ಸೋಲಾರ್ ಪ್ಯಾನೆಲ್'ಗಳ ಮೂಲಕ ಚಾರ್ಜ್ ಆಗುತ್ತದೆ ಈ ಎಲೆಕ್ಟ್ರಿಕ್ ಆಟೋ ರಿಕ್ಷಾ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಕಂಗಾಲಾಗಿರುವ ವಾಹನ ಸವಾರರು ಅನಿವಾರ್ಯವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್, ಎಲೆಕ್ಟ್ರಿಕ್ ಬೈಕ್, ಎಲೆಕ್ಟ್ರಿಕ್ ಕಾರು ಮಾತ್ರವಲ್ಲದೇ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನಗಳನ್ನು ಸಹ ಬಿಡುಗಡೆಗೊಳಿಸುತ್ತಿವೆ.

ಸೋಲಾರ್ ಪ್ಯಾನೆಲ್'ಗಳ ಮೂಲಕ ಚಾರ್ಜ್ ಆಗುತ್ತದೆ ಈ ಎಲೆಕ್ಟ್ರಿಕ್ ಆಟೋ ರಿಕ್ಷಾ

ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗುತ್ತಿರುವುದನ್ನು ಗಮನಿಸಿದರೆ ಇನ್ನೂ ಕೆಲವು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಖರೀದಿಸ ಬೇಕೆಂಬ ಸನ್ನಿವೇಶ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಎಲೆಕ್ಟ್ರಿಕ್ ವಾಹನಗಳು ಪೆಟ್ರೋಲ್, ಡೀಸೆಲ್ ಮೇಲೆ ವ್ಯಯಿಸುವ ಹಣವನ್ನು ಉಳಿಸುವುದರ ಜೊತೆಗೆ ಪರಿಸರವನ್ನು ರಕ್ಷಿಸಲು ನೆರವಾಗುತ್ತವೆ.

ಸೋಲಾರ್ ಪ್ಯಾನೆಲ್'ಗಳ ಮೂಲಕ ಚಾರ್ಜ್ ಆಗುತ್ತದೆ ಈ ಎಲೆಕ್ಟ್ರಿಕ್ ಆಟೋ ರಿಕ್ಷಾ

ಈಗ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹಿಂದೆಂದಿಗಿಂತಲೂ ಗಣನೀಯವಾಗಿ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿರುವ ಎಲೆಕ್ಟ್ರಿಕ್ ವಾಹನಗಳ ಪ್ರಮಾಣವೂ ಏರಿಕೆಯಾಗುತ್ತಿದೆ. ಇದೇ ವೇಳೆ ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಾಗಿರುವ ಮೂಲಭೂತ ಸೌಕರ್ಯಗಳು ಸಾಕಷ್ಟು ಸಂಖ್ಯೆಯಲ್ಲಿಲ್ಲ ಎಂಬ ಕೊರಗು ವಾಹನ ಸವಾರರನ್ನು ಕಾಡುತ್ತಿತ್ತು.

ಸೋಲಾರ್ ಪ್ಯಾನೆಲ್'ಗಳ ಮೂಲಕ ಚಾರ್ಜ್ ಆಗುತ್ತದೆ ಈ ಎಲೆಕ್ಟ್ರಿಕ್ ಆಟೋ ರಿಕ್ಷಾ

ಎಲೆಕ್ಟ್ರಿಕ್ ವಾಹನಗಳ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಹಾಗೂ ಹಲವು ರಾಜ್ಯ ಸರ್ಕಾರಗಳು ಕ್ರಮಗಳನ್ನು ಕೈಗೊಳ್ಳುತ್ತಿವೆ. ಸರ್ಕಾರಗಳು ವಿವಿಧೆಡೆ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದು ಎಲೆಕ್ಟ್ರಿಕ್ ವಾಹನ ಸವಾರರ ನೆರವಿಗೆ ಧಾವಿಸುತ್ತಿವೆ. ಈಗ ಇವಿ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಹೇಳಬಹುದು. ಆದರೂ ದೇಶದ ಕೆಲವು ಪ್ರಮುಖ ನಗರ ಪ್ರದೇಶಗಳಲ್ಲಿ ಕೂಡ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರಗಳ ಕೊರತೆಯಿರುವುದನ್ನು ಕಾಣಬಹುದು.

ಸೋಲಾರ್ ಪ್ಯಾನೆಲ್'ಗಳ ಮೂಲಕ ಚಾರ್ಜ್ ಆಗುತ್ತದೆ ಈ ಎಲೆಕ್ಟ್ರಿಕ್ ಆಟೋ ರಿಕ್ಷಾ

ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯೊಂದು ಇನ್ನು ಮುಂದೆ ಇವಿ ಚಾರ್ಜಿಂಗ್ ಕೇಂದ್ರಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದೆ. ಈ ಕಂಪನಿಯು ನೀಡಿರುವ ಹೇಳಿಕೆಯ ಪ್ರಕಾರ, ಹೊಸದಾಗಿ ಬಂದಿರುವ ಎಲೆಕ್ಟ್ರಿಕ್ ಆಟೋ ರಿಕ್ಷಾಗೆ ಚಾರ್ಜಿಂಗ್ ಕೇಂದ್ರದ ಅಗತ್ಯವಿಲ್ಲ. ಈ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಸೂರ್ಯನ ಬೆಳಕಿನಿಂದ ಚಾರ್ಜ್ ಮಾಡಬಹುದು. ಕಂಪನಿಯು ಸೋಲಾರ್ ಪ್ಯಾನೆಲ್ ಸೌಲಭ್ಯದೊಂದಿಗೆ ಈ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಅಭಿವೃದ್ಧಿಪಡಿಸುತ್ತಿದೆ.

ಸೋಲಾರ್ ಪ್ಯಾನೆಲ್'ಗಳ ಮೂಲಕ ಚಾರ್ಜ್ ಆಗುತ್ತದೆ ಈ ಎಲೆಕ್ಟ್ರಿಕ್ ಆಟೋ ರಿಕ್ಷಾ

ಚಾರ್ಜ್ ಮಾಡುವ ಅಗತ್ಯವಿದೆ ಎನಿಸಿದಾಗ ಸೂರ್ಯನ ಬಿಸಿಲಿನಲ್ಲಿ ಈ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ನಿಲ್ಲಿಸಿದರೆ, ಇನ್ನೂ ಸಾಕಷ್ಟು ಚಾರ್ಜ್ ಆಗುತ್ತದೆ. ಅಂದ ಹಾಗೆ ಸೋಲಾರ್ ರೂಫ್ ನಿಂದ ಚಾರ್ಜ್ ಆಗುವ ಈ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ತಯಾರಿಸಿರುವುದು ಶ್ರೀಲಂಕಾ ಮೂಲದ Vega ಎಂಬ ಕಂಪನಿ. Vega ಕಂಪನಿಯು ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಸೋಲಾರ್ ಪ್ಯಾನೆಲ್ ಸೌಲಭ್ಯದೊಂದಿಗೆ ಇಟಿಎಕ್ಸ್ ಹೆಸರಿನಲ್ಲಿ ಅಭಿವೃದ್ಧಿಪಡಿಸುತ್ತಿದೆ.

ಸೋಲಾರ್ ಪ್ಯಾನೆಲ್'ಗಳ ಮೂಲಕ ಚಾರ್ಜ್ ಆಗುತ್ತದೆ ಈ ಎಲೆಕ್ಟ್ರಿಕ್ ಆಟೋ ರಿಕ್ಷಾ

ಕಂಪನಿಯು ಈಗಷ್ಟೇ ಈ ಆಟೋ ರಿಕ್ಷಾ ಕುರಿತು ಮಾಹಿತಿಯನ್ನು ಬಿಡುಗಡೆ ಮಾಡಿದೆ. ಕಂಪನಿಯು ಸೂರ್ಯನ ಬೆಳಕಿನಿಂದ ಚಾರ್ಜ್ ಮಾಡಬಹುದಾದ ಈ ಎಲೆಕ್ಟ್ರಿಕ್ ಆಟೋ ರಿಕ್ಷಾದ ಟೀಸರ್ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ ಆಟೋ ರಿಕ್ಷಾವನ್ನು Vega ಕಂಪನಿಯು ಸಂಪೂರ್ಣವಾಗಿ ವಿಭಿನ್ನ ವಿನ್ಯಾಸ ಹಾಗೂ ಶೈಲಿಯಲ್ಲಿ ತಯಾರಿಸಿದೆ. ಈ ಎಲೆಕ್ಟ್ರಿಕ್ ಆಟೋ ರಿಕ್ಷಾದಲ್ಲಿ ಕಾರುಗಳಲ್ಲಿರುವಂತಹ ಬೂಟ್ ಡೋರ್, ಆಕರ್ಷಕವಾದ ವಿಂಡ್‌ಶೀಲ್ಡ್, ಸಿಂಗಲ್ ಗೇಜ್ ಡ್ಯಾಶ್ ಲೈನ್‌ನಂತಹ ಹೋಮ್ ಆಟೋ ಲೈಟಿಂಗ್ ಗಳನ್ನು ಅಳವಡಿಸಲಾಗಿದೆ.

ಸೋಲಾರ್ ಪ್ಯಾನೆಲ್'ಗಳ ಮೂಲಕ ಚಾರ್ಜ್ ಆಗುತ್ತದೆ ಈ ಎಲೆಕ್ಟ್ರಿಕ್ ಆಟೋ ರಿಕ್ಷಾ

ಈ ಫೀಚರ್ ಗಳನ್ನು ಆಟೋ ರಿಕ್ಷಾದ ನೋಟವನ್ನು ವಿಭಿನ್ನವಾಗಿಸಲು ನೀಡಲಾಗಿದೆ. ಈ ಫೀಚರ್ ಗಳು ಭವಿಷ್ಯದ ಆಟೋ ರಿಕ್ಷಾಗಳ ಶೈಲಿಯಪ್ರತಿಬಿಂಬವಾಗಿವೆ. ಇದರ ಜೊತೆಗೆ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ನೀಡಲು ಹಾಗೂ ಕಡಿಮೆ ನಿರ್ವಹಣಾ ವೆಚ್ಚಗಳನ್ನು ಒದಗಿಸಲು ಈ ಎಲೆಕ್ಟ್ರಿಕ್ ಆಟೋ ರಿಕ್ಷಾದಲ್ಲಿ ಎಲ್‌ಇಪಿ ಬ್ಯಾಟರಿಯನ್ನು ಬಳಸಲಾಗುತ್ತದೆ.

ಸೋಲಾರ್ ಪ್ಯಾನೆಲ್'ಗಳ ಮೂಲಕ ಚಾರ್ಜ್ ಆಗುತ್ತದೆ ಈ ಎಲೆಕ್ಟ್ರಿಕ್ ಆಟೋ ರಿಕ್ಷಾ

ಈ ಆಟೋ ರಿಕ್ಷಾದ ರೂಫ್ ಮೇಲೆ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಲಾಗುತ್ತದೆ. ಈ ಪ್ಯಾನೆಲ್ ಗಳು ಸೂರ್ಯನ ಬೆಳಕಿನಿಂದ ದೊರೆಯುವ ಶಕ್ತಿಯನ್ನು ಆಟೋ ರಿಕ್ಷಾದಲ್ಲಿ ಸಂಗ್ರಹಿಸಲು ನೆರವಾಗುತ್ತವೆ. ಇದರಿಂದ ವಾಹನವನ್ನು ಚಾರ್ಜ್ ಮಾಡಲು ಚಾರ್ಜಿಂಗ್ ಕೇಂದ್ರಗಳನ್ನು ಹುಡುಕುವುದು ತಪ್ಪುತ್ತದೆ. ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜ್ ಮಾಡಿದರೆ ಪ್ರತಿ ದಿನ 64 ಕಿ.ಮೀ ಗಳವರೆಗೆ ಚಲಿಸಬಹುದು.

ಸೋಲಾರ್ ಪ್ಯಾನೆಲ್'ಗಳ ಮೂಲಕ ಚಾರ್ಜ್ ಆಗುತ್ತದೆ ಈ ಎಲೆಕ್ಟ್ರಿಕ್ ಆಟೋ ರಿಕ್ಷಾ

ಇಟಿಎಕ್ಸ್ ಆಟೋ ರಿಕ್ಷಾದಲ್ಲಿರುವ ಸೋಲಾರ್ ಪ್ಯಾನಲ್ ಅತ್ಯಂತ ಸಣ್ಣ ಫಲಕವಾಗಿದ್ದರೂ, ಇದನ್ನು ಗರಿಷ್ಠ ಉಪಯುಕ್ತತೆ ಪಡೆಯುವಂತೆ ವಿನ್ಯಾಸಗೊಳಿಸಲಾಗಿದೆ. ಚಾರ್ಜಿಂಗ್ ಸಾಮರ್ಥ್ಯದ ಬಗ್ಗೆ ದೊರೆತಿರುವ ಮಾಹಿತಿಯಿಂದ ಇದು ಸ್ಪಷ್ಟವಾಗಿದೆ. Vega ಕಂಪನಿಯು ಈ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಮೊದಲು ಶ್ರೀಲಂಕಾದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ನಂತರ ಈ ಆಟೋ ರಿಕ್ಷಾವನ್ನು ದಕ್ಷಿಣ ಏಷ್ಯಾದ ದೇಶಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. ಆಟೋ ರಿಕ್ಷಾಗಳಿಗೆ ಹೆಚ್ಚು ಬೇಡಿಕೆ ಇರುವ ದೇಶಗಳಲ್ಲಿ ಇದನ್ನು ಮಾರಾಟ ಮಾಡಲಾಗುವುದು ಎಂದು ಕಂಪನಿ ಹೇಳಿದೆ.

ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜ್ ಆಗುವ ಕಾರಣಕ್ಕೆ ಈ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಚಾಲನೆ ಮಾಡಲು ಹೆಚ್ಚುವರಿ ಹಣವನ್ನು ಖರ್ಚು ಮಾಡುವಂತಿಲ್ಲವೆಂದು Vega ಕಂಪನಿ ತಿಳಿಸಿದೆ. ಈ ಎಲೆಕ್ಟ್ರಿಕ್ ಆಟೋ ರಿಕ್ಷಾದಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡಲು ಸೋಲಾರ್ ಪ್ಯಾನಲ್ ಸೌಲಭ್ಯವನ್ನು ಒದಗಿಸಲಾಗಿದೆ. ಈ ಸೋಲಾರ್ ಪ್ಯಾನೆಲ್ ಮೂಲಕವೇ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ.

ಸೋಲಾರ್ ಪ್ಯಾನೆಲ್'ಗಳ ಮೂಲಕ ಚಾರ್ಜ್ ಆಗುತ್ತದೆ ಈ ಎಲೆಕ್ಟ್ರಿಕ್ ಆಟೋ ರಿಕ್ಷಾ

ಭಾರತದಲ್ಲಿ ಆಟೋ ರಿಕ್ಷಾಗಳು ಹೆಚ್ಚಿನ ಸಂಖ್ಯೆಯಲ್ಲಿ ಚಲಾವಣೆಯಲ್ಲಿವೆ. ದೇಶದ ವಿವಿಧೆಡೆ ಜನರು ನಿತ್ಯದ ಪ್ರಯಾಣಕ್ಕಾಗಿ ಆಟೋ ರಿಕ್ಷಾಗಳನ್ನೇ ನೆಚ್ಚಿ ಕೊಂಡಿದ್ದಾರೆ. ಸೋಲಾರ್ ಪ್ಯಾನೆಲ್ ಹೊಂದಿರುವ ಈ ಎಲೆಕ್ಟ್ರಿಕ್ ಆಟೋ ರಿಕ್ಷಾ ಭಾರತದಲ್ಲಿ ಎಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡ ಬೇಕಿದೆ.

Most Read Articles

Kannada
English summary
Vega releases teaser video of etx electric auto rickshaw with solar roof details
Story first published: Friday, August 27, 2021, 10:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X