ಎರಡು ಸೀಟುಗಳ ಸಿ+ಪಾಡ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ Toyota

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಟೊಯೊಟಾ (Toyota) ಮೋಟಾರ್ಸ್ ಇತ್ತೀಚೆಗೆ ತನ್ನ ಎರಡು ಸೀಟುಗಳ ಸಿ+ಪಾಡ್ (C+ Pod) ಎಲೆಕ್ಟ್ರಿಕ್ ಕಾರ್ ಅನ್ನು ಅನಾವರಣಗೊಳಿಸಿದೆ. ಕಡಿಮೆ ದೂರದ ನಗರ ಸಾರಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ಎಲೆಕ್ಟ್ರಿಕ್ ಕಾರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಜಪಾನ್ ಮಾರುಕಟ್ಟೆಯಲ್ಲಿ ಸಿ+ಪಾಡ್ ಎಲೆಕ್ಟ್ರಿಕ್ ಕಾರಿನ ಮಾರಾಟವನ್ನು ಮುಂದಿನ ವರ್ಷದ ಆರಂಭದ ತಿಂಗಳುಗಳಲ್ಲಿ ಆರಂಭಿಸಲಾಗುವುದು.

ಎರಡು ಸೀಟುಗಳ ಸಿ+ಪಾಡ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ Toyota

ಕಂಪನಿಯ ಶೂನ್ಯ ಹೊರಸೂಸುವಿಕೆ ನೀತಿಯ ಅಡಿಯಲ್ಲಿ ಈ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡಲಾಗುವುದು. ಜಪಾನ್‌ನಲ್ಲಿ ಈ ಎಲೆಕ್ಟ್ರಿಕ್ ಕಾರ್ ಅನ್ನು ಎರಡು ಹಾಗೂ ಮೂರು ಬಣ್ಣದ ಟೋನ್‌ಗಳಲ್ಲಿ ಮಾರಾಟ ಮಾಡಲಾಗುವುದು. ಸಿ+ಪಾಡ್‌ ಎಲೆಕ್ಟ್ರಿಕ್ ಕಾರಿನಲ್ಲಿ 9.06 ಕಿ.ವ್ಯಾ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಈ ಬ್ಯಾಟರಿ ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 150 ಕಿ.ಮೀಗಳವರೆಗೆ ಚಲಿಸುತ್ತದೆ.

ಎರಡು ಸೀಟುಗಳ ಸಿ+ಪಾಡ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ Toyota

ಈ ಎಲೆಕ್ಟ್ರಿಕ್ ಕಾರಿನ ಗರಿಷ್ಠ ವೇಗ ಪ್ರತಿ ಗಂಟೆಗೆ 60 ಕಿ.ಮೀಗಳಾಗಿದೆ. ನಗರ ಸಂಚಾರಕ್ಕಾಗಿ ಸಿ+ಪಾಡ್‌ ಎಲೆಕ್ಟ್ರಿಕ್ ಕಾರಿನಲ್ಲಿ ಕಾಂಪ್ಯಾಕ್ಟ್ ವಿನ್ಯಾಸವನ್ನು ನೀಡಲಾಗಿದೆ. ಈ ಎಲೆಕ್ಟ್ರಿಕ್ ಕಾರು 2,490 ಎಂಎಂ ಉದ್ದ, 1,290 ಎಂಎಂ ಅಗಲ ಹಾಗೂ 1,550 ಎಂಎಂ ಎತ್ತರವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರು ಟಾಟಾ ನ್ಯಾನೋ ಕಾರಿಗಿಂತ ಚಿಕ್ಕದಾಗಿದೆ. ಸಿ+ಪಾಡ್‌ ಕೇವಲ 3.9 ಮೀಟರ್‌ ಟರ್ನಿಂಗ್ ರೇಡಿಯಸ್ ಅನ್ನು ಹೊಂದಿದೆ.

ಎರಡು ಸೀಟುಗಳ ಸಿ+ಪಾಡ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ Toyota

ಇದರಿಂದಾಗಿ ಈ ಕಾರ್ ಅನ್ನು ಸಣ್ಣ ಜಾಗಗಳಲ್ಲಿಯೂ ಸುಲಭವಾಗಿ ಪಾರ್ಕ್ ಮಾಡಬಹುದು. ಈ ಎಲೆಕ್ಟ್ರಿಕ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಎಲೆಕ್ಟ್ರಿಕ್ ಕಾರು ಎಲ್ಇಡಿ ಹೆಡ್ ಲೈಟ್, ಎಲ್ಇಡಿ ಟೇಲ್ ಲೈಟ್, ಎಲ್ಇಡಿ ಟರ್ನ್ ಇಂಡಿಕೇಟರ್'ಗಳನ್ನು ಹೊಂದಿದೆ. ಈ ಕಾರಿನ ಚಾರ್ಜಿಂಗ್ ಪ್ರವೇಶದ್ವಾರವನ್ನು ಹೆಡ್ ಲೈಟ್‌ಗಳ ನಡುವೆ ನೀಡಲಾಗಿದೆ. ಕಾರಿನ ತೂಕವನ್ನು ಕಡಿಮೆ ಮಾಡಲು ಹೊರ ಫಲಕವನ್ನು ಫೈಬರ್‌ನಿಂದ ಮಾಡಲಾಗಿದೆ.

ಎರಡು ಸೀಟುಗಳ ಸಿ+ಪಾಡ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ Toyota

ಟೊಯೊಟಾ ಸಿ+ಪಾಡ್ 1,100 ಎಂಎಂ ಕ್ಯಾಬಿನ್ ಜಾಗವನ್ನು ಹೊಂದಿದ್ದು, ಚಾಲಕ ಹಾಗೂ ಪ್ರಯಾಣಿಕರಿಗೆ ಸಾಕಾಗುತ್ತದೆ. ಡ್ಯಾಶ್‌ಬೋರ್ಡ್ ಕಪ್ಪು ಹಾಗೂ ಬಿಳಿ ಬಣ್ಣವನ್ನು ಹೊಂದಿದೆ. ಮುಖ್ಯ ಚಾಲಕ ಪ್ರದರ್ಶನವನ್ನು ಡ್ಯಾಶ್‌ಬೋರ್ಡ್‌ನ ಮಧ್ಯದಲ್ಲಿ ಇರಿಸಲಾಗಿದೆ. ಹವಾನಿಯಂತ್ರಣ ಹಾಗೂ ಇತರ ನಿಯಂತ್ರಣಗಳಿಗಾಗಿ ಡ್ಯಾಶ್‌ಬೋರ್ಡ್‌ನ ಮಧ್ಯದಲ್ಲಿ ಲಂಬ ಫಲಕವನ್ನು ನೀಡಲಾಗಿದೆ.

ಎರಡು ಸೀಟುಗಳ ಸಿ+ಪಾಡ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ Toyota

ಟೊಯೊಟಾ ಕಂಪನಿಯ ಪ್ರಕಾರ, ಸಿ+ಪಾಡ್ ಅನೇಕ ಘಟಕಗಳಾದ್ಯಂತ ಪ್ರಭಾವದ ಶಕ್ತಿಯನ್ನು ಪರಿಣಾಮಕಾರಿಯಾಗಿ ಹೊರಹಾಕುವ ಹಾಗೂ ಹೀರಿಕೊಳ್ಳುವ ರಚನೆಯನ್ನು ಹೊಂದಿದ್ದು, ಮುಂಭಾಗ, ಅಡ್ಡ ಅಥವಾ ಹಿಂಭಾಗದ ಪರಿಣಾಮಗಳ ಸಂದರ್ಭದಲ್ಲಿ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ. ಇತರ ವಾಹನಗಳನ್ನು ಪತ್ತೆಹಚ್ಚಲು ಪೂರ್ವ ಘರ್ಷಣೆ ರಕ್ಷಣೆ ವ್ಯವಸ್ಥೆಯನ್ನು ಪ್ರಮಾಣಿತವಾಗಿ ಸೇರಿಸಲಾಗಿದೆ.

ಎರಡು ಸೀಟುಗಳ ಸಿ+ಪಾಡ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ Toyota

200V/16A ಔಟ್ಲೆಟ್ ಬಳಸಿ ಸಿ+ಪಾಡ್‌ ಎಲೆಕ್ಟ್ರಿಕ್ ಕಾರ್ ಅನ್ನು ಸುಮಾರು ಐದು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಟೊಯೊಟಾ ಕಂಪನಿ ಹೇಳಿಕೊಂಡಿದೆ. ಆದರೆ 200V/6A ಔಟ್ಲೆಟ್ ಬಳಸಿದರೆ ಪೂರ್ತಿಯಾಗಿ ಚಾರ್ಜ್ ಮಾಡಲು ಸುಮಾರು 16 ಗಂಟೆಗಳು ಬೇಕಾಗುತ್ತವೆ.

ಎರಡು ಸೀಟುಗಳ ಸಿ+ಪಾಡ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ Toyota

ಟೊಯೊಟಾ ಕಂಪನಿಯು ಡಿಸೆಂಬರ್‌ನಲ್ಲಿ ತನ್ನ ಕಾರುಗಳ ಮೇಲೆ ಭಾರಿ ರಿಯಾಯಿತಿ ನೀಡುತ್ತಿದೆ. ಕಂಪನಿಯ ಗ್ಲಾಂಝಾ, ಅರ್ಬನ್ ಕ್ರೂಸರ್, ಇನೋವಾ ಕ್ರಿಸ್ಟಾ ಮಾದರಿಗಳ ಮೇಲೆ ಕೊಡುಗೆಗಳನ್ನು ನೀಡಲಾಗುತ್ತಿದೆ. ಟೊಯೊಟಾ ಕಾರು ಖರೀದಿಸುವವರಿಗೆ ರೂ. 22,000 ಗಳವರೆಗೆ ರಿಯಾಯಿತಿ ನೀಡಲಾಗುತ್ತದೆ. ಜನಪ್ರಿಯ ಟೊಯೊಟಾ ಕಾರುಗಳ ಮೇಲೆ ಇಎಂಐ ಸೌಲಭ್ಯವನ್ನು ಸಹ ನೀಡಲಾಗುತ್ತದೆ. ಆದರೆ ಈ ಸೌಲಭ್ಯವು ಸ್ಥಳ, ವಾಹನದ ಮಾದರಿ, ಎಂಜಿನ್, ಬಣ್ಣ, ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ.

ಎರಡು ಸೀಟುಗಳ ಸಿ+ಪಾಡ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ Toyota

ಕಂಪನಿಯು ಗ್ಲಾಂಝಾ ಕಾರಿನ ಮೇಲೆ ರೂ. 22,000 ಗಳವರೆಗೆ ರಿಯಾಯಿತಿ ನೀಡುತ್ತಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮೇಲೆ ರೂ. 4999 ಗಳ ಆಕರ್ಷಕ ಇಎಂಐ ಸೌಲಭ್ಯವನ್ನು ಸಹ ನೀಡಲಾಗುತ್ತದೆ. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 7.49 ಲಕ್ಷಗಳಾಗಿದೆ. ಟೊಯೊಟಾ ಕಂಪನಿಯು ಈ ಕಾರ್ ಅನ್ನು ಜಿ ಹಾಗೂ ವಿ ಎಂಬ ಎರಡು ಮಾದರಿಗಳಲ್ಲಿ ಹಾಗೂ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಮಾರಾಟ ಮಾಡುತ್ತದೆ.

ಎರಡು ಸೀಟುಗಳ ಸಿ+ಪಾಡ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ Toyota

ಕಂಪನಿಯು ಅರ್ಬನ್ ಕ್ರೂಸರ್ ಕಾರಿನ ಮೇಲೆ ರೂ. 15,000 ಗಳ ರಿಯಾಯಿತಿ ನೀಡುತ್ತದೆ. ಈ ಎಸ್‌ಯುವಿಯ ಮೇಲೆ ರೂ. 5699 ಗಳ ಆಕರ್ಷಕ ಇಎಂಐ ಸಹ ನೀಡಲಾಗುತ್ತದೆ. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 8.72 ಲಕ್ಷಗಳಾಗಿದೆ. ಕಂಪನಿಯು ಈ ಕಾರ್ ಅನ್ನು ಮಿಡ್, ಹೈ ಹಾಗೂ ಪ್ರೀಮಿಯಂ ಎಂಬ ಮೂರು ಮಾದರಿಗಳಲ್ಲಿ ಹಾಗೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಮಾರಾಟ ಮಾಡುತ್ತದೆ.

ಎರಡು ಸೀಟುಗಳ ಸಿ+ಪಾಡ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ Toyota

ಕಂಪನಿಯ ಇನೋವಾ ಕ್ರಿಸ್ಟಾ ಕಾರಿನ ಮೇಲೆ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದೆ. ಈ ಎಸ್‌ಯುವಿಯ ಮೇಲೆ ಆಕರ್ಷಕ ಇಎಂಐ ಸಹ ನೀಡಲಾಗುತ್ತದೆ. ಆದರೆ ಅದರ ಮೊತ್ತವನ್ನು ಬಹಿರಂಗಪಡಿಸಲಾಗಿಲ್ಲ. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 17.18 ಲಕ್ಷಗಳಾಗಿದೆ. ಕಂಪನಿಯು ಈ ಕಾರ್ ಅನ್ನು G, GX, GX ಲಿಮಿಟೆಡ್ ಎಡಿಷನ್, VX ಹಾಗೂ ZX ಎಂಬ ಐದು ಮಾದರಿಗಳಲ್ಲಿ ಹಾಗೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಮಾರಾಟ ಮಾಡುತ್ತದೆ.

ಎರಡು ಸೀಟುಗಳ ಸಿ+ಪಾಡ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ Toyota

ಟೊಯೊಟಾ ಕಂಪನಿಯ ಮಾರಾಟದ ಬಗ್ಗೆ

ಟೊಯೊಟಾ ಕಂಪನಿಯು ತನ್ನ ನವೆಂಬರ್ ತಿಂಗಳ ಮಾರಾಟದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಕಂಪನಿಯು ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಕಳೆದ ತಿಂಗಳು ಕಂಪನಿಯು 13,003 ಯುನಿಟ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಸಗಟು ಮಾರಾಟ ಮಾಡಿದೆ. 2020 ರ ನವೆಂಬರ್ ತಿಂಗಳಿಗೆ ಹೋಲಿಸಿದರೆ, ಈ ಬಾರಿಯ ಮಾರಾಟದಲ್ಲಿ 53% ನಷ್ಟು ಹೆಚ್ಚಳ ಕಂಡು ಬಂದಿದೆ.

ಎರಡು ಸೀಟುಗಳ ಸಿ+ಪಾಡ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ Toyota

ಕಂಪನಿಯು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, 2020ರ ನವೆಂಬರ್ ತಿಂಗಳಲ್ಲಿ ಕಂಪನಿಯು ಒಟ್ಟು 8,508 ಯುನಿಟ್ ಕಾರುಗಳನ್ನು ಸಂಪೂರ್ಣ ಮಾರಾಟದಲ್ಲಿ ಮಾರಾಟ ಮಾಡಿದೆ. ಪ್ರತಿ ತಿಂಗಳ ಮಾರಾಟದ ಬಗ್ಗೆ ಹೇಳುವುದಾದರೆ ಕಂಪನಿಯ ಮಾರಾಟ ಪ್ರಮಾಣವು ಅಕ್ಟೋಬರ್ ತಿಂಗಳಿಗಿಂತ 5% ನಷ್ಟು ಹೆಚ್ಚಾಗಿದೆ. ಕಂಪನಿಯು ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು 12,440 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು.

ಗಮನಿಸಿ: ಈ ಲೇಖನದಲ್ಲಿರುವ ಕೊನೆಯ ಮೂರು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Toyota unveils two seater c plus pod electric car details
Story first published: Thursday, December 23, 2021, 19:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X