ಸುಜುಕಿ ಜಿಮ್ನಿ ಎಸ್‍ಯುವಿ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಟೊಯೊಟಾ ಡೈಹತ್ಸು ಲಾಗರ್

ಟೊಯೊಟಾ ಕಂಪನಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ಆಫ್-ರೋಡ್ ಆಧಾರಿತ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಪರಿಚಯಿಸಲಿದೆ. ಜನಪ್ರಿಯ ಸುಜುಕಿ ಜಿಮ್ನಿ ಮಿನಿ ಎಸ್‍ಯುವಿಗೆ ಪೈಪೋಟಿ ನೀಡಲು ಹೊಸ ಆಫ್-ರೋಡ್ ಆಧಾರಿತ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಟೊಯೊಟಾ ಮುಂದಾಗಿದೆ.

ಸುಜುಕಿ ಜಿಮ್ನಿ ಎಸ್‍ಯುವಿ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಟೊಯೊಟಾ ಡೈಹತ್ಸು ಲಾಗರ್

ಮಾಡ್ಯುಲರ್ ಟಿಎನ್‌ಜಿಎಯ ಕಡಿಮೆ-ವೆಚ್ಚದ ಪ್ಲಾಟ್‌ಫಾರ್ಮ್ ಅನ್ನು ಬಳಿಸಿ ಡೈಹತ್ಸು ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಅಭಿವೃದ್ದಿ ಪಡಿಸಲಾಗುತ್ತದೆ. ಡಿಎನ್‌ಜಿಎ ರಾಕಿ ಕಾಂಪ್ಯಾಕ್ಟ್ ಎಸ್‌ಯುವಿಯಂತಹ ಮಾದರಿಗಳನ್ನು ಆಧರಿಸಿ ಡೈಹತ್ಸು ಅನ್ನು ಸಿದ್ದಪಡಿಸಲಾಗುತ್ತದೆ. ಇನ್ನು ಹೊಸ ಆಫ್-ರೋಡ್ ಆಧಾರಿತ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಡೈಹತ್ಸು ಲಾಗರ್ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಬಹುದು.

ಸುಜುಕಿ ಜಿಮ್ನಿ ಎಸ್‍ಯುವಿ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಟೊಯೊಟಾ ಡೈಹತ್ಸು ಲಾಗರ್

ಸುಜುಕಿ ಜಿಮ್ನಿಯಂತೆಯೇ, ಹೊಸ ಟೊಯೊಟಾ ಡೈಹತ್ಸು ಲಾಗರ್ ಕಾಂಪ್ಯಾಕ್ಟ್ ಎಸ್‌ಯುವಿ ಉತ್ತಮ ಚಾಲನಾ ಗುಣಲಕ್ಷಣಗಳನ್ನು ಹೊಂದಲು ಡಿಎನ್‌ಜಿಎ ಸಹಾಯ ಮಾಡುತ್ತದೆ. ಇದಲ್ಲದೆ, ಇದು ‘ಡೈನಾಮಿಕ್ ಕಂಟ್ರೋಲ್ 4 ಡಬ್ಲ್ಯೂಡಿ' ಎಂದು ಕರೆಯಲ್ಪಡುವ ಸ್ಟ್ಯಾಂಡರ್ಡ್ ಫ್ಹೋರ್-ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಹೊಂದಿರುತ್ತದೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಸುಜುಕಿ ಜಿಮ್ನಿ ಎಸ್‍ಯುವಿ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಟೊಯೊಟಾ ಡೈಹತ್ಸು ಲಾಗರ್

ಇನ್ನು ಹೊಸ ಟೊಯೊಟಾ ಡೈಹತ್ಸು ಲಾಗರ್ ಕಾಂಪ್ಯಾಕ್ಟ್ ಎಸ್‌ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಎತ್ತರದ ಪಿಲ್ಲರ್, ವ್ಜೀಲ್ ಅರ್ಚಾರ್ ಮತ್ತು ದೊಡ್ಡ ಟೈರ್‌ಗಳನ್ನು ಹೊಂದಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಹೆಚ್ಚು ಅಗ್ರೇಸಿವ್ ಕಾಣಲು ಕೆಲವು ರೆಡ್ ಸ್ಟಿಜಿಂಗ್ ಅನ್ನು ನೀಡಿದೆ.

ಸುಜುಕಿ ಜಿಮ್ನಿ ಎಸ್‍ಯುವಿ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಟೊಯೊಟಾ ಡೈಹತ್ಸು ಲಾಗರ್

ಇನ್ನು ವಾಹನದ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಹೊಸ ಟೊಯೊಟಾ ಡೈಹತ್ಸು ಲಾಗರ್ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ 1.0-ಲೀಟರ್ ಮೂರು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸುಜುಕಿ ಜಿಮ್ನಿ ಎಸ್‍ಯುವಿ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಟೊಯೊಟಾ ಡೈಹತ್ಸು ಲಾಗರ್

ಈ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 140 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟೀ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗುತ್ತದೆ.

ಸುಜುಕಿ ಜಿಮ್ನಿ ಎಸ್‍ಯುವಿ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಟೊಯೊಟಾ ಡೈಹತ್ಸು ಲಾಗರ್

ಇನ್ನು ಇದರ ಪ್ರತಿಸ್ಪರ್ಧಿ ಐಕಾನಿಕ್ ಆಫ್-ರೋಡರ್ ಸುಜುಕಿ ಜಿಮ್ನಿ ಎಸ್‍ಯುವಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ತಲೆಮಾರಿನ ಸುಜುಕಿ ಜಿಮ್ನಿ ಮಿನಿ ಎಸ್‍ಯುವಿಯು 2018ರಿಂದ ಮಾರಾಟವಾಗುತ್ತಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಸುಜುಕಿ ಜಿಮ್ನಿ ಎಸ್‍ಯುವಿ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಟೊಯೊಟಾ ಡೈಹತ್ಸು ಲಾಗರ್

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿಯು ಭಾರತದಿಂದ ಸುಜುಕಿಯ ಪ್ರಸಿದ್ಧ ಕಾಂಪ್ಯಾಕ್ಟ್ ಆಫ್-ರೋಡರ್ ಜಿಮ್ನಿ ರಫ್ತು ಮಾಡಲು ಪ್ರಾರಂಭಿಸಿದೆ. 2020ರ ಆಟೋ ಎಕ್ಸ್‌ಪೋ ಸಂದರ್ಭದಲ್ಲಿ ಮಾರುತಿ ಸುಜುಕಿ ಭಾರತದಲ್ಲಿ ಜಿಮ್ನಿಯನ್ನು ಪ್ರದರ್ಶಿಸಿದರು. ಇದು ಆಫ್-ರೋಡ್ ವಾಹನ ಪ್ರಿಯರಿಗೆ ಹೆಚ್ಚಿನ ಕುತೂಹಲ ಹುಟ್ಟು ಹಾಕಿತು.

ಸುಜುಕಿ ಜಿಮ್ನಿ ಎಸ್‍ಯುವಿ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಟೊಯೊಟಾ ಡೈಹತ್ಸು ಲಾಗರ್

ಮಾರುತಿ ಸುಜುಕಿ ಈ ಜಿಮ್ನಿ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ. ವರದಿಗಳ ಪ್ರಕಾರ, ಜಿಮ್ನಿ ಎಸ್‍ಯುವಿಯನ್ನು 5-ಡೋರಿನ ರೂಪದಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಗುತ್ತದೆ.

ಸುಜುಕಿ ಜಿಮ್ನಿ ಎಸ್‍ಯುವಿ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಟೊಯೊಟಾ ಡೈಹತ್ಸು ಲಾಗರ್

ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ಡೈಹತ್ಸು ಲಾಗರ್ ಕಾಂಪ್ಯಾಕ್ಟ್ ಎಸ್‌ಯುವಿಯು ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಭಾರತದಲ್ಲಿ ಟೊಯೊಟಾ ಮತ್ತು ಮಾರುತಿ ಸುಜುಕಿ ಕಂಪನಿಗಳು ಜಂಟಿಯಾಗಿ ಮಿಡ್ ಎಸ್‍ಯುವಿಯನ್ನು ಅಭಿವೃದ್ದಿ ಪಡಿಸಿ ಮುಂದಿನ ವರ್ಷದಲ್ಲಿ ಬಿಡುಗಡೆಗೊಳಿಸಲಿದೆ.

Most Read Articles

Kannada
Read more on ಟೊಯೊಟಾ toyota
English summary
Toyota’s Jimny Rival Could Be The Daihatsu Lager. Read In Kananda.
Story first published: Wednesday, February 10, 2021, 15:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X