತ್ಸು ಈಗಾಗಲೇ ರಾಕಿ ಸಬ್ -4 ಮೀಟರ್ ಎಸ್‌ಯುವಿಯನ್ನು ಈ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಿದೆ. ಈ ಮಾದರಿಯನ್ನು ಮೊದಲು ಮಲ್ಟಿಸಿಕ್ಸ್ ಜೊತೆಗೆ ಡಿಎನ್ ಟ್ರೆಕ್ ಕಾನ್ಸೆಪ್ಟ್ ಮಾದರಿಯಾಗಿ ಪ್ರದರ್ಶಿಸಲಾಯಿತು. ಹೊಸ ಟೊಯೊಟಾ ಅವನ್ಜಾ ಎಂಪಿವಿಯು ಬಾಕ್ಸಿ ಬಾಡಿ ಮತ್ತು ಲಾಂಗ್ ವೀಲ್‌ಬೇಸ್‌ನೊಂದಿಗೆ ಬರಲಿದೆ, ಇದು ಜಪಾನಿನ ವಾಹನ ತಯಾರಕರಿಗೆ ಕ್ಯಾಬಿನ್‌ನಲ್ಲಿ ಹೆಚ್ಚಿನ ಸ್ಥಳಾವಕಾಶವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಗಲಿದೆ ಹೊಸ Toyota Avanza ಎಂಪಿವಿ

ಹೊಸ ಮಾದರಿ ಅಸ್ತಿತ್ವದಲ್ಲಿರುವ ಮಾದರಿಗಿಂತ ಉತ್ತಮವಾಗಿ ಮತ್ತು ಆಧುನಿಕವಾಗಿ ಕಾಣುತ್ತವೆ ಈ ಹೊಸ ಅವನ್ಜಾ ಎಂಪಿವಿಯು ದೊಡ್ಡದಾದ ಟ್ರೆಪೆಜಾಯ್ಡಲ್ ಗ್ರಿಲ್ ಅನ್ನು ಹೊಂದಿದ್ದು, ಸ್ಲಿಮ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ತ್ರಿಕೋನಾಕಾರದ ಫಾಂಗ್ ಲ್ಯಾಂಪ್ ಅನ್ನು ಸುತ್ತುವರಿದಿದೆ. ಸೆಂಟ್ರಲ್ ಏರ್ ಟೆಲ್ ಈಗ ಬಂಪರ್‌ಗೆ ಕೆಳಕ್ಕೆ ಇರಿಸಲಾಗಿದೆ, ಆದರೆ ORVM ಗಳನ್ನು ಈಗ ಡೋರಿನ ಪ್ಯಾನೆಲ್ ಗಳಲ್ಲಿ ಇರಿಸಲಾಗುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಗಲಿದೆ ಹೊಸ Toyota Avanza ಎಂಪಿವಿ

ಗ್ರಿಲ್‌ನ ಮೇಲ್ಭಾಗದಿಂದ ಪ್ರಾರಂಭವಾಗುವ ಪ್ರಮುಖವಾದ ಕ್ರೋಮ್ ಸ್ಟ್ರಿಪ್ ಇದೆ ಮತ್ತು ಹೆಡ್‌ಲೈಟ್‌ಗಳ ಮೂಲಕ ಮತ್ತು ಬಾನೆಟ್ ಮತ್ತು ಕಿಟಕಿಗಳ ಉದ್ದಕ್ಕೂ ಚಲಿಸುತ್ತದೆ ಮತ್ತು ಡಿ-ಪಿಲ್ಲರ್‌ಗಳಲ್ಲಿ ಕೊನೆಗೊಳ್ಳುತ್ತದೆ. ದಪ್ಪನಾದ ವ್ಹೀಲ್ ಅರ್ಚಾರ್ ಎಸ್‍ಯುವಿ ತರಹದ ಅನುಭವವನ್ನು ನೀಡುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಗಲಿದೆ ಹೊಸ Toyota Avanza ಎಂಪಿವಿ

ಟೊಯೊಟಾ ಅದೇ ಡಿಎನ್‌ಜಿಎ ಪ್ಲಾಟ್‌ಫಾರ್ಮ್‌ನಲ್ಲಿ ರೈಜ್ ಸಬ್ -4 ಮೀಟರ್ ಎಸ್‍ಯುವಿಯನ್ನು ಪರಿಚಯಿಸಿತು. ಇದಕ್ಕೆ ಹೆಚ್ಚುವರಿಯಾಗಿ ಟೊಯೊಟಾ ಮತ್ತು ಸುಜುಕಿ ಜೆವಿ ಸಹ ಭಾರತದಲ್ಲಿ ಈ ಪ್ಲಾಟ್‌ಫಾರ್ಮ್‌ನಲ್ಲಿ ಮಿಡ್ ಎಸ್‍ಯುವಿ ಮತ್ತು ಹೊಸ ಎಂಪಿವಿಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಗಲಿದೆ ಹೊಸ Toyota Avanza ಎಂಪಿವಿ

ಹೊಸ ಟೊಯೊಟಾ ಅವನ್ಜಾ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ, ಈ ಟೊಯೊಟಾ ಅವನ್ಜಾ ಎಂಪಿವಿಯು 1.0-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 1.2-ಲೀಟರ್ ಹೈಬ್ರಿಡ್ ಸಿಸ್ಟಂ ಆಯ್ಕೆಯನ್ನು ಹೊಂದಿರಬಹುದು. ಟೊಯೊಟಾ ರೈಜ್ ಮತ್ತು ಡೈಹತ್ಸು ರಾಕಿ ಮಾದರಿಗಳಲ್ಲಿ ಇದೇ 1.0 ಎಲ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 98 ಬಿಹೆಚ್‌ಪಿ ಪವರ್ ಮತ್ತು 140 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಗಲಿದೆ ಹೊಸ Toyota Avanza ಎಂಪಿವಿ

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು 1.2 ಎಲ್ ಹೈಬ್ರಿಡ್ ಎಂಜಿನ್ ಪ್ರಸ್ತುತ ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಿ-ಎಚ್‌ಆರ್‌ ಮಾದರಿಯಲ್ಲಿ ಅಳವಡಿಸಲಾಗಿದೆ. ಈ ಎಂಜಿನ್ 114 ಬಿಹೆಚ್‌ಪಿ ಪವರ್ ಮತ್ತು 185 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಗಲಿದೆ ಹೊಸ Toyota Avanza ಎಂಪಿವಿ

ಇನ್ನು ಟೊಯೊಟಾ ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ 2021ರ ಅಕ್ಟೋಬರ್ ತಿಂಗಳಿನ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ವರದಿಗಳ ಪ್ರಕಾರ, ಕಳೆದ ತಿಂಗಳು ಟೊಯೊಟಾ ಕಂಪನಿಯು 12,440 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಟೊಯೊಟಾ ಕಂಪನಿಯು 12,373 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.1 ರಷ್ಟು ಹೆಚ್ಚಳವಾಗಿದೆ. ಇನ್ನು ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 9,284 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.34 ರಷ್ಟು ಮಾಸಿಕ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ. ಮಾಸಿಕ ಕಾರು ಮಾರಾಟದಲ್ಲಿ ಟೊಯೊಟಾ ಕಂಪನಿಯು ಭರ್ಜರಿ ಯಶಸ್ವಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಗಲಿದೆ ಹೊಸ Toyota Avanza ಎಂಪಿವಿ

2021ರ ಕ್ಯಾಲೆಂಡರ್ ವರ್ಷದಲ್ಲಿ, ಟೊಯೊಟಾ ಒಟ್ಟು 1,06,993 ಯುನಿಟ್‌ಗಳನ್ನು (ಜನವರಿಯಿಂದ ಅಕ್ಟೋಬರ್ 2021 ರ ಅವಧಿ) ಮಾರಾಟ ಗಳಿಸುವಲ್ಲಿ ಯಶಸ್ವಿಯಾಗಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ 60,116 ಯುನಿಟ್‌ಗಗಳಿಗೆ ಹೋಲಿಸಿದರೆ ಟೊಯೊಟಾ ಕಂಪನಿಯು ಶೇಕಡಾ 78 ರಷ್ಟು. ಬೆಳವಣಿಗೆಯನ್ನು ಗಳಿಸಿದೆ. ಇನ್ನು ಈ ಹೊಸ ಟೊಯೊಟಾ ಅವನ್ಜಾ ಎಂಪಿವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಕಡಿಮೆಯಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Toyota to unveil all new avanza mpv on november 10th details
Story first published: Tuesday, November 2, 2021, 17:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X