ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ 7-ಸೀಟರ್ ಜೀಪ್ ಎಸ್‍ಯುವಿ

ಅಮೆರಿಕ ಮೂಲದ ಜೀಪ್ ಕಂಪನಿಯ ಕಂಪಾಸ್ ಎಸ್‍ಯುವಿ ದೇಶಿಯ ಮಾರುಕಟ್ಟೆಯಲ್ಲಿ ದೀರ್ಘಕಾಲದಿಂದ ಮಾರಾಟದಲ್ಲಿರುವ ಜನಪ್ರಿಯ ಮಾದರಿಯಾಗಿದೆ. ಇದೀಗ ಜೀಪ್ ಇಂಡಿಯಾ ಕಂಪಾಸ್ ಮಾದರಿಯನ್ನು ಆಧರಿಸಿ 7-ಸೀಟರ್ ಪ್ರೀಮಿಯಂ ಪೂರ್ಣ ಗಾತ್ರದ ಎಸ್‍ಯುವಿಯನ್ನು ಸಿದ್ಧಪಡಿಸುತ್ತಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ 7-ಸೀಟರ್ ಜೀಪ್ ಎಸ್‍ಯುವಿ

ಈ ಜೀಪ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಆರಂಭದಲ್ಲಿ ಫೇಸ್‌ಲಿಫ್ಟೆಡ್ ಕಂಪಾಸ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತು. ಇದೀಗ ಜೀಪ್ ಕಂಪನಿಯು ತನ್ನ ಹೊಸ 7-ಸೀಟರ್ ಎಸ್‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಜೀಪ್ 7-ಸೀಟರ್ ಎಸ್‍ಯುವಿ ಭಾರತದಲ್ಲಿ ಹಲವು ಬಾರಿ ಸ್ಫಾಟ್ ಟೆಸ್ಟ್ ಅನ್ನು ನಡೆಸಿದೆ. ಇತ್ತೀಚೆಗ ಮತ್ತೊಮ್ಮೆ ಈ ಎಸ್‍ಯುವಿಯು ಸ್ಪಾಟ್ ಟೆಸ್ಟ್ ಅನ್ನು ನಡೆದೆ. ಇದರ ಸ್ಪೈ ಚಿತ್ರಗಳನ್ನು ಟೀಮ್ ಬಿಹೆಚ್‍ಪಿ ಬಹಿರಂಗಪಡಿಸಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ 7-ಸೀಟರ್ ಜೀಪ್ ಎಸ್‍ಯುವಿ

ಮೂರು-ಸಾಲಿನ ಎಸ್‌ಯುವಿ ಜೀಪ್‌ನ ಡಿಎನ್‌ಎಯನ್ನು ಒಳಗೊಂಡಂತೆ ತುಸು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಹೊಸ ಮೂರು ಸಾಲಿನ ಎಸ್‍ಯುವಿಯಯನ್ನು ಮಿಡ್ ಎಸ್‍ಯುವಿಯ ಕಂಪಾಸ್ ಮಾದರಿಗೆ ಹೋಲಿಸಿದರೆ ವಿಭಿನ್ನ ಮಾನಿಕರ್ ಪಡೆದಿದೆ. ಇನ್ನು ಹೊಸ 7-ಸೀಟರ್ ಜೀಪ್ ಎಸ್‍ಯುವಿಯು ಆಫ್-ರೋಡಿಂಗ್ ಸಾಮರ್ಥ್ಯದ ಜೊತೆಗೆ ದುಬಾರಿ ಒಳಾಂಗಣವನ್ನು ಹೊಂದಿರುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ 7-ಸೀಟರ್ ಜೀಪ್ ಎಸ್‍ಯುವಿ

ಈ ಹೊಸ ಎಸ್‍ಯುವಿಯ ಮುಂಭಾಗವನ್ನು ಕಂಪಾಸ್‌ಗೆ ಹೋಲಿಸಿದರೆ ವಿಭಿನ್ನ ಸ್ಟೈಲಿಂಗ್ ಅಂಶಗಳೊಂದಿಗೆ ಇದು ಹೆಚ್ಚು ಮಸ್ಕ್ಲರ್ ಲುಕ್ ಅನ್ನು ಹೊಂದಿರಬಹುದು. ಇದರಲ್ಲಿ ಲಂಬವಾದ ಗ್ರಿಲ್ ಸ್ಲ್ಯಾಟ್‌ಗಳು, ತೀಕ್ಷ್ಣವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಹೆಚ್ಚು ಅಗ್ರೇಸಿವ್ ಬಂಪರ್ ಪೈಪ್‌ಲೈನ್‌ನಲ್ಲಿರಬಹುದು.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ 7-ಸೀಟರ್ ಜೀಪ್ ಎಸ್‍ಯುವಿ

ಜೀಪ್ 7-ಸೀಟರ್ ಎಸ್‍ಯುವಿಯ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಕಂಪಾಸ್ ಫೇಸ್‌ಲಿಫ್ಟ್‌ ಮಾದರಿಯೊಂದಿಗೆ ಹಂಚಿಕೊಳ್ಳಲಿದೆ. ಹೊಸ ಎಸ್‍ಯುವಿಯಲ್ಲಿ ಎಸಿ ವೆಂಟ್ಸ್, ಸ್ಪೀಕರ್‌ಗಳು, ಡೋರ್ ಹ್ಯಾಂಡಲ್ಸ್ ಫ್ರೇಮ್ ಮತ್ತು ಇತರ ಭಾಗಗಳ ಸುತ್ತಲೂ ಕ್ರೋಮ್ ಔಟ್ ಲೈನ್ ಅನ್ನು ಒಳಗೊಂಡಿರುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ 7-ಸೀಟರ್ ಜೀಪ್ ಎಸ್‍ಯುವಿ

ಇನ್ನು ಈ ಎಸ್‍ಯುವಿಯಲ್ಲಿ ಪನೋರಮಿಕ್ ಸನ್‌ರೂಫ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಕ್ರೂಸ್ ಕಂಟ್ರೋಲ್, ಫುಲ್ ಎಲ್ಇಡಿ ಆಟೋ ಹೆಡ್‌ಲ್ಯಾಂಪ್‌ಗಳು, ಅಪ್‌ಡೇಟೆಡ್ ಯುಕನೆಕ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಕಾರ್ ಕನೆಕ್ಟಿವಿಟಿ ತಂತ್ರಜ್ಞಾನ ಮತ್ತು ಇತರ ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ 7-ಸೀಟರ್ ಜೀಪ್ ಎಸ್‍ಯುವಿ

ಹೊಸ 7-ಸೀಟರ್ ಜೀಪ್ ಎಸ್‍ಯುವಿಯಲ್ಲಿ 2.0-ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಅನ್ನು ಹೊಂದಿರಬಹುದು. ಈ ಎಂಜಿನ್ 173 ಬಿಹೆಚ್‌ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ 7-ಸೀಟರ್ ಜೀಪ್ ಎಸ್‍ಯುವಿ

ಇದರೊಂದಿಗೆ ಫಿಯೆಟ್ ಮೂಲದ 2.0-ಲೀಟರ್ ನಾಲ್ಕು-ಸಿಲಿಂಡರ್ ಡೀಸೆಲ್ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಕೂಡ ಅಳವಡಿಸಬಹುದು. ಈ ಎಂಜಿನ್ 200 ಬಿಹೆಚ್‌ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ 7-ಸೀಟರ್ ಜೀಪ್ ಎಸ್‍ಯುವಿ

ಈ ಎಂಜಿನ್ ಅನ್ನು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಿಸಲಾಗುವುದು. ಇದರೊಂದಿಗೆ ಎಡಬ್ಲ್ಯೂ ಸಿಸ್ಟಂ ಅನ್ನು ಒಳಗೊಂಡಿರುತ್ತದೆ ಇದು ಎರಡೂ ಆಕ್ಸಲ್‌ಗಳಿಗೆ ಪವರ್ ಅನ್ನು ಕಳುಹಿಸುವ ಸಾಧ್ಯತೆಯಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ 7-ಸೀಟರ್ ಜೀಪ್ ಎಸ್‍ಯುವಿ

7-ಸೀಟರ್ ಜೀಪ್ ಎಸ್‌ಯುವಿ ದೇಶೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಹೊಸ ಮಾದರಿಯು ಭಾರತದಲ್ಲಿ ಬಿಡುಗಡೆಯಾದ ಬಳಿಕ ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್, ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್, ಮಹೀಂದ್ರಾ ಅಲ್ತುರಾಸ್ ಜಿ4 ಮತ್ತು ಸ್ಕೋಡಾ ಕೊಡಿಯಾಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Saturday, April 17, 2021, 15:09 [IST]
English summary
Upcoming Jeep Seven-Seater Spied Testing Once Again. Read In Kannada.
Read more on ಜೀಪ್ jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+