ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Skoda Karoq ಎಸ್‍ಯುವಿ

ಸ್ಕೋಡಾ ಕಂಪನಿಯು ತನ್ನ ಜನಪ್ರಿಯ ಕರೋಕ್ ಎಸ್‍ಯುವಿಯನ್ನು ಮಿಡ್-ಲೈಫ್ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ನವೀಕರಣಗಳೊಂದಿಗೆ ಸ್ಕೋಡಾ ಕರೋಕ್ ಎಸ್‍ಯುವಿಯು ಇದೇ ತಿಂಗಳ 30 ರಂದು ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Skoda Karoq ಎಸ್‍ಯುವಿ

ಕಳೆದ ವರ್ಷ ಮಾರಾಟದ ವಿಷಯದಲ್ಲಿ ಆಕ್ಟೀವಿಯಾ ನಂತರ ಕರೋಕ್ ತಮ್ಮ ಎರಡನೇ ಅತ್ಯುತ್ತಮ ಪ್ರದರ್ಶನ ನೀಡಿದ ಮಾದರಿಯಾಗಿದೆ ಎಂದು ಸ್ಕೋಡಾ ಹೇಳಿಕೊಂಡಿದ್ದಾರೆ. ಸ್ಕೋಡಾ ಕಂಪನಿಯು ಮೊದಲ ಬಾರಿಗೆ ಕರೋಕ್ ಎಸ್‍ಯುವಿಯನ್ನು 2017 ರಲ್ಲಿ ಪರಿಚಯಿಸಲಾಯಿತು, ಕರೋಕ್‌ನ ಐದು ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಜಾಗತಿಕ ಮಟ್ಟದಲ್ಲಿ ಉತ್ಪಾದಿಸಲಾಗಿದೆ. ಇದು ಪ್ರಸ್ತುತ 60 ದೇಶಗಳಲ್ಲಿ ಮಾರಾಟದಲ್ಲಿದೆ ಮತ್ತು ಜೆಕ್ ರಿಪಬ್ಲಿಕ್ ಮತ್ತು ಸ್ಲೋವಾಕಿಯಾದಲ್ಲಿ ಹಾಗೂ ರಷ್ಯಾ ಮತ್ತು ಚೀನಾದಲ್ಲಿ ಉತ್ಪಾದಿಸಲಾಗುತ್ತದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Skoda Karoq ಎಸ್‍ಯುವಿ

ಸ್ಕೋಡಾ ಕರೋಕ್ ಫೇಸ್‌ಲಿಫ್ಟ್‌ನಲ್ಲಿ ನಾವು ನೋಡುವ ಯಾವುದೇ ಬದಲಾವಣೆಗಳ ವಿವರಗಳನ್ನು ಕಾರು ತಯಾರಕರು ಬಹಿರಂಗಪಡಿಸಿಲ್ಲ. ಆದರೆ ಸ್ಕೋಡಾ ಕರೋಕ್ ಫೇಸ್‌ಲಿಫ್ಟ್‌ ಎಸ್‍ಯುವಿಯು ಕೆಲವು ಪ್ರಮುಖ ನವೀಕರಣಗಳನ್ನು ಪಡೆಯಬಹುದು.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Skoda Karoq ಎಸ್‍ಯುವಿ

ಹೊಸ ಸ್ಕೋಡಾ ಕರೋಕ್ ಫೇಸ್‌ಲಿಫ್ಟ್‌ ಎಸ್‍ಯುವಿಯು ಹೊಸ ಮೊಸೆಟೆಜ್ ಗ್ರಿಲ್ ಮುಂಚೂಣಿಯಲ್ಲಿರುತ್ತದೆ ಮತ್ತು ಹೆಡ್‌ಲೈಟ್‌ಗಳು ಸ್ವಲ್ಪಮಟ್ಟಿಗೆ ರಿವರ್ಕ್ ಮಾಡಿದ ಲೈಟಿಂಗ್ ಸಿಗ್ನೇಚರ್ ಅನ್ನು ಅಳವಡಿಸಿಕೊಳ್ಳುತ್ತವೆ. ಹೆಚ್ಚಿನ-ಸ್ಪೆಕ್ ಮಾದರಿಗಳು ಮ್ಯಾಟ್ರಿಕ್ಸ್ ಎಲ್ಇಡಿ ತಂತ್ರಜ್ಞಾನವನ್ನು ಸಹ ಪಡೆಯಬಹುದು. ಹೊಸ ಟೈಲ್‌ಲೈಟ್ ಗ್ರಾಫಿಕ್ಸ್‌ನೊಂದಿಗೆ ಹಿಂಭಾಗದಲ್ಲಿ ಇದೇ ರೀತಿಯ ಲಾಂಪ್ ಟ್ವೀಕ್‌ಗಳು ಕಂಡುಬರುತ್ತವೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Skoda Karoq ಎಸ್‍ಯುವಿ

ಅದರ ಹೊರತಾಗಿ, ನವೀಕರಣದೊಂದಿಗೆ ಹೊಸ ಬಣ್ಣದ ಆಯ್ಕೆಗಳು ಮತ್ತು ಅಲಾಯ್ ವ್ಹೀಲ್ ವಿನ್ಯಾಸಗಳನ್ನು ನಾವು ನಿರೀಕ್ಷಿಸಬಹುದು. ಒಳಭಾಗದಲ್ಲಿ, ಹೊಸ ಆಕ್ಟೀವಿಯಾ ಮತ್ತು ಕೊಡಿಯಾಕ್‌ನಲ್ಲಿ ಸ್ಕೋಡಾ ನೀಡುತ್ತಿರುವ ಹೊಸ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ಆಪರೇಟಿಂಗ್ ಸಿಸ್ಟಮ್‌ನ ಸೇರ್ಪಡೆ ಇರುತ್ತದೆ. ಆದರೆ ಕ್ಯಾಬಿನ್ ಹೆಚ್ಚು ಅಥವಾ ಕಡಿಮೆ ಬದಲಾಗದೆ ಉಳಿಯುತ್ತದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Skoda Karoq ಎಸ್‍ಯುವಿ

ಎಂಜಿನ್ ಆಯ್ಕೆಗಳು ಬದಲಾಗದೆ ಉಳಿಯಬಹುದು. ಲೈನ್-ಅಪ್‌ಗೆ ಸೇರ್ಪಡೆಗೊಳ್ಳುವ ಪ್ಲಗ್-ಇನ್ ಹೈಬ್ರಿಡ್ ಆವೃತ್ತಿ ಇರುತ್ತದೆ ಎಂಬ ಮಾಹಿತಿಯು ಬಹಿರಂಗವಾಗಿಲ್ಲ. ಸ್ಕೋಡಾ ಕರೋಕ್ ಫೇಸ್‌ಲಿಫ್ಟ್‌ ಎಸ್‍ಯುವಿ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಪಡೆಯುತ್ತದೆ, ಇದರ ಜೊತೆಗೆ ಹೊಸ ಫೀಚರ್ಸ್ ಗಳನ್ನು ನೀಡಬಹುದು.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Skoda Karoq ಎಸ್‍ಯುವಿ

ಇನ್ನು ಪ್ರಸ್ತುತ ಸ್ಕೋಡಾ ಕರೋಕ್ ಎಸ್‍ಯುವಿಯಲ್ಲಿ 1.5 ಲೀಟರ್ ಟಿ‍ಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 150 ಬಿ‍‍ಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 7 ಸ್ಪೀಡ್ ಡಿಎಸ್‍‍ಜಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Skoda Karoq ಎಸ್‍ಯುವಿ

ಈ ಸ್ಕೋಡಾ ಕರೋಕ್ ಎಸ್‍‍ಯುವಿ ಕಂಪನಿಯ ಎಂಕ್ಯೂಬಿ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದೆ. ಎಸ್‍ಯುವಿಯಲ್ಲಿ ಎಎಫ್ಎಸ್ (ಅಡಾಪ್ಟಿವ್ ಫ್ರಂಟ್ ಲೈಟಿಂಗ್), ಸಿಗ್ನೇಚರ್ ಬಟರ್ಫ್ಲೈ ಗ್ರಿಲ್, ಸ್ಕ್ವೇರ್ ವೀಲ್ ಆರ್ಚ್, ಆರ್ 17 ಅರೋನಿಯಾ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಮತ್ತು ಸಿ-ಆಕಾರದ ಎಲ್ಇಡಿ ಟೈಲ್ ಲ್ಯಾಂಪ್‌ಗಳೊಂದಿಗೆ ಸ್ಲಿಕ್ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Skoda Karoq ಎಸ್‍ಯುವಿ

ಕರೋಕ್ ಎಸ್‍ಯುವಿಯ ಇಂಟಿರಿಯರ್‍‍ನಲ್ಲಿ ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಯಲ್ಲಿ ದೊಡ್ಡ ಟಚ್‍‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂಗಳಿವೆ. ಇದರೊಂದಿಗೆ ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಸನ್‍ರೂಫ್ ಮತ್ತು ಲೆದರ್ ಅಪ್‍‍ಹೋಲೆಸ್ಟರಿ ಸೀಟುಗಳನ್ನು ಕೂಡ ಹೊಂದಿವೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Skoda Karoq ಎಸ್‍ಯುವಿ

ಇನ್ನು ಸ್ಕೋಡಾ ಕರೋಕ್ ಎಸ್‍ಯುವಿಯಲ್ಲಿ ಸುರಕ್ಷತಾ ಫೀಚರ್ ಗಳಾಗಿ, 9 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ಇಎಸ್‌ಸಿ, ಹಿಲ್-ಸ್ಟಾರ್ಟ್ ಅಸಿಸ್ಟ್ ಫ್ರಂಟ್, ರೇರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ನೀಡಲಾಗಿದೆ

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Skoda Karoq ಎಸ್‍ಯುವಿ

ಸ್ಕೋಡಾ ತನ್ನ ಹೊಸ ಸ್ಲಾವಿಯಾ ಸೆಡಾನ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲು ಸಜ್ಜಾಗಿದೆ. ಈ ಹೊಸ ಸ್ಕೋಡಾ ಸ್ಲಾವಿಯಾ ಸೆಡಾನ್ ಇದೇ ತಿಂಗಳ 18 ರಂದು ಅನಾವರಣವಾಗಲಿದೆ. ಭಾರತದಲ್ಲಿ ಸ್ಕೋಡಾ ಸ್ಲಾವಿಯಾ ಜಾಗತಿಕ ಪ್ರಥಮ ಪ್ರದರ್ಶನವನ್ನು ಮಾಡಲು ಸಿದ್ಧವಾಗಿದೆ. ಫೋಕ್ಸ್‌ವ್ಯಾಗನ್ ಗ್ರೂಪ್‌ನ ಇಂಡಿಯಾ ಪ್ಲಾನ್ 2.0 ಅಡಿಯಲ್ಲಿ ಇದು ಬ್ರಾಂಡ್‌ನ ಎರಡನೇ ಮಾದರಿಯಾಗಿದೆ, ಇದು ಹೊಸ ಹೂಡಿಕೆ ಮತ್ತು ಉತ್ಪನ್ನಗಳ ಶ್ರೇಣಿಯನ್ನು ತರುತ್ತದೆ. ರ‍್ಯಾಪಿಡ್ ಸೆಡಾನ್ ಅನ್ನು ಬದಲಿಸಲು, ಹೊಸ ಸ್ಕೋಡಾ ಸ್ಲಾವಿಯಾ ಫೋಕ್ಸ್‌ವ್ಯಾಗನ್ ಹೆಚ್ಚು ಸ್ಥಳೀಯ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Skoda Karoq ಎಸ್‍ಯುವಿ

ಕುಶಾಕ್ ಕಾಂಪ್ಯಾಕ್ಟ್ ಎಸ್‍ಯುವಿಗೆ ಇದೇ ಪ್ಲಾಟ್‌ಫಾರ್ಮ್ ಆಧಾರವಾಗಿದೆ. ಸ್ಕೋಡಾ ಕಂಪನಿಯು ತನ್ನ ಭಾರತೀಯ ವೆಬ್‌ಸೈಟ್‌ನಲ್ಲಿ ಸ್ಲಾವಿಯಾ ಸೆಡಾನ್ ಕಾರಿನ ಟೀಸರ್ ಅಧಿಕೃತವಾಗಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು.ಈ ಪ್ಲಾಟ್‌ಫಾರ್ಮ್ ವಿವಿಧ ಬಾಡಿಯ ಶೈಲಿಗಳು ಮತ್ತು ಎಂಜಿನ್ ಆಯ್ಕೆಗಳನ್ನು ಸರಿಹೊಂದಿಸಲು ಸಾಕಷ್ಟು ಬಹುಮುಖವಾಗಿದೆ. ಇನ್ನು ಮುಂಬರುವ ಫೋಕ್ಸ್‌ವ್ಯಾಗನ್ ಮಿಡ್ ಸೈಜ್ ಸೆಡಾನ್, ವರ್ಚಸ್ ಎಂದು ಕರೆಯಲ್ಪಡುತ್ತದೆ, ಈ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರಲಿದೆ,

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Skoda Karoq ಎಸ್‍ಯುವಿ

ಸ್ಕೋಡಾ ಕರೋಕ್ ಫೇಸ್‌ಲಿಫ್ಟ್‌ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್, ಜೀಪ್ ಕಂಪಾಸ್, ಫೋಕ್ಸ್ ವ್ಯಾಗನ್ ಟಿ-ರಾಕ್ ಮತ್ತು ಹ್ಯುಂಡೈ ಟ್ಯೂಸಾನ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ. ಸ್ಕೋಡಾ ತನ್ನ ಕರೋಕ್ ಫೇಸ್‌ಲಿಫ್ಟ್‌ ಎಸ್‍ಯುವಿಯನ್ನು ಮತ್ತೆ ಭಾರತಕ್ಕೆ ತರುವುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ, ಇನ್ನು ಈ ಹೊಸ ಸ್ಕೋಡಾ ಕರೋಕ್ ಫೇಸ್‌ಲಿಫ್ಟ್‌ ಮಾದರಿಯು ಅನಾವರಣಗೊಂಡ ಬಳಿಕ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಬಹುದು.

Article Published On: Wednesday, November 10, 2021, 17:09 [IST]
English summary
Updated skoda karoq suv set to global debut details
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+