ಬಿಡುಗಡೆಗಾಗಿ ಸಿದ್ದಗೊಂಡಿರುವ ಟಾಟಾ ನಿರ್ಮಾಣದ ಟಾಪ್ 5 ಹೊಸ ಕಾರುಗಳಿವು..

ಹೊಸ ಕಾರುಗಳ ಮಾರಾಟದಲ್ಲಿ ನಿರಂತರ ಬದಲಾವಣೆಗಳೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್(Tata Motors) ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಬಿಡುಗಡೆಗೆ ಸಿದ್ದವಾಗಿರುವ ಟಾಪ್ 5 ಕಾರು ಮಾದರಿಗಳ ಮಾಹಿತಿಯು ಇಲ್ಲಿ ಚರ್ಚಿಸಲಾಗಿದೆ.

ಬಿಡುಗಡೆಗಾಗಿ ಸಿದ್ದಗೊಂಡಿರುವ ಟಾಟಾ ನಿರ್ಮಾಣದ ಟಾಪ್ 5 ಹೊಸ ಕಾರುಗಳಿವು..

ಕೋವಿಡ್ 2ನೇ ಅಲೆ ಪರಿಣಾಮ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದ ಭಾರತೀಯ ಆಟೋ ಉದ್ಯಮವು ಇದೀಗ ಸಾಕಷ್ಟು ಸುಧಾರಣೆ ಕಂಡಿದ್ದು, ವೈರಸ್ ಪರಿಣಾಮ ಬಿಡುಗಡೆ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದ ಆಟೋ ಕಂಪನಿಗಳು ಹೊಸ ವಾಹನಗಳ ಬಿಡುಗಡೆಯನ್ನು ಇದೀಗ ನಿಧಾನವಾಗಿ ಹೆಚ್ಚಿಸಿವೆ. ವೈರಸ್‌ನಿಂದ ಆರ್ಥಿಕ ಚಟುವಟಿಕೆಗಳು ನಿಧಾನವಾಗಿದ್ದರೂ ಸೋಂಕಿನ ಭೀತಿಯಿಂದಾಗಿ ಸ್ವಂತ ವಾಹನಗಳ ಬಳಕೆಯೂ ಹೆಚ್ಚುತ್ತಿರುವುದೇ ಹೊಸ ವಾಹನ ಮಾರಾಟದಲ್ಲಿ ತ್ವರಿತ ಹೆಚ್ಚಳ ಕಂಡುಬರುತ್ತಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಕೂಡಾ ಗ್ರಾಹಕರ ಬೇಡಿಕೆಯೆಂತೆ ಐದು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಬಿಡುಗಡೆಗಾಗಿ ಸಿದ್ದಗೊಂಡಿರುವ ಟಾಟಾ ನಿರ್ಮಾಣದ ಟಾಪ್ 5 ಹೊಸ ಕಾರುಗಳಿವು..

ಪಂಚ್ ಹ್ಯಾಚ್‌ಬ್ಯಾಕ್

ಇದೇ ತಿಂಗಳು 18ರಂದು ಬಿಡುಗಡೆಯಾಗಲಿರುವ ಹೊಸ ಪಂಚ್ ಮೈಕ್ರೊ ಎಸ್‌ಯುವಿ ಕಾರು ಖರೀದಿಗೆ ಟಾಟಾ ಕಂಪನಿಯು ಈಗಾಗಲೇ ರೂ. 21 ಸಾವಿರ ಮುಂಗಡದೊಂದಿಗೆ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಅಲ್ಫಾ ಪ್ಲಾಟ್‌ಫಾರ್ಮ್ ಆಧರಿಸಿರುವ ಹೊಸ ಪಂಚ್ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿರಲಿದೆ.

ಬಿಡುಗಡೆಗಾಗಿ ಸಿದ್ದಗೊಂಡಿರುವ ಟಾಟಾ ನಿರ್ಮಾಣದ ಟಾಪ್ 5 ಹೊಸ ಕಾರುಗಳಿವು..

ಪಂಚ್ ಮೈಕ್ರೊ ಎಸ್‌ಯುವಿ ಕಾರಿನಲ್ಲಿ ಟಾಟಾ ಕಂಪನಿಯು ಟಿಯಾಗೋ ಮಾದರಿಯಲ್ಲಿರುವ 1.2-ಲೀಟರ್ ರಿವೊಟ್ರಾನ್ ತ್ರಿ ಸಿಲಿಂಡರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಪರಿಚಯಿಸಿದ್ದು, 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 83 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

ಬಿಡುಗಡೆಗಾಗಿ ಸಿದ್ದಗೊಂಡಿರುವ ಟಾಟಾ ನಿರ್ಮಾಣದ ಟಾಪ್ 5 ಹೊಸ ಕಾರುಗಳಿವು..

ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಸೆಗ್ಮೆಂಟ್ ಬೆಸ್ಟ್ ಫಿಚರ್ಸ್ ಪಡೆದುಕೊಳ್ಳಲಿರುವ ಟಾಟಾ ಪಂಚ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8 ಲಕ್ಷ ಬೆಲೆ ಹೊಂದಿರಬಹುದೆಂದು ಅಂದಾಜಿಸಲಾಗಿದೆ.

ಬಿಡುಗಡೆಗಾಗಿ ಸಿದ್ದಗೊಂಡಿರುವ ಟಾಟಾ ನಿರ್ಮಾಣದ ಟಾಪ್ 5 ಹೊಸ ಕಾರುಗಳಿವು..

ಟಿಗೋರ್ ಮತ್ತು ಟಿಯಾಗೋ ಸಿಎನ್‌ಜಿ ವರ್ಷನ್

ಟಾಟಾ ಕಂಪನಿಯು ಮೊದಲ ಬಾರಿಗೆ ಟಿಗೋರ್ ಮತ್ತು ಟಿಯಾಗೋ ಮಾದರಿಗಳಲ್ಲಿ ಸಿಎನ್‌ಜಿ ಆವೃತ್ತಿಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‍ಜಿ) ತಂತ್ರಜ್ಞಾನವನ್ನು ಅಳವಡಿಸಿ ಈಗಾಗಲೇ ಟಿಗೋರ್ ಮತ್ತು ಟಿಯಾಗೋ ಕಾರುಗಳಲ್ಲಿ ಅಳವಡಿಸಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಂಡಿದ್ದು, ಸಿಎನ್‌ಜಿ ಆವೃತ್ತಿಗಳು ಅತಿ ಕಡಿಮೆ ಮಾಲಿನ್ಯ ಉತ್ಪತ್ತಿಯೊಂದಿಗೆ ಹೆಚ್ಚಿನ ಮಟ್ಟದ ಮೈಲೇಜ್ ಹಿಂದಿರುಗಿಸುತ್ತವೆ.

ಬಿಡುಗಡೆಗಾಗಿ ಸಿದ್ದಗೊಂಡಿರುವ ಟಾಟಾ ನಿರ್ಮಾಣದ ಟಾಪ್ 5 ಹೊಸ ಕಾರುಗಳಿವು..

ಸಿಎನ್‍ಜಿ ತಂತ್ರಜ್ಞಾನ ಪ್ರೇರಿತ ವಾಹನ ಮಾರಾಟದಲ್ಲಿ ಈಗಾಗಲೇ ಮಾರುತಿ ಸುಜುಕಿ ಕಂಪನಿಯು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ವಾಹನಗಳಿಗೆ ಪೂರಕವಾಗಿ ಸಿಎನ್‌ಜಿ ಪೂರೈಕೆಯ ಕೇಂದ್ರಗಳನ್ನು ಸಹ ಹೆಚ್ಚಿಸುತ್ತಿರುವುದು ಹೊಸ ಮಾದರಿಗಳತ್ತ ಗ್ರಾಹಕರು ಗಮನಹರಿಸುತ್ತಿದ್ದಾರೆ.

ಬಿಡುಗಡೆಗಾಗಿ ಸಿದ್ದಗೊಂಡಿರುವ ಟಾಟಾ ನಿರ್ಮಾಣದ ಟಾಪ್ 5 ಹೊಸ ಕಾರುಗಳಿವು..

ಸಿಎನ್‌ಜಿ ಆವೃತ್ತಿಯನ್ನು ಟಿಗೋರ್ ಮತ್ತು ಟಿಯಾಗೋ ಕಾರಿನ ಮಧ್ಯಮ ಕ್ರಮಾಂಕದ ಮಾದರಿಗಳಲ್ಲಿ ಜೋಡಣೆ ಮಾಡಲಾಗುತ್ತಿದ್ದು, ಹೊಸ ಕಾರು ಮಾದರಿಗಳು ಸ್ಟ್ಯಾಂಡರ್ಡ್ ಮಾದರಿಗಿಂತ ತುಸು ದುಬಾರಿಯಾದರೂ ಉತ್ತಮ ಇಂಧನ ದಕ್ಷತೆಯೊಂದಿಗೆ ನಿರ್ವಹಣಾ ವೆಚ್ಚವನ್ನು ತಗ್ಗಿಸಲಿವೆ.

ಬಿಡುಗಡೆಗಾಗಿ ಸಿದ್ದಗೊಂಡಿರುವ ಟಾಟಾ ನಿರ್ಮಾಣದ ಟಾಪ್ 5 ಹೊಸ ಕಾರುಗಳಿವು..

ಟಿಗೋರ್ ಮತ್ತು ಟಿಯಾಗೋ ಎರಡು ಮಾದರಿಗಳಲ್ಲೂ ಟಾಟಾ ಮೋಟಾರ್ಸ್ ಕಂಪನಿಯು ಸದ್ಯಕ್ಕೆ 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಮಾತ್ರ ನೀಡುತ್ತಿದ್ದು, ಹೊಸದಾಗಿ ಪರಿಚಯಿಸಲಿರುವ ಸಿಎನ್‌ಜಿ ಆಯ್ಕೆಯು ಹೊಸ ಕಾರಿನ ಮಾರಾಟವನ್ನು ಹೆಚ್ಚಿಸಲಿದೆ.

ಬಿಡುಗಡೆಗಾಗಿ ಸಿದ್ದಗೊಂಡಿರುವ ಟಾಟಾ ನಿರ್ಮಾಣದ ಟಾಪ್ 5 ಹೊಸ ಕಾರುಗಳಿವು..

ಆಲ್‌ಟ್ರೊಜ್ ಎಲೆಕ್ಟ್ರಿಕ್

ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಮೂಲಕ ಇವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೆ ಆಲ್‌ಟ್ರೊಜ್ ಇವಿ ಮಾದರಿಯನ್ನು ಸಹ ಬಿಡುಗಡೆ ಮಾಡಲಿದೆ.

ಬಿಡುಗಡೆಗಾಗಿ ಸಿದ್ದಗೊಂಡಿರುವ ಟಾಟಾ ನಿರ್ಮಾಣದ ಟಾಪ್ 5 ಹೊಸ ಕಾರುಗಳಿವು..

ಹೊಸ ಕಾರು 2022ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ ಕಾರು ಆಕರ್ಷಕ ಬೆಲೆಯೊಂದಿಗೆ ಒಂದು ಬಾರಿ ಚಾರ್ಜ್ ಮಾಡಿದರೆ ಕನಿಷ್ಠ 300 ರಿಂದ ಗರಿಷ್ಠ 350 ಕಿ.ಮೀ ಪ್ರಯಾಣ ಮಾಡಬಹುದಾಗಿದೆ. ಟಿಗೋರ್ ಇವಿ ಮಾದರಿಯನ್ನು ಆಧರಿಸಿ ಬಿಡುಗಡೆಯಾಗಲಿರುವ ಹೊಸ ಇವಿ ಕಾರು ರೂ. 10 ಲಕ್ಷದೊಳಗೆ ಅತ್ಯುತ್ತಮ ಇವಿ ಮಾದರಿಯಾಗಿ ಖರೀದಿಗೆ ಲಭ್ಯವಾಗಲಿದೆ.

ಬಿಡುಗಡೆಗಾಗಿ ಸಿದ್ದಗೊಂಡಿರುವ ಟಾಟಾ ನಿರ್ಮಾಣದ ಟಾಪ್ 5 ಹೊಸ ಕಾರುಗಳಿವು..

ಪಂಚ್ ಸಿಎನ್‌ಜಿ

ಟಾಟಾ ಮೋಟಾರ್ಸ್ ಕಂಪನಿಯು ಇದೇ ತಿಂಗಳು 18ರಂದು ಹೊಸ ಪಂಚ್ ಕಾರು ಮಾದರಿಯನ್ನು ಪೆಟ್ರೋಲ್ ಮಾದರಿಯೊಂದಿಗೆ ಮಾರಾಟ ಆರಂಭಿಸಲಿರುವ ಟಾಟಾ ಮೋಟಾರ್ಸ್ ಕಂಪನಿಯು ಪಂಚ್ ಕಾರಿನಲ್ಲಿ ಸಿಎನ್‌ಜಿ ಮಾದರಿಯನ್ನು ಸಹ ಬಿಡುಗಡೆಯ ಯೋಜನೆ ಹೊಂದಿದೆ.

ಬಿಡುಗಡೆಗಾಗಿ ಸಿದ್ದಗೊಂಡಿರುವ ಟಾಟಾ ನಿರ್ಮಾಣದ ಟಾಪ್ 5 ಹೊಸ ಕಾರುಗಳಿವು..

ಈ ವರ್ಷಾಂತ್ಯಕ್ಕೆ ಟಿಗೋರ್ ಮತ್ತು ಟಿಯಾಗೋ ಕಾರುಗಳ ಸಿಎನ್‌ಜಿ ಮಾದರಿಗಳ ಬಿಡುಗಡೆಯ ನಂತರ ಪಂಚ್ ಕಾರಿನಲ್ಲೂ ಸಿಎನ್‌ಜಿ ಮಾದರಿಯನ್ನು ಬಿಡುಗಡೆ ಮಾಡಬಹುಗಾಗಿದ್ದು, ಹೊಸ ಕಾರುಗಳ ಮತ್ತಷ್ಟು ಮಾಹಿತಿ ಹೊರಬಿಳಲಿದೆ.

Article Published On: Saturday, October 16, 2021, 13:15 [IST]
English summary
Upcoming tata cars in india punch altroz ev and more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+